ಮಳೆಗಾಲದಲ್ಲಿ, ನಿಮಗೆ ಇಂತಹ ತರಕಾರಿಗಳು, ಇಷ್ಟವಿದ್ದರೂ ತಿನ್ನಬಾರದು!

03-07-23 07:23 pm       Source: Vijayakarnataka   ಡಾಕ್ಟರ್ಸ್ ನೋಟ್

What not to eat during monsoon: ಮಳೆಗಾಲದಲ್ಲಿ ಕೆಲವೊಂದು ಹಣ್ಣು ತರಕಾರಿಗಳನ್ನು ತಿನ್ನಬಾರದು. ತಿಂದರೆ ಆರೋಗ್ಯ ಕೆಡುತ್ತದೆ. ಅವುಗಳ ಬಗ್ಗೆ.

ಯಾವುದೇ ಕಾಲವಾಗಿರಲಿ ನಾವು ನಮ್ಮ ಆರೋಗ್ಯಕ್ಕೆ ಅನುಕೂಲಕರವಾದ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಕು. ಈಗ ಬೇಸಿಗೆ ಕಳೆದು ಮಳೆಗಾಲ ಎಲ್ಲಾ ಕಡೆ ಪ್ರಾರಂಭವಾಗಿದೆ. ಅಂದ ಮೇಲೆ ಮಳೆಗಾಲದಲ್ಲಿ ನಮಗೆ ಸಣ್ಣ ಪುಟ್ಟ ಸೋಂಕುಗಳು ಎದುರಾಗುವುದು ಸಹಜ.

 

ನೆಗಡಿ, ಕೆಮ್ಮು, ಜ್ವರ ಎಂದು ಹುಷಾರು ತಪ್ಪುತ್ತೇವೆ. ಇದಕ್ಕೆ ನಾವು ತಿನ್ನುವ ಆಹಾರಗಳು ಕಾರಣ ಆಗಿರಬಹುದು. ಆಹಾರಕ್ಕೆ ಸಿಂಪಡಿಸಿರುವ ರಾಸಾಯನಿಕ ಕೂಡ ಕಾರಣ ಆಗಬಹುದು. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಂಡು ಯಾವೆಲ್ಲ ಆಹಾರ ಪದಾರ್ಥಗಳನ್ನು ತಿನ್ನಬಾರದು ಎಂಬುದನ್ನು ನೆನಪಿಟ್ಟುಕೊಳ್ಳೋಣ.

ಹಸಿರು ಎಲೆ ತರಕಾರಿಗಳು

13 Vegetables That Are Actually Fruits

  • ಹಸಿರು ಸೊಪ್ಪು ಮತ್ತು ಹಸಿರು ತರಕಾರಿಗಳು ನಮ್ಮ ಆರೋ ಗ್ಯಕ್ಕೆ ಯಾವಾಗಲೂ ಒಳ್ಳೆಯದು. ಏಕೆಂದರೆ ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಅಪಾರ ಪ್ರಮಾಣದಲ್ಲಿ ಸಿಗುತ್ತದೆ.
  • ಆದರೆ ಮಳೆಗಾಲದಲ್ಲಿ ಮಾತ್ರ ಇವುಗಳನ್ನು ತಿನ್ನ ಬಾರದು ಎಂದು ಡಾಕ್ಟರ್ ಹೇಳುತ್ತಾರೆ. ಏಕೆಂದರೆ ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ಸೋಂಕುಕಾರಕ ಕ್ರಿಮಿಗಳು ಇವುಗಳ ಮೇಲೆ ಸಂತತಿ ಯನ್ನು ಹೆಚ್ಚಿಸುತ್ತವೆ.
  • ಹೀಗಾಗಿ ಕಲುಷಿತವಾದ ಇವುಗಳನ್ನು ಸೇವಿಸದೆ ಇರುವುದು ಉತ್ತಮ. ಹಸಿರಾದ ಎಲೆ ಇರುವ ಜಾಗದಲ್ಲಿ ಸೋಂಕುಕಾರಕ ಕ್ರಿಮಿಗಳು ವಾಸಸ್ಥಾನ ಮಾಡಿಕೊಂಡಿ ರುತ್ತವೆ. ಹಾಗೂ ಒಂದು ವೇಳೆ ತಿನ್ನಲೇಬೇಕು ಎಂದರೆ ಅರ್ಧ ಗಂಟೆಗಳ ಕಾಲ ಚೆನ್ನಾಗಿ ಕುದಿಸಿ ಆನಂತರ ಸೇವಿಸುವುದು ಉತ್ತಮ.​

ಬದನೆಕಾಯಿ

The origin and story of Brinjal – a globe trotter powerhouse

  • ನೀಲಿ ಬಣ್ಣದ ಬದನೆಕಾಯಿ ಬಹುತೇಕರಿಗೆ ಸಾಕಷ್ಟು ಪ್ರಿಯ. ಆದರೆ ಇವುಗಳಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಸಾಕಷ್ಟು ಕಂಡುಬರುತ್ತವೆ.
  • ಮಳೆಗಾಲದ ವಾತಾವರಣ ಇರುವುದರಿಂದ ಕೀಟಗಳ ಬಾಧೆ ಯನ್ನು ತಡೆಯಲು ರಾಸಾಯನಿಕಗಳನ್ನು ಸಿಂ ಪಡಿಸಿರುತ್ತಾರೆ. ಇವುಗಳನ್ನು ತಿನ್ನುವುದರಿಂದ ಚರ್ಮದ ಅನೇಕ ತೊಂದರೆಗಳು ಕಾಣಿಸುತ್ತವೆ. ಜೊತೆಗೆ ವಾಕರಿಕೆ, ವಾಂತಿ ಕೂಡ ಕಂಡು ಬರುತ್ತದೆ.​

ದಪ್ಪ ಮೆಣಸಿನಕಾಯಿ

Health Benefits of Capsicum: 7 amazing benefits of capsicum | India.com

  • ಬೇಸಿಗೆ ಕಾಲದಲ್ಲಿ ದಪ್ಪ ಮೆಣಸಿನಕಾಯಿ ಸೀಸನ್ ಎಂದು ಹೇಳಬಹುದು. ತುಂಬಾ ಜನರಿಗೆ ದಪ್ಪ ಮೆಣಸಿನ ಕಾಯಿ ರೆಸಿಪಿಗಳನ್ನು ಮಾಡಿ ತಿನ್ನುವುದು ಬಹಳ ಇಷ್ಟ.
  • ಇವುಗಳಲ್ಲಿ ವಿಟಮಿನ್, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುತ್ತವೆ. ಆದರೆ ಕೆಲವೊಂದು ರಾಸಾಯನಿಕ ಅಂಶಗಳು ಸಹ ಇವುಗಳಲ್ಲಿ ಇರುತ್ತವೆ ಎಂದು ತಿಳಿದುಬಂದಿದೆ.
  • ಮಳೆಗಾಲದಲ್ಲಿ ದಪ್ಪ ಮೆಣಸಿನಕಾಯಿ ಸೇವನೆ ಮಾಡು ವುದರಿಂದ ವಾಕರಿಕೆ, ವಾಂತಿ, ಭೇದಿ, ಉಸಿರಾಟದ ತೊಂದರೆ ಎದುರಾಗುತ್ತದೆ. ಕೆಲವರಿಗೆ ಈ ರೋಗ ಲಕ್ಷಣ ಗಳು ಒಂದು ದಿನದ ತನಕ ಇರಬಹುದು ಎಂದು ಹೇಳ ಲಾಗುತ್ತದೆ. ಹಾಗಾಗಿ ಇವುಗಳನ್ನು ಸೇವಿಸದೆ ಇರುವುದು ಉತ್ತಮ.​

ಹೂಕೋಸು

ಹೂಕೋಸು

  • ಹೂಕೋಸು ಹಾಳಾಗದಿರಲಿ ಎನ್ನುವ ಕಾರಣಕ್ಕೆ ಇದರ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿರುತ್ತಾರೆ. ಇದರಲ್ಲಿ glucosinolates ಪ್ರಮಾಣ ಇರುವುದರಿಂದ ಯಾರು ಇದಕ್ಕೆ ಹೆಚ್ಚು ಸೆನ್ಸಿಟಿವ್ ಅಥವಾ ಅಲರ್ಜಿ ಸಮಸ್ಯೆ ಹೊಂದಿರುತ್ತಾರೆ ಅವರಿಗೆ ಇದು ಆಗುವುದಿಲ್ಲ.
  • ಇದರಲ್ಲಿ ಇರುವ ರಾಸಾಯನಿಕ ಅಂಶವನ್ನು ಕ್ಲೀನ್ ಮಾಡುವುದು ಕೂಡ ಬಹಳ ಕಷ್ಟ. ಹಾಗಾಗಿ ಮಳೆಗಾಲ ದಲ್ಲಿ ಹೂಕೋಸನ್ನು ತಿನ್ನದೇ ಇರುವುದು ಒಳ್ಳೆಯದು.​

ಮೇಲಿನ ತರಕಾರಿಗಳ ಬದಲಿಗೆ ಈ ತರಕಾರಿಗಳನ್ನು ಸೇವಿಸಬಹುದು

Get ready to astonish yourself with mesmerising recipes of Bottle gourd or  Lauki

  • ಸೋರೆಕಾಯಿ: ಇದರಲ್ಲಿ ಕರಗುವ ಮತ್ತು ಕರಗದಿರುವ ನಾರಿನ ಅಂಶ ಅಪಾರವಾಗಿ ಸಿಗುತ್ತದೆ. ಇದೊಂದು ಆರೋಗ್ಯಕರವಾದ ತರಕಾರಿಗಳ ಲಿಸ್ಟ್ ನಲ್ಲಿ ಇರಬಹು ದಾದ ಉತ್ತಮ ತರಕಾರಿ ಎಂದು ಹೇಳಬಹುದು.
  • ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಜೊತೆಗೆ ನಮ್ಮ ದೇಹಕ್ಕೆ ಕಬ್ಬಿಣ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಪ್ರಮಾಣವನ್ನು ಜೊತೆಗೆ ಆಂಟಿ ಆಕ್ಸಿ ಡೆಂಟ್ ಗುಣಲಕ್ಷಣಗಳನ್ನು ನೀಡುತ್ತದೆ.
  • ನಮ್ಮ ಹೊಟ್ಟೆಯ ಭಾಗವನ್ನು ತಂಪಾಗಿರಿಸುವುದು ಮಾತ್ರ ವಲ್ಲದೆ ಲಿವರ್ ಆರೋಗ್ಯವನ್ನು ಕಾಪಾಡುತ್ತದೆ.
  • ಜ್ವರ, ಕೆಮ್ಮು ಇತ್ಯಾದಿ ಸಮಸ್ಯೆಗಳ ವಿರುದ್ಧ ಕೂಡ ಇದು ಕೆಲಸ ಮಾಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ನೀವು ಸೋರೆಕಾಯಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.​

ಹಾಗಲಕಾಯಿ

High Yield and Disease Resistance Bitter Gourd Seeds - China Melon,  Zucchini | Made-in-China.com

  • ಹಾಗಲಕಾಯಿ ವಿಟಮಿನ್ ಸಿ ಪ್ರಮಾಣವನ್ನು ಹೇರಳ ವಾಗಿ ಹೊಂದಿದೆ. ಇದರಲ್ಲಿ ಅದ್ಭುತವಾದ ಖನಿಜಾಂಶ ಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಇರುವುದ ರಿಂದ ನಮ್ಮ ದೇಹವನ್ನು ಚಳಿಗಾಲದ ಆರೋಗ್ಯದ ಸಮಸ್ಯೆಗಳಿಂದ ರಕ್ಷಿಸುತ್ತದೆ ಮತ್ತು ಇದರ ಕಹಿ ಗುಣ ಲಕ್ಷಣಗಳಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಪ್ರಭಾವ ಗಳನ್ನು ಉಂಟುಮಾಡುತ್ತದೆ.
  • ನಮ್ಮ ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡುವಲ್ಲಿ ಇದರ ಪಾತ್ರ ಬಹಳ ದೊಡ್ಡದು. ಕರುಳಿನ ಭಾಗದಲ್ಲಿರುವ ಸೋಂಕುಕಾರಕ ಕ್ರಿಮಿಗಳನ್ನು ನಾಶ ಪಡಿಸುವಲ್ಲಿ ಹಾಗಲಕಾಯಿ ಉತ್ತಮವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಮಳೆಗಾಲಕ್ಕೆ ಹೇಳಿ ಮಾಡಿಸಿದ ತರಕಾರಿ ಇದು.

ಬೀಟ್ರೂಟ್

15 Healthy Root Vegetables and Their Key Nutrients - Nutrition Advance

  • ನಮ್ಮ ರಕ್ತದಲ್ಲಿನ ಕಡಿಮೆ ಹೀಮೋಗ್ಲೋಬಿನ್ ಮಟ್ಟ ವನ್ನು ಹೆಚ್ಚು ಮಾಡುವಲ್ಲಿ ಮತ್ತು ನಮ್ಮ ದೇಹಕ್ಕೆ ಮ್ಯಾಂಗನೀಸ್, ನಾರಿನ ಅಂಶ, ವಿಟಮಿನ್ ಸಿ, ಪೊಟ್ಯಾಶಿ ಯಂ ಮತ್ತು ಕಬ್ಬಿಣದ ಅಂಶವನ್ನು ಕೊಡುವ ಬೀಟ್ರೂಟ್ ಅನ್ನು ನಾವು ಮಳೆಗಾಲ ದಲ್ಲಿ ಸೇವನೆ ಮಾಡುವ ಜೊತೆಗೆ ಇದರಿಂದ ಜ್ಯೂಸ್, ಸಲಾಡ್, ಸೂಪ್, ಚಿಪ್ಸ್ ಇತ್ಯಾದಿಗಳನ್ನು ತಯಾರಿಸಿ ಸೇವಿಸಬಹುದು.
  • ಇದು ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸು ತ್ತದೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ. ನಮ್ಮ ದೇಹದಲ್ಲಿ ಮಳೆಗಾಲದ ಆರೋಗ್ಯ ಸಮಸ್ಯೆಗಳಿಂದ ಕಾಪಾ ಡುವ ಹಾಗೆ ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಸಹ ಬೀಟ್ರೂಟ್ ಕೊಡುತ್ತದೆ.​

ಸೌತೆಕಾಯಿ

Organic English Cucumber – GreenDNA® India

ಸೌತೆಕಾಯಿ ಯಾವಾಗಲೂ ಸಿಗುತ್ತದೆ. ಇದೊಂದು ಕಡಿಮೆ ಕ್ಯಾಲೋರಿ ಇರುವ ತರಕಾರಿಯಾಗಿದ್ದು, ಬಹಳ ಸುಲಭವಾಗಿ ಇದನ್ನು ಬೆಳೆಯಬಹುದು ಮತ್ತು ಎಲ್ಲರೂ ಸಹ ಆರೋಗ್ಯ ಕರವಾಗಿ ಇದನ್ನು ತಿನ್ನಬಹುದು. ನಮ್ಮ ದೇಹಕ್ಕೆ ನೀರಿನಂಶ ವನ್ನು ಒದಗಿಸುತ್ತದೆ.

monsoon diet vegetables to eat and avoid during rainy season.