ಹೀಗೆ ಮಾಡಿದರೆ ಬಾಡಿಯಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿ, ಹೆಚ್ಚಾಗುತ್ತಾ ಹೋಗುತ್ತದೆ!

19-06-23 07:52 pm       Source: Vijayakarnataka   ಡಾಕ್ಟರ್ಸ್ ನೋಟ್

ಕಬ್ಬಿಣದ ಅಂಶದ ಕೊರತೆ ಇರುವವರು ಕ್ಯಾರೆಟ್ ಬೀಟ್ರೂಟ್ ಪಾಲಕ್ ಸೊಪ್ಪು ಇವುಗಳನ್ನು ತಿನ್ನುವುದರಿಂದ ಹೇರಳವಾಗಿ ದೇಹದಲ್ಲಿ ಹಿಮೋಗ್ಲೋಬಿನ್.

ನಾವು ಶಾಲೆಗೆ ಹೋಗುವ ಮಕ್ಕಳಲ್ಲಿ ಕಬ್ಬಿಣದ ಅಂಶದ ಕೊರತೆ ಇರುವುದನ್ನು ನೋಡುತ್ತೇವೆ. ದೊಡ್ಡವರಿಗೂ ಕೂಡ ಈ ಕೊರತೆ ಇದ್ದೇ ಇರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಹೀಗಾಗಿ ಅನೀಮಿಯಾ ಅಥವಾ ರಕ್ತಹೀನತೆ ಸಮಸ್ಯೆ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಹೀಗಾದಾಗ ಮಾತ್ರ ತಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ. ಈ ಲೇಖನದಲ್ಲಿ ಬೇರೆ ಬೇರೆ ಬಗೆಯ ಅಂಶಗಳು ನಮ್ಮ ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಹೇಗೆ ನೆರವಾಗುತ್ತವೆ ಎಂಬುದನ್ನು ತಿಳಿಸಿಕೊಡಲಾಗಿದೆ.

ಅನೀಮಿಯಾ ಅಥವಾ ರಕ್ತಹೀನತೆ ಆದರೆ ಏನಾಗುತ್ತೆ?

ಅನೀಮಿಯಾ ಅಥವಾ ರಕ್ತಹೀನತೆ ಆದರೆ ಏನಾಗುತ್ತೆ?

  • ಅನೀಮಿಯಾ ಸಮಸ್ಯೆಯಿಂದ ಕರುಳಿನ ತೊಂದರೆಗಳು ಹೆಚ್ಚಾಗಿ ಉಂಟಾಗುತ್ತವೆ. ನಾವು ತಿನ್ನುವ ಆಹಾರದಲ್ಲಿ ಇರುವಂತಹ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸರಿ ಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
  • ಹಾಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಒಂದು ವೇಳೆ ಕಬ್ಬಿಣ, ಕಾಪರ್, ವಿಟಮಿನ್ ಬಿ12, ಇತ್ಯಾದಿ ಅಂಶಗಳು ಕೊರತೆ ಕಂಡಿದ್ದರೆ, ಅದರಿಂದ ಅನೀಮಿಯ ಉಂಟಾ ಗುವ ಎಲ್ಲಾ ಸಾಧ್ಯತೆ ಇರುತ್ತದೆ.
  • ಹೀಗೆಂದು ಜಿಂದಾಲ್ ನೇಚರ್ ಕ್ಯುರ್ ಸಂಸ್ಥೆಯಲ್ಲಿ ಪ್ರಧಾನ ವೈದ್ಯಕೀಯ ಅಧಿಕಾರಿಯಾಗಿರುವ ಡಾ. ಬಬಿನಾ ನಂದ ಕುಮಾರ್ ಹೇಳಿದ್ದಾರೆ. ಮಹಿಳೆಯರು ಒಂದು ವೇಳೆ ಋತುಬಂಧದಲ್ಲಿ ಇಲ್ಲದಿದ್ದರೆ ಪುರುಷ ರಿಗಿಂತ ಮಹಿಳೆಯರಿಗೆ ಕಬ್ಬಿಣದ ಅಂಶದ ಕೊರತೆ ಉಂಟಾಗುತ್ತದೆ.
  • ಮುಟ್ಟಿನ ಸಂದರ್ಭದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾಗಿ ಹರಿದು ಹೋದರೆ ಈ ರೀತಿ ಆಗುತ್ತದೆ. ಗರ್ಭಿಣಿ ಮಹಿಳೆ ಯರು ಮಲ್ಟಿ ವಿಟಮಿನ್ ಪೋಲಿಕ್ ಆಮ್ಲ ಹಾಗೂ ಕಬ್ಬಿಣದ ಅಂಶ ಇರುವ ಔಷಧಿಗಳನ್ನು ತೆಗೆದುಕೊಳ್ಳ ದಿದ್ದರೆ ಈ ರೀತಿ ಆಗುತ್ತದೆ.​

ಈ ಕಾರಣಗಳು ಕೂಡ ಇರಬಹುದು!

ಈ ಕಾರಣಗಳು ಕೂಡ ಇರಬಹುದು!

  • ಇದರ ಜೊತೆಗೆ ಕಿಡ್ನಿ ಸಮಸ್ಯೆ, ಕ್ಯಾನ್ಸರ್, ದೀರ್ಘಕಾಲದ ಆರೋಗ್ಯದ ಅಸ್ವಸ್ಥತೆ ಇತ್ಯಾದಿ ತೊಂದರೆಗಳು ದೇಹ ದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಆಗುವಂತೆ ಮಾಡುತ್ತವೆ. ಇದರ ಜೊತೆಗೆ ಅಲ್ಸರ್ ಆದಾಗ ಅಥವಾ ಬೇರೆ ಗಾಯ ಆದಾಗ ಅಲ್ಲಿಂದಲೂ ರಕ್ತದ ಸೋರಿಕೆ ಉಂಟಾಗುತ್ತದೆ ಮತ್ತು ಇದರಿಂದ ಅನೀಮಿಯಾ ಸಮಸ್ಯೆ ಉಂಟಾಗುತ್ತದೆ.
  • ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಈ ಹಿಂದೆ ಅನೀ ಮಿಯ ಸಮಸ್ಯೆ ಯಾರಿಗಾದರೂ ಇದ್ದರೆ, ನಿಮಗೂ ಸಹ ಬರುವ ಸಾಧ್ಯತೆ ಇರುತ್ತದೆ. 60 ವರ್ಷ ವಯಸ್ಸು ದಾಟಿದ ಜನರಲ್ಲಿ ಅನಿಮಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ಅನೀಮಿಯಾ ಸಮಸ್ಯೆಯನ್ನು ನಿರ್ವಹಣೆ ಮಾಡುವ ನೈಸರ್ಗಿಕ ವಿಧಾನಗಳು

Remedies To Boost Iron Levels, ಹೀಗೆ ಮಾಡಿದರೆ ಬಾಡಿಯಲ್ಲಿ ಕೆಂಪು ರಕ್ತಕಣಗಳ  ಉತ್ಪತ್ತಿ, ಹೆಚ್ಚಾಗುತ್ತಾ ಹೋಗುತ್ತದೆ! - try these natural ways to boost up your  hemoglobin - Vijaya Karnataka

ಕಬ್ಬಿಣ, ವಿಟಮಿನ್ ಬಿ12, ಕಾಪರ್ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾಗಿ ಆರೋಗ್ಯಕರವಾಗಿ ಶೇಖರಣೆಯಾಗುವಂತೆ ನೋಡಿಕೊಂಡು ಅನಿಮಿಯ ಸಮಸ್ಯೆಯನ್ನು ಇಲ್ಲದಂತೆ ಮಾಡುತ್ತವೆ. ಅದಕ್ಕಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಈ ಬದಲಾವಣೆಗಳನ್ನು ತಂದುಕೊಳ್ಳಿ.

ಹಸಿರು ಎಲೆ ತರಕಾರಿಗಳು

ಹಸಿರು ಎಲೆ ತರಕಾರಿಗಳು

  • ಹಸಿರು ಎಲೆ ತರಕಾರಿಗಳಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಹಾಗೂ ಖನಿಜಾಂಶಗಳು ಇರಲಿದ್ದು, ಅನಿಮಿಯ ಸಮಸ್ಯೆಯನ್ನು ನಿಯಂತ್ರಣ ಮಾಡುವಲ್ಲಿ ಇವು ಯಶಸ್ವಿಯಾಗುತ್ತವೆ.
  • ಪಾಲಕ್ ಸೊಪ್ಪು, ಕೇಲ್, ಇತ್ಯಾದಿಗಳು ನಮ್ಮ ಸಮ ತೋಲನ ಆಹಾರ ಪದ್ಧತಿಯಲ್ಲಿ ಸೇರಿದ್ದರೆ ಕಬ್ಬಿಣದ ಕೊರತೆಯನ್ನು ಸುಲಭವಾಗಿ ನೀಗಿಸಿಕೊಳ್ಳಬಹುದು.

ಬೇರು ಸಹಿತ ಇರುವ ತರಕಾರಿಗಳು

Organic White Radish Seeds - Open Pollinated

ನಿಮ್ಮ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಬೇರು ಸಹಿತ ಇರುವ ತರಕಾರಿಗಳು ಅಂದರೆ ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಸಿಹಿಗೆಣಸು ಕೆಲಸ ಮಾಡುತ್ತವೆ. ಇವುಗಳಿಂದ ನಿಮ್ಮ ಅನೀಮಿಯ ಸಮಸ್ಯೆ ಸುಲಭವಾಗಿ ದೂರವಾಗುತ್ತದೆ ಎಂದು ಡಾ. ನಂದಕುಮಾರ್ ಹೇಳುತ್ತಾರೆ.

ಕಾಳುಗಳು ಮತ್ತು ಬೀಜಗಳು

Dry Fruits And Nuts You Must Eat To Gain Weight – Kashmir Online Store

  • ಇವುಗಳಲ್ಲಿ ಪೌಷ್ಟಿಕಾಂಶ ಪ್ರಮಾಣ ತುಂಬಾ ಹೆಚ್ಚಾಗಿ ರುತ್ತದೆ ಮತ್ತು ಅಧಿಕ ಖನಿಜಾಂಶ ಹಾಗೂ ವಿಟಮಿನ್ ಇರುವುದರಿಂದ ನಿಮ್ಮ ಅನೀಮಿಯ ಸಮಸ್ಯೆ ಇವು ಗಳಿಂದ ಸುಲಭವಾಗಿ ದೂರವಾಗುತ್ತದೆ.
  • ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ನಾರಿನ ಅಂಶ ಹೆಚ್ಚಾ ಗಿರುವ ಕಾಳುಗಳನ್ನು ಹಾಗೂ ಬೀಜಗಳನ್ನು ಸೇರಿಸಿಕೊಂಡು ನಿಮ್ಮ ರಕ್ತದಲ್ಲಿನ ಕೆಂಪು ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು.
  • ಸಮತೋಲನವಾದ ಆಹಾರ ಪದ್ಧತಿಯಲ್ಲಿ ಇವೆಲ್ಲವೂ ಇರುವುದರಿಂದ ಅನಿಮಿಯ ಸಮಸ್ಯೆ ದೂರವಾಗುತ್ತದೆ.​

ವಿಟಮಿನ್ ಸಿ ಹೆಚ್ಚಿರುವ ಆಹಾರಗಳು

Healthy Orange Juice Recipes - Blog - HealthifyMe

  • ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾತ್ರ ಉಪಯೋಗಕ್ಕೆ ಬರುತ್ತದೆ ಎಂದುಕೊಳ್ಳಬೇಡಿ. ಇದರಿಂದ ರಕ್ತಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ.
  • ಕಬ್ಬಿಣದ ಅಂಶ ಚೆನ್ನಾಗಿ ಹೀರಿಕೊಂಡು ನಿಮ್ಮ ದೇಹಕ್ಕೆ ಸಿಗುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚಾಗುತ್ತದೆ. ಅದಕ್ಕೆ ಸಂಬಂಧಪಟ್ಟಂತೆ ನೀವು ನಿಮ್ಮ ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸ್ಟ್ರಾಬೆರಿ, ಸಿಟ್ರಸ್ ಹಣ್ಣುಗಳನ್ನು ಸೇರಿಸಿಕೊಳ್ಳಿ ಎಂದು ಡಾಕ್ಟರ್ ಹೇಳುತ್ತಾರೆ.

try these natural ways to boost up your hemoglobin.