ಸೀತಾಫಲ ಹಣ್ಣು: ಪ್ರಕೃತಿ ಮನುಷ್ಯನಿಗೆ ಕೊಟ್ಟಿರುವ ಒಂದು ಅದ್ಭುತ ಹಣ್ಣು!

30-06-23 07:32 pm       Source: Vijayakarnataka   ಡಾಕ್ಟರ್ಸ್ ನೋಟ್

ವರ್ಷಕ್ಕೆ ಒಂದು ಬಾರಿ ಸಿಗುವ ಸೀತಾಫಲ ಹಣ್ಣು ಆರೋಗ್ಯಕ್ಕೆ ಕೊಡುವ ಪ್ರಯೋಜನಗಳು ಒಂದೆರಡಲ್ಲ. ಕೇಳಿದರೆ ಆಶ್ಚರ್ಯ ಪಡುತ್ತೀರಿ!

ಸೀತಾಫಲ ಹಣ್ಣು ಸೀಸನಲ್ ಹಣ್ಣಾಗಿದೆ. ಆದ್ದರಿಂದ ಇದರಲ್ಲಿ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಅಪಾರವಾಗಿದೆ. ಜನರು ಇಷ್ಟಪಟ್ಟು ಸೀತಾಫಲ ಹಣ್ಣನ್ನು ತಿನ್ನುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ಸೀತಾಫಲ ಹಣ್ಣನ್ನು ತಿನ್ನಬಹುದು. ಬೀಜವನ್ನು ಹೊರತುಪಡಿಸಿದರೆ ಇದರ ತಿರುಳು ತಿನ್ನಲು ರುಚಿಕರವಾಗಿರುತ್ತದೆ ಮತ್ತು ಬಾಯಲ್ಲಿ ಹಾಗೆ ನುಣುಚಿಕೊಂಡು ಗಂಟಲು ಸೇರುತ್ತದೆ.

ಅಧ್ಯಯನಗಳು ಕೂಡ ಸೀತಾಫಲ ಹಣ್ಣಿನ ಮೇಲೆ ಪ್ರಯೋಗಗಳನ್ನು ನಡೆಸಿದ್ದು, ವಿವಿಧ ಉಪಯುಕ್ತ ಅಂಶಗಳನ್ನು ಹೊರಹಾಕಿವೆ. ಕೊಲೆಸ್ಟ್ರಾಲ್ ಮತ್ತು ಕ್ಯಾನ್ಸರ್ ಸಮಸ್ಯೆಗೆ ಇದು ರಾಮಬಾಣ ಎಂದು ತಿಳಿಸಿವೆ. ಇದೇ ತರಹ ಸೀತಾಫಲ ಹಣ್ಣಿನ ವಿವಿಧ ಆರೋಗ್ಯ ಪ್ರಯೋಜನಗಳನ್ನು ಈ ಲೇಖನ ದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಗರ್ಭಿಣಿ ಮಹಿಳೆಯರಿಗೆ

Pregnant women, be careful! Study reveals stress in pregnant women can give  rise to negative emotions in babies | Health News, Times Now

  • ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಬೆಳಗಿನ ಸಮಯ ದಲ್ಲಿ ಎದುರಾಗುವ, ವಾಕರಿಕೆ, ವಾಂತಿ, ಹಾಗೂ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುವ ಮಾನಸಿಕ ಬದಲಾವಣೆಗಳಿಗೆ ಸೀತಾಫಲ ಹಣ್ಣು ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರಾದ ಲೊವ್ನೀತ್ ಬಾತ್ರಾರವರು ಸಲಹೆ ನೀಡುತ್ತಾರೆ.
  • ಇದಕ್ಕೆ ಪ್ರಮುಖ ಕಾರಣ, ಗರ್ಭಿಣಿಯರ ಆರೋಗ್ಯಕ್ಕೆ ಬೇಕಾ ಗುವ ವಿಟಮಿನ್ b6, ತಾಮ್ರ, ನಾರಿನಾಂಶ, ಹೀಗೆ ಅನೇಕ ಬಗೆಯ ಪೌಷ್ಟಿಕ ಸತ್ವಗಳು, ಈ ಹಣ್ಣಿನಲ್ಲಿ ಹೇರಳವಾಗಿ ಕಂಡು ಬರುವು ದರಿಂದ, ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ, ಈ ಹಣ್ಣನ್ನು ಮಿತವಾಗಿ ಸೇವನೆ ಮಾಡಬಹುದು.​

ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ

Custard apple benefits in reducing risk of diabetes and blood pressure |  HealthShots

  • ನಮ್ಮ ದೇಹದಲ್ಲಿ ಆಕ್ಸಿಡೆಟೀವ್ ಒತ್ತಡ ಎನ್ನುವುದು ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂದರೆ ಇದರಿಂದ ಕ್ಯಾನ್ಸರ್ ಮತ್ತು ಹೃದಯದ ತೊಂದರೆ ಸೇರಿದಂತೆ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳು ಬರಬಹುದು.
  • ಆದರೆ ಸೀತಾಫಲ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಸಿ ಪ್ರಮಾಣ ಜೊತೆಗೆ ಇನ್ನಿತರ ಆರೋಗ್ಯ ರಕ್ಷಣಾ ಅಂಶಗಳು ಸಿಗುತ್ತವೆ. ಇವು ದೀರ್ಘಕಾಲದ ಆರೋಗ್ಯ ಸಮಸ್ಯೆ ಗಳನ್ನು ಬರದಂತೆ ತಡೆಯುವ ಸಾಮರ್ಥ್ಯ ಪಡೆದಿವೆ.​

ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ

ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ

ಸೀತಾಫಲ ಹಣ್ಣು ತನ್ನಲ್ಲಿ ವಿಟಮಿನ್ ಬಿ ಅಂಶವನ್ನು ಹೆಚ್ಚಾಗಿ ಒಳಗೊಂಡಿದ್ದು, ಡೋಪಮೈನ್ ಉತ್ಪತ್ತಿ ಹೆಚ್ಚಾಗುವಂತೆ ಮಾಡುತ್ತದೆ. ಇದು ಮಾನಸಿಕ ಒತ್ತಡ, ಮಾನಸಿಕ ಆತಂಕ, ಮಾನಸಿಕ ಖಿನ್ನತೆ ಮತ್ತು ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡುವಲ್ಲಿ ನೆರವಾಗುತ್ತದೆ.

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

Newsroom - Understanding your blood pressure numbers

  • ಸೀತಾಫಲ ಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಷಿ ಯಂ ಸಾಕಷ್ಟು ಕಂಡುಬರುತ್ತದೆ. ಇದು ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ ಮತ್ತು ಹೃದ ಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ.
  • ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಹ ತಗ್ಗಿಸಿ, ಪಾರ್ಶ್ವವಾಯು, ಹೃದಯಾಘಾತ ಇತ್ಯಾದಿ ಗಳಂತಹ ಹೃದಯ ರಕ್ತನಾಳದ ಕಾಯಿಲೆಗಳನ್ನು ಇಲ್ಲವಾಗಿಸುತ್ತದೆ.​

ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಿವೆ

ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಿವೆ

ಸಂಶೋಧನೆ ಹೇಳುವಂತೆ ಸೀತಾಫಲ ಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಲಕ್ಷಣಗಳು ಕಂಡುಬರುತ್ತವೆ. ಅಂದರೆ ಇದರಲ್ಲಿ catechin, epicatechin ಮತ್ತು epigallocatechin ಇರಲಿದ್ದು ಕ್ಯಾನ್ಸರ್ ಜೀವಕೋಶಗಳು ಬೆಳವಣಿಗೆ ಆಗದಂತೆ ತಡೆಯುತ್ತದೆ. ಆದರೆ ಕ್ಯಾನ್ಸರ್ ಸಂಪೂರ್ಣವಾಗಿ ನಿವಾರಣೆ ಆಗುವ ವಿಷಯ ದಲ್ಲಿ ಸೀತಾಫಲ ಹಣ್ಣಿನ ಪಾತ್ರ ಹೇಗಿದೆ ಎಂಬುದರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಾದ ಅವಶ್ಯಕತೆ ಇದೆ.

ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ

760 Man Stomach Pain Videos Stock Videos and Royalty-Free Footage - iStock

  • ಸೀತಾಫಲ ಹಣ್ಣು ತನ್ನಲ್ಲಿ ಹೆಚ್ಚಿನ ನಾರಿನ ಅಂಶವನ್ನು ಒಳಗೊಂಡಿದ್ದು, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಯನ್ನು ಉತ್ತಮಪಡಿಸುತ್ತದೆ.
  • ಮಲಬದ್ಧತೆ ಮತ್ತು ಆಮಶಂಕೆ ಸಮಸ್ಯೆಯನ್ನು ದೂರ ಮಾಡುತ್ತದೆ. ಸೀತಾಫಲ ಹಣ್ಣಿನಲ್ಲಿ ಕಂಡುಬರುವ ಫ್ಯಾಟಿ ಆಮ್ಲಗಳು ನಮ್ಮ ದೇಹದ ಉರಿಯುತ ಸಮಸ್ಯೆಯನ್ನು ದೂರ ಮಾಡುತ್ತವೆ ಮತ್ತು ಶಕ್ತಿಯನ್ನು ಕೊಡುತ್ತವೆ.​

ಸಂಧಿವಾತದಂತಹ ಸಮಸ್ಯೆಗೆ ಒಳ್ಳೆಯದು

ಸಂಧಿವಾತದಂತಹ ಸಮಸ್ಯೆಗೆ ಒಳ್ಳೆಯದು

ಸೀತಾಫಲ ಹಣ್ಣಿನಲ್ಲಿ ಕಂಡು ಬರುವ ಎಲೆಕ್ಟ್ರೋಲೈಟ್ ಅಂಶಗಳು, ಮನುಷ್ಯನ ಕೀಲುಗಳ ಭಾಗದಲ್ಲಿ ಸೇರಿಕೊಂಡಿರುವ ಅಧಿಕ ಪ್ರಮಾಣದ ನೀರಿನಾಂಶವನ್ನು ಸಮತೋಲನ ಕಾಯ್ದು ಕೊಳ್ಳುವಂತೆ ಮಾಡುವುದು ಮಾತ್ರವಲ್ಲದೆ, ಮೂಳೆಗಳಲ್ಲಿ ಕಂಡುಬರುವ ಉರಿಯೂತದಂತಹ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡಿ ಸಂಧಿವಾತದಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಮಧುಮೇಹ ಕಾಯಿಲೆ ಇದ್ದವರು

Diabetes and the Gut - Gastrointestinal Society

  • ಸಾಮಾನ್ಯವಾಗಿ ಮಧುಮೇಹ ಕಾಯಿಲೆ ಕಾಣಿಸಿ ಕೊಂಡರೆ, ವೈದ್ಯರು ಸಿಹಿ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರವಿರಲು ಸಲಹೆ ನೀಡುತ್ತಾರೆ. ಇದಕ್ಕೆ ಸೀತಾಫಲ ಹಣ್ಣು ಕೂಡ ಹೊರತಲ್ಲ!
  • ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನಲ್ಲಿ ಸಿಗುವ ಅಪಾರ ಪ್ರಮಾಣದ ಸಿಹಿ ಅಂಶ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಈ ಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಇದರಲ್ಲಿ ಕಡಿಮೆ ಇರುತ್ತದೆ ಎಂಬುದು ಆರೋಗ್ಯ ತಜ್ಞರ ಮಾತು.
  • ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಈ ಹಣ್ಣನ್ನು ಸೇವನೆ ಮಾಡುವ ಮುನ್ನ, ಯಾವುದಕ್ಕೂ ಒಮ್ಮೆ ನಿಮ್ಮ ವೈದ್ಯರ ಸಲಹೆಯನ್ನು ಪಡೆದು ಕೊಳ್ಳುವುದು ಅತ್ಯಗತ್ಯ. 

Do you know these health benefits of custard apple.