ಬ್ಲ್ಯಾಕ್, ವೈಟ್, ಯೆಲ್ಲೂ ಫಂಗಸ್‌ ಯಾವುದೇ ಆಗಿರಲಿ ಸಕ್ಕರೆಯಂಶ ನಿಯಂತ್ರಣದಲ್ಲಿದ್ದರೆ ಭಯವಿಲ್ಲ: ತಜ್ಞರು

25-05-21 11:49 am       Reena TK, BoldSky Kannada   ಡಾಕ್ಟರ್ಸ್ ನೋಟ್

ದೇಶದಲ್ಲಿ ಒಂದು ಕಡೆ ಕೊರೊನಾ 2ನೇ ಅಲೆಯ ಆರ್ಭಟ ಅದರ ಜೊತೆಗೆ ಬ್ಲ್ಯಾಕ್‌, ವೈಟ್‌, ಯೆಲ್ಲೋ ಎಂಬ ಫಂಗಸ್ ಕಾಟ ಇವೆಲ್ಲಾ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಲಾಗಿ ಪರಿಣಮಿಸಿದೆ.

ದೇಶದಲ್ಲಿ ಒಂದು ಕಡೆ ಕೊರೊನಾ 2ನೇ ಅಲೆಯ ಆರ್ಭಟ ಅದರ ಜೊತೆಗೆ ಬ್ಲ್ಯಾಕ್‌, ವೈಟ್‌, ಯೆಲ್ಲೋ ಎಂಬ ಫಂಗಸ್ ಕಾಟ ಇವೆಲ್ಲಾ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಲಾಗಿ ಪರಿಣಮಿಸಿದೆ.



ಕೆಲವು ರಾಜ್ಯಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಅನ್ನು ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ. ಭಾರತದಲ್ಲಿ 9000ಕ್ಕೂ ಅಧಿಕ ಜನರಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿದ್ದು 270ಕ್ಕೂ ಅಧಿಕ ಜನ ಇದರಿಂದಾಗಿ ಸಾವನ್ನಪ್ಪಿದ್ದಾರೆ. ಬ್ಲ್ಯಾಕ್‌ ಫಂಗಸ್‌ ನಂತರ ಹಲವರಲ್ಲಿ ವೈಟ್‌ ಫಂಗಸ್‌ ಕಂಡು ಬರುತ್ತಿದೆ, ಇದೀಗ ಯೆಲ್ಲೋ ಫಂಗಸ್ ಬಗ್ಗೆಯೂ ತಜ್ಞರು ಎಚ್ಚರಿಸಿದ್ದಾರೆ.



ಈ ಎಲ್ಲಾ ಫಂಗಸ್‌ ನಿಯಂತ್ರಿಸಲು ಮಾರ್ಗ ಒಂದೇ

ಬ್ಲ್ಯಾಕ್‌, ವೈಟ್, ಯೆಲ್ಲೋ ಹೀಗೆ ಫಂಗಸ್‌ ಯಾವುದೇ ಆಗಿರಲಿ, ಇದನ್ನು ಗೆಲ್ಲಬೇಕಾದರೆ ಮಾರ್ಗ ಒಂದೇ , ಅದುವೇ ದೇಹದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡುವುದಾಗಿದೆ ಎಂದು ತಜ್ಞರು ಹೇಳಿದ್ದಾರೆ.



ಮಧುಮೇಹಿಗಳಿಗೇ ಹೆಚ್ಚು ಅಪಾಯಕಾರಿಯಾಗಿರುವ ಫಂಗಸ್‌

ಮಧುಮೇಹಿಗಳಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಇರುತ್ತದೆ, ಇದರಿಂದಾಗಿ ಫಂಗಸ್‌ ಅಪಾಯ ಇವರಿಗೆ ಅಧಿಕ. ಮಧುಮೇಹಿಗಳಿಗೆ ಕೋವಿಡ್‌ 19 ತಾಗಿದರೆ ಕೊರೊನಾದಿಂದ ಚೇತರಿಸಲು ಸ್ಟಿರಾಯ್ಡ್ ನೀಡಲಾಗುವುದು, ಈ ಸ್ಟಿರಾಯ್ಡ್‌ಗಳು ದೇಹದಲ್ಲಿ ಸಕ್ಕರೆಯಂಶವನ್ಉ ಅಧಿಕ ಮಾಡಿದಾಗ ಸಕ್ಕರೆ ಕಾಯಿಲೆ ಇರುವವರಿಗೆ ಮತ್ತಷ್ಟು ತೊಂದರೆಯಾಗುತ್ತದೆ. ಆಗ ಅವರ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ತುಂಬಾನೇ ಕಡಿಮೆಯಾಗುವುದು. ಬ್ಯಾಕ್‌, ವೈಟ್‌, ಯೆಲ್ಲೋ ಫಂಗಸ್‌ ಮ್ಯೂಕೋರ್ಮೈಕೋಸಿಸ್ ಎಂಬ ಫಂಗಿಯಿಂದ ಉಂಟಾಗುವುದು.ಇದು ನೀರು, ಮಣ್ಣು, ಗಾಳಿಯಲ್ಲಿರುತ್ತದೆ. ಫಂಗಸ್ ಉಂಟಾದಾಗ ಏನಾಗುತ್ತದೆ? ಫಂಗಸ್ ದಾಳಿಯಾದಾಗ ಕೋವಿಡ್ 19 ಲಕ್ಷಣಗಳಂತೆ ಕಂಡು ಬಂದರೂ RT-PCR ಟೆಸ್ಟ್ ರಿಸಲ್ಟ್ ನೆಗೆಟಿವ್ ಇರುತ್ತದೆ. ಆದರೆ ಸಿಟಿ ಸ್ಕ್ಯಾನ್‌ ಮಾಡಿದಾಗ ಶ್ವಾಸಕೋಶಕ್ಕೆ ಹಾನಿಯುಂಟಾಗಿರುತ್ತದೆ. ಇದು ಅಂಗಾಂಗಗಳಿಗೂ ಹಾನಿಯುಂಟು ಮಾಡುವುದು.

(Kannada Copy of Boldsky Kannada)