ಯಾರ್ ಏನೇ ಹೇಳಿದ್ರು, ನಿಮಗೆ ಮಾತ್ರ ಬೆಳಗ್ಗೆ ಹೊತ್ತು ಪ್ರೋಟೀನ್ ಆಹಾರ ಸಿಗ್ಬೇಕು!

21-06-23 08:44 pm       Source: Vijayakarnataka   ಡಾಕ್ಟರ್ಸ್ ನೋಟ್

ಪ್ರೋಟೀನ್ ಹೆಚ್ಚಾಗಿರುವ ಆಹಾರ ತಿಂದರೆ ದೇಹಕ್ಕೆ ಶಕ್ತಿ ಬರುತ್ತದೆ. ಹಾಗಾಗಿ ಬೆಳಗ್ಗೆ ತಿಂಡಿ ತಿನ್ನುವಾಗ ಹೆಚ್ಚು ಪ್ರೋಟೀನ್ ತಿಂದುಬಿಡಿ.

ನಮ್ಮ ಇಡೀ ದಿನದ ಕಾರ್ಯ ಚಟುವಟಿಕೆ ನಾವು ಬೆಳಗ್ಗೆ ತಿಂಡಿ ತಿನ್ನುವುದರ ಮೇಲೆ ಅವಲಂಬಿತ ವಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ನಾವು ಬೆಳಗ್ಗೆ ಸದಾ ಆರೋಗ್ಯಕರವಾದ ಆಹಾರವನ್ನು ತಿನ್ನಬೇಕು. ನಮಗೆ ಇದರಿಂದ ಹೆಚ್ಚು ಶಕ್ತಿ ಮತ್ತು ಸದೃಢತೆ ಸಿಗುತ್ತದೆ.

ಮನಸ್ಸಿನಲ್ಲಿ ಹೊಸ ಹುರುಪು ಯಾವಾಗಲೂ ಇರುತ್ತದೆ. ಆದರೆ ನಮಗೆ ಸಿಗುತ್ತಿರುವುದು ಮಾತ್ರ ಕಲಬೆರಕೆ ತುಂಬಿದ ಆಹಾರ. ನಮ್ಮ ದೇಹದ ತೂಕ ಹೆಚ್ಚಾಗದಂತೆ ನಮ್ಮನ್ನು ಸದಾ ಆರೋಗ್ಯವಾಗಿ ಇರಿಸುವ ಆಹಾರಗಳ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ. ಪ್ರೋಟಿನ್ ಮತ್ತು ನಾರಿನ ಪ್ರಮಾಣ ಹೆಚ್ಚು ಸಿಗುವಂತಹ ಆಹಾರಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.

ಓಟ್ ಮೀಲ್

50 High-Protein Breakfast Ideas For Weight Loss From RDs

  • ನಾರಿನ ಅಂಶ ಪ್ರೊಟೀನ್ ಮತ್ತು ವಿಟಮಿನ್ ಅಂಶಗಳ ಸಹಿತ ಖನಿಜಾಂಶ ಗಳನ್ನು ಹೆಚ್ಚಾಗಿ ಒಳಗೊಂಡಿರುವ ಉಪಹಾರ ಇದಾಗಿದೆ. ನಾರಿನ ಅಂಶ ಹೆಚ್ಚಾಗಿರುವುದರಿಂದ ನೀವು ಬೆಳಗಿನ ಸಮಯದಲ್ಲಿ ಇದನ್ನು ಸೇವಿಸಿ ನಿಮ್ಮ ಹೊಟ್ಟೆ ತುಂಬಿಸಿ ಕೊಳ್ಳಬಹುದು ಮತ್ತು ಹೊಟ್ಟೆ ಹಸಿವನ್ನು ದೂರ ಮಾಡಿ ಕೊಳ್ಳಬಹುದು.
  • ನಾರಿನ ಅಂಶ ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣವನ್ನು ನಿಧಾನವಾಗಿ ಬಿಡುಗಡೆಗೊಳಿ ಸುತ್ತದೆ. ಹೀಗಾಗಿ ವ್ಯಾಯಾಮ ಮಾಡುವುದಕ್ಕೆ 3 ಗಂಟೆ ಮುಂಚೆ ಇದನ್ನು ಸೇವಿಸುವುದರಿಂದ ನಿಮ್ಮ ದೇಹದಿಂದ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬಹುದು.

ಕೋಳಿ ಮೊಟ್ಟೆ

Weight Loss: 5 Protein-Rich Breakfast You Must Have - News18

ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರೋಟಿನ್ ಅಂಶ ಇರುವ ಕೋಳಿ ಮೊಟ್ಟೆ ನಿಮ್ಮ ದೇಹದ ತೂಕವನ್ನು ಕರಗಿಸುವ ಒಂದು ಆರೋಗ್ಯಕರ ವಾದ ಉಪಹಾರ. ಬೇರೆ ಬೇರೆ ರೀತಿಯಲ್ಲಿ ಮೊಟ್ಟೆ ಬೇಯಿಸಿ ನೀವು ತಿನ್ನಬಹುದು. ಮೊಟ್ಟೆಯ ಹಳದಿ ಭಾಗ ಹಾಗೂ ಬಿಳಿ ಭಾಗ ಎರಡು ಸಹ ಪ್ರೋಟಿನ್ ಅಂಶದಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಅವಲಕ್ಕಿ

Weight loss: Protein-rich breakfast items to shed kilos | The Times of India

  • ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಅವಲಕ್ಕಿ ಆರೋಗ್ಯಕರ ವಾದ ಕಾರ್ಬೋಹೈಡ್ರೇಟ್ ಪ್ರೋಟೀನ್ ಮತ್ತು ವಿಟಮಿನ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿದೆ. ನಿಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಅವಲಕ್ಕಿ ನೀಡಲಿದ್ದು, ಇದಕ್ಕೆ ಕರಿಬೇವಿನ ಸೊಪ್ಪು ಹಾಕಿದರೆ ಹೆಚ್ಚು ಆರೋಗ್ಯಕರ ಎಂದು ಹೇಳಲಾಗುತ್ತದೆ.
  • ಏಕೆಂದರೆ ಕರಿಬೇವಿನ ಸೊಪ್ಪು ನಿಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ನೈಸರ್ಗಿಕವಾಗಿ ನಿಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ.
  • ಅವಲಕ್ಕಿ ಸೇವನೆಯಿಂದ ನಿಮ್ಮ ದೇಹದ ಕ್ಯಾಲೋರಿಗಳು ಕರಗುತ್ತವೆ ಮತ್ತು ಕೊಬ್ಬಿನ ಅಂಶ ಕೂಡ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ದೇಹದ ತೂಕ ನಿಯಂತ್ರಣವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಕಡಲೆಬೀಜ ಸೇರಿಸಬಾರದು ಅಷ್ಟೇ.

ದಲಿಯಾ

ದಲಿಯಾ

ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದ್ದು ನಾರು ಮತ್ತು ಪ್ರೋಟೀನ್ ಹೆಚ್ಚಾಗಿ ಸಿಗುತ್ತದೆ. ಹೊಟ್ಟೆ ಹಸಿವನ್ನು ದೂರ ಮಾಡುವ ಜೊತೆಗೆ ಮೆಟಬಾಲಿಸಂ ಹೆಚ್ಚಾಗುತ್ತದೆ ಮತ್ತು ದೇಹದ ತೂಕ ಕೂಡ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಕರಗಿಸುವ ಆಹಾರ ಇದಾಗಿದೆ.

ಮೊಳಕೆ ಕಟ್ಟಿದ ಕಾಳುಗಳು

Sprouts - Mix Variety (Price Per 200 gms) – Fast and Fresh Global LLP

  • ಪೌಷ್ಟಿಕಾಂಶ ಹೆಚ್ಚಾಗಿ ಹೊಂದಿರುವ ಮೊಳಕೆ ಕಟ್ಟಿದ ಕಾಳುಗಳು ತಮ್ಮಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ.
  • ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದರಿಂದ ನಮ್ಮ ದಿನನಿತ್ಯದ ಪ್ರೋಟೀನ್ ನಮಗೆ ಸಿಗುತ್ತದೆ. ಹೆಚ್ಚಿನ ನಾರಿನ ಅಂಶ ಇರುವ ಕಾರಣ ನಿಮಗೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದು ತಪ್ಪುತ್ತದೆ.

ಬೆರ್ರಿ ಹಣ್ಣುಗಳ ಜೊತೆ ಮೊಸರು

How to make fresh curd at home

ಮೊಸರಿನಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ ಮತ್ತು ಕ್ಯಾಲೋರಿಗಳು ಕಡಿಮೆ ಇರುತ್ತವೆ. ನಿಮಗೆ 100 ಗ್ರಾಂ ಮೊಸರಿನಲ್ಲಿ 10 ಗ್ರಾಂ ಪ್ರೋಟೀನ್ ಸಿಗುತ್ತದೆ. ಸಕ್ಕರೆ ಹಾಕದೆ ಮೊಸರು ತಿನ್ನುವುದರಿಂದ ಸಾಕಷ್ಟು ಲಾಭವಿದೆ. ಇದಕ್ಕೆ ಬೆರ್ರಿ ಹಣ್ಣುಗಳು ಮತ್ತು ಬೀಜಗಳು ಅತ್ಯುತ್ತಮ ಪೌಷ್ಟಿಕಾಂಶದ ಕಾಂಬಿನೇಷನ್.

these foods are high in protein and fibre meant for your breakfast.