ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಸಮಸ್ಯೆ ದೂರ ಮಾಡುವ ತರಕಾರಿಗಳು

16-08-23 08:33 pm       Source: Vijayakarnataka   ಡಾಕ್ಟರ್ಸ್ ನೋಟ್

ಆರೋಗ್ಯಕಾರಿ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ, ಹೃದಯಕ್ಕೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬಹುದು.

ಇಂದಿನ ದಿನಗಳಲ್ಲಿ ಹೃದಯದಷ್ಟು ಪ್ರಾಮುಖ್ಯತೆ ಪಡೆದಿರುವಂತಹ ಅಂಗವು ಮತ್ತೊಂದು ಇರಲಾ ರದು ಎಂದೇ ಹೇಳಬಹುದು. ಯಾಕೆಂದ್ರೆ ದಿನದ 24 ಗಂಟೆಯೂ ಕೂಡ ಕಾರ್ಯ ನಿರ್ವಹಿಸುವ ಈ ಪ್ರಮುಖ ಅಂಗಕ್ಕೆ ಸ್ವಲ್ಪ ಸಮಸ್ಯೆಗಳು ಕಾಣಿಸಿಕೊಂಡರೂ, ಮನುಷ್ಯ ಬದುಕಿ ಉಳಿ ಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ! ಇದಕ್ಕೆ ಸಾಕ್ಷಿ ಎನ್ನುವಂತೆ, ನಮ್ಮ ಕಣ್ಣ ಮುಂದೆಯೇ ಎಷ್ಟೋ ಘಟನೆಗಳು ನಡೆದು ಹೋಗಿವೆ. ಹೀಗಾಗಿ ಈ ಪುಟ್ಟ ಅಂಗದ ಆರೈಕೆ ಕಡೆ ಹೆಚ್ಚಿನ ಒತ್ತು ನೀಡುವುದು ಪ್ರತಿಯೊಬ್ಬರ ಕರ್ತವ್ಯ.

ಹೃದಯದ ಆರೋಗ್ಯಕ್ಕೆ ಸಲಹೆಗಳು

How Long Does a Heart Attack Last? | Everlywell

ಪ್ರಮುಖವಾಗಿ ಹೃದಯದ ಆರೋಗ್ಯ ಚೆನ್ನಾಗಿ ಇರಬೇಕೆಂ ದರೆ, ಆರೋಗ್ಯಕಾರಿ ಆಹಾರ ಪದ್ಧತಿ ಇದರ ಜೊತೆಗೆ ಪ್ರತಿನಿತ್ಯ ವ್ಯಾಯಾಮ, ವಾಕಿಂಗ್, ಒತ್ತಡರಹಿತ ಜೀವನಶೈಲಿ, ದೇಹದ ತೂಕದಲ್ಲಿ ನಿಯಂತ್ರಣ, ಬೊಜ್ಜು ಹೆಚ್ಚಾಗದಂತೆ ನೋಡಿ ಕೊಳ್ಳುವುದು, ಧೂಮಪಾನ ಹಾಗೂ ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರವಿರುವುದರಿಂದ, ಮಾತ್ರ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರವಿರಲು ಸಾಧ್ಯ.

ಹೃದಯಕ್ಕೆ ಮಾರಕವಾಗಿರುವ ಕೊಬ್ಬಿನಾಂಶ ಆಹಾರಗಳಿಂದ ದೂರವಿರಬೇಕು

Atherosclerosis (Plaque Buildup) : How It Can Lead to a Heart Attack -  HealthXchange

  • ಕೆಂಪು ಮಾಂಸಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳು, ಎಣ್ಣೆಯಾಂಶ ಇರುವ ಆಹಾರಗಳು, ಕೃತಕ ಸಿಹಿ ತಿಂಡಿಗಳು ಹಾಗೂ ತಂಪು ಪಾನೀಯ ಗಳಿಂದ ದೂರವಿರಬೇಕು.
  • ಇವೆಲ್ಲಾ ಆಹಾರಗಳು ದೇಹದ ತೂಕ ಹೆಚ್ಚು ಮಾಡಿ, ಬೊಜ್ಜಿ ನಾಂಶ ಹೆಚ್ಚು ಮಾಡುವುದು ಮಾತ್ರವಲ್ಲದೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವಂತೆ ಮಾಡುವುದು. ಹೀಗಾಗಿ ದೇಹದಲ್ಲಿ ಕೆಟ್ಟ ಕೊಲೆ ಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುವ ಕೆಲವೊಂದು ಆಹಾರಗಳ ಬಗ್ಗೆ ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ...​

ಆದಷ್ಟು ಹೂಕೋಸು ಹಾಗೂ ಬ್ರೊಕೋಲಿ ಸೇವಿಸಿದರೆ ಒಳ್ಳೆಯದು

Broccoli vs. Cauliflower: Is One Healthier?

  • ಆರೋಗ್ಯ ತಜ್ಞರು ಹೇಳುವ ಪ್ರಕಾರ ನಿಯಮಿವಾಗಿ, ನಮ್ಮ ಆಹಾರಕ್ರಮದಲ್ಲಿ ಹೂಕೋಸು ಹಾಗೂ ಬ್ರೊಕೋಲಿ (ಕೋಸುಗಡ್ಡೆ) ಯನ್ನು ಸೇರಿಸಿಕೊಳ್ಳು ವುದರಿಂದ, ಅಧಿಕ ರಕ್ತದೊತ್ತಡದ ಸಮಸ್ಯೆಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು, ಕಡಿಮೆಯಾಗಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಹಳ ಬೇಗನೇ ದೂರ ವಾಗುತ್ತದೆ ಎಂದು ಹೇಳುತ್ತಾರೆ.
  • ಪ್ರಮುಖವಾಗಿ ಈ ಬಿಳಿ ಹಾಗೂ ಹಸಿರುವ ಬಣ್ಣದಲ್ಲಿ ಕಾಣಿಸಿಕೊಳ್ಳುವ ತರಕಾರಿಗಳು, ಹೃದಯಕ್ಕೆ ಸರಿ ಯಾಗಿ ರಕ್ತ ಪೂರೈಕೆ ಮಾಡುವುದರ ಜೊತೆಗೆ ರಕ್ತನಾಳ ದಲ್ಲಿ ಯಾವುದೇ ಅಡೆತಡೆ ಇಲ್ಲದಂತೆ ನೋಡಿ ಕೊಂಡು, ಹೃದಯಕ್ಕೆ ಸರಾಗವಾಗಿ ರಕ್ತಸಂಚಾರ ಉಂಟಾಗುವಂತೆ ಮಾಡುತ್ತದೆ.​

ಕೇಲ್

Kale

  • ಹಸಿರು ಎಲೆ ತರಕಾರಿಗಳ ಗುಂಪಿಗೆ ಸೇರಿದ ಕೇಲ್ ಸೊಪ್ಪು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆ ಯದು ಎಂದು ಹೇಳಲಾಗುತ್ತದೆ.
  • ಪ್ರಮುಖವಾಗಿ ಈ ತರಕಾರಿಯಲ್ಲಿ ಪೊಟ್ಯಾಸಿಯಮ್, ಫೈಬರ್, ಫೋಲೇಟ್, ವಿಟಮಿನ್ ಕೆ, ಮಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ ಹೃದಯ ಆರೋಗ್ಯಕ್ಕೆ, ತುಂಬಾನೇ ಒಳ್ಳೆಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
  • ಪ್ರಮುಖವಾಗಿ ಈ ತರಕಾರಿಯನ್ನು, ನಮ್ಮ ದೈನಂ ದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.​

Vegetables That Reduce Your Bad Cholesterol And Keep Your Heart Healthy.