ಮೊಸರು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಮಳೆಗಾಲದಲ್ಲಿ ಜಾಸ್ತಿ ಸೇವನೆ ಮಾಡಬಾರದು!

28-06-23 06:19 pm       Source: Vijayakarnataka   ಡಾಕ್ಟರ್ಸ್ ನೋಟ್

ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಮಳೆಗಾಲದಲ್ಲಿ, ಮೊಸರಿನಿಂದ ಸ್ವಲ್ಪ ಅಂತರ ಕಾಯ್ದು ಕೊಂಡರೆ ಒಳ್ಳೆಯದಂತೆ! ಅದರಲ್ಲು ಪ್ರಮುಖವಾಗಿ ರಾತ್ರಿ ಹೊತ್ತು ಮೊಸರು ಸೇವನೆಯಿಂದ ದೂರವಿದ್ದರೆ ಬಹಳ ಒಳ್ಳೆಯದಂತೆ

ಹಾಲು ಹಾಗೂ ಇದರ ಉಪ ಉತ್ಪನ್ನಗಳಾದ ಮೊಸರು, ಬೆಣ್ಣೆ, ಮಜ್ಜಿಗೆ, ಸೇವಿಸುವುದರಿಂದ ಅನೇಕ ರೀತಿ ಆರೋಗ್ಯ ಪ್ರಯೋಜನಗಳು ಪಡೆದು ಕೊಳ್ಳಬಹುದು ಎನ್ನುವ ವಿಚಾರ, ನಮಗೆಲ್ಲಾ ಗೊತ್ತೇ ಇದೆ. ವಿಶೇಷವಾಗಿ ಊಟದ ಬಳಿಕ ಒಂದು ಸಣ್ಣ ಕಪ್‌ನಷ್ಟು ಮೊಸರು ಸೇವನೆ ಮಾಡಿದರೆ, ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಪ್ರಮುಖವಾಗಿ ಮೊಸರಿನಲ್ಲಿ ಕಂಡುಬರುವ ಪ್ರೋಬಯೋಟಿಕ್ ಗುಣಲಕ್ಷಣಗಳು, ಆಮ್ಲೀಯ ಪ್ರಭಾವದಿಂದ ಕಂಡು ಬರುವ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡಿ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಸರಿನಲ್ಲಿ ಅಡಗಿರುವ ಪೌಷ್ಟಿಕ ಸತ್ವಗಳ ಬಗ್ಗೆ ನೋಡುವುದಾದರೆ...

weight loss to glowing skin know surprising health benefits of eating curd  during summer garmiyon mein dahi khane ke fayde - गर्मियों में जरूर खाएं एक  कटोरी दही, सेहत ही नहीं खूबसूरती

ಮೊಸರಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಹಲವಾರು ಬಗೆಯ ಪೋಷಕಾಂಶಗಳು, ಇತರ ಆಹಾರಗಳಿಗೆ ಹೋಲಿಸಿದರೆ, ಇದರಲ್ಲಿ ಸಿಗುವ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್ಸ್ ಅಂಶಗಳು, ಮೊಸರಿನಲ್ಲಿ ಕಂಡು ಬರುವುದರಿಂದ, ಇದೊಂದು ಆರೋಗ್ಯಕರವಾದ ಆಹಾರ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ!

ಮಳೆಗಾಲದಲ್ಲಿ ಮೊಸರು ಸೇವನೆ ಮಾಡಬಹುದಾ?

Aloo Paratha with curd - Picture of Marwari Bistro, Bhubaneswar -  Tripadvisor

  • ನಿಮಗೆ ಗೊತ್ತಿರಲಿ ಆಯುರ್ವೇದದಲ್ಲಿ ಮೊಸರು ಸೇವಿಸು ವುದಕ್ಕೆ ಕೂಡ ಕೆಲವು ನಿಯಮಗಳಿವೆ! ಉದಾಹರಣೆಗೆ ಮೊಸರನ್ನು ಮಧ್ಯಾಹ್ನದ ಊಟ ಜೊತೆಗೆ ಸೇವಿಸ ಬಹುದು ಆದರೆ ರಾತ್ರಿ ಊಟಕ್ಕೆ ಸೇವನೆ ಮಾಡುವ ಹಾಗಿಲ್ಲ.
  • ಇನ್ನೂ ಪ್ರಮುಖವಾಗಿ, ಆಯುರ್ವೇದ ತಜ್ಞರು ಮಳೆ ಗಾಲದಲ್ಲಿ ಮೊಸರು ಸೇವನೆ ಯಿಂದ, ದೂರವಿರಲು ಸಲಹೆ ನೀಡುತ್ತಾರೆ! ಇದಕ್ಕೆ ಒಂದು ಪ್ರಮುಖ ಕಾರಣ ಏನೆಂದರೆ, ಮೊಸರು ತುಂಬಾನೇ ತಂಪಾಗಿರುವುದ ರಿಂದ, ಶೀತದ ವಾತಾವರಣ ಇರುವ ಸಂದರ್ಭದಲ್ಲಿ ಇದರಿಂದಾಗಿ ಆರೋಗ್ಯದ ಮೇಲೆ ಅನೇಕ ರೀತಿಯ ಅಡ್ಡಪರಿಣಾಮಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಮಳೆಗಾಲದಲ್ಲಿ ಜಾಸ್ತಿ ಮೊಸರಿನ ಸೇವನೆಯಿಂದಾಗುವ ಸಮಸ್ಯೆಗಳು

ಮಳೆಗಾಲದಲ್ಲಿ ಜಾಸ್ತಿ ಮೊಸರಿನ ಸೇವನೆಯಿಂದಾಗುವ ಸಮಸ್ಯೆಗಳು

ಶೀತ, ಕೆಮ್ಮು ಹಾಗೂ ಕಫದ ಸಮಸ್ಯೆ ಕಂಡು ಬರಬಹುದು
ಗಂಟಲು ಕೆರತ
ಎದೆಯಲ್ಲಿ ಕಫಗಟ್ಟಿಯಾಗಬಹುದು
ಕೈಕಾಲಿನ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು
ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು!

ಆಯುರ್ವೇದದ ತಜ್ಞರ ಪ್ರಕಾರ

Beware of THESE 6 symptoms typical to winter illnesses | The Times of India

  • ಆಯುರ್ವೇದದ ತಜ್ಞರ ಪ್ರಕಾರ ದೇಹದ ಮೂರು ದೋಷ ಗಳಾದ ವಾತ, ಪಿತ್ತ ಮತ್ತು ಕಫವನ್ನು ಸಮತೋಲನ ಗೊಳಿಸಲು, ನಾವು ದೈನಂದಿನ ಆಹಾರಪದ್ಧತಿ ಹಾಗೂ ಪಾನೀಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು.
  • ಈ ಬಗ್ಗೆ ತಜ್ಞರಾದ ಡಾ. ಐಶ್ವರ್ಯ ಸಂತೋಷ್ ಅವರು ಹೇಳುವ ಪ್ರಕಾರ, ಮೊಸರು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಎರಡು ಮಾತಿಲ್ಲ. ಆದರೆ ಮೊಸರನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು.
  • ಪ್ರಮುಖವಾಗಿ ಮೊಸರನ್ನು ರಾತ್ರಿಯ ಸಮಯದಲ್ಲಿ ಸೇವನೆ ಮಾಡಬಾರದು. ಯಾಕೆಂದ್ರೆ ಹುಳಿ ಬಂದಿರುವ ಮೊಸರು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆಯಂತೆ. ಅದೇ ರೀತಿ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ರಾತ್ರಿ ಹೊತ್ತು ಮೊಸರು ಸೇವನೆ ಮಾಡುವುದರಿಂದ, ಇದ್ದಕ್ಕಿದಂತೆ ಶೀತ ನೆಗಡಿ, ಮೂಗು ಕಟ್ಟುವುದು, ಎದೆಕಟ್ಟುವುದು ಹೀಗೆ ಅನೇಕ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆಯೆಂದು ತಜ್ಞರಾದ ಡಾ. ಐಶ್ವರ್ಯ ಸಂತೋಷ್ ಅವರು ಮುನ್ನೆಚ್ಚರಿಕೆಯ ಸಲಹೆಗಳನ್ನು ನೀಡುತ್ತಾರೆ.​

ಮೊಸರನ್ನ

Curd Rice Recipe (Restaurant Style) - Indian Veggie Delight

  • ಮಳೆಗಾಲದಲ್ಲಿ ಕೇವಲ ಮೊಸರು ಮಾತ್ರವಲ್ಲದೆ, ಮೊಸರು ಬಳಸಿ ಮಾಡುವ ತಿಂಡಿ-ತಿನಿಸುಗಳು, ಆಹಾರ ಪದಾರ್ಥಗಳಿಂದ ಕೂಡ ಅಂತರ ಕಾಯ್ದುಕೊಳ್ಳಬೇಕು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
  • ಒಂದು ವೇಳೆ ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳು ಕಂಡು ಬರುತ್ತಿದ್ದರೆ ಇಲ್ಲಾಂದ್ರೆ ಹೀಗಾಗಲೇ ಉಸಿರಾಟದ ಸಮಸ್ಯೆಗಳು ಹಾಗೂ ಉರಿಯುತದಂತಹ ಸಮಸ್ಯೆಗಳು ಇದ್ದರೆ ಮೊಸರು ಸೇವನೆಯನ್ನು ಮಿತಗೊಳಿಸಿ.

Is it safe to eat curd in monsoon season these things you must know.