ದಾಳಿಂಬೆ ಸಿಪ್ಪೆ ಬಿಸಾಡಿದರೆ, ನಿಮಗೇ ಲಾಸ್ ನೋಡಿ!!

25-02-22 11:18 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ದಾಳಿಂಬೆ ಹಣ್ಣು ಮಾತ್ರವಲ್ಲ ಇದರ ಸಿಪ್ಪೆ ಕೂಡ ಅಷ್ಟೇ ಪ್ರಯೋಜನಕಾರಿ.

ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಈ ಹಣ್ಣುಗಳು ಸ್ವಲ್ಪ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯದ ವಿಷ್ಯಕ್ಕೆ ಬಂದಾಗ, ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ವಿಟಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಈ ಹಣ್ಣಿನಲ್ಲಿ ಸಿಗುತ್ತಿರುವುದರಿಂದ, ಹಲವಾರು ರೀತಿಯ ರೋಗಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವಿಶೇಷವಾಗಿ ಬೇರೆಲ್ಲಾ ಹಣ್ಣುಗಳಂತೆ ದಾಳಿಂಬೆ ಹಣ್ಣು ಕೂಡ ಹೆಚ್ಚಾಗಿ ವರ್ಷಪೂರ್ತಿ ಸಿಗುವ ಕಾರಣ, ನಾವೆಲ್ಲರು ಹೆಚ್ಚಾಗಿ ಈ ಹಣ್ಣನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುತ್ತೇವೆ. ಆದರೆ ದಾಳಿಂಬೆ ಹಣ್ಣಿನ ಸಿಪ್ಪೆಯ ಬಗ್ಗೆ ಮರೆತುಬಿಡುತ್ತೇವೆ! ಇಲ್ಲಿಯೇ ನೋಡಿ, ನಾವು ಮಾಡುತ್ತಿರುವುದು ದೊಡ್ಡ ತಪ್ಪು! ಹಾಗಾದರೆ ಇನ್ನು ಮುಂದೆ ಈ ಹಣ್ಣಿನ ಬೀಜಗಳನ್ನು ತಿಂದ ಬಳಿಕ ಇದರ ಸಿಪ್ಪೆಯನ್ನು ಬಿಸಾಡಲು ಹೋಗಬೇಡಿ, ಇದರಿಂದ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ...

ಮೊಡವೆಗಳ ಸಮಸ್ಯೆಗೆ

One of these COSRX Acne Pimple Master Patches sells every 25 seconds - and  they cost just $8 | Daily Mail Online

ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ಚರ್ಮದ ಭಾಗದಲ್ಲಿ ಕಂಡು ಬರುವ ಮೊಡವೆ, ಕೆಂಪು ಗುಳ್ಳೆಗಳು, ದದ್ದುಗಳು, ತುರಿಕೆಯಂತಹ ಸಮಸ್ಯೆಗಳು ಕೂಡಲೇ ಕಮ್ಮಿ ಆಗುತ್ತದೆ

ನೀವು ಹೀಗೆ ಮಾಡಿದರೆ ಸಾಕು

ಮೊದಲಿಗೆ ದಾಳಿಂಬೆ ಹಣ್ಣಿನ ಬೀಜಗಳನ್ನು ಬೇರ್ಪಡಿಸಿದ ಬಳಿಕ, ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ, ಒಂದೆರಡು ದಿನಗಳವರೆಗೆ ಸರಿಯಾಗಿ ಒಣಗಲು ಬಿಡಿ. ನಂತರ ಒಂದು ಬಿಸಿಯಾದ ತವಾದ ಮೇಲೆ ರೋಸ್ಟ್ ಮಾಡಿಕೊಳ್ಳಿ. ಆಮೇಲೆ ಇದನ್ನು ತಣ್ಣಗಾಗಲು ಬಿಡಿ

ಒಮ್ಮೆಈ ಸಿಪ್ಪೆ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಈ ದಾಳಿಂಬೆ ಸಿಪ್ಪೆಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ಇನ್ನು ಈ ಮಿಶ್ರಣಕ್ಕೆ ಒಂದು ಚಮಚ ಆಗುವಷ್ಟು ನಿಂಬೆ ರಸ ಮಿಶ್ರಣ ಮಾಡಿ ಚೆನ್ನಾಗಿ ಕಲಸಿ, ಪೇಸ್ಟ್ ಮಾಡಿಕೊಂಡು ನಿಮ್ಮ ಮೊಡವೆಗಳ ಮೇಲೆ ಇದನ್ನು ಹಚ್ಚಿ. ಸುಮಾರು ೧೦ ನಿಮಿಷ ಆಗುವಷ್ಟು ಹೊತ್ತು ಹಾಗೆಯೇ ಒಣಗಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ವಯಸ್ಸಾಗುವಿಕೆಯನ್ನು ತಡೆಯುತ್ತದೆ

Anti Ageing Treatment: Don't wait till you get wrinkles: Here's when you  should start your anti-ageing treatment

ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಸಣ್ಣ ವಯಸ್ಸಿಗೆಯೇ ಮುಖದ ಚರ್ಮದ ಮೇಲೆ ಸುಕ್ಕುಗಳು ಕಂಡು ಬರುವ ಕಾರಣ ವಯಸ್ಸಾದವರ ಹಾಗೆ ಕಾಣುತ್ತಾರೆ. ಆದರೆ ಈ ಸಮಸ್ಯೆಗೆ ದಾಳಿಂಬೆ ಸಿಪ್ಪೆಗಳು ಪರಿಹಾರ ಒದಗಿಸುತ್ತವೆ. ಸಣ್ಣ ವಯಸ್ಸಿನಲ್ಲಿ ವಯಸ್ಸಾದವರ ಹಾಗೆ ಕಾಣುವ ಪ್ರಕ್ರಿಯೆಯನ್ನು ಇದು ದೂರ ಮಾಡುತ್ತದೆ.

ಇದಕ್ಕಾಗಿ ನೀವು ಹೀಗೆ ಮಾಡಿ

  • ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಆ ಸಿಪ್ಪೆಯನ್ನು ಮಿಕ್ಸಿಯ ಸಹಾಯದಿಂದ ಚೆನ್ನಾಗಿ ಪೌಡರ್ ರೀತಿ ಮಾಡಿಕೊಳ್ಳಿ. ಇನ್ನು ಈ ಪೌಡರ್‌ಗೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ. (ಒಂದು ವೇಳೆ, ನಿಮ್ಮದು ಎಣ್ಣೆಯುಕ್ತ ತ್ವಚೆ ಆಗಿದ್ದರೆ ಈ ಮಿಶ್ರಣಕ್ಕೆ ರೋಸ್ ವಾಟರ್ ಬಳಸಬಹುದು)
  • ಇನ್ನು ಈ ಪೇಸ್ಟ್‌ನ್ನು ಮುಖದ ಮೇಲೆ ಹಚ್ಚಿ, ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಒಣಗಲು ಬಿಡಿ. ನಂತರ ಊಗುರು ಬೆಚ್ಚಗೆ ಇರುವ ನೀರಿನ ಸಹಾಯದಿಂದ ತ್ವಚೆಯನ್ನು ತೊಳೆದುಕೊಳ್ಳಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿ

ಹೃದಯ ಸಮಸ್ಯೆಗಳಿಂದ ದೂರ ಇರಬಹುದು

The Importance of Water for a Healthy Heart - Absopure

ಒಂದು ಟೀ ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಹಾಕಿ, ಮಿಕ್ಸ್ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ, ಹೃದಯದ ಸಮಸ್ಯೆಗಳಿಂದ ದೂರವಿರಬಹುದು.

ಗಂಟಲು ನೋವಿಗೆ ರಾಮಬಾಣ

What Does Sore Throat Have To Do With COVID-19? | KERA News

  • ಸುಮಾರು ಎರಡು ಟೇಬಲ್ ಆಗುವಷ್ಟು ದಾಳಿಂಬೆ ಸಿಪ್ಪೆಯ ಪೌಡರ್‌ನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಸೋಸಿಕೊಂಡು, ಪಕ್ಕದಲ್ಲಿ ಇಟ್ಟುಬಿಡಿ.
  • ಒಮ್ಮೆ ಈ ಪಾನೀಯ ತಣ್ಣಗಾದ ಬಳಿಕ, ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ, ಗಂಟಲು ನೋವು ಮತ್ತು ಗಂಟಲಿನ ಅಸ್ವಸ್ಥತೆ ಮಾಯವಾಗುತ್ತದೆ.

ಹಲ್ಲುಗಳ ಆರೋಗ್ಯಕ್ಕೆ

What Are Teeth Made Of? and 10 other facts about teeth

  • ಉಗುರು ಬೆಚ್ಚಗಿನ ನೀರಿಗೆ, ಒಂದು ಟೇಬಲ್ ಚಮಚ ಆಗುವಷ್ಟು ಒಣಗಿದ ದಾಳಿಂಬೆ ಸಿಪ್ಪೆಯ ಪೌಡರ್‌ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಪ್ರತಿದಿನ ಎರಡು ಬಾರಿ ಇದರಿಂದ ಬಾಯಿ ಮುಕ್ಕಳಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದಾಗಿ ಹಲ್ಲುಗಳ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
  • ಇನ್ನೊಂದು ವಿಧಾನ ಯಾವುದು ಎಂದರೆ ಸ್ವಲ್ಪ ಕರಿಮೆಣಸಿನ ಪುಡಿಯನ್ನು ದಾಳಿಂಬೆ ಸಿಪ್ಪೆಯ ಪುಡಿಯ ಜೊತೆಗೆ ಮಿಕ್ಸ್ ಮಾಡಿ, ಹಲ್ಲುಗಳ ಮೇಲೆ ಬೆರಳುಗಳಿಂದ ಉಜ್ಜಿ. ಸುಮಾರು ಹತ್ತು ನಿಮಿಷಗಳ ಕಾಲ ಕಳೆದ ನಂತರ ತಣ್ಣಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದರಿಂದ ಕೂಡ ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತದೆ.

ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು

List of 10 Bone Strengthening Foods

ಸುಮಾರು ಎರಡು ಟೇಬಲ್ ಚಮಚ ಆಗುವಷ್ಟು ದಾಳಿಂಬೆ ಸಿಪ್ಪೆಯ ಪೌಡರ್‌ನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ, ಆಮೇಲೆ ಇದಕ್ಕೆ ಒಂದು ಟೀ ಚಮಚ ನಿಂಬೆ ರಸ ಹಾಗೂ ಚಿಟಿಕೆಯಷ್ಟು ಉಪ್ಪು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಸಾಕಷ್ಟು ಅನುಕೂಲವಿದೆ.

Dont Throw Pomegranate Peels, Its Having Lots Of Health Benefits.