ಬ್ರೇಕಿಂಗ್ ನ್ಯೂಸ್
12-07-23 06:40 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ದೇಹ ಚಲನಶೀಲವಾಗಿರಲು ಹಾಗು ಯಾವುದೇ ರೋಗಗಳಿಂದ ದೂರವಿರಲು ಆಹಾರದ ಜೊತೆಗೆ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಕೆಲವು ಬೀಜಗಳು, ಒಣಹಣ್ಣುಗಳು ತಿನ್ನಬೇಕು. ಇವುಗಳಲ್ಲಿ ಅತ್ಯುತ್ತಮ ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳಿರುತ್ತವೆ.
ಇತ್ತೀಚೆಗೆ ಅಗಸೆಬೀಜದ ಬಳಕೆ ಜನರಲ್ಲಿ ಹೆಚ್ಚಾಗುತ್ತಿದೆ. ಕಾರಣ ಇದರಲ್ಲಿರುವ ಪೋಷಕಾಂಶಗಳು. ಇದು ಸಂಭಾವ್ಯ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡಲು, ತೂಕವನ್ನು ನಿರ್ವಹಿಸಲು, ಕೊಲೆಸ್ಟ್ರಾಲ್ ಹಾಗು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಗಸೆಬೀಜದ ಮತ್ತಷ್ಟು ಉಪಯೋಗಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.
ಹೃದ್ರೋಗದ ಸಮಸ್ಯೆ
ಈ ಸಣ್ಣ ಸಣ್ಣ ಅಗಸೆಬೀಜಗಳು ಅನೇಕ ಹೃದ್ರೋಗದ ಸಮಸ್ಯೆಗಳನ್ನು ತಡೆಯುತ್ತದೆ ಎಂದರೆ ನೀವು ನಂಬಲೇಬೇಕು. ಇದನ್ನು ಸಂಶೋಧನೆಗಳೇ ಸಾಬೀತು ಪಡಿಸಿವೆ ಕೂಡ ಹೌದು. ನಿಯಮಿತವಾಗಿ ಈ ಅಗಸೆಬೀಜವನ್ನು ಸೇವಿಸುವುದರಿಂದ ಉರಿಯೂತದ ಕ್ರಿಯೆ ಮತ್ತು ಹೃದಯ ಬಡಿತವನ್ನು ನಿಯಂತ್ರಣಕ್ಕೆ ತರುತ್ತದೆ.
ಮಧುಮೇಹಕ್ಕೆ ಒಳ್ಳೆಯದು
ಪ್ರಾಥಮಿಕ ಸಂಶೋಧನೆಯ ಪ್ರಕಾರ, ಅಗಸೆಬೀಜದಲ್ಲಿರುವ ಲಿಗ್ನಾನ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ ಎಂದು ತಿಳಿಸಿದೆ. ಪ್ರತಿನಿತ್ಯ ಸಕ್ಕರೆ ಕಾಯಿಲೆ ಇರುವವರು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ಉರಿಯೂತ
ಅಗಸೆಬೀಜದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಲಕ್ಷಣಗಳಿವೆ. ಅಗಸೆಬೀಜಗಳಲ್ಲಿ ಎಎಲ್‌ಎ ಮತ್ತು ಲಿಗ್ನಾನ್‌ಗಳಿವೆ. ಇವೆರಡೂ ಉರಿಯೂತದ ವಿರುದ್ಧ ಹೋರಾಡುತ್ತದೆ. ಒಟ್ಟಾರೆ ಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯಲು ಈ ಅಗಸೆಬೀಜಗಳು ದಿವ್ಯೌಷಧವಾಗಿ ಕಾರ್ಯನಿರ್ವಹಿಸುತ್ತದೆ.
ಕ್ಯಾನ್ಸರ್
ಕ್ಯಾನ್ಸರ್ ಎಷ್ಟು ಭಯಾನಕವಾದ ಕಾಯಿಲೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಇಂತಹ ಕಾಯಿಲೆಯನ್ನು ಈ ಸಣ್ಣ ಬೀಜಗಳು ತಡೆಯುತ್ತವೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ?
ಹೌದು ಇತ್ತೀಚಿನ ಅಧ್ಯಯನದ ಪ್ರಕಾರ, ಈ ಅಗಸೆಬೀಜಗಳು ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ. ಎಎಲ್‌ಎ ಎಂದು ಕರೆಯಲ್ಪಡುವ ಅಂಶವು ಗೆಡ್ಡೆಯ ಸಂಭವ ಹಾಗು ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ.
ಈ ಔಷಧೀಯ ಗುಣಗಳಿರುವ ಬೀಜಗಳಲ್ಲಿ ಕೆಲವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ. ಇದು ಕ್ಯಾನ್ಸರ್ ಮತ್ತು ಹೃದ್ರೋಗದ ವಿರುದ್ಧ ರಕ್ಷಣೆಗೆ ತನ್ನದೇ ಅದ ಕೊಡುಗೆ ನೀಡುತ್ತದೆ.
ಕೆಲವು ಸಲಹೆಗಳು
ಅಗಸೆ ಬೀಜವನ್ನು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸೇವಿಸದಿರಲು ಶಿಫಾರಸು ಮಾಡಲಾಗುತ್ತದೆ.
ಮಾರುಕಟ್ಟೆಯಲ್ಲಿ ಅಗಸೆಬೀಜ ಹಾಗು ಅಗಸೆ ಎಣ್ಣೆ ಕೂಡ ದೊರೆಯುತ್ತದೆ. ಎಣ್ಣೆಯ ಬದಲಾಗಿ ಅಗಸೆಬೀಜಗಳನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
5 amazing benefits of flaxseed.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm