ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುವವರಿಗೆ ಸಕ್ಕತ್ ಲಾಭ!

01-07-23 06:57 pm       Source: Vijayakarnataka   ಡಾಕ್ಟರ್ಸ್ ನೋಟ್

ಪರಂಗಿ ಹಣ್ಣನ್ನು ತಿಂದರೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕಂತೆ! ಆಗ ಇದರಿಂದ ಪೂರ್ಣ ಪ್ರಮಾಣದಲ್ಲಿ ನಮ್ಮ ಆರೋಗ್ಯಕ್ಕೆ ಸಿಗುವ ಎಲ್ಲಾ ಪ್ರಯೋಜನಗಳು.

 

ವರ್ಷ ಪೂರ್ತಿ ಸಿಗುವ ಹಣ್ಣು ಎಂದರೆ ಪರಂಗಿ ಹಣ್ಣು ಎಂದು ಹೇಳಬಹುದು. ಕೇವಲ ಮಾರು ಕಟ್ಟೆಯಲ್ಲಿ ಮಾತ್ರವಲ್ಲದೆ ನಾವೇ ಸ್ವತಹ ಇದನ್ನು ಮನೆಯ ಬಳಿ ಬೆಳೆಯಬಹುದು. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಪರಂಗಿ ಹಣ್ಣಿನ ರುಚಿ ನಿಂತಿರುತ್ತದೆ. ಈಗ ವಿಷಯ ಎಂದರೆ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವುದರಿಂದ ಲಾಭಾ ಜಾಸ್ತಿ ಎಂದು.

ಬಿಪಿ, ಶುಗರ್ ಇರುವವರು ಇದರ ಸೇವನೆ ಮಾಡಬಹುದು. ಪರಂಗಿ ಹಣ್ಣಿನ ಜ್ಯೂಸ್ ಕುಡಿಯಬಹುದು. ಪರಂಗಿ ಹಣ್ಣಿನ ಆರೋಗ್ಯಕರ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ನೀವು ಸಹ ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವ ಮುಂಚೆ ಇದನ್ನು ಸೇವಿಸಿ. ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಸೌಂದರ್ಯ ಕೂಡ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಪರಂಗಿ ಹಣ್ಣಿನ ಆರೋಗ್ಯಕರ ಗುಣಗಳನ್ನು ವಿಶ್ಲೇಷಿಸುವುದಾದರೆ...

ಜೀರ್ಣ ಶಕ್ತಿ ಹೆಚ್ಚಿಸುತ್ತದೆ

ಜೀರ್ಣ ಶಕ್ತಿ ಹೆಚ್ಚಿಸುತ್ತದೆ

  • ಹೌದು ಪರಂಗಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ಪರಂಗಿ ಹಣ್ಣಿನ ಪ್ರಭಾವದಿಂದ ದೇಹದ ಜೀರ್ಣಶಕ್ತಿ ವೃದ್ಧಿಸುತ್ತದೆ.
  • ಇಷ್ಟೇ ಅಲ್ಲದೆ ನಮ್ಮ ದೇಹ ನಾವು ತಿನ್ನುವ ಆಹಾರ ವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂಸ್ಕರಿಸಲು ನೆರವಾಗುತ್ತದೆ.
  • ಬೆಳಗಿನ ಸಮಯದಲ್ಲಿ ಸಾಧ್ಯವಾದಷ್ಟು ನಾರಿನಾಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾ ಉತ್ತಮ.​

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

6 reasons why you should eat papaya empty stomach - ​Anti-ageing​ | The  Economic Times

ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿ ಸೋಂಕು ಮತ್ತು ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡುವ ಗುಣವಿದೆ. ಬೆಳಗಿನ ಸಮಯದಲ್ಲಿ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.

ಶುಗರ್ ಇರುವವರಿಗೆ ಒಳ್ಳೆಯದು

Diabetes - India

  • ಪರಂಗಿ ಹಣ್ಣು ತನ್ನಲ್ಲಿ ಕಡಿಮೆ ಸಕ್ಕರೆ ಪ್ರಮಾಣವನ್ನು ಹೊಂದಿದ್ದು ಅಧಿಕ ನಾರಿನಾಂಶವನ್ನು ಹೊಂದಿದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವು ದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಉತ್ತಮವಾಗಿ ನಿರ್ವಹಣೆಯಾಗುತ್ತದೆ.
  • ಇಡೀ ದಿನ ಬ್ಲಡ್ ಶುಗರ್ ಲೆವೆಲ್ ಒಂದೇ ರೀತಿ ಇರುವಂತೆ ನೋಡಿ ಕೊಳ್ಳುತ್ತದೆ. ಒಂದು ವೇಳೆ ಸಕ್ಕರೆ ಕಾಯಿಲೆ ಇದ್ದರೆ ಸುಲಭವಾಗಿ ಪರಂಗಿ ಹಣ್ಣಿನಿಂದ ಕಂಟ್ರೋಲ್ ಮಾಡಿಕೊಳ್ಳಬಹುದು. ಆದರೆ, ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣ ದಲ್ಲಿ ಇಲ್ಲದವರು, ಈ ಹಣ್ಣನ್ನು ತಿನ್ನುವ ಮೊದಲು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಿ. ​

ಉರಿಯುತ ನಿಯಂತ್ರಣ ಮಾಡುತ್ತದೆ

How do you know when back pain is serious?

  • ಪರಂಗಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲ ಮೆಟರಿ ಲಕ್ಷಣಗಳು ಸಾಕಷ್ಟು ಕಂಡುಬರುವುದ ರಿಂದ ನಮ್ಮ ದೇಹದ ಉರಿಯುತ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ.
  • ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣು ಸೇವಿಸುವು ದರಿಂದ ಉರಿಯುತಕ್ಕೆ ಸಂಬಂಧಪಟ್ಟಂತೆ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸುವುದು ತಪ್ಪುತ್ತದೆ.​

ತ್ವಚೆಯ ಸೌಂದರ್ಯ ವೃದ್ಧಿಸುತ್ತದೆ

ತ್ವಚೆಯ ಸೌಂದರ್ಯ ವೃದ್ಧಿಸುತ್ತದೆ

  • ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಾಗಿರುವುದರಿಂದ ಆರೋಗ್ಯಕರವಾದ ಮತ್ತು ಸೌಂದರ್ಯದಿಂದ ಕೂಡಿದ ತ್ವಚೆಯನ್ನು ಹೊಂದಲು ಇದು ಸಹಾಯಮಾಡುತ್ತದೆ.
  • ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವು ದರಿಂದ ಮೊಡವೆಗಳು, ಸಣ್ಣ ಸಣ್ಣ ಗುಳ್ಳೆಗಳು, ಚರ್ಮದ ವಯಸ್ಸಾಗವಿಕೆ ಪ್ರಕ್ರಿಯೆ ಹೀಗೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ನಿಮ್ಮ ಆಹಾರ ಪದ್ಧತಿಯಲ್ಲಿ ಪರಂಗಿ ಹಣ್ಣನ್ನು ಸೇರಿಸಿ ಕೊಳ್ಳುವುದರಿಂದ ಚರ್ಮಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ ಮತ್ತು ಚರ್ಮ ಒಣಗುವಿಕೆ ಪ್ರಕ್ರಿಯೆ ದೂರವಾಗುತ್ತದೆ.​

ತೂಕ ನಿಯಂತ್ರಣ ಮಾಡುತ್ತದೆ

Is It Bad to Lose Weight Too Quickly?

ಇದಕ್ಕೆ ಕಾರಣ ಪಪ್ಪಾಯ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದು. ಹೀಗಾಗಿ ಇದು ಖಾಲಿ ಹೊಟ್ಟೆಯಲ್ಲಿ ನಿಮ್ಮ ದೇಹ ಸೇರಿದರೆ ನಿಮ್ಮ ಹೊಟ್ಟೆ ಹಸಿವು ನಿಯಂತ್ರಣವಾಗುತ್ತದೆ ಮತ್ತು ನಿಮಗೆ ಇಡೀ ದಿನ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಪ್ರೋಟಿನ್ ಮತ್ತು ಇನ್ನಿತರ ಪೌಷ್ಟಿಕಾಂಶಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಸಮತೋಲನವಾಗಿರುವಂತೆ ನೋಡಿಕೊಳ್ಳಿ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಪರಂಗಿ ಹಣ್ಣಿನಲ್ಲಿ ಪೊಟ್ಯಾಶಿಯಂ, ನಾರಿನ ಅಂಶ ಮತ್ತು ಆಂಟಿ ಆಕ್ಸಿಡೆಂಡ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ಸೇವಿಸುವು ದರಿಂದ ಹೃದಯದ ಸಮಸ್ಯೆ, ಹೆಚ್ಚಿನ ಕೊಲೆಸ್ಟ್ರಾಲ್ ತೊಂದರೆ ಮತ್ತು ಪಾರ್ಶ್ವವಾಯು ತರಹದ ಲಕ್ಷಣಗಳು ದೂರವಾಗುತ್ತವೆ.

Benefits will be more and more if you eat papaya in empty stomach.