ಆರೋಗ್ಯವನ್ನು ಕಾಪಾಡಬಲ್ಲ ಅದ್ಭುತ ಆಹಾರಗಳಿವು, ಮಿಸ್ ಮಾಡಬೇಡಿ!

26-06-23 07:34 pm       Source: Vijayakarnataka   ಡಾಕ್ಟರ್ಸ್ ನೋಟ್

ನಮ್ಮಲ್ಲಿ ಸಿಗುವಂತಹ ಕೆಲವೊಂದು ಆಹಾರ ಪದಾರ್ಥಗಳು ಬಹುಮುಖ ಪ್ರಯೋಜನಗಳನ್ನು ನೀಡುತ್ತವೆ. ಹೀಗಾಗಿ ಅಂತಹ ಆಹಾರಗಳನ್ನು ಪ್ರತಿನಿತ್ಯದ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು

ಸಾಮಾನ್ಯವಾಗಿ ಆರೋಗ್ಯಕರ ಆಹಾರ ಪದಾರ್ಥಗಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು, ಸೇಬುಹಣ್ಣು, ಕಿವಿ ಹಣ್ಣು, ದಾಳಿಂಬೆ, ಬೆರ್ರಿ ಹಣ್ಣುಗಳು ಇಲ್ಲಾಂದ್ರೆ ದುಬಾರಿ ಬೆಲೆಯ ಒಣಹಣ್ಣುಗಳು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ರೀತಿಯ ಭಾವನೆಗಳು ತಪ್ಪು.

ನಮ್ಮಲ್ಲಿ ಕೆಲವೊಂದು ಕೈಗೆಟಕುವ ಬೆಲೆಯಲ್ಲಿ ಸಿಗುವ ಕೆಲವೊಂದು ಆಹಾರ ಪದಾರ್ಥಗಳು, ನಮಗೆ ತಿಳಿಯದೇ ಇರುಯವಷ್ಟು ಆರೋಗ್ಯ ಪ್ರಯೋಜನ ಗಳನ್ನು ಒದಿಗಿಸುತ್ತವೆ! ಹಾಗಾದ್ರೆ ಅಂತಹ ಆಹಾರ ಪದಾರ್ಥಗಳು ಯಾವುದು ಎಂಬುದನ್ನು ಒಂದೊಂದಾಗಿ ನೋಡುತ್ತಾ ಹೋಗೋಣ...

ಹೆಸರುಬೇಳೆ ಕಾಳುಗಳು

2,600+ Green Gram Stock Photos, Pictures & Royalty-Free Images - iStock |  Sorghum, Pulses

  • ಹೆಸರುಕಾಳು ಅಥವಾ ಪಚ್ಚೆ ಹೆಸರು ಎಂದು ಕೆರೆಯಲ್ಪಡುವ ಈ ಕಾಳುಗಳು, ಬೆಲೆಯಲ್ಲಿ ಸ್ವಲ್ಪ ದುಬಾರಿ ಆದರೆ, ಮನುಷ್ಯಗೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಕೂಡ ಈ ಕಾಳುಗಳಲ್ಲಿ ಕಂಡು ಬರುತ್ತದೆ.
  • ಪ್ರಮುಖವಾಗಿ ಇದರಲ್ಲಿ ಕಂಡು ಬರುವ ನಾರಿನಾಂಶ ದೇಹದಲ್ಲಿ ಶೇಖರಣೆ ಗೊಂಡಿರುವ, ಅಧಿಕ ಪ್ರಮಾಣದ ಕೊಬ್ಬಿನಾಂಶ ಮತ್ತು ವಿಷಕಾರಿ ಅಂಶವನ್ನು ಹೊರ ಹಾಕಿ, ದೇಹದ ತೂಕ ಇಳಿಸುವಲ್ಲಿ ನೆರವಾಗುತ್ತದೆ.
  • ಅಲ್ಲದೆ ಇದರಲ್ಲಿ ಕಂಡು ಬರುವ ಫೋಲೇಟ್, ವಿಟಮಿನ್ ಬಿ9 ಎನ್ನುವ ಅಂಶಗಳು, ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾ ಗುವಂತೆ ನೋಡಿಕೊಂಡು, ರಕ್ತಹೀನತೆಯಂತಹ ಸಮಸ್ಯೆ ಯನ್ನು ದೂರ ಮಾಡುತ್ತದೆ.​

ನೆಲ್ಲಿಕಾಯಿ

Amla (Phyllanthus emblica) – Samruddhi Organic

  • ದೇಹದ ಆರೋಗ್ಯ ರಕ್ಷಣೆಯಲ್ಲಿ ಕೆಲವೊಂದು ಹಣ್ಣು ಗಳು ತುಂಬಾನೇ ನೆರವಾಗುವುದು. ಇದರ ಲ್ಲೊಂದು ನೆಲ್ಲಿಕಾಯಿ. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಹೊಂದಿರುವ ನೆಲ್ಲಿಕಾಯಿ, ಮನುಷ್ಯನ ಹಲ ವಾರು ಆರೋಗ್ಯ ಸಮಸ್ಯೆಗಳನ್ನು ದೂರಮಾಡಲು ನೆರವಾಗುತ್ತದೆ.
  • ಇದೇ ಕಾರಣಕ್ಕೆ ಇದನ್ನು ಆಯುರ್ವೇದದಲ್ಲಿ ದಿವ್ಯ ಔಷಧಿಯ ಹಣ್ಣು ಎಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿದಿನ ಒಂದೆರಡು ನೆಲ್ಲಿಕಾಯಿಯನ್ನು ಸೇವನೆ ಮಾಡುತ್ತಾ ಬರುವುದರಿಂದ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವುದು, ಕಣ್ಣಿನ ದೃಷ್ಟಿ ಸಮಸ್ಯೆ ದೂರವಾ ಗುವುದು, ಜೀರ್ಣಕ್ರಿಯೆ, ಕರುಳಿನ ಆರೋಗ್ಯ ಚೆನ್ನಾಗಿ ರುವುದು ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ ದಲ್ಲಿರುವುದು.​

ಜೇನುತುಪ್ಪ

Health benefits of honey: Here's what's proven | CNN

  • ಜೇನುತುಪ್ಪದ ಬಳಕೆ ಇಂದು ನೆನ್ನೆಯದಲ್ಲ! ಶತಶತಮಾ ನಗಳಿಂದಲೂ ಜನರು ಇದನ್ನು ಬಳಸುತ್ತಾ ಬರುತ್ತಿ ದ್ದಾರೆ. ಜೇನು ತುಪ್ಪದಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶ ಕಂಡು ಬರುವು ದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಪ್ರಮುಖವಾಗಿ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣ ಲಕ್ಷಣಗಳು, ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇನ್ಫಾಮೇಟರಿ ಮತ್ತು ಇನ್ನಿತರ ಆರೋಗ್ಯಕಾರಿ ಗುಣ ಲಕ್ಷಣಗಳು ಇರುವ ಕಾರಣ, ಹಲವಾರು ಕಾಯಿಲೆ ಗಳನ್ನು ಮನುಷ್ಯನಿಂದ ದೂರವಿರಿಸಲು ನೆರವಾಗು ತ್ತದೆ.
  • ಹೀಗಾಗಿ ಇದರ ಸಂಪೂರ್ಣ ಲಾಭ ಪಡೆಯ ಬೇಕೆಂದರೆ, ರಾತ್ರಿ ಊಟದ ಬಳಿಕ ಒಂದು ಲೋಟ ಹಾಲಿಗೆ, ಒಂದು ಟೇಬಲ್ ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಕುಡಿದು ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು.
  • ಇಲ್ಲಾಂದ್ರೆ ದಿನಾ ಒಂದು ಚಮಚ ಹಾಗೆಯೇ ಕೂಡ, ಕುಡಿಯಬಹುದು. ಆದರೆ ನೆನಪಿಡಿ ಜೇನುತುಪ್ಪವನ್ನು ಯಾವತ್ತಿಗೂ ಕೂಡ ಬಿಸಿ ನೀರಿನ ಜೊತೆಗೆ ಅಥವಾ ಬಿಸಿ ಅನ್ನ ಅಥವಾ ಇತರ ತಿಂಡಿ ತಿನಿಸುಗಳ ಜೊತೆಗೆ ಸೇವಿಸ ಬಾರದು.​

ತೊಗರಿಬೇಳೆ

North Indian Home Style Toor Dal (Arhar Dal) + 6 Tadka Variations

  • ತೊಗರಿಬೇಳೆ ಹಾಕಿ ಮಾಡಿರುವ ಸಾಂಬರ್ ಅಥವಾ ತೊಗರಿ ಬೇಳೆ ದಾಲ್ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಆಗುತ್ತದೆ ಎನ್ನುವ, ಒಂದೇ ಕಾರಣಕ್ಕೆ ಹೆಚ್ಚಿನವರು ತೊಗರಿಬೇಳೆಯಿಂದ ದೂರ ನಿಲ್ಲುತ್ತಾರೆ.
  • ಆದರೆ ನಿಮಗೆ ಗೊತ್ತಿರಲಿ, ತೊಗರಿಬೇಳೆ ಆರೋಗ್ಯಕ್ಕೆ ತುಂ ಬಾನೇ ಒಳ್ಳೆಯದು. ಹೀಗಾಗಿ ದೈನಂದಿನ ತರಕಾರಿ ಸಾಂಬರಿಗೆ ಅಲ್ಪ ಪ್ರಮಾಣದಲ್ಲಿ, ಬೇಳೆಯನ್ನು ಕೂಡ ಹಾಕುವುದರಿಂದ, ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
  • ಮುಖ್ಯವಾಗಿ ಈ ಬೇಳೆ ಕಾಳಿನಲ್ಲಿ ಹಲವಾರು ಬಗೆಯ ವಿಟಮಿ ನ್ಸ್‌ಗಳಾದ ವಿಟಮಿನ್ ಸಿ, ಇ, ಕೆ ಹಾಗೂ ವಿಟ ಮಿನ್ ಬಿ ಕಾಂಪ್ಲೆಕ್ಸ್ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತವೆ.​

ಕಡಲೆ ಬೀಜಗಳು

Peanuts: Side effects of eating too many at a time | HealthShots

  • ಬಡವರ ಬಾದಾಮಿ ಎಂದೇ ಕರೆಯಲಾಗುವ ಕಡಲೆ ಬೀಜ ಗಳಲ್ಲಿ ವಿಟಮಿನ್ ಬಿ1, ವಿಟಮಿನ್ ಬಿ2, ವಿಟ ಮಿನ್ ಬಿ6, ಪೊಟ್ಯಾಶಿಯಂ, ಸೋಡಿಯಂ, ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಾಂಶ, ಪ್ರೋಟೀನ್, ನಾರಿನಾಂಶ, ಕಬ್ಬಿಣಾಂಶ , ಮೆಗ್ನೀಷಿಯಂ ಹಾಗೂ ಕ್ಯಾಲ್ಸಿಯಂ ಅಂಶ ಯಥೇ ಚ್ಛವಾಗಿ ಸಿಗುವುದರಿಂದ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭಗಳಿವೆ.
  • ಹೀಗಾಗಿ ಇದನ್ನು ಹುರಿದು ತಿನ್ನುವ ಬದಲು, ಪ್ರತಿದಿನ ರಾತ್ರಿ ಮಲಗುವ ಮುನ್ನ ಆರರಿಂದ ಏಳು ಕಡಲೆ ಬೀಜ ಗಳನ್ನು ನೀರಿನಲ್ಲಿ ನೆನೆಹಾಕಿ, ಮರುದಿನ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು. ​

ದಿನಕ್ಕೊಂದು ಬೇಯಿಸಿದ ಮೊಟ್ಟೆ

Classic Hard-boiled Eggs - YMCA of Central Florida

  • ಮೊಟ್ಟೆ ತನ್ನಲ್ಲಿ ಉತ್ತಮಗುಣಪಟ್ಟದ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್‌ ಗಳನ್ನು ಒಳಗೊಂಡಿದ್ದು, ಜನರ ಆರೋಗ್ಯವನ್ನು ಅತ್ಯುತ್ತ ಮವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿವೆ.
  • ಪ್ರಮುಖವಾಗಿ ಮೊಟ್ಟೆಯಲ್ಲಿ ವಿಟಮಿನ್ ಬಿ6, ವಿಟ ಮಿನ್ ಬಿ12 ಮತ್ತು ವಿಟಮಿನ್ ಡಿ ಅಂಶಗಳು ಹೇರಳವಾಗಿ ಇರುವುದರಿಂದ ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ನೆರವಾ ಗುತ್ತದೆ.
  • ಹೀಗಾಗಿ ಪ್ರತಿದಿನ ಒಂದೊಂದು ಬೇಯಿಸಿದ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು​

These common healthy foods you should consume every day.