ದಿನಕ್ಕೆ ಒಂದೆರಡು ಮೊಟ್ಟೆ ತಿಂದರೆ ಓಕೆ! ಇದಕ್ಕಿಂತ ಜಾಸ್ತಿ ಬೇಡ!!

22-02-22 09:03 am       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಎರಡು ಮಾತಿಲ್ಲ! ಆದರೆ ಅತಿಯಾಗಿ ತಿಂದರೆ ಆರೋಗ್ಯಕ್ಕೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

ನಾನ್‌ವೆಜ್ ಪ್ರಿಯರು, ಚಿಕನ್, ಫಿಶ್ ಎಷ್ಟು ಇಷ್ಟಪಡುತ್ತಾರೋ, ಮೊಟ್ಟೆಯನ್ನೂ ಕೂಡ ಅಷ್ಟೇ ಇಷ್ಟಪಡುತ್ತಾರೆ. ಇನ್ನು ಮೊಟ್ಟೆಯ ಆರೋಗ್ಯದ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್‌ಗಳನ್ನು ಒಳಗೊಂಡಿದ್ದು, ಜನರ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿವೆ.

ಇನ್ನು ನೋಡಲು ಸಣ್ಣದಾಗಿದ್ದು, ಗುಂಡಗೆ ಇರುವ ಈ ಮೊಟ್ಟೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು ಅಡಗಿವೆ. ಮುಖ್ಯವಾಗಿ ವಿಟಮಿನ್ ' ಬಿ6 ', ವಿಟಮಿನ್ ' ಬಿ12 ' ಮತ್ತು ವಿಟಮಿನ್ ' ಡಿ ' ಅಂಶಗಳು ಹೇರಳವಾಗಿ ಇರುವುದರಿಂದ ಮನುಷ್ಯನ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳನ್ನು ಒಳಗೊಂಡಿರುವ ಮೊಟ್ಟೆಗಳನ್ನು ಮಿತವಾಗಿ ತಿನ್ನಬೇಕಂತೆ. ಇದನ್ನು ನಾವು ಹೇಳುತ್ತಿಲ್ಲ, ವೈದ್ಯರೇ ಈ ಮಾತನ್ನು ಹೇಳುತ್ತಿದ್ದಾರೆ. ಅತಿಯಾದರೆ ಅಮೃತ ಕೂಡ ವಿಷವಾಗಬಹುದು ಎನ್ನುವ ಮಾತಿನಂತೆ, ಮೊಟ್ಟೆಯಲ್ಲಿರುವ ಹಳದಿ ಭಾಗ ಅತಿ ಹೆಚ್ಚು ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಹೆಚ್ಚು ಮೊಟ್ಟೆಗಳನ್ನು ತಿನ್ನಲು ಹೋದರೆ ಹೃದಯದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ!

ದಿನಕ್ಕೊಂದು ಮೊಟ್ಟೆ ತಿಂದರೆ ಸಾಕಂತೆ!

Boiled Eggs - Premier Quality Foods

  • ವೈದ್ಯರ ಪ್ರಕಾರ ವ್ಯಕ್ತಿ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳುವುದರ ಜೊತೆಗೆ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆಯನ್ನು ನೀಗಿಸಲು ದಿನಕ್ಕೊಂದು ಮೊಟ್ಟೆಯನ್ನು ತಿಂದರೆ ಸಾಕಂತೆ! ಇನ್ನು ಮೊಟ್ಟೆಯನ್ನು ಅರೆ ಬೇಯಿಸಿ ತಿನ್ನುವ ಬದಲು, ಚೆನ್ನಾಗಿ ಬೇಯಿಸಿಕೊಂಡು ತಿಂದರೆ ಆರೋಗ್ಯಕ್ಕೆ ಒಳ್ಳೆಯದಂತೆ!
  • ತಜ್ಞರು ಹೇಳುವ ಪ್ರಕಾರ ಒಂದು ಮೊಟ್ಟೆಯಲ್ಲಿ, ಏನಿಲ್ಲಾ ಅಂದರೂ 185 ಮಿಲಿಗ್ರಾಂ ಆಗುವಷ್ಟು ಕೊಲೆಸ್ಟ್ರಾಲ್ ಅಂಶ ಕಂಡುಬರುತ್ತದೆ. ಅಂದರೆ ಒಬ್ಬ ವ್ಯಕ್ತಿ ಒಂದು ದಿನಕ್ಕೆ ತಾನು ಸೇವನೆ ಮಾಡುವ ಆಹಾರಗಳಲ್ಲಿ ಕಂಡುಬರುವ ಸುಮಾರು 300 ಮಿಲಿ ಗ್ರಾಂ ಕೊಲೆಸ್ಟ್ರಾಲ್ ಅಂಶ ಸೇವನೆ ಮಾಡಬಹುದು.
  • ಇದರ ಮೇಲೆ ಲೆಕ್ಕ ಹಾಕಲು ಹೋದರೆ, ಆತ ದಿನಕ್ಕೆ ಎರಡು ಮೂರು ಮೊಟ್ಟೆಗಳನ್ನು ತಿಂದರೆ, ಕೊಲೆಸ್ಟ್ರಾಲ್ ಅಂಶ ಜಾಸ್ತಿಯಾಗಿ, ಇದರಿಂದ ರಕ್ತದಲ್ಲಿ ಏರುಪೇರಾಗಿ ಕೊನೆಗೆ ಹೃದಯಕ್ಕೂ ಕೂಡ ಸಮಸ್ಯೆ ಬರಬಹುದು!

ಬಾಡಿ ಬಿಲ್ಡ್ ಮಾಡುವವರು 

How long does it take to build muscle? What to expect after working out

  • ಇನ್ನು ಜಿಮ್‌ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೊಂಡವರು, ದಿನಕ್ಕೆ ಏನಿಲ್ಲ ಅಂದರೂ, ನಾಲ್ಕರಿಂದ ಐದು ಮೊಟ್ಟೆಗಳನ್ನು ತಿನ್ನುತ್ತಾರೆ. ಆದರೆ ಇದರಿಂದ ಅವರ ದೇಹದ ಮಾಂಸ ಖಂಡಗಳು ಬೆಳವಣಿಗೆ ಆಗುತ್ತವೆ. ಆದರೆ ಮಿತವಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.
  • ಮುಖ್ಯವಾಗಿ ಮೊಟ್ಟೆಯ ಹಳದಿ ಭಾಗವನ್ನು ತಿನ್ನದೇ, ಅದರ ಬಿಳಿ ಭಾಗವನ್ನು ಮಾತ್ರ ಸೇವಿಸಿ, ಇದರಿಂದ ಕಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವ ಸಂಭವ ತಪ್ಪುತ್ತದೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಲೇಬೇಕು.
  • ನೆನಪಿಡಿ ಒಂದು ದಿನಕ್ಕೆ ಐದಾರು ಮೊಟ್ಟೆಗಳನ್ನು ತಿನ್ನುವುದು ದೊಡ್ಡ ವಿಷಯವೇನಲ್ಲ! ಆದರೆ ಇದರ ಜೊತೆಗೆ ಇನ್ನಿತರ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುವ ಆಹಾರಗಳು ನಮ್ಮ ದೇಹ ಸೇರುತ್ತವೆ. ಇದರಿಂದ ಆರೋಗ್ಯ ಮತ್ತಷ್ಟು ಹೆಚ್ಚಾಗಲಿದೆ.

 ಮೊಟ್ಟೆಗಳನ್ನು ಅತಿಯಾಗಿ ತಿಂದರೆ ಆಗುವ ದುಷ್ಪರಿಣಾಮಗಳು

Perfect Steamed Boiled Eggs Recipe

  • ತಜ್ಞರೇ ಹೇಳುವ ಹಾಗೆ, ಮೊಟ್ಟೆ ಉಷ್ಣ ಪ್ರಭಾವವನ್ನು ಬೀರುವ ಆಹಾರ ಪದಾರ್ಥ ಆಗಿದ್ದು, ಅದರಲ್ಲೂ ಬೇಸಿಗೆಯ ಕಾಲದಲ್ಲಿ ಜಾಸ್ತಿ ಮೊಟ್ಟೆಗಳನ್ನು ತಿಂದರೆ ಬಾಡಿ ಹೀಟ್ ಜಾಸ್ತಿ ಆಗಬಹುದು ಇದರಿಂದಾಗಿ ಆರೋಗ್ಯದಲ್ಲಿ ಅಸ್ವಸ್ಥತೆ ಉಂಟಾಗುವ ಸಂಭವ ಜಾಸ್ತಿ ಇರುತ್ತದೆ.
  • ಇನ್ನು ಇದರ ಅಡ್ಡಪರಿಣಾಗಳನ್ನು ನೋಡುವುದಾದರೆ, ಹೊಟ್ಟೆ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಇದರ ನಂತರದಲ್ಲಿ ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆ ಕೂಡ ಎದುರಾಗುವ ಸಂಭವ ಇರುತ್ತದೆ.

ಬೇಯಿಸಿದ ಕೋಳಿ ಮೊಟ್ಟೆ ಬೆಸ್ಟ್! 

Learn About Soft-Boiled Eggs: How Long to Boil Eggs and Easy Soft-Boiled  Eggs Recipe - 2022 - MasterClass

  • ಆದಷ್ಟು ಬೇಯಿಸಿದ ಕೋಳಿ ಮೊಟ್ಟೆಗಳು ಆರೋಗ್ಯಕ್ಕೆ ಒಳ್ಳೆಯದು. ಸಾಧ್ಯವಾದರೆ ಅದರ ಹಳದಿ ಭಾಗವನ್ನು ಹೆಚ್ಚಾಗಿ ತಿನ್ನಲು ಹೋಗಬೇಡಿ. ಇನ್ನು ಅರೆಬೇಯಿಸಿ ಮೊಟ್ಟೆ, ಹಾಫ್ ಫ್ರೈ ಇವೆಲ್ಲಾವನ್ನೂ ಜಾಸ್ತಿ ತಿನ್ನಲು ಹೋಗಬೇಡಿ.
  • ಇನ್ನು ಎಲ್ಲಾ ಆಯಾಮದಲ್ಲಿ ನೋಡಿದರೂ ಕೂಡ ಬೇಯಿಸಿದ ಕೋಳಿ ಮೊಟ್ಟೆಗಳೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗಾಗಿ ನೀವು ಮೊಟ್ಟೆಗಳನ್ನು ತಿನ್ನಬೇಕು ಎಂದುಕೊಂಡಿದ್ದರೆ, ಅವುಗಳನ್ನು ಬೇಯಿಸಿ ದಿನಕ್ಕೆ ಒಂದು ಅಥವಾ ಎರಡರಂತೆ ಮಾತ್ರ ತಿನ್ನಿ ಸಾಕು.

What Happens To Your Body When You Eat Too Much Of Eggs Every Day.