ಆರೋಗ್ಯ ಟಿಪ್ಸ್: ದಿನಕ್ಕೊಂದು ಲೋಟ ಗೋಡಂಬಿ ಹಾಲು ಕುಡಿಯಿರಿ!

24-02-22 10:54 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಗೋಡಂಬಿ ರುಬ್ಬಿ ಅದನ್ನು ಹಾಲಿನ ಜೊತೆಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಸಣ್ಣ ವಯಸ್ಸಿನಿಂದಲೂ ಅಷ್ಟೇ, ನಮಗೆ ದನದ ಹಾಲು ಕುಡಿದೇ ಅಭ್ಯಾಸವಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಇರುವಾಗ ಮನೆಯಲ್ಲಿರುವ ನಮ್ಮ ಪೋಷಕರು ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲನ್ನು ಕೊಟ್ಟು ಮಲಗಿಸುತ್ತಿದ್ದರು. ಆದರೆ ದೊಡ್ಡವರಾಗುತ್ತಿದ್ದಂತೆ ಇಂತಹ ಒಳ್ಳೆಯ ಅಭ್ಯಾಸವನ್ನು ನಾವೇ ಕೈಬಿಟ್ಟೆವು!

ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಇಂದಿನ ದಿನಗಳಲ್ಲಿ ಬದಲಾದ ನಮ್ಮ ಜೀವನಶೈಲಿಯ ಜೊತೆಗೆ ಆಹಾರಕ್ರಮಗಳು. ಇದರಿಂದಾಗಿ ನಮ್ಮ ದೇಹದ ಆರೋಗ್ಯ ಕೂಡ ಸಾಕಷ್ಟು ಹದಗೆಡುತ್ತಿದೆ. ಪ್ರಮುಖವಾಗಿ ಹೃದಯದ ಕಾಯಿಲೆಗಳನ್ನು ಅನುಭವಿಸುತ್ತಿರುವ ಜನರು ಈ ನಡುವೆ ಹೆಚ್ಚಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆ ಇದಕ್ಕೆ ಒಂದು ನೆಪ ಅಷ್ಟೇ. ಒಟ್ಟಾರೆಯಾಗಿ ಜನರು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ.

ಹೀಗಾಗಿ ಇಂದಿನ ದಿನಗಳಲ್ಲಿಆರೋಗ್ಯಕರವಾದ ಜೀವನ ನಡೆಸಬೇಕೆಂದರೆ, ದಿನನಿತ್ಯ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಹಾಗಾಗಿ ಪ್ರತಿದಿನ ಕುಡಿಯುವ ಹಾಲಿಗೆ, ಎರಡು ಮೂರು ಗೋಡಂಬಿ ಬೀಜಗಳನ್ನು ರುಬ್ಬಿ, ಹಾಲಿನ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡಿದರೆ ಅದರಿಂದ ತುಂಬಾನೇ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷಿಸ ಬಹುದು. ಬನ್ನಿ ಇದರ ಸಂಪೂರ್ಣ ಪ್ರಯೋಜನಗಳ ಬಗ್ಗೆ ನೋಡೋಣ..

ಗೋಡಂಬಿ ಬೀಜಗಳು ದುಬಾರಿ ಆದರೂ ಆರೋಗ್ಯಕ್ಕೆ ಪ್ರಯೋಜನಕಾರಿ!

10 Nutrition and Health Benefits of Cashew Milk

  • ಡ್ರೈ ಫ್ರೂಟ್ಸ್‌ಗಳ ಬೆಲೆ ತುಂಬಾನೇ ದುಬಾರಿ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಅಂತೆಯೇ ಡ್ರೈ ಫ್ರೂಟ್ಸ್‌ಗಳ ಪಂಗಡಕ್ಕೆ ಸೇರಿದ ಈ ಗೋಡಂಬಿ ಬೀಜಗಳು ಕೂಡ ಅಷ್ಟೇ ತುಂಬಾನೇ ದುಬಾರಿ. ಹೀಗಾಗಿ ನಾವೆಲ್ಲಾ ದಿನನಿತ್ಯದ ಬದುಕಿನಲ್ಲಿ, ನಾವು ಹೆಚ್ಚಾಗಿ ಗೋಡಂಬಿಯನ್ನು ಬಳಕೆ ಮಾಡುವುದಿಲ್ಲ.
  • ಹೆಚ್ಚಾಗಿ ಯಾವುದಾದರೂ ಹಬ್ಬ-ಹರಿದಿನಗಳಲ್ಲಿ ಅಥವಾ ಕೇವಲ ವಿಶೇಷ ಬಗ್ಗೆ ಅಡುಗೆ ಪದಾರ್ಥಗಳನ್ನು ತಯಾರು ಮಾಡಿದಾಗ ಮಾತ್ರ ನಿಯಮಿತವಾಗಿ ಗೋಡಂಬಿ ಬೀಜಗಳು ಬಳಕೆ ಮಾಡುತ್ತೇವೆ. ಅದು ಬಿಟ್ಟರೆ ಗೋಡಂಬಿ ಬೀಜಗಳು ತೆಗೆದುಕೊಳ್ಳಲು ಹಿಂಜರಿಯುತ್ತೇವೆ

ದಿನಕ್ಕೊಂದು ಗ್ಲಾಸ್ ಗೋಡಂಬಿ ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ

Benefits of 'Cashew Milk' and How to Prepare It

ಮಿತವಾಗಿ ದಿನಕ್ಕೆ ಒಮ್ಮೆ ಗೋಡಂಬಿ ಹಾಕಿ ಮಾಡಿದ ಹಾಲು ಕುಡಿಯುವುದರಿಂದ, ಇದರಲ್ಲಿರುವ ಅಧಿಕ ಪ್ರಮಾಣದ ಮೆಗ್ನೀಷಿಯಂ ಮತ್ತು ಸೆಲೆನಿಯಂ, ಫಾಸ್ಪರಸ್, ಜಿಂಕ್, ಇನ್ನಿತರ ಪೌಷ್ಟಿಕಾಂಶಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

The Importance of Water for a Healthy Heart - Absopure

  • ಆರೋಗ್ಯ ತಜ್ಞರೇ ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸರಿಯಾದ ಜೀವನಶೈಲಿ, ಆಹಾರ ಕ್ರಮ, ಅನುಸರಿಸದೇ ಇರುವುದು, ಜೊತೆಗೆ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದು ಪ್ರಮುಖವಾಗಿ ಹೃದಯದ ಕಾಯಿಲೆಗಳು ಬರಲು ಕಾರಣವಾಗಿದೆ.
  • ಹಾಗಾಗಿ ಹೃದಯದ ಸಮಸ್ಯೆಯಿಂದ ದೂರ ಇರಬೇಕೆಂದರೆ, ಆರೋಗ್ಯಕಾರಿ ಜೀವನಶೈಲಿ, ಜೊತೆಗೆ ಆರೋಗ್ಯಕಾರಿ ಆಹಾರಕ್ರಮವನ್ನು ಅನುಸರಿಸಬೇಕು. ಜೊತೆಗೆ ಹೃದಯದ ಎಲ್ಲಾ ಸಮಸ್ಯೆಗಳನ್ನು ದೂರ ಇರಿಸಬೇಕು ಎಂದರೆ, ಪ್ರತಿದಿನ ಒಂದು ಗ್ಲಾಸ್ ಗೋಡಂಬಿ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
  • ನಿಮಗೆ ಗೊತ್ತಿರಲಿ, ಗೋಡಂಬಿ ಬೀಜಗಳಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನಿಸಿಯಂ ಅಂಶ ಹೇರಳವಾಗಿ ಸಿಗುತ್ತಿರುವುದರಿಂದ ಇದು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನಿಮ್ಮ ಕುಟುಂಬದ ವೈದ್ಯರ ಅನುಮತಿಯನ್ನು ಪಡೆದು ಈ ವಿಧಾನವನ್ನು ಮುಂದುವರಿಸಬಹುದು.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುತ್ತದೆ 

Diabetic Fasting Blood Sugar vs. Oral Glucose Tolerance vs. A1C | Prospect  Medical Systems

  • ಮಧುಮೇಹ ಸಮಸ್ಯೆ ಇದ್ದವರಿಗೂ ಕೂಡ ಈ ಗೋಡಂಬಿ ಹಾಲು ಬಹಳ ಒಳ್ಳೆಯದು. ನಿಯಮಿತವಾಗಿ ಈ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಮುಂದಿನ ದಿನಗಳಲ್ಲಿ ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದರ ಜೊತೆಗೆ ಮಧುಮೇಹದ ಲಕ್ಷಣಗಳು ಕೂಡ ಹದ್ದುಬಸ್ತಿನಲ್ಲಿರುತ್ತದೆ
  • ವಿಶೇಷವಾಗಿ ಗೋಡಂಬಿ ಬೀಜಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಗುಣವಿದೆ. ಹಾಗಾಗಿ ಇದನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.
  • ಇನ್ನು ಈ ಬಗ್ಗೆ ಅಧ್ಯಾಯನ ನಡೆಸಿದ ಸಂಶೋಧಕರು, ಧನಾತ್ಮಕವಾದ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಹೇಳುವ ಪ್ರಕಾರ ಗೋಡಂಬಿ ಬೀಜಗಳನ್ನು ಬೆರೆಸಿದ ಹಾಲಿನಲ್ಲಿ ಲ್ಯಾಕ್ಟೋಸ್ ಅಂಶ ಇಲ್ಲದೆ ಇರುವುದರಿಂದ ಹಾಗೂ ಕಡಿಮೆ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್ ಅಂಶಗಳು ದೇಹಕ್ಕೆ ಲಭ್ಯವಿರುವುದರಿಂದ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ

  • ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ದೇಹದ ರೋಗನಿರೋಧಕ ಶಕ್ತಿ ಕೂಡ ಅಷ್ಟೇ ಸ್ಟ್ರಾಂಗ್ ಆಗಿ ಇರಬೇಕಾಗುತ್ತದೆ. ಇಲ್ಲಾಂದರೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಕೂಡ ಆಸ್ಪತ್ರೆಗಳಿಗೆ ಓಡುವ ಸನ್ನಿವೇಶ ಎದುರಾಗಬಹುದು! ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿಯ ಮಹತ್ವ ಏನೆಂಬುದು ನಮಗೆಲ್ಲರಿಗೂ ಅರಿವಾಗಿದೆ ಅಲ್ವಾ?
  • ಹೀಗಾಗಿ ಪ್ರತಿ ದಿನ ಒಂದು ಲೋಟ ಗೋಡಂಬಿ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ. ಮುಖ್ಯವಾಗಿ ಈ ಹಾಲಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಮತ್ತು ಜಿಂಕ್ ಅಂಶ ಯಥೇಚ್ಛವಾಗಿ ಕಂಡು ಬರುವ ಕಾರಣದಿಂದ, ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುವ ಹೊಣೆಗಾರಿಕೆಯನ್ನು ವಹಿಸುತ್ತದೆ.

ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು 

Eye-Opening Tips for Vision Health | RxWiki

  • ನಾವೆಲ್ಲರೂ ದೇಹದಲ್ಲಿನ ಇತರ ಎಲ್ಲಾ ಅಂಗಗಳಿಗಿಂತಲೂ ಕಣ್ಣುಗಳಿಗೆ ವಿಶೇಷ ಪ್ರಮುಖ್ಯತೆ ಯನ್ನು ನೀಡುತ್ತೇವೆ. ಆದರೆ ಹೆಚ್ಚಿನವರಲ್ಲಿ ನಾನಾ ಕಾರಣಗಳಿಂದಾಗಿ ಸಣ್ಣ ವಯಸ್ಸಿಗೆ ಅಥವಾ ಮಧ್ಯ ವಯಸ್ಸಿನಲ್ಲಿ ಕಣ್ಣುಗಳು ಮಂಜಾಗುವುದು ಅಥವಾ ಕಣ್ಣಿನಲ್ಲಿ ಪೊರೆಯಂತಹ ಸಮಸ್ಯೆಗಳು ಕಂಡುಬರಲು ಶುರುವಾಗುತ್ತದೆ.
  • ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುವವರು ನಿಯಮಿತವಾಗಿ ಗೋಡಂಬಿ ಹಾಲಿನ ಸೇವನೆಯನ್ನು ಮಾಡಿಕೊಂಡರೆ, ಮುಂದಿನ ದಿನಗಳಲ್ಲಿ ಕಣ್ಣುಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ!

Benefits Of Drinking Cashew Milk Everyday To Boost Immunity And Few More Health Benefits