ಜಾಸ್ತಿ ಕಷ್ಟಪಡದೆ ಈಸಿಯಾಗಿ, ದೇಹದ ತೂಕ ಇಳಿಸಿ ಕೊಳ್ಳಬಹುದು! ಇಲ್ಲಿದೆ ಸಿಂಪಲ್ ಟಿಪ್ಸ್

07-07-23 07:59 pm       Source: Vijayakarnataka   ಡಾಕ್ಟರ್ಸ್ ನೋಟ್

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ವ್ಯಾಯಾಮ, ಯೋಗಾಭ್ಯಾಸ ಮಾಡುವ ಜೊತೆಗೆ ಈ ಸಿಂಪಲ್ ಟಿಪ್ಸ್ ಅನ್ನು ಫಾಲೋ ಮಾಡಿದರೆ, ಬಹಳ ಬೇಗನೇ, ತೂಕವನ್ನು ಇಳಿಸಿಕೊಳ್ಳಬಹುದು

ದೇಹದ ತೂಕ ಹೆಚ್ಚಿಸಿಕೊಂಡವರು ಹೇಗಾದರೂ ಮಾಡಿ, ತಮ್ಮ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರತಿದಿನ ಬೆಳಗ್ಗೆ ಬೇಗನೇ ಎದ್ದು ವಾಕಿಂಗ್ ಅಥವಾ ಜಾಗಿಂಗ್ ಮಾಡುವುದು, ವ್ಯಾಯಾಮ ಮಾಡುವುದು, ಎಣ್ಣೆ ಪದಾರ್ಥಗಳು ಇರುವ ಆಹಾರಗಳಿಂದ ದೂರವಿದ್ದು, ಆಯ್ದ ಆಹಾರಗಳನ್ನು ಮಾತ್ರ ಸೇವನೆ ಮಾಡುವರು, ಹೀಗೆ ಪ್ರತಿದಿನ ತೂಕ ಇಳಿಸಿಕೊಳ್ಳಲು ಬೇಕಾಗುವ ಎಲ್ಲಾ ಪ್ರಯತ್ನವನ್ನು ಕೂಡ ಮಾಡುವರು ಆದರೆ, ದೇಹದ ತೂಕವನ್ನು, ಮಾತ್ರ ಇಳಿಸಿಕೊಳ್ಳಲು ಆಗದೇ ನಿರಾಸೆ ಪಡುವರು!

ಈ ಬಗ್ಗೆ ತಜ್ಞರು ಹೇಳುವ ಪ್ರಕಾರ

ಈ ಬಗ್ಗೆ ತಜ್ಞರು ಹೇಳುವ ಪ್ರಕಾರ

  • ಮೊದಲಿಗೆ ದೇಹದ ತೂಕ ಇಳಿಸಿಕೊಳ್ಳಲು ಬಯಸುವ ವರು, ತಮ್ಮ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಯಾಕೆಂದ್ರೆ ನಾವು ಸೇವನೆ ಮಾಡುವ ಎಲ್ಲಾ ಬಗೆಯ ಆಹಾರ ಗಳು ಕೂಡ, ನಮ್ಮ ದೇಹದ ತೂಕ ಇಳಿಸಲು ನೆರವಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ!
  • ಕೆಲವೊಂದು ಆಹಾರ ಪದಾರ್ಥಗಳಿಂದಾಗಿ, ದೇಹಕ್ಕೆ ಕ್ಯಾಲೋರಿ ಅಂಶಗಳು ಹೆಚ್ಚಾಗಿ ಸಿಗುವುದರಿಂದ, ಕ್ರಮೇ ಣವಾಗಿ ನಮ್ಮ ದೇಹದ ತೂಕ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
  • ಮೊದಲಿಗೆ ದೇಹದ ತೂಕ ಇಳಿಸಿಕೊಳ್ಳಲು ಬಯಸು ವವರು, ಕಡಿಮೆ ಪ್ರಮಾಣದ ಕ್ಯಾಲೋರಿ ಇರುವ ಆಹಾರ ಗಳ ಜೊತೆಗೆ ಬೊಜ್ಜು ಹಾಗೂ ಕೊಲೆಸ್ಟ್ರಾಲ್ ಕರಗಿಸುವ ಆಹಾರಗಳನ್ನು ಸೇವನೆ ಮಾಡುವುದರಿಂದ, ಈಸಿಯಾಗಿ ದೇಹದ ತೂಕ ಇಳಿಸಿ ಕೊಳ್ಳಬಹುದು!
  • ಇಂದಿನ ಈ ಲೇಖನದಲ್ಲಿ, ಹೆಚ್ಚು ಡಯಟ್ ಮಾಡದೇ ಕೆಲವೊಂದು ಆಹಾರ ಪದಾರ್ಥಗಳನ್ನು ಸರಿಯಾಗಿ ಸೇವನೆ ಮಾಡುವುದರ ಮೂಲಕ ಹೇಗೆ, ತೂಕ ಇಳಿಸಿಕೊ ಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ..​

ನಾರಿನಾಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ

5 ways to include pear in your skin care regime | HealthShots

  • ನಾರಿನಾಂಶವು ಹೆಚ್ಚಿರುವ ಆಹಾರ ಪದಾರ್ಥಗಳ ಹಾಗೂ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಹೊಟ್ಟೆ ತುಂಬಿದಂತೆ ಅನುಭವ ವಾಗುವುದು ಹಾಗೂ ಅತಿ ಯಾಗಿ ತಿನ್ನುವುದನ್ನು ಇದು ತಪ್ಪಿಸುತ್ತದೆ.
  • ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ನಾರಿ ನಾಂಶ ಹೆಚ್ಚಿರುವಆಹಾರ ಗಳನ್ನು ಇಲ್ಲಾಂದ್ರೆ ಹಣ್ಣು ಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಳ್ಳಬೇಕು. ಉದಾಹರಣೆಗೆ ಕಿತ್ತಳೆ, ಸೇಬೆ, ಬಾಳೆಹಣ್ಣು, ಪಿಯರ್ಸ್ ಇಂತಹ ಹಣ್ಣುಗಳನ್ನು ದೈನಂದಿನ ಆಹಾರ ಪದ್ಧತಿ ಯಲ್ಲಿ ಸೇರಿಸಿಕೊಳ್ಳಿ.​

ರಾತ್ರಿಯ ಊಟ ಹೀಗಿರಲಿ...

ದೇಹದ ತೂಕ ಕಡಿಮೆ ಮಾಡುವುದು ಹೇಗೆ, ಜಾಸ್ತಿ ಕಷ್ಟಪಡದೆ ಈಸಿಯಾಗಿ, ದೇಹದ ತೂಕ ಇಳಿಸಿ  ಕೊಳ್ಳಬಹುದು! ಇಲ್ಲಿದೆ ಸಿಂಪಲ್ ಟಿಪ್ಸ್ - simple and healthy ways to lose weight  without too much ...

  • ಇನ್ನು ರಾತ್ರಿಯ ಊಟಕ್ಕೆ ನಾರಿನಾಂಶ ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಿ. ಉದಾಹರಣೆಗೆ ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ ಇತ್ಯಾದಿಗಳನ್ನು ಸೇವನೆ ಮಾಡಿ.
  • ಯಾಕೆಂದ್ರೆ ಇಂತಹ ನಾರಿನಾಂಶ ಇರುವ ಆಹಾರಗಳು, ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸಿ, ದೀರ್ಘಕಾಲ ದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ, ಅಲ್ಲದೆ ಅತಿಯಾಗಿ ತಿನ್ನುವ ಬಯಕೆ ನಿಯಂತ್ರಣಕ್ಕೆ ಬರುತ್ತದೆ.​

ಹೂಕೋಸು

How to Grow and Care for Cauliflower

ಗಜ ಗಾತ್ರ ಹೊಂದಿರುವ ಹೂಕೋಸಿನಲ್ಲಿ ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಒಂದು ಕಪ್ ಹೂಕೋಸಿನಲ್ಲಿ ಸುಮಾರು 24 ಕ್ಯಾಲರಿಗಳನ್ನು ಮಾತ್ರ ಕಂಡು ಬರುವುದು. ಹೀಗಾಗಿ ವಾರದಲ್ಲಿ ಒಂದೆರಡು ಬಾರಿಯಾ ದರೂ ಹೂಕೋಸು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

ಮೆಂತೆಸೊಪ್ಪು

Fenugreek Leaves (Kasuri Methi): 20 Amazing Benefits and Side Effects

  • ಮೆಂತೆಸೊಪ್ಪು ಕಹಿ ಗುಣ ಹೊಂದಿದ್ದರೂ, ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿ ರುವ ತರಕಾರಿ. ಪ್ರಮುಖವಾಗಿ ತನ್ನಲ್ಲಿ ಕಡಿಮೆ ಪ್ರಮಾಣ ದಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ.
  • ಹೀಗಾಗಿ ಈ ಸೊಪ್ಪನ್ನು, ಬೇಯಿಸಿಕೊಂಡು ಅಥವಾ ಪಲ್ಯ ತಯಾರು ಮಾಡಿಕೊಂಡು ಸೇವನೆ ಮಾಡುವುದರಿಂದ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನಿರೀಕ್ಷಿಸ ಬಹುದಾಗಿದೆ.​

ಗ್ರೀನ್ ಟೀ ಕುಡಿಯಿರಿ

What is Green Tea? – Twinings

  • ಆರೋಗ್ಯ ತಜ್ಞರು ಚಹಾ-ಕಾಫಿ ಕುಡಿಯುವ ಬದಲು ಗ್ರೀನ್ ಟೀ ಕುಡಿಯಿರಿ ಎಂದು ಸಲಹೆ ನೀಡುತ್ತಾರೆ.
  • ಯಾಕೆಂದರೆ ಟೀ- ಕಾಫಿಗೆ ಹೋಲಿಸಿದರೆ ಗ್ರೀನ್ ಟೀ ತನ್ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೆಫಿನ್ ಹಾಗೂ ಕ್ಯಾಲೋರಿ ಅಂಶವನ್ನು ಒಳ ಗೊಂಡಿರುತ್ತದೆ
  • ಜೊತೆಗೆ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು, ಈ ಪಾನೀಯದಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ, ಮೆಟ ಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು ಸಕ್ಕರೆ ಬೆರೆಸದೆ ಇರುವ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.​

ಓಂಕಾಳು ನೆನೆಸಿಟ್ಟ ಪಾನೀಯ

ಓಂಕಾಳು ನೆನೆಸಿಟ್ಟ ಪಾನೀಯ

  • ಎರಡು ಟೀ ಚಮಚ ಆಗುವಷ್ಟು ಓಂ ಕಾಳುಗಳನ್ನು ರೋಸ್ಟ್ ಮಾಡಿ, ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದ ಕೂಡಲೇ, ಇದನ್ನು ಇನ್ನೊಂದು ಲೋಟಕ್ಕೆ ಸೋಸಿ ಕೊಂಡು, ಪಾನೀಯವನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
  • ದಿನ ಬಿಟ್ಟು ದಿನ ಈ ಪ್ರಯೋಗ ಮಾಡುವುದರಿಂದ ಕೂಡ ದೇಹದ ತೂಕವನ್ನು ಈಸಿಯಾಗಿ ಇಳಿಸಿಕೊಳ್ಳಬಹುದು.​

ನೀರು ಕುಡಿಯಿರಿ

What Is The Best Time To Drink Water? Let's Know From The Expert

  • ಇದು ಬಹಳ ಸಿಂಪಲ್ ಟಿಪ್ಸ್ ಈಸಿಯಾಗಿ ಫಾಲೋ ಮಾಡಬಹುದಾದ ಟೆಕ್ಷಿಕ್. ಪ್ರತಿದಿನ ಖಾಲಿ ಹೊಟ್ಟೆ ಯಲ್ಲಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ತೂಕ, ಕಡಿಮೆ ಆಗುವುದು ಮಾತ್ರವಲ್ಲದೆ, ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ.
  • ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಊಟ ಮಾಡುವ ಮುನ್ನ ಅಂದರೆ ಅರ್ಧ ಗಂಟೆ ಮುಂಚೆ ನೀರು ಕುಡಿದು, ಆ ಬಳಿಕ ಊಟ ಮಾಡುವುದರಿಂದ ದೇಹದ ಕ್ಯಾಲೋರಿಗಳು ಹೆಚ್ಚು ಕರ ಗಲು ನೆರವಾಗುತ್ತದೆ ಎಂದು ಸಲಹೆ ನೀಡುತ್ತಾರೆ. ​

simple and healthy ways to lose weight without too much dieting.