ಬ್ರೇಕಿಂಗ್ ನ್ಯೂಸ್
09-06-21 02:26 pm Reena TK, BoldSky Kannada ಡಾಕ್ಟರ್ಸ್ ನೋಟ್
2019 ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಹೊಸದೊಂದು ವೈರಸ್ ಕಂಡು ಬಂದಿತ್ತು. ಚೀನಾದಲ್ಲಿ ಅದರ ಆರ್ಭಟ ಹೆಚ್ಚಾದಗಲೇ ಜಗತ್ತಿಗೆ ಅರಿವಾದದ್ದು, ಈ ಪ್ರಪಂಚಕ್ಕೆ ಎಂಥ ಅಪಾಯ ಕಾದಿದೆ ಎಂಬುವುದು. ವರ್ಷದೊಳಗಾಗಿ ಆ ವೈರಸ್ ಇಡೀ ವಿಶ್ವವನ್ನು ವ್ಯಾಪಿಸಿದೆ.
ಈ ವೈರಸ್‌ನಿಂದ ಪಾರಾಗಲು ಇಡೀ ವಿಶ್ವವೇ ತನಗೆ ತಾನು ಲಾಕ್‌ಡೌನ್ ನಿರ್ಬಂಧ ಹೇರಬೇಕಾಯಿತು. ವಿಶ್ವದ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ವಾರಗಟ್ಟಲೆ ಸ್ತಬ್ಧ ಮಾಡಲಾಯಿತು. ಜನರ ಜೀವನವೇ ಬದಲಾಯಿತು. ಮೊದಲನೇ ಅಲೆ, ಎರಡನೇ ಅಲೆ ಅಂತ ಕೊರೊನಾವೈರಸ್ ಕೂಡ ರೂಪಾಂತರವಾಗಿ ತನ್ನ ಆರ್ಭಟ ಮುಂದುವರೆಸಿದೆ.
ಈ ವೈರಸ್‌ನನ್ನು ಇಡೀ ವಿಶ್ವದಿಂದ ಇಲ್ಲವಾಗಿಸಲು ಪ್ರತಿಯೊಂದು ದೇಶ ವ್ಯಾಕ್ಸಿನ್ ಡ್ರೈವ್ ಪ್ರಾರಂಭಿಸಿದೆ. ಭಾರತದಲ್ಲಿ ಮೊದಲನೇ ಅಲೆ ಅಷ್ಟೇನು ಭೀಕರವಾಗಿರಲಿಲ್ಲ, ಆದರೆ ಎರಡನೇ ಅಲೆ ಅನೇಕ ಜನರನ್ನು ಬಲಿ ಪಡೆದಿದೆ, ಎಷ್ಟೋ ಕುಟುಂಬಗಳು ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಮುಂದೇನು ಎಂದು ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದಾರೆ. ಇನ್ನು ಕೆಲವರು ಈ ಸೋಂಕಿನ ಕಾರಣದಿಂದಾಗಿ ಲಕ್ಷಗಟ್ಟಲೆ ಹಣವನ್ನು ಆಸ್ಪತ್ರೆಗೆ ಸುರಿದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಲಾಕ್‌ಡೌನ್ ಕಾರಣದಿಂದಾಗಿ ಕೆಲಸವಿಲ್ಲದೆ, ವ್ಯವಹಾರವಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗೆ ಕೊರೊನಾ ರೂಪಾಂತರ ವೈರಸ್ 2ನೇ ಅಲೆಯಲ್ಲಿ ಸಾಕಷ್ಟು ನಷ್ಟವನ್ನು ತುಂಬಿದೆ. ಇದೀಗ ಭಾರತದಲ್ಲಿ ಸೋಂಕಿನ ಪ್ರಮಾಣ ತಗ್ಗುತ್ತಾ ಬಂದಿದೆ, ಜೂನ್ ಕಳೆಯುವಷ್ಟರಲ್ಲಿ ಸೋಂಕು ಕಡಿಮೆಯಾಗುವುದು ಎಂದು ತಜ್ಞರು ಹೇಳಿದ್ದಾರೆ, 2ನೇ ಅಲೆ ತಗ್ಗುತ್ತಿದ್ದಂತೆ ಮತ್ತೊಂದು ರೂಪಾಂತರ ಕೊರೊನಾವೈರಸ್ ಪತ್ತೆಯಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಇದೀಗ ಹೊಸದಾಗಿ ಪತ್ತೆಯಾಗಿರುವ ಕೊರೊನಾವೈರಸ್ ಅನ್ನು ಡೆಲ್ಟಾ ವೈರಸ್ ಎಂದು ಗುರುತಿಸಲಾಗಿದೆ.
ಮೊದಲಿಗೆ ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್
ರೂಪಾಂತರ ಕೊರೊನಾವೈರಸ್ ಡೆಲ್ಟಾ ಮೊದಲಿಗೆ ಪತ್ತೆಯಾಗಿದ್ದೇ ಭಾರತದಲ್ಲಿ. ಆದರೆ ವೈರಸ್ ಇದೀಗ ಯುಕೆಯಲ್ಲಿ ಆರ್ಭಟಿಸುತ್ತಿದೆ. ಈ ವೈರಸ್‌ನ ತಡೆಗಟ್ಟಬೇಕಾದರೆ ಒಂದು ಡೋಸ್ ಅಲ್ಲ ಎರಡು ಡೋಸ್ ಲಸಿಕೆ ಅಗ್ಯತ ಎಂದು ತಜ್ಞರು ಹೇಳಿದ್ದಾರೆ.
ಡೆಲ್ಟಾ ತಡೆಗಟ್ಟಲು ಒಂದು ಡೋಸ್ ಫೈಜರ್
ಸಮರ್ಥವಲ್ಲ ಫೈಜರ್ ಒಂದು ಡೋಸ್‌ನ ಲಸಿಕೆಯಾಗಿದೆ. ಆದರೆ ಈ ಫೈಜರ್ ಡೆಲ್ಟಾ ರೂಪಾಂತರವೈರಸ್ ತಡೆಗಟ್ಟಲು ಪರಿಣಾಮಕಾರಿಯಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಅಧ್ಯಯನದಲ್ಲಿ ಈ ಲಸಿಕೆ B.1.617.2 (ಡೆಲ್ಟಾ) ಮತ್ತುB.1.351 (ಬೇಟಾ), Asp614Gly, (D614G) ಮತ್ತು B.1.1.7 (Alpha) ವಿರುದ್ಧ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅಧ್ಯಯನಕ್ಕೆ ಒಳಪಡಿಸಲಾಯಿತು. ಆಗ ಫೈಜರ್ ಒಂದು ಡೋಸ್‌ಗಿಂತ ಎರಡು ಡೋಸ್ ಪಡೆಯುವುದು ಸುರಕ್ಷಿತ ಎಂಬ ಅಂಶ ತಿಳಿದು ಬಂದಿದೆ.
ಡೆಲ್ಟಾ ವಿರುದ್ಧ ಹೋರಾಡಲು ಎರಡು ಡೋಸ್ ಲಸಿಕೆ ಪಡೆಯಿರಿ
ಯಾರು ಒಂದು ಡೋಸ್ ಲಸಿಕೆ ಪಡೆದಿರುತ್ತಾರೋ ಅವರಿಗೆ ಡೆಲ್ಟಾ ಸೋಂಕು ತಗುಲಬಹುದು, ಆದ್ದರಿಂದ ಎರಡು ಡೋಸ್ ಲಸಿಕೆ ಪಡೆಯುವುದು ಸುರಕ್ಷಿತ. ಈ ಡೆಲ್ಟಾ ರೂಪಾಂತರ ಕೊರೊನಾವೈರಸ್‌ನಿಂದ ಪಾರಾಗಲು ಮೊದಲು ಡೋಸ್ ಪಡೆದವರು ಎರಡನೇ ಡೋಸ್ ತುಂಬಾ ತಡಮಾಡದೆ ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಕೊವಿಶೀಲ್ಡ್ ಎರಡನೇ ಡೊಸ್ ಅಂತರ ಹೆಚ್ಚಿಸಿದ ಸರ್ಕಾರ
ಕೊವಾಕ್ಸಿನ್ ಲಸಿಕೆ ಡೋಸ್‌ಗಳನ್ನು 45 ದಿನಗಳ ಅಂತರ ನೀಡಲಾಗುತ್ತಿದೆ. ಕೊವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ ಅಂತರವನ್ನು ಸರ್ಕಾರ ಹೆಚ್ಚಿಸಿದೆ. ಮೊದಲ ಡೋಸ್ ಪಡೆದ 6-8 ವಾರಗಳಲ್ಲಿ ಎರಡನೇ ಡೋಸ್ ನೀಡಲಾಗಿತ್ತು, ಈಗ ಆ ಅಂತರವನನ್ಉ 12-16 ವಾರಕ್ಕೆ ಹೆಚ್ಚಿಸಿದೆ.
(Kannada Copy of Boldsky Kannada)
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm