ಪೋಷಕರೇ, ಮಕ್ಕಳ ಮೊಂಡುತನಕ್ಕೆ ಬ್ರೇಕ್ ಹಾಕಿ, ನಿಮ್ಮ ಮಾತು ಕೇಳುವ ಹಾಗೇ ಮಾಡ್ಬೇಕಾ? ಹಾಗಾದ್ರೆ ಇಲ್ಲಿವೆ ಸಲಹೆಗಳು

23-09-21 03:28 pm       Shreeraksha, Boldsky   ಡಾಕ್ಟರ್ಸ್ ನೋಟ್

ನಿಮ್ಮ ಮಗುವನ್ನು ಗೌರವದಿಂದ ನೋಡಿಕೊಳ್ಳಿ. ನೀವು ಮಾತನಾಡುವಾಗ ವಸ್ತುನಿಷ್ಠರಾಗಿರಿ ಮತ್ತು ಕಡಿಮೆ ಪದಗಳನ್ನು ಬಳಸಲು ಪ್ರಯತ್ನಿಸಿ.

ನಮ್ಮ ಮಕ್ಕಳು ಮಾತನಾಡಲು ಮತ್ತು ಸಂವಹನ ಮಾಡಲು ಕಲಿಯಬೇಕೆಂದು ನಾವು ಬಯಸುತ್ತೇವೆ. ಅವರು ಸ್ವತಂತ್ರ ಚಿಂತಕರಾಗಬೇಕು. ಒಂದು ದಿನ ಅವರು ತಮ್ಮದೇ ಕಾಲ ಮೇಲೆ ನಿಲ್ಲಬೇಕೆಂದು ಆಸೆ ಪ್ರತಿಯೊಬ್ಬ ಪೋಷಕರಿಗೂ ಇದೆ. ಆದರೆ ಕೆಲವೊಮ್ಮೆ ಈ ಆಸೆಯೇ ಅತಿಯಾಗಿ ನಮ್ಮೊಂದಿಗೆ ವಾದಕ್ಕೆ ಇಳಿಯುವಾಗ, ಕಾರಣವಿಲ್ಲದೇ ಪ್ರತಿಯೊಂದಕ್ಕೂ ವಾದ ಮಾಡುವಾಗ ಮನಸ್ಸಿಗೆ ನೋವಾಗುವುದು ಸಾಮಾನ್ಯ. ಇದು ಮುಂದೆ ಅವರ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರಲಿದೆ.

ನಿಮ್ಮ ಮಗು ಏನಾದರೂ ಪ್ರತಿ ವಿಚಾರಕ್ಕೂ ವಿರೋಧ, ವಾದ ಮಾಡುತ್ತಿದ್ದರೆ, ಮಗುವಿನ ಆ ನಡವಳಿಕೆಯನ್ನು ಸರಿ ಮಾಡಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ವಿವರಿಸಲಾಗಿದೆ.

ನಿಮ್ಮ ಮಗು ಪ್ರತಿಯೊಂದಕ್ಕೂ ವಾದ ಮಾಡುತ್ತಿದ್ದರೆ ಅದನ್ನು ಸರಿಪಡಿಸುವ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ:

ಮಗುವಿನೊಂದಿಗೆ ವಾದ ಮಾಡಬೇಡಿ:

ಇದು ಅತ್ಯಂತ ಸರಳ ಹಾಗೂ ಮೊದಲ ಹಂತ. ಯಾವುದೇ ಕಾರಣಕ್ಕೂ ಮಕ್ಕಳೊಂದಿಗೆ ವಾದಕ್ಕೆ ಇಳಿಯಬೇಡಿ. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ಇಬ್ಬರು ಮಾತನಾಡಿದರೆ ಮಾತ್ರ ಅಲ್ಲಿ ವಾದ-ವಿವಾದಗಳು ಹುಟ್ಟಿಕೊಳ್ಳುತ್ತವೆ ಹೊರತು, ಒಬ್ಬರಿಂದಲ್ಲ. ಆದ್ದರಿಂದ ನಿಮ್ಮ ಮಗುವಿನ ಜೊತೆ ವಾದಕ್ಕೆ ಹೋಗಬೇಡಿ.



ಮಕ್ಕಳಿಗೂ ಗೌರವ ನೀಡಿ:

ನಿಮ್ಮ ಮಗುವನ್ನು ಗೌರವದಿಂದ ನೋಡಿಕೊಳ್ಳಿ. ನೀವು ಮಾತನಾಡುವಾಗ ವಸ್ತುನಿಷ್ಠರಾಗಿರಿ ಮತ್ತು ಕಡಿಮೆ ಪದಗಳನ್ನು ಬಳಸಲು ಪ್ರಯತ್ನಿಸಿ. ಉದಾಹರಣೆಗೆ: ನನಗೆ ನಿನ್ನ ಸಹಾಯ ಬೇಕು. ನಿಮ್ಮ ಆಟಿಕೆಗಳನ್ನು ತೆಗೆದಿಡುವುದು ನಿನ್ನ ಕೆಲಸ. ದಯವಿಟ್ಟು ಈಗಲೇ ತೆಗೆದಿಡು. ಆಜ್ಞೆ ಅಥವಾ ಪ್ರಶ್ನೆಗಳನ್ನು ತಪ್ಪಿಸಿ: ಉದಾ, ಈಗ ನಿಮ್ಮ ಆಟಿಕೆಗಳನ್ನು ತೆಗೆದುಕೊಳ್ಳಲು ಬಯಸುತ್ತೀರಾ? ಈ ರೀತಿ ಮಾತುಗಳು ಬೇಡ.



ಚರ್ಚೆ ಮತ್ತು ವಾದಗಳ ನಡುವಿನ ವ್ಯತ್ಯಾಸ ತಿಳಿಸಿ:

ನಿಮ್ಮ ಮಗುವಿಗೆ ಚರ್ಚೆ ಮತ್ತು ವಾದಗಳ ನಡುವಿನ ವ್ಯತ್ಯಾಸವನ್ನು ಕಲಿಸಿಕೊಡಿ. ಚರ್ಚೆಗಳು ಇತರರನ್ನು ನೋಯಿಸದೇ, ಸೋಲು-ಗೆಲುವಿನ ಮಾತಿಲ್ಲದೇ, ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ವಾದವೆಂಬುದು ವಿನ್ನರ್ ಮತ್ತು ಲೂಸರ್ ಎಂಬ ಮಾತಿನೊಂದಿಗೆ ಕೊನೆಗೊಳ್ಳುತ್ತವೆ. ನಿಮ್ಮ ಮನೆಯಲ್ಲಿ ಯಾವ ದೃಷ್ಟಿಕೋನಗಳು ಅಥವಾ ಅಭಿಪ್ರಾಯಗಳು ಚರ್ಚೆಯಾಗುತ್ತವೆ ಎಂಬುದನ್ನು ನಿಮ್ಮ ಮಗುವಿಗೆ ಕಲಿಸಿ.



ಮಕ್ಕಳ ಮೇಲೆ ತುಂಬಾ ಕೋಪಗೊಳ್ಳಬೇಡಿ:

ತಿಳುವಳಿಕೆ ಮತ್ತು ಹೊಂದಾಣಿಕೆ ಆರೋಗ್ಯಕರ ಸಂಬಂಧವನ್ನು ನಿರ್ಮಿಸುತ್ತದೆ. ಹಾಗಾಗಿ ಮಕ್ಕಳಿಗೂ ಮಾತನಾಡುವ ಅವಕಾಶ ನೀಡಿ. ನೀವು ಅವರಿಗೆ ಮಾತನಾಡುವ ಅವಕಾಶವನ್ನು ನೀಡಿದರೆ, ಅವನು ಕೂಡ ನಿಮ್ಮ ಮಾತನ್ನು ಕೇಳುತ್ತಾರೆ. ನಿಮ್ಮ ಮಗುವಿಗೆ ತಾಳ್ಮೆಯ ಮುಖವನ್ನು ತೋರಿಸಿ. ಕೋಪದ ಮುಖವನ್ನಲ್ಲ, ಆದಷ್ಟು ತಾಳ್ಮೆಯಿಂದಲೇ ನಿರ್ವಹಿಸಿ, ನೀವು ಕೋಪಗೊಂಡು ಮಾತನಾಡಿದರೆ, ಮಕ್ಕಳು ಸಹ ಅದೇ ರೀತಿ ವರ್ತಿಸುತ್ತಾರೆ.



ಅನುಮತಿ ಕೇಳಲು ಕಲಿಸಿ:

ನಿಮ್ಮ ಮಗುವಿಗೆ ಅನುಮತಿ ಕೇಳು ಪ್ರೋತ್ಸಾಹಿಸಿ ಮತ್ತು ಕಲಿಸಿ. ಇದು ಅನೇಕ ವಾದಗಳನ್ನು ತಡೆಯುತ್ತದೆ. ಯಾವ ಕೆಲಸಕ್ಕೆ ಅನುಮತಿ ಕೇಳಬೇಕು, ಹೇಗೆ ಕೇಳಬೇಕು ಎಲ್ಲವನ್ನು ಮೊದಲೇ ಕಲಿಸಿ. ವಿನಂತಿ ಮಾಡುವುದನ್ನು ಖಾಸಗಿಯಾಗಿ ಅಥವಾ ಮನೆಯಲ್ಲಿ ಮಾಡಬೇಕೆಂದು ನಿಮ್ಮ ಮಗುವಿಗೆ ತಿಳಿಸಿ. ಉದಾಹರಣೆಗೆ, ಕೆಲವು ಪೋಷಕರು ತಮ್ಮ ಮಕ್ಕಳಿಗೆ ಸ್ನೇಹಿತರ ಮನೆಯಲ್ಲಿ ತಂಗಲು ಅವಕಾಶ ಕೇಳಿದರೆ, ಅದನ್ನು ತಿರಸ್ಕರಿಸುತ್ತಾರೆ. ಅದಕ್ಕೆ ಮೊದಲೇ ಅನುಮತಿ ಕೇಳಿ ಹೋದರೆ ಉತ್ತಮವಾಗಿರುತ್ತದೆ.