ಒಂದು ಲೋಟ ಮಜ್ಜಿಗೆ ಕುಡಿದರೆ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೆ ಹೋಗುತ್ತವೆ!

23-02-22 08:56 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಮನೆಯಲ್ಲಿಯೇ ಮಾಡಿದ ಮಜ್ಜಿಗೆಯ ಆರೋಗ್ಯ ಪ್ರಯೋಜನಗಳು ಒಂದಾ ಎರಡಾ?

ಚಳಿಗಾಲದ ಸೀಸನ್ ನಿಧಾನಕ್ಕೆ ಕಮ್ಮಿ ಆಗುತ್ತಾ ಬರುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆಯ ನಂತರ ಬಿಸಿಲಿನ ತಾಪ ನಿಧಾನಕ್ಕೆ ಏರಿಕೆ ಕಾಣುತ್ತಿದೆ. ಈ ಸಮಯದಲ್ಲಿ ಹೊರಗಡೆ ಕಾಲಿಟ್ಟರೆ ಮಟ ಮಟ ಮಧ್ಯಾಹ್ನದ ಬಿಸಿಲು, ವಿಪರೀತ ಬಾಯರಿಕೆ, ಶಕೆ ಹಾಗೂ ಬೆವರಿನ ಸಮಸ್ಯೆ ಕಾಡಲು ಶುರುವಾಗಿದೆ. ಇನ್ನು ಮಧ್ಯಾಹ್ನ ಸಮಯದಲ್ಲಿ ಅಂತೂ ಹೊರಗಡೆ ಹೋದರೆ, ನೆತ್ತಿಯ ಭಾಗದಲ್ಲಿ ಸುಡುವಂತಹ ಬಿಸಿಲಿನ ಅನುಭವ ಉಂಟಾಗುತ್ತಿದೆ, ಜೊತೆಗೆ ನಮ್ಮ ದೇಹದ ತಾಪಮಾನ ಕೂಡ ಏರುಪೇರಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಬೇಸಿಗೆ ಕಾಲ ಹತ್ತಿರವಾಗುತ್ತಿದೆ. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಾವು ಆರೋಗ್ಯಕಾರಿ ಪಾನೀಯಗಳ ಮೊರೆ ಹೋಗಬೇಕಾಗಿದೆ. ಇದಕ್ಕಾಗಿ ಪ್ರತಿದಿನ ಒಂದೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಮಜ್ಜಿಗೆ ಕುಡಿಯುವುದರ ಆರೋಗ್ಯ ಪ್ರಯೋಜನಗಳು ಯಾವುದು ಎಂಬುದನ್ನು ನೋಡೋಣ ಬನ್ನಿ...

ಒಳ್ಳೆಯ ಕೊಬ್ಬಿನಾಂಶ ಈ ಪಾನೀಯದಲ್ಲಿದೆ

Masala Buttermilk Recipe – Awesome Cuisine

ಮನೆಯಲ್ಲಿಯೇ ಹಾಲಿಗೆ ಹೆಪ್ಪು ಹಾಕಿ ಮಾಡಿದ ಮಜ್ಜಿಗೆಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶವನ್ನು ಒಳಗೊಂಡಿದೆ. ಹೀಗಾಗಿ ದೇಹದ ತೂಕ ಇಳಿಸುವವರಿಗೆ ಇದು ಸಹಕಾರಿಯಾದ ಪಾನೀಯ ಎಂದು ಕರೆಯಬಹುದು, ಇನ್ನು ಪ್ರತಿದಿನ ಒಂದೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಟ್ಟುಕೊಂಡರೆ ರಕ್ತದೊತ್ತಡದ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಹೃದಯದ ಸಮಸ್ಯೆನೂ ಕಡಿಮೆ ಆಗುತ್ತದೆ.

ಮಜ್ಜಿಗೆಯಲ್ಲಿ ವಿಶೇಷ ಬಗೆಯ ಪ್ರೋಟಿನ್ ಅಂಶ ಇದೆ

Why Should You Drink Buttermilk in Summer? | The Times of India

  • ತಜ್ಞರೇ ಹೇಳುವ ಪ್ರಕಾರ, ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಆದಷ್ಟು ಪ್ರೋಟೀನ್ ಅಂಶ ಹೆಚ್ಚಿರುವ ಆಹಾರಗಳಿಗೆಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಉದಾಹರಣೆಗೆ ಹಣ್ಣು ತರಕಾರಿಗಳು, ಮೊಸರು, ಹಾಲು, ಮೊಟ್ಟೆ, ಮೀನು ಚಿಕನ್ ಇವುಗಳನ್ನೆಲ್ಲಾ ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ ಅಚ್ಚುಕಟ್ಟಾಗಿ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.
  • ಇನ್ನು ಪ್ರೋಟೀನ್ ಅಂಶ ಹೆಚ್ಚಿರುವ ಮಜ್ಜಿಗೆಯ ವಿಷಯಕ್ಕೆ ಬರುವುದಾದರೆ, ರಕ್ತದ ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕೂಡ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೃದಯದ ಆರೋಗ್ಯಕ್ಕೆ ಕೂಡ ಸಮಸ್ಯೆ ಎದುರಾಗುವುದಿಲ್ಲ. ಹೀಗಾಗಿ ಬೇಸಿಗೆಯ ಸಮಯದಲ್ಲಿ ಪ್ರತಿ ದಿನ ಒಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

 ದೇಹದ ತೂಕ ಇಳಿಸಿಕೊಳ್ಳಲು

5 healthy diet mistakes that hamper weight loss | Health - Hindustan Times

ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು, ಮಧ್ಯಾಹ್ನದ ಊಟದ ಬಳಿಕ  ದಿನಕ್ಕೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಏಕೆಂದರೆ ಇದು ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವ ಜೊತೆಗೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಹಾಗೆ ಮಾಡುತ್ತದೆ. ಇದರಿಂದಾಗಿ ಅತಿಯಾಗಿ ತಿನ್ನುವ ಬಯಕೆ ಕಡಿಮೆ ಆಗುವುದರಿಂದ, ಕ್ರಮೇಣವಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.

ನಮ್ಮ ತ್ವಚೆಗೆ ತುಂಬಾ ಸಹಾಯಕ

10 Tips For Healthy Skin | Eminence Organic Skin Care

  • ಮಜ್ಜಿಗೆಯೂ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಕಾಂತಿಯನ್ನು ಕೂಡ ಹೆಚ್ಚಿಸಲು ನೆರವಾಗುತ್ತದೆಯಂತೆ! ಇದಕ್ಕೆ ಮುಖ್ಯ ಕಾರಣ ಮಜ್ಜಿಗೆಯಲ್ಲಿಅಧಿಕ ಪ್ರಮಾಣದಲ್ಲಿ ಕಂಡುಬರುವ ಆಲ್ಫಾ ಹೈಡ್ರಾಕ್ಸಿ ಎನ್ನುವ ಆಮ್ಲ, ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
  • ಹೀಗಾಗಿ ತ್ವಚೆಯ ಮೇಲೆ ಮೂಡುವ ಮೊಡವೆ ಗುಳ್ಳೆಗಳು, ನೆರಿಗೆ, ಸುಕ್ಕುಗಳು ಮತ್ತು ಗೆರೆಗಳು ನೈಸರ್ಗಿಕವಾಗಿ ಮಾಯವಾಗಿ ಮುಖದ ಸೌಂದರ್ಯ ಹೆಚ್ಚಾಗಬೇಕೆಂದರೆ, ಪ್ರತಿದಿನ ನಿಯಮಿತವಾಗಿ ಮಜ್ಜಿಗೆಯನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಕೂಡ ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಅಜೀರ್ಣ ಸಮಸ್ಯೆ ಹೋಗಲಾಡಿಸುತ್ತದೆ 

7 Things to Know About Living with Irritable Bowel Syndrome | Medanta

  • ಕೆಲವೊಮ್ಮೆ ನಾವು ಆಹಾರ ಸೇವನೆ ಮಾಡುವ ವಿಧಾನದಲ್ಲಿ ಸ್ವಲ್ಪ ಏರು-ಪೇರಾದರೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಅದರಲ್ಲೂ ಕೆಲವೊಮ್ಮೆ ಎಣ್ಣೆ ಅಂಶ ಹೆಚ್ಚಿರುವ ಆಹಾರಗಳನ್ನು ಜಾಸ್ತಿ ಸೇವನೆ ಮಾಡಿದರಂತೂ ಅಜೀರ್ಣ ಸಮಸ್ಯೆಗಳನ್ನು ಉಂಟು ಮಾಡುವ ಸಮಸ್ಯೆಗಳು ಕಾಡಲು ಶುರುವಾಗಿಬಿಡುತ್ತದೆ.
  • ಹಾಗಾಗಿ ಆದಷ್ಟು ದೇಹಕ್ಕೆ ಹಿತಕರವಾದ ಆರೋಗ್ಯಕಾರಿ ಆಹಾರಗಳ ಸೇವನೆ ಮಾಡುವುದರ ಜೊತೆಗೆ ಊಟದ ಬಳಿಕ ಒಂದೊಂದು ಗ್ಲಾಸ್ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ನಾವು ಸೇವನೆ ಮಾಡಿದ ಆಹಾರದಿಂದ ಉಂಟಾದ ಎದೆಯುರಿ, ಹೊಟ್ಟೆ ಉಬ್ಬರ ಮತ್ತುಗ್ಯಾಸ್ಟ್ರಿಕ್ ಸಮಸ್ಯೆಗಳೆಲ್ಲಾಒಂದೊಂದಾಗಿ ದೂರವಾಗುತ್ತದೆ. ಅಷ್ಟೇ ಅಲ್ಲದೇ ಜೀರ್ಣಕ್ರಿಯೆ ಪ್ರಕ್ರಿಯೆ ಕೂಡ ಸರಾಗವಾಗಿ ನಡೆಯುತ್ತದೆ.

ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು 

Bone Density Testing

  • ಹಾಲಿನ ಪ್ರತಿರೂಪವಾದ ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಅಂಶಕ್ಕೆ ಯಾವುದೇ ಕೊರತೆ ಇಲ್ಲ! ಹೀಗಾಗಿ ದಿನನಿತ್ಯ ಒಂದೊಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಮೂಳೆಗಳ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಬಹುದು.
  • ಇನ್ನು ಮೊದಲೇ ಹೇಳಿದ ಹಾಗೆ ಈ ಪಾನೀಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುವುದರಿಂದ, ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರು ಕೂಡ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಇನ್ನು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುವ ಕೀಲು ನೋವು, ಮಂಡಿ ನೋವು ಸಮಸ್ಯೆ ಇದ್ದವರು ಆದಷ್ಟು ಊಟದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

Know The Ultimate Reasons Why You Must Drink Buttermilk Everyday During Summer Season.