ಹೈ ಬಿಪಿ ತುಂಬಾನೇ ಡೇಂಜರ್! ನಿಮ್ಮ ಎರಡೂ ಕಿಡ್ನಿಗಳಿಗೂ ತೊಂದರೆ ಕೊಡುತ್ತೆ!

27-06-23 06:20 pm       Source: Vijayakarnataka   ಡಾಕ್ಟರ್ಸ್ ನೋಟ್

How high blood pressure damages kidneys: ನಿಮ್ಮ ರಕ್ತದ ಒತ್ತಡ ಹೆಚ್ಚಾಗಿದ್ದರೆ ಅದನ್ನು ಈಗಲೇ ಕಂಟ್ರೋಲ್ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಕಿಡ್ನಿಗಳು ಮುಂದೆ.

ರಕ್ತದ ಒತ್ತಡ ಎನ್ನುವುದು ಈಗಿನ ದಿನಮಾನಗಳಲ್ಲಿ ಜನರಿಗೆ 30 ವರ್ಷದ ಆಸುಪಾಸಿನಲ್ಲಿ ಶುರುವಾ ಗುತ್ತದೆ. ಇದರ ನಂತರದಲ್ಲಿ ಬರುವಂತಹ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಮುಖ್ಯವಾಗಿ ದೇಹದ ಪ್ರಮುಖ ಅಂಗಾಂಗಗಳಿಗೆ ತೊಂದರೆ ಉಂಟಾಗುತ್ತದೆ. ಏಕೆಂದರೆ ಇದರಿಂದ ನಮ್ಮ ಹೃದಯದ ಬಡಿತ ಮೊದಲಿನಂತೆ ಇರುವುದಿಲ್ಲ. ಲಿವರ್ ಕೂಡ ತನ್ನ ಕಾರ್ಯ ಚಟುವಟಿಕೆ ಬದಲಿಸುತ್ತದೆ. ಇನ್ನು ಕಿಡ್ನಿಗಳು ಕೂಡ ರಕ್ತದ ಒತ್ತಡದ ಕಾರಣದಿಂದ ಹಾಳಾಗುತ್ತವೆ ಎಂದು ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ.

ಅಧಿಕ ರಕ್ತದ ಒತ್ತಡದಿಂದ ಕಿಡ್ನಿಗಳಿಗೆ ಸಮಸ್ಯೆ ಬರಬಹುದು!

ಅಧಿಕ ರಕ್ತದ ಒತ್ತಡದಿಂದ ಕಿಡ್ನಿಗಳಿಗೆ ಸಮಸ್ಯೆ ಬರಬಹುದು!

ಹೌದು, ಅಧಿಕ ರಕ್ತದ ಒತ್ತಡದಿಂದ ಕಿಡ್ನಿಗಳು ಹಾಳಾಗುತ್ತವೆ. ಇದನ್ನು ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಅಂದರೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಉತ್ತಮ.

ಆಹಾರ ಪದ್ಧತಿಯಲ್ಲಿ ಕೂಡ ಬದಲಾವಣೆಯನ್ನು ತಂದು ಕೊಂಡು ಔಷಧಿ ಸೇವನೆಯನ್ನು ಸರಿಯಾಗಿ ನಡೆಸಿಕೊಂಡು ಬಂದರೆ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳ ಬಹುದು ಮತ್ತು ಇದರಿಂದ ರಕ್ತನಾಳಗಳು ಮತ್ತು ಕಿಡ್ನಿ ಹಾಳಾಗುವುದು ತಪ್ಪುತ್ತದೆ ಎಂದುಮಣಿಪಾಲ್ ಹಾಸ್ಪಿಟಲ್ ನಲ್ಲಿ ಕನ್ಸಲ್ಟೆಂಟ್ ಆಗಿರುವ ಡಾ. ಆನಂದ್ ಹೇಳಿದ್ದಾರೆ.

ಹಾಗಾದ್ರೆ ಇದಕ್ಕೆ ಪರಿಹಾರವೇನು?

ಹಾಗಾದ್ರೆ ಇದಕ್ಕೆ ಪರಿಹಾರವೇನು?

  • ಇದರ ಜೊತೆಗೆ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಿ ಕೊಂಡರೆ, ನಮ್ಮ ಕಿಡ್ನಿ ರಕ್ತದ ಒತ್ತಡದ ಕಾರಣಕ್ಕೆ ಹಾಳಾಗುವುದನ್ನು ತಪ್ಪಿಸಬಹುದಾಗಿದೆ.
  • ಪ್ರಮುಖವಾಗಿ ಪೌಷ್ಟಿಕಾಂಶ ಹೊಂದಿರುವ ಆಹಾರ ಗಳನ್ನು ಸೇವಿಸುವುದು ರಕ್ತದಲ್ಲಿ ಉಪ್ಪಿನ ಅಂಶ, ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶವನ್ನು ತಡೆಗಟ್ಟುತ್ತದೆ.
  • ಆರೋಗ್ಯಕರವಾದ ತೂಕ ನಿರ್ವಹಣೆ ಮಾಡಿ
  • ನಿಯಮಿತವಾದ ದೈಹಿಕ ಚಟುವಟಿಕೆ ಅಗತ್ಯ
  • ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ
  • ಧೂಮಪಾನ ಮಾಡಬೇಡಿ
  • ಇದರ ಜೊತೆಗೆ ಆಗಾಗ ಡಾಕ್ಟರ್ ಬಳಿ ಪರೀಕ್ಷೆ ಮಾಡಿಸಿ ಕೊಳ್ಳುವುದು ಕೂಡ ಉತ್ತಮ. ಇದರಿಂದ ರಕ್ತದ ಒತ್ತಡದ ಸದ್ಯದ ಮಟ್ಟವನ್ನು ತಿಳಿದುಕೊಳ್ಳಬಹುದು ಮತ್ತು ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಕಿಡ್ನಿಗಳು ಹಾಳಾಗುವ ಸಾಧ್ಯತೆ ಇದರಿಂದ ತಪ್ಪಿದಂತೆ ಆಗುತ್ತದೆ.

ಹೈ ಬಿಪಿಯಿಂದಾಗಿ ಕಿಡ್ನಿಗಳಿಗೆ ಸಮಸ್ಯೆ ಜಾಸ್ತಿ!

How High Blood Pressure Can Lead to Kidney Damage: Metro Renal Associates:  Nephrologists

  • ಅಧಿಕ ರಕ್ತದ ಒತ್ತಡದಿಂದ ಕಿಡ್ನಿಗಳ ಕಾರ್ಯ ಚಟುವಟಿಕೆ ಬದಲಾಗುತ್ತದೆ ಮತ್ತು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಇದರಿಂದ ಉಂಟಾಗಬಹುದು.
  • ಹೀಗಾಗಿ ಮೇಲೆ ಹೇಳಿದ ಬದಲಾವಣೆಗಳನ್ನು ತಂದು ಕೊಂಡು ಔಷಧಿ ಮತ್ತು ಚಿಕಿತ್ಸೆಗಳನ್ನು ತೆಗೆದು ಕೊಳ್ಳುವುದರಿಂದ ಇದರಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.​

ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಕೆಲವೊಂದು ಸಿಂಪಲ್ ಮನೆಮದ್ದುಗಳು

Kidney failure in people with high blood pressure: Things to pay attention  to | Vinmec

  • ನಿಮಗೆ ಗೊತ್ತಿರಲಿ ರಕ್ತದೊತ್ತಡವು 120/80 ಇರುತ್ತದೆ. 140/90 ಕ್ಕಿಂತ ಹೆಚ್ಚಿದ್ದರೆ ಇದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿ ಸಲಾಗುತ್ತದೆ. ಒಂದು ವೇಳೆ, ಮನುಷ್ಯ ನಲ್ಲಿ ರಕ್ತದೊತ್ತಡ ಹೆಚ್ಚಾದರೆ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ, ಕಣ್ಣುಗಳು ಮತ್ತು ಮೂತ್ರಪಿಂಡಗಳನ್ನು ಹಾನಿ ಉಂಟಾಗುತ್ತದೆ.
  • ಅಗಸೆಬೀಜವನ್ನು ಪುಡಿ ಮಾಡಿಕೊಂಡು, ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ. ಇಲ್ಲಾಂದ್ರೆ ಒಂದು ಟೇಬಲ್ ಚಮಚದಷ್ಟು ಅಗಸೆಬೀಜದ ಪುಡಿಯನ್ನು ಸಲಾಡ್, ಸೂಪ್, ಹಾಲು, ಸ್ಮೂಥಿಗಳು, ಮಿಲ್ಕ್‌ಶೇಕ್‌ಗಳಲ್ಲಿಯೂ ಕೂಡ ಬೆರೆಸಿ ಕುಡಿಯಬಹುದು.
  • ದಿನಕ್ಕೊಂದು ಎಳನೀರು, ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು. ಇದಕ್ಕೆ ಪ್ರಮುಖ ಕಾರಣ ಈ ಪಾನೀಯದಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಅಂಶವಿದ್ದು, ಅಧಿಕ ರಕ್ತದೊತ್ತಡ ತಗ್ಗಿಸಲು ಹಾಗೂ ಕಿಡ್ನಿಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
  • ಪ್ರತಿದಿನ ಮೂರು-ನಾಲ್ಕು ಬಾರಿ ಟೀ-ಕಾಫಿ ಕುಡಿಯುವ ಬದಲು ಏಲಕ್ಕಿ ಹಾಗೂ ಶುಂಠಿ ಹಾಕಿದ ಚಹಾ ಕುಡಿ ಯುವ ಅಭ್ಯಾಸ ಮಾಡಿಕೊಂಡರೆ, ಅಧಿಕ ರಕ್ತದೊತ್ತಡ ನಿವಾರಣೆಯಾಗುವುದು.

ಈಗಾಗಲೇ ಹೈಬಿಪಿ ಸಮಸ್ಯೆ ಕಿಡ್ನಿಗಳ ಬಗ್ಗೆ ಹುಷಾರು!

Weak kidneys? 6 effective home remedies to help improve kidney function |  Health - Hindustan Times

  • ಈಗಾಗಲೇ ಹೈಬಿಪಿ ಸಮಸ್ಯೆ ಇದ್ದವರು ಕಟ್ಟುನಿಟ್ಟಾಗಿ ಎಣ್ಣೆಯಾಂಶ ಹಾಗೂ ಜಂಕ್‌ಫುಡ್‌ಗಳಿಂದ ದೂರ ವಿದ್ದು, ಆರೋಗ್ಯಕಾರಿ ಜೀವನಶೈಲಿಯನ್ನು ಅನುಸರಿ ಸಬೇಕು.
  • ಪ್ರಮುಖವಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಪ್ರಮುಖವಾಗಿ ವಿಟಮಿನ್ ಡಿ ಅಂಶ ಒಳಗೊಂಡಿರುವ ಆಹಾರಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು.
  • ಇವು ದೇಹದ ಕಿಡ್ನಿಗಳ ಕಾಳಜಿಯನ್ನು ಈ ಆಹಾರಗಳು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ. ದಿನಕ್ಕೊಂದು ಎಳನೀರು ಕುಡಿಯುವುದರಿಂದ, ದೇಹದಲ್ಲಿ ಅತಿಯಾಗಿ ಸಂಗ್ರಹವಾಗಿದ್ದ ವಿಷಕಾರಿ ಅಂಶಗಳು ಮೂತ್ರದ ವಿಸರ್ಜನೆಯ ಮೂಲಕ ಹೊರಹಾಕಲು ನೆರವಾಗುತ್ತದೆ. ಇನ್ನು ಹೂಕೋಸಿನಲ್ಲಿ ವಿಟಮಿನ್ ಸಿ, ವಿಟಮಿನ್, ನಾರನಾಂಶ, ಪೊಟ್ಯಾಶಿಯಂ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.​

 

High Blood pressure can spoil your kidneys soon.