ಶುರುವಾಯ್ತು ಮಳೆಗಾಲ: ಮಕ್ಕಳ ಆರೋಗ್ಯದ ಕಾಳಜಿ ಹೇಗೆ...?

18-07-23 07:59 pm       Source: Kannada Prabha   ಡಾಕ್ಟರ್ಸ್ ನೋಟ್

ಮಳೆಗಾಲದಲ್ಲಿ ಎಷ್ಟೇ ಜಾಗೃತವಾಗಿದ್ದರೂ, ಒಂದಲ್ಲಾ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇತ್ತೀಚೆಗೆ ಬದಲಾಗುತ್ತಿರುವ ಹವಾಮಾನದ ಅತಿದೊಡ್ಡ ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ.

ಮಳೆಗಾಲದಲ್ಲಿ ಎಷ್ಟೇ ಜಾಗೃತವಾಗಿದ್ದರೂ, ಒಂದಲ್ಲಾ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇತ್ತೀಚೆಗೆ ಬದಲಾಗುತ್ತಿರುವ ಹವಾಮಾನದ ಅತಿದೊಡ್ಡ ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ. ಅವರ ರೋಗ ನಿರೋಧಕ ಶಕ್ತಿ ಕುಸಿಯುವಂತೆ ಮಾಡುತ್ತಿದೆ. ಹಾಗಾಗಿ ಹವಾಮಾನ ಸ್ವಲ್ಪ ಬದಲಾದರೂ ಮಕ್ಕಳ ಮೇಲೆ ಪರಿಣಾಮವಾಗುವುದು ಹೆಚ್ಚು.

Children Below 15 Years At Risk Karnataka Reports 26 Cases Of H3N2 Variant  | Details Here

ಮಳೆಗಾಲ ಬಂದ ಕೂಡಲೇ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ಹೆಚ್ಚಾಗುತ್ತೆ. ಜ್ವರ ಬಂದರೂ ಕೆಮ್ಮು, ಸುಸ್ತು ಕಡಿಮೆಯಾಗದ ಕಾರಣ ನಾಲ್ಕೈದು ದಿನಗಳಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಜ್ವರ ಸಂಪೂರ್ಣವಾಗಿ ಮಾಯವಾಗುವವರೆಗೆ ಶಾಲೆಗೆ ಬರಬೇಡಿ ಎಂದು ಶಿಕ್ಷಕರೂ ಸೂಚಿಸುತ್ತಾರೆ.

How Can I Help Protect My Kids From Mosquito Bites?

ಮಳೆಗಾಲ ಶುರುವಾಗುತ್ತಿದ್ದಂತೆಯೇ ಸೊಳ್ಳೆಗಳ ಕಾಟ ಹೆಚ್ಚಾಗಲಿದ್ದು, ಡೆಂಗ್ಯೂ, ಮಲೇರಿಯಾಗಳು ಕಾಣಿಸಿಕೊಳ್ಳುತ್ತೇವೆ. ಇಂಥಾ ಜ್ವರ, ಉಸಿರಾಟದ ಸಮಸ್ಯೆ, ಸೋಂಕುಗಳು ಮಕ್ಕಳನ್ನು ಕಾಡೋದು ಹೆಚ್ಚು. ಜ್ವರ ಬಂದರೂ ಕೆಮ್ಮು, ಸುಸ್ತು ಕಡಿಮೆಯಾಗದ ಕಾರಣ ನಾಲ್ಕೈದು ದಿನಗಳಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ.

Monsoon fitness tips: Here's how to keep kids healthy this rainy season |  Health - Hindustan Times

ಹೀಗಾಗಿ ಮಾನ್ಸೂನ್ ಸಮಯದಲ್ಲಿ ಮಕ್ಕಳಲ್ಲಿ ಶೀತ ಮತ್ತು ಜ್ವರವನ್ನು ತಪ್ಪಿಸಲು ಕಿಂಡರ್ ಆಸ್ಪತ್ರೆಯ ಸಲಹೆಗಾರ ನಿಯೋನಾಟಾಲಜಿಸ್ಟ್ ಮತ್ತು ಮಕ್ಕಳ ವೈದ್ಯರಾದ ಡಾ ಸುಶಾಂತ್ ಶಿವಸ್ವಾಮಿ ಅವರು ಮಕ್ಕಳಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಅನುಸರಿಸಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

  • ಊಟಕ್ಕೂ ಮೊದಲು, ಶೌಚಾಲಯ ಬಳಕೆಯ ನಂತರ ಮತ್ತು ಹೊರಗಿನಿಂದ ಆಟವಾಡಿ ಮನೆಗೆ ಬಂದ ಕೂಡಲೇ ಮಕ್ಕಳು ಸೂಕ್ತ ರೀತಿಯಲ್ಲಿ ಕೈ ತೊಳೆಯುವಂತೆ ನೋಡಿಕೊಳ್ಳಬೇಕು.
  • ಸ್ವಯಂ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಗತ್ಯ.
  • ಸೂಕ್ಷ್ಮಾಣುಗಳ ಹರಡುವಿಕೆಯನ್ನು ಕಡಿಮೆ ಮಾಡಲು ಶಾಲೆಗಳಲ್ಲಿ ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಸೋಂಕುರಹಿತಗೊಳಿಸಬೇಕು.
  • ರೋಗಾಣುಗಳು ಮತ್ತು ಅನಾರೋಗ್ಯದ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಮಕ್ಕಳಿಗೆ ದೈನಂದಿನ ಆಗಾಗ್ಗೆ ಅರಿವು ಮೂಡಿಸಿ.
  • ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆರೋಗ್ಯಕರ ಆಹಾರ ಕೂಡ ಮುಖ್ಯ. ಮಕ್ಕಳಿಗೆ ಹೆಚ್ಚಾಗಿ ಹಣ್ಣುಗಳು, ತರಕಾರಿಗಳು, ಹಸಿರು ತರಕಾರಿಗಳು, ಸೊಪ್ಪು, ಹಾಲಿನ ಪದಾರ್ಥಗಳು, ಡ್ರೈಫ್ರೂಟ್ಸ್ ಗಳನ್ನು ನೀಡಬೇಕು.
  • ಇತರರಿಗೆ ಅನಾರೋಗ್ಯ ಹರಡುವುದನ್ನು ತಡೆಯಲು ಅನಾರೋಗ್ಯ ಪೀಡಿತ ಮಕ್ಕಳನ್ನು ಮನೆಯಲ್ಲಿ ಇರಿಸುವುದು ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯೊಂದಿಗೆ ಪಾಲಕರು ಮಾತುಕತೆ ನಡೆಸಿ, ಅನುಮತಿ ಪಡೆದುಕೊಳ್ಳಬೇಕು.
  • ಲಸಿಕೆಗಳನ್ನೂ ಸೂಕ್ತ ಸಮಯಕ್ಕೆ ಕೊಡಿಸುವುದು ಮುಖ್ಯವಾಗುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಥವಾ ಆಗಾಗ್ಗೆ ಸೋಂಕುಗಳಿಂದ ಬಳಲುತ್ತಿರುವ ಮಕ್ಕಳಿಗೆ ಶಾಲೆಗೆ ಕಳುಹಿಸುವುದಕ್ಕೂ ಮುನ್ನ ಲಸಿಕೆ ಹಾಕಿಸುವುದು ಮುಖ್ಯವಾಗುತ್ತದೆ.

ಈ ಸರಳ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ, ಪೋಷಕರು ತಮ್ಮ ಮಕ್ಕಳು ಶಾಲಾ ದಿನಗಳು ಮತ್ತು ಮಳೆಗಾಲದಲ್ಲಿ ಆರೋಗ್ಯವಾಗಿರುವಂತೆ ಮಾಡಬಹುದು.

As school season peaks, parents are faced with the task of ensuring their children’s health during the monsoon season. This season brings its own set of health issues, including colds, flus, eye and ear infections, lower respiratory infections, and stomach bugs.