ಬ್ರೇಕಿಂಗ್ ನ್ಯೂಸ್
19-05-21 02:53 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ 3ನೇ ಅಲೆ ಎಂದು ಕೇಳಿದ ತಕ್ಷಣ ಚಿಕ್ಕ ಮಕ್ಕಳಿರುವ ಪೋಷಕರಲ್ಲಿ ಆತಂಕ ಹೆಚ್ಚಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಿದೆ, ಲಸಿಕೆ ಪಡೆದವರು ಕೊರೊನಾಕ್ಕೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂಬುವುದು ಸಾಬೀತಾಗಿದೆ. ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ, ಇದು ಪೋಷರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
3ನೇ ಅಲೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಮದು ಈಗಾಗಲೇ ತಜ್ಷರು ಎಚ್ಚರಿಸಿದ್ದಾರೆ. ಮಕ್ಕಳನ್ನು ಕೊರೊನಾದಿಂದ ರಕ್ಷಿಸಲು ಏನು ಮಾಡಬೇಕು ಎಂಬುವುದರ ಬಗ್ಗೆ ತಜ್ಞರು ಸಲಹೆ ನೀಡುತ್ತಿದ್ದಾರೆ.
ಬೆಂಗಳೂರಿನ ನಿಮಾನ್ಸ್‌ನ ಪ್ರಸಿದ್ಧ ವೈರಲಾಜಿಸ್ಟ್ ಡಾ. ರವಿ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ. ಮಹರಾಷ್ಟ್ರದಲ್ಲಿ ಈ ಅಲೆಯನ್ನು ನಿಯಂತ್ರಿಸಲು ಸರ್ಕಾರ ಈಗಾಗಲೇ ಟಾಸ್ಕ್ ಫೋರ್ಸ್ ರಚಿಸಲಾಗಿದೆ..
ಕೊರೊನಾ 3ನೇ ಅಲೆ ಮಕ್ಕಳಿಗೇ ಏಕೆ ಅಪಾಯಕಾರಿ?
ಕೊರೊನಾ ಮೊದಲನೇ ಅಲೆ ವಯಸ್ಸಾದವರಿಗೆ ಹಾಗೂ ಈಗಾಗಲೇ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯಕಾರಿಯಾಗಿತ್ತು. ದೇಶದಲ್ಲಿ 2ನೇ ಹಂತದಲ್ಲಿ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿತ್ತು, ಎರಡನೇ ಅಲೆಯಲ್ಲಿ ಯುವಕ-ಯುವತಿಯರೂ ಬಲಿಯಾಗಿದ್ದಾರೆ. ಕುಟುಂಬದಲ್ಲಿ ದುಡಿದು ತರುತ್ತಿದ್ದ ಕೈಗಳನ್ನೇ ಕೊರೊನಾ ಕಿತ್ತುಕೊಂಡಿದೆ. ದೇಶದಲ್ಲಿ ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವುದರಿಂದ ಅವರು ಸುರಕ್ಷಿತವಾಗಬಹುದು. ಈಗ ಲಸಿಕೆ ಸಿಗದೇ ಇರುವುದು 18 ವರ್ಷ ಕೆಳಗಿನವರಿಗೆ. ಆದ್ದರಿಂದ 3ನೇ ಅಲೆ ಅವರಿಗೆ ಅಪಾಯಕಾರಿಯಾಗಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
3ನೇ ಅಲೆಯ ಬಗ್ಗೆ ತಜ್ಞರು ಹೇಳುವುದು ಏನು?
ಭಾರತದಲ್ಲಿ 12 ವರ್ಷಕ್ಕಿಂತ ಚಿಕಕ್ವರು 165 ಮಿಲಿಯನ್ ಇದ್ದಾರೆ. ಶೇ.20ರಷ್ಟು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೂ ಅದರಲ್ಲಿ ಸೇ. 5ರಷ್ಟು ಮಕ್ಕಳಿಗೆ ಐಸಿಯು ಬೇಕಾಗುತ್ತದೆ. ಹಾಗೆ ನೋಡಿದರೆ ಪೀಡಿಯಾಟ್ರಿಕ್ ಐಸಿಯು 1.65 ಲಕ್ಷ ಬೇಕಾಗುವುದು. ಈಗೀನ ಪರಿಸ್ಥಿತಿಯಲ್ಲಿ 90,000 ಐಸಿಯು ಬೆಡ್ ಅನ್ನು ದೊಡ್ಡವರಿಗೆ ಒದಗಿಸಲು ಸರ್ಕಾರ ಹರಸಾಹಸ ಪಡುತ್ತಿದೆ.
ಮಕ್ಕಳ ರಕ್ಷಣೆಗಾಗಿ ಪೋಷಕರಿಗೆ ಮೊದಲು ಲಸಿಕೆ ನೀಡ ಬೇಕಾಗಿದೆ
ಮಕ್ಕಳನ್ನು ಹೊರಗಡೆ ಹೋಗದಂತೆ ನೋಡಿಕೊಳ್ಳಬಹುದು, ಅದೇ ಮನೆಯವರಿಂದಲೇ ಕೊರೊನಾ ಬರುವ ಸಾಧ್ಯತೆ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಪೋಷಕರಿಗೆ ಮೊದಲಿಗೆ ಲಸಿಕೆ ದೊರೆಯುವಂತಾಗಬೇಕು ಎಂದು ನಾರಾಯಣ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ, ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಿ ಶೆಟ್ಟಿ ಸರ್ಕಾರಕ್ಕೆ ಸೂಚಿಸಿದ್ದಾರೆ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm