ಸಕ್ಕರೆ ಕಾಯಿಲೆ ಇರುವವರು ಬೀಟ್ರೂಟ್ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳಿವು…!

22-08-23 07:07 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹ ಹೊಂದಿರುವವರು ಬೀಟ್ರೂಟ್‌ ಜ್ಯೂಸ್‌, ಪಲ್ಯ ಸೇವಿಸಬಹುದೇ? ಇದರಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಗೊತ್ತಾ? ಇಲ್ಲಿದೆ.

ಮಧುಮೇಹ, ಶುಗರ್ ಅಥವಾ ಸಕ್ಕರೆ ಕಾಯಿಲೆ ಎಂದು ಕರೆಯಲಾಗುವ ಈ ಆರೋಗ್ಯ ಸಮಸ್ಯೆಯು ವಿಶ್ವದ ಜನರ ನಿದ್ದೆ ಗೆಡಿಸಿದೆ. ಇದು ಸೈಲೆಂಟ್ ಕಿಲ್ಲರ್‌ನಂತೆ ದೇಹಕ್ಕೆ ಹಾನಿ ಮಾಡುತ್ತದೆ. ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಮತ್ತೆ ಅದರಿಂದ ವಿಮುಕ್ತಿ ದೊರೆಯಲು ಸಾಧ್ಯವೇ ಇಲ್ಲ. ಬದಲಾಗಿ ಆಹಾರದಿಂದ ನಿಯಂತ್ರಿಸಿಕೊಳ್ಳಬಹುದಷ್ಟೇ.

ಸಕ್ಕರೆ-ಸಿಹಿ ಪಾನೀಯಗಳು, ಟ್ರಾನ್ಸ್ ಕೊಬ್ಬುಗಳು, ಜೇನುತುಪ್ಪ, ಹಣ್ಣಿನ ರಸ ಸೇರಿದಂತೆ ಇನ್ನು ಕೆಲವು ತರಕಾರಿಗಳನ್ನು ಸೇವಿಸುವಂತಿಲ್ಲ ಎಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಬೀಟ್ರೂಟ್ ಕೂಡ ಒಂದಾಗಿದೆ. ನಿಜಕ್ಕೂ ಬೀಟ್ರೂಟ್ ಮಧುಮೇಹಿಗಳ ಆರೋಗ್ಯಕ್ಕೆ ಮಾರಕವೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ

Is Beetroot Good for Diabetes? - Nutrition, Benefits & Risk

ವಾಸ್ತವವಾಗಿ, ಮಧುಮೇಹ ಹೊಂದಿರುವವರು ಬೀಟ್ರೂಟ್ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಅಧಿಕವಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ಮಿತವಾಗಿ ಬೀಟ್ರೂಟ್ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ವರ್ಣರಂಜಿತ ತರಕಾರಿಯು ಫೈಟೊಕೆಮಿಕಲ್‌ ಎಂಬ ಅಂಶವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಅಥವಾ ಉತ್ಪಾದಿಸಲು ಅಸಮರ್ಥವಾಗಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಇನ್ಸುಲಿನ್ ಕಾರಣವಾಗಿದೆ. ಕಡಿಮೆ ಇನ್ಸುಲಿನ್ ಮಟ್ಟವನ್ನು ಹೊಂದಿರುವವರು ಸಾಮಾನ್ಯವಾಗಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಅನುಭವಿಸುತ್ತಾರೆ.

ಮಧುಮೇಹದ ಅಪಾಯದಿಂದ ಪಾರು ಮಾಡುತ್ತದೆ

Beet Root Benefits: ಚಳಿಗಾಲದಲ್ಲಿ ಹೃದಯದ ಆರೋಗ್ಯಕ್ಕೆ ಬೀಟ್ ರೂಟ್ ಪ್ರಯೋಜನಗಳು -  Kannada News Today

ಸಕ್ಕರೆ ಕಾಯಿಲೆಯು ಅನೇಕ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಇಂತಹ ಅಪಾಯವನ್ನು ಬೀಟ್ರೂಟ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದರೆ ನೀವು ನಂಬಲೇಬೇಕು.

ಸಕ್ಕರೆ ಕಾಯಿಲೆಯು ಮೂತ್ರಪಿಂಡಗಳು, ಕಣ್ಣು, ಹೃದಯ ಸೇರಿದಂತೆ ಅನೇಕ ಅಂಗಾಂಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಬಹುದು. ಬೀಟ್ರೂಟ್‌ನಲ್ಲಿರುವ ಸಾಕಷ್ಟು ಪೌಷ್ಟಿಕಾಂಶವು ಇಂತಹ ಸಮಸ್ಯೆಯಿಂದ ಪಾರು ಮಾಡುತ್ತದೆ.

ರಕ್ತದೊತ್ತಡಕ್ಕೆ ರಾಮಬಾಣ

5 reasons to add beetroot in your daily diet for healthy jump-start of  winter season

ಮಧುಮೇಹ ಮತ್ತು ರಕ್ತದೊತ್ತಡ ಒಂದೇ ನಾಣ್ಯದ ಎರಡು ಮುಖಗಳು. ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವು ಹೃದಯದ ತೊಂದರೆ, ಪಾರ್ಶ್ವವಾಯು, ಮೂತ್ರಪಿಂಡದ ತೊಂದರೆಗಳನ್ನು ಉದ್ಭವಿಸುತ್ತದೆ.

ಇಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಬೀಟ್ರೂಟ್‌ ಕಾಪಾಡುತ್ತದೆ. ಹೌದು, ಬೀಟ್ರೂಟ್‌ ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಕಡಿಮೆ ಇನ್ಸುಲಿನ್‌ ಪ್ರತಿರೋಧ

Beets and diabetes: Research, benefits, and nutrition

ಮಧುಮೇಹ ಹೊಂದಿರುವವರು ಆಗಾಗ್ಗೆ ಬೀಟ್ರೂಟ್‌ ಜ್ಯೂಸ್‌ ಅನ್ನು ಸೇವಿಸುವುದರಿಂದ ಇನ್ಸುಲಿನ್‌ ಪ್ರತಿರೋಧವನ್ನು ನಿಯಂತ್ರಣಕ್ಕೆ ತರಬಹುದು. ಇದರ ಪರಿಣಾಮ ಸಕ್ಕರೆ ಕಾಯಿಲೆಯ ಮಟ್ಟವನ್ನು ಪರಿಣಾಮಕಾರಿಯಾಗಿ ಪ್ರತಿಬಂಧಿಸಬಹುದು.

ಮಧುಮೇಹ ಮತ್ತು ಬೀಟ್ರೂಟ್

Instant Pot Beets (Pressure Cooker Beets) | Time Chart by Amy + Jacky

ಮಧುಮೇಹ ಹೊಂದಿರುವವರು ಬೀಟ್ರೂಟ್‌ ತಿನ್ನುವುದರಿಂದ ಯಾವುದೇ ಅಪಾಯಗಳಿಲ್ಲ ಎಂದು ಅಮೇರಿಕನ್‌ ಡಯಾಬಿಟಿಸ್‌ ಅಸೋಸಿಯೇಷನ್‌ ತಿಳಿಸಿದೆ. ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಬೀಟ್ರೂಟ್‌ ಸೇರಿಸಬೇಕು ಎಂದು ಸಲಹೆ ಪ್ರೋತ್ಸಾಹಿಸಿದೆ.

ಸಲಹೆಗಳು​

9 Impressive Health Benefits of Beets

ಆದಾಗ್ಯೂ, ಮಧುಮೇಹವು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರಬಹುದು. ಹಾಗಾಗಿ ಯಾವುದೇ ಒಂದು ಪದಾರ್ಧವನ್ನು ಹೆಚ್ಚುವರಿಯಾಗಿ ನಿಮ್ಮ ಆಹಾರದಲ್ಲಿ ಸೇರ್ಪಡೆಗೊಳಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಕೇಳುವುದು ಸೂಕ್ತ ಎಂದು ನಾವು ಉಲ್ಲೇಖಿಸುತ್ತೇವೆ.

Know How Beetroot Is Good For Diabetes In Kannada.