ಹೈ ಬಿಪಿ ಕಂಟ್ರೋಲ್‌ ಮಾಡಲು ಮಾತ್ರೆಗಳ ಜೊತೆ ಈ ಆಹಾರ ಸೇವಿಸಿ

06-07-23 10:52 pm       Source: Vijayakarnataka   ಡಾಕ್ಟರ್ಸ್ ನೋಟ್

ಅಧಿಕ ರಕ್ತದೊತ್ತಡ ಇರುವವರು ಇಂತಹ ಆಹಾರ ತಿಂದರೆ ರಕ್ತದೊತ್ತಡ ಕಂಟ್ರೋಲ್‌ ಆಗುತ್ತೆ?

ಅಧಿಕ ರಕ್ತದೊತ್ತಡ ಹೃದ್ರೋಗದ ಅಪಾಯವನ್ನು ತಂದೊಡ್ಡಬಹುದು. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಥವಾ ನಿಭಾಯಿಸಲು ವೈದ್ಯರು ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಮೂಲಗಳ ಪ್ರಕಾರ, ಪ್ರಪಂಚದಾದ್ಯಂತ 1 ಶತಕೋಟಿಗೂ ಅಧಿಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿದ್ದಾರೆ.

ಸಾಮಾನ್ಯವಾಗಿ 120/80 ರಕ್ತದೊತ್ತಡವನ್ನು ನಾರ್ಮಲ್‌ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ರಕ್ತದೊತ್ತಡದ ಸಮಸ್ಯೆಯನ್ನು ನೀವು ಹೊಂದಿರುತ್ತೀರಿ. ವೈದ್ಯರು ನೀಡುವ ಔಷಧಿಗಳ ಜೊತೆಗೆ ನೈಸರ್ಗಿಕವಾಗಿ ಬಿಪಿ ಕಡಿಮೆ ಮಾಡುವ ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ.

ಸಿಟ್ರಸ್‌ ಹಣ್ಣುಗಳು

Orange Juice Health Benefits: Drink orange juice daily to prevent stroke  and heart attack

ಸಿಟ್ರಸ್‌ ಹಣ್ಣುಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ದ್ರಾಕ್ಷಿ, ಕಿತ್ತಳೆ, ನಿಂಬೆಹಣ್ಣುಗಳು ಅಧಿಕ  ರಕ್ತದೊತ್ತಡ ಇರುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಜೀವಸತ್ವಗಳು ಸಮೃದ್ಧವಾಗಿವೆ. ಇವು ಹೃದ್ರೋಗದ ಅಪಾಯವನ್ನು ತಗ್ಗಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.

ಸಂಶೋಧನೆಯ ಪ್ರಕಾರ, ದಿನಕ್ಕೆ ಸುಮಾರು 530 ರಿಂದ 600 ಗ್ರಾಂ ಸಿಟ್ರಸ್‌ ಹಣ್ಣುಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಬಹುದು ಎಂದಿದೆ. ಆಗಾಗ್ಗೆ ಕಿತ್ತಳೆ, ದ್ರಾಕ್ಷಿ, ನಿಂಬೆಹಣ್ಣಿನ ಜ್ಯೂಸ್‌ಗಳನ್ನು ಕುಡಿಯಿರಿ.

ಆರೋಗ್ಯಕರ ಬೀಜಗಳು

ಆರೋಗ್ಯಕರ ಬೀಜಗಳು

ಸಂಜೆಯ ಸಮಯದಲ್ಲಿ ಕುರುಕಲು ತಿಂಡಿಯಂತೆ ನೀವು ಬೀಜಗಳನ್ನು ತಿನ್ನಬಹುದು. ಎಣ್ಣೆಯಲ್ಲಿ ಕರಿದ ಆಹಾರಗಳ ಬದಲಾಗಿ ಅಗಸೆಬೀಜ, ಚಿಯಾ ಬೀಜ, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜಗಳನ್ನು ತಿನ್ನಿ.

ಇವುಗಳಲ್ಲಿ ಯಥೇಚ್ಚವಾಗಿ ಫೈಬರ್‌ ಇದೆ. ಇದು ರಕ್ತದೊತ್ತಡದ ನಿಯಂತ್ರಣಕ್ಕೆ ಬಹಳ ಒಳ್ಳೆಯದು. ಕೆಲವು ಸಂಶೋಧನೆಗಳ ಪ್ರಕಾರ, ಬೀಜಗಳು ತಿನ್ನುವುದು ರಕ್ತದೊತ್ತಡದಲ್ಲಿ ವ್ಯತ್ಯಾಸವನ್ನು ಗಮನಿಬಹುದು ಎಂದಿದೆ.

ಕ್ಯಾರೆಟ್‌

5 benefits of carrots that make it the perfect winter superfood |  HealthShots

ಕೇಸರಿ ಬಣ್ಣದ ಕ್ಯಾರೆಟ್‌ಗಳು ಕೇವಲ ತ್ವಚೆಯ ಆರೋಗ್ಯಕ್ಕೆ ಹಾಗು ಕಣ್ಣಿಗೆ ಮಾತ್ರ ಬಹಳ ಒಳ್ಳೆಯದು ಎಂದು ಭಾವಿಸಬೇಡಿ. ಇದು ನಿಮ್ಮ ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್‌ ಮಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್‌ಗಳು ಸಸ್ಯ- ಆಧಾರಿತ ಸಂಯುಕ್ತಗಳು ಅಧಿಕವಾಗಿದ್ದು, ರಕ್ತದೊತ್ತಡವನ್ನು ನಿರ್ವಹಿಸುವಂತಹ ವಿವಿಧ ಆರೋಗ್ಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.

ಮೊಟ್ಟೆಗಳು

Classic Hard-boiled Eggs - YMCA of Central Florida

ಮೊಟ್ಟೆಗಳು ತನ್ನ ಅನೇಕ ಆರೋಗ್ಯ ಪ್ರಯೋಜನಗಳಿಂದ ಹೆಚ್ಚು ಜನಪ್ರಿಯವಾಗಿದೆ. ಇವುಗಳಲ್ಲಿ ಪೋಷಕಾಂಶ ಸಮೃದ್ಧವಾಗಿದ್ದು, ತೂಕ ಕಡಿಮೆ ಮಾಡಲು, ದೇಹದಲ್ಲಿ ಶಕ್ತಿ ಹೆಚ್ಚಿಸಲು ಹಾಗು ರಕ್ತದೊತ್ತಡವನ್ನು ನಿರ್ವಹಿಸಲು ಹೀಗೆ ಅನೇಕ ರೀತಿಯಲ್ಲಿ ಮೊಟ್ಟೆ ಸೂಪರ್‌ಫುಡ್ ಆಗಿದೆ. ಹಾಗಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರವವರು ಮೊಟ್ಟೆಗಳನ್ನು ನಿಮ್ಮ ಡಯಟ್ ಫುಡ್‌ನಲ್ಲಿ ತಪ್ಪದೇ ಸೇರಿಸಿ. 

ಬ್ರೊಕೊಲಿ

Top 14 Health Benefits of Broccoli

ಹೂಕೋಸು ಜಾತಿಗೆ ಸೇರಿದ ಬ್ರೊಕೊಲಿ ರಕ್ತಪರಿಚಲನ ವ್ಯವಸ್ಥೆಯನ್ನು ಸುಲಲಿತವಾಗಿಸುತ್ತದೆ. ಇದು ಪರಿಣಾಮಕಾರಿಯಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಫ್ಲೇವನಾಯ್ಡ್‌ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ.

ಈ ಬ್ರೊಕೊಲಿಗಳು ದೇಹದಲ್ಲಿ ನೈಟ್ರಿಕ್‌ ಆಕ್ಸೈಡ್‌ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. 

ಈ ಎಲ್ಲಾ ಆಹಾರಗಳು ಕೂಡ ಅಧಿಕ ರಕ್ತದೊತ್ತಡಕ್ಕೆ ದಿವ್ಯಾ ಔಷಧವಾಗಿ ಕೆಲಸ ಮಾಡುತ್ತದೆ

4 Best Fruits To Eat After 50, Says Dietitian — Eat This Not That

ಕಿವಿ ಹಣ್ಣು

ಆಲೂಗಡ್ಡೆ

ಗಿಡಮೂಲಿಕೆಗಳು ಮತ್ತು ಮಸಾಲೆಗಳು

ಮೊಸರು

ಆಲಿವ್ ಎಣ್ಣೆ

ಬೆರ್ರಿ ಹಣ್ಣುಗಳು

Best Food to Control High Blood Pressure Naturally.