ಬ್ರೇಕಿಂಗ್ ನ್ಯೂಸ್
15-08-20 03:18 pm Headline Karnataka News Network ಡಾಕ್ಟರ್ಸ್ ನೋಟ್
ಮನುಷ್ಯನು ಆರೋಗ್ಯವಾಗಿ ಜೀವಿಸಬೇಕಾದರೆ, ಶುಚಿಯಾದ, ಪೌಷ್ಟಿಕ ಸತ್ವಗಳನ್ನು ಒಳಗೊಂಡ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಆದರೆ ಮನುಷ್ಯನಿಗೆ ತಾನು ಸೇವಿಸಿದ ಆಹಾರದಿಂದ ದೇಹಕ್ಕೆ ಶಕ್ತಿ ಮತ್ತು ಸದೃಢತೆ ಲಭ್ಯವಾಗಬೇಕಾದರೆ, ಆಹಾರವು ದೇಹದಲ್ಲಿ ಹಲವಾರು ಪ್ರಕ್ರಿಯೆಗಳಿಗೆ ಒಳಪಡಬೇಕಾಗುತ್ತದೆ. ಇದರಲ್ಲಿ ದೇಹದಿಂದ ತ್ಯಾಜ್ಯ ಮತ್ತು ವಿಷಕಾರಿ ಅಂಶಗಳನ್ನು ಹೊರ ಹಾಕುವ ಪ್ರಕ್ರಿಯೆ ಕೂಡ ಒಂದು. ಮುಖ್ಯವಾಗಿ ಈ ಕೆಲಸವನ್ನು ನಮ್ಮ ದೇಹದಲ್ಲಿರುವ ಕಿಡ್ನಿಗಳು ಅಥವಾ ಮೂತ್ರ ಪಿಂಡಗಳು ಮಾಡುತ್ತವೆ. ನಾವು ಹುಟ್ಟಿದಾಗಿನಿಂದ ವಯಸ್ಸಾಗುವವರೆಗೂ ಕೂಡ ಥೇಟ್ ನಮ್ಮ ಹೃದಯದ ದಕ್ಷತೆಯಂತೆ ಮೂತ್ರ ಪಿಂಡಗಳು ಸಹ ಅತ್ಯಂತ ಅಚ್ಚುಕಟ್ಟಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಣೆ ಮಾಡುತ್ತಿರುತ್ತವೆ.
ಆದರೆ ಕೆಲವೊಂದು ಕಾರಣಗಳಿಂದ ನಾವು ಸೇವಿಸುವ ಆಹಾರಗಳಿಂದಲೇ ನಮ್ಮ ಮೂತ್ರ ಪಿಂಡಗಳಿಗೆ ತೊಂದರೆ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ಮೊದಲಿನಂತೆ ಮೂತ್ರ ಪಿಂಡಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಮೂತ್ರ ಪಿಂಡಗಳ ಸೋಸುವಿಕೆ ಪ್ರಕ್ರಿಯೆ ಕೆಲವೊಮ್ಮೆ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ. ಕಿಡ್ನಿಗಳಲ್ಲಿ ಕಲ್ಲು ಸೇರಿಕೊಳ್ಳುವುದು, ಮೂತ್ರ ವಿಸರ್ಜನೆಯ ಸಮಯದಲ್ಲಿ ವಿಪರೀತ ಉರಿ, ನೋವು ಉಂಟಾಗಿ ವಿಸರ್ಜನೆಯಾದ ಮೂತ್ರ ತುಂಬಾ ನೊರೆ ಮತ್ತು ವಾಸನೆಯಿಂದ ಕೂಡಿರುತ್ತದೆ. ಇಂತಹ ಸಮಸ್ಯೆಗಳು ಕಂಡು ಬಂದ ವ್ಯಕ್ತಿಗಳು ತಮ್ಮ ಕಿಡ್ನಿಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗುತ್ತದೆ. ವೈದ್ಯರ ಬಳಿ ತೆರಳಿ ತಮಗೆ ಇತ್ತೀಚೆಗೆ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಮುಚ್ಚಿಡದೆ ಅವರ ಬಳಿ ಹೇಳಿಕೊಂಡು ಅವರ ಸಲಹೆ ಸೂಚನೆಯಂತೆ ಔಷಧಿ ತೆಗೆದುಕೊಳ್ಳುವುದು ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ.
ಮೂತ್ರ ವ್ಯವಸ್ಥೆಯ ಕಾರ್ಯ ಬದಲಾವಣೆ
ನಿಮ್ಮ ಪ್ರತಿ ದಿನದ ಮೂತ್ರ ವಿಸರ್ಜನೆ ನಿಮ್ಮ ಮೂತ್ರ ಪಿಂಡಗಳ ಕಾರ್ಯವನ್ನು ತಿಳಿಸಿ ಹೇಳುತ್ತದೆ. ಇದ್ದಕ್ಕಿದ್ದಂತೆ ಮೂತ್ರ ವಿಸರ್ಜನೆ ಜಾಸ್ತಿಯಾದರೆ ಅಥವಾ ಆಗಾಗ ಮೂತ್ರ ವಿಸರ್ಜನೆ ಮಾಡಲು ಮುಂದಾಗುವ ಲಕ್ಷಣ ಕೂಡ ಮೂತ್ರ ಪಿಂಡಗಳು ತಮ್ಮ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಬದಲಾವಣೆ ಕಂಡಿರಬಹುದು ಎಂಬುದನ್ನು ತಿಳಿಸಿ ಹೇಳುತ್ತವೆ. ಇದರ ಜೊತೆಗೆ ಈ ಕೆಳಕಂಡ ಕೆಲವು ಲಕ್ಷಣಗಳು ಮೂತ್ರ ಪಿಂಡಗಳ ಸಮಸ್ಯೆ ಇರಬಹುದು ಎಂಬುದನ್ನು ತಿಳಿಸುತ್ತವೆ.
ಈ ಲಕ್ಷಣಗಳು ಕಾಣಿಸಲಾರಂಭಿಸುತ್ತದೆ
ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಉರಿ
ಇದೊಂದು ಲಕ್ಷಣ ಮೂತ್ರ ನಾಳದ ಸೋಂಕು ಉಂಟಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಯಾರಿಗೆ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವುಂಟಾಗಿ ತುಂಬಾ ಕಷ್ಟಕರವಾದ ಸನ್ನಿವೇಶ ಎದುರಾಗುತ್ತದೆ, ಅವರಿಗೆ ಮೂತ್ರ ಪಿಂಡಗಳಲ್ಲಿ ಅಥವಾ ಕಿಡ್ನಿಗಳಲ್ಲಿ ಯಾವುದಾದರೂ ಸಮಸ್ಯೆ ಇರಬಹುದು ಎಂಬ ಲಕ್ಷಣ ತೋರಿಸುತ್ತದೆ.
ಕೈ ಕಾಲುಗಳಲ್ಲಿ ಊತ ಕಂಡುಬರುವುದು
ಮನುಷ್ಯನಿಗೆ ಮೂತ್ರ ಪಿಂಡಗಳು ದೇಹದಲ್ಲಿರುವ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ದೇಹದಿಂದ ಹೊರಗೆ ಹಾಕದಿದ್ದರೆ, ದ್ರವ ರೂಪದ ತ್ಯಾಜ್ಯ ಇಡೀ ದೇಹದ ತುಂಬ ಶೇಖರಣೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ದೇಹದ ನಾನಾ ಭಾಗಗಳು ಊದಿಕೊಂಡಂತೆ ಕಾಣುತ್ತವೆ. ಉದಾಹರಣೆಗೆ ಕೈ ಗಳು, ಕಣಕಾಲುಗಳು, ಪಾದಗಳು, ಮುಖದ ಭಾಗ ಇತ್ಯಾದಿ. ಕೆಲವರಿಗೆ ಕೈಗಳನ್ನು ಅತ್ತಿತ್ತ ಆಡಿಸಲು ಸಹ ಬಿಗಿಯಾದಂತೆ ಕಾಣುತ್ತದೆ. ದಿನ ಕಳೆದಂತೆ ಈ ರೀತಿ ಮೈಯಲ್ಲಿ ನೀರು ತುಂಬಿಕೊಂಡು ಉಪ್ಪಿನ ಅಂಶ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ. ಈ ಲಕ್ಷಣಗಳು ಕೂಡ ಕಿಡ್ನಿಗಳ ಸಮಸ್ಯೆಯನ್ನು ಸೂಚಿಸಬಹುದು.
ವಿಪರೀತ ಆಯಾಸ ಜೊತೆಗೆ ಅನಿಮಿಯಾ
ಮನುಷ್ಯನ ಮೂತ್ರ ಪಿಂಡಗಳು ದೇಹದಲ್ಲಿ 'erythropoietin' ಎಂಬ ಹಾರ್ಮೋನ್ ಉತ್ಪತ್ತಿ ಮಾಡುತ್ತವೆ. ಈ ಹಾರ್ಮೋನ್ ಕೆಂಪು ರಕ್ತ ಕಣಗಳಲ್ಲಿ ಆಮ್ಲಜನಕವನ್ನು ಕೊಂಡೊಯ್ಯಲು ಸಹಾಯ ಮಾಡುತ್ತದೆ. ನಿಮ್ಮ ಮೂತ್ರ ಪಿಂಡಗಳ ಕಾರ್ಯಕ್ಷಮತೆ ಕಡಿಮೆಯಾದ ಕ್ಷಣದಲ್ಲಿ ಈ ಹಾರ್ಮೋನ್ ಮಟ್ಟ ಕೂಡ ದೇಹದಲ್ಲಿ ಇಳಿಕೆ ಕಾಣುತ್ತದೆ. ಇದರ ಸಲುವಾಗಿ ಇದ್ದಕ್ಕಿದ್ದಂತೆ ವಿಪರೀತ ಆಯಾಸ, ಸುಸ್ತು ಜೊತೆಗೆ ಅನಿಮಿಯಾ ಸಮಸ್ಯೆ ಕೂಡ ಎದುರಾಗುತ್ತದೆ.
ಸೊಂಟದ / ಕಿಬ್ಬೊಟ್ಟೆಯ ಜಾಗದಲ್ಲಿ ವಿಪರೀತ ನೋವು ಕಂಡು ಬರುವುದು
ನಮ್ಮ ಕಿಡ್ನಿಗಳು ನಮ್ಮ ಹೊಟ್ಟೆಯ ಹಿಂಭಾಗದಲ್ಲಿ ಸೊಂಟದ ಭಾಗಕ್ಕಿಂತ ಸ್ವಲ್ಪ ಮೇಲೆ ಎರಡೂ ಕಡೆ ಸ್ಥಾಪನೆಗೊಂಡಿರುತ್ತವೆ. ಮೂತ್ರ ಪಿಂಡಗಳಲ್ಲಿ ಯಾವುದಾದರೂ ಸಮಸ್ಯೆ ಉಂಟಾದರೆ ಅಥವಾ ಕಿಡ್ನಿಗಳಲ್ಲಿ ಕಲ್ಲುಗಳು ಕಂಡು ಬಂದರೆ ಮೊಟ್ಟಮೊದಲನೆಯದಾಗಿ ಈ ಭಾಗದಲ್ಲಿ ಇದ್ದಕ್ಕಿದ್ದಂತೆ ವಿಪರೀತ ನೋವು ಕಂಡು ಬರುತ್ತದೆ. ಇದರ ಹಿಂದೆಯೇ ವಾಕರಿಕೆ, ವಾಂತಿಯ ಸಮಸ್ಯೆ ಮತ್ತು ಮೂತ್ರ ವಿಸರ್ಜನೆ ಮಾಡುವಾಗ ವಿಪರೀತ ಉರಿ ಕಂಡು ಬರುತ್ತದೆ.
ಈ ಮೇಲಿನ ಸಮಸ್ಯೆಗಳು/ ಲಕ್ಷಣಗಳು ಒಂದು ವೇಳೆ ನಿಮಗೆ ಕಂಡು ಬರುತ್ತಿದ್ದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರು ಕೊಡುವ ಚಿಕಿತ್ಸೆ ಔಷಧಿಗಳನ್ನು ಯಾವುದೇ ನಿರ್ಲಕ್ಷ ಮಾಡದೆ ತೆಗೆದುಕೊಳ್ಳಿ.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm