ಆರೋಗ್ಯ ಟಿಪ್ಸ್: ಗ್ಯಾಸ್ಟ್ರಿಕ್ ಸಮಸ್ಯೆಗೆ ಎಳನೀರು ಬೆಸ್ಟ್ ಮನೆಮದ್ದು

26-02-22 08:44 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಎಳನೀರು ಕುಡಿದರೂ ಸಾಕು, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಬಹುದು

ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವುದು ಮಕ್ಕಳು, ಯುವಕರು ದೊಡ್ಡವರು ಎನ್ನದೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ! ಇದಕ್ಕೆ ಮುಖ್ಯ ಕಾರಣಗಳನ್ನು ನೋಡುವುದಾದರೆ ತಾವು ತಿನ್ನುವಂತಹ ಕೆಲವೊಂದು ಅನಾರೋಗ್ಯಕರ ಆಹಾರ ಪದಾರ್ಥಗಳಿಂದ ಈ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತಿದೆ. ಕೆಲವೊಮ್ಮೆ ಇದು ವಿಪರೀತ ಮಟ್ಟಕ್ಕೆ ಹೋದಾಗ ಎದೆಯುರಿ ಕೂಡ ಕಾಣಿಸಬಲ್ಲದು.

ಕೆಲವೊಮ್ಮೆ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಲೈಟ್ ಆಗಿ ತೆಗೆದುಕೊಳ್ಳುವುದಕ್ಕೂ ಆಗುವುದಿಲ್ಲ. ಯಾಕೆಂದರೆ, ಇದರಿಂದ ಮುಂದೆ ಸಾಕಷ್ಟು ಆರೋಗ್ಯಕಾರಿ ಸಮಸ್ಯೆಗಳು ಕಾಡಲು ಶುರುವಾಗುವ ಸಂಭವ ಜಾಸ್ತಿ ಇರುತ್ತದೆ. ಉದಾಹರಣೆಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಮಲಬದ್ಧತೆ ಸಮಸ್ಯೆ ಕಾಡಬಹುದು.

ಇದರ ಜೊತೆಗೆ ಎದೆಯುರಿ, ವಾಕರಿಕೆ, ವಾಂತಿ ಬೇರೆ! ಆದರೆ ಈ ಸಮಯದಲ್ಲಿ ನಾವು ನೆನಪಿಸಿಕೊಳ್ಳುವುದು ಕೆಲವೊಂದು ಮಾತ್ರೆಗಳನ್ನು! ಆದರೆ ಪ್ರತಿಬಾರಿ ಈ ಸಮಸ್ಯೆ ಉಂಟಾದಾಗ ಇದೇ ರೀತಿ ಮಾಡಲು ಸಾಧ್ಯವೇ? ಇದರಿಂದ ನಾವಾಗಿಯೇ ನಮ್ಮ ಆರೋಗ್ಯಕ್ಕೆ ಅಡ್ಡಪರಿಣಾಮ ಗಳನ್ನು ತಂದುಕೊಳ್ಳುತ್ತಿದ್ದೇವೆ ಎನಿಸುವುದಿಲ್ಲವೇ?

TENDER COCONUT | Home delivery | Order online | BTM Btm 2nd Stage Bangalore

ಗ್ಯಾಸ್ಟ್ರಿಕ್‌ಗೆ ಮಾತ್ರೆ ಹೆಚ್ಚು ತೆಗೆದುಕೊಳ್ಳಬಾರದು

  • ಹೌದು, ತಜ್ಞರು ಹೇಳುವ ಪ್ರಕಾರ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗ ಜಾಸ್ತಿ ಮಾತ್ರೆಗಳನ್ನು ಅಥವಾ ಬೇರೆ ರೀತಿಯ ಔಷಧಿಗಳನ್ನು ಹೆಚ್ಚು ತೆಗೆದು ತೆಗೆದುಕೊಳ್ಳಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಈ ಔಷಧಿಗಳ ಸೈಡ್ ಎಫೆಕ್ಟ್‌ಗಳಿಂದ ಮುಂದಿನ ದಿನಗಳಲ್ಲಿ ಕಿಡ್ನಿಗಳಿಗೆ ತೊಂದರೆ ಉಂಟಾಗುವ ಸಂಭವ ಜಾಸ್ತಿ ಇರುತ್ತದೆಯಂತೆ.
  • ಹಾಗೆಂದು ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹಾಗೆ ಬಿಟ್ಟರೆ ಮುಂದೆ ಆರೋಗ್ಯಕ್ಕೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ! ಇದಕ್ಕಾಗಿ ನೈಸರ್ಗಿಕ ವಿಧಾನದಲ್ಲಿ ಇದನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಬೇಕು. ಇದಕ್ಕಾಗಿ ದಿನಕ್ಕೊಂದು ಎಳನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು

Tender Coconut – Mane Manege

ಎಳನೀರು ಕುಡಿಯಿರಿ

ಎಳನೀರಿನಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ! ಆದರೆ ಬೇಸಿಗೆ ಕಾಲದಲ್ಲಿ ಮಾತ್ರ ಎಳನೀರು ಕುಡಿಯಬೇಕು ಎಂದು ಅಂದು ಕೊಂಡಿರುತ್ತಾರೆ. ಆದರೆ ಚಳಿಗಾಲದಲ್ಲೂ ಎಳನೀರು ಕುಡಿಯಬಹುದು. (ಒಂದು ವೇಳೆ ಶೀತ, ನೆಗಡಿಯಂತಹ ಸಮಸ್ಯೆ ಇದ್ದರೆ ಬೇಡ) ಅದರಲ್ಲಿ ಪ್ರಮುಖವಾಗಿ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ನಿವಾರಣೆಯಾಗುವುದು ಆಗಿರುತ್ತದೆ.

BUY NOW TENDER COCONUT ONLINE in Dubai UAE - farmtopalms.com

ಎಳನೀರಿನ ಪ್ರಯೋಜನಗಳು

  • ಸಾಮಾನ್ಯವಾಗಿ ಹಣ್ಣಿನ ಜ್ಯೂಸ್‌ಕ್ಕಿಂತೂ, ದಿನಕ್ಕೊಂದು ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅಂತರ್ಜಲದ ಜಲವನ್ನು ಹೀರಿ ಕೊಂಡು, ಪ್ರಕೃತಿಯ ಮಡಿಲಲ್ಲಿ ಸೊಂಪಾಗಿ ಬೆಳೆದ ತೆಂಗಿನ ಮರ ನಮಗಾಗಿ ನೀಡುವ ಒಂದು ಅತ್ಯದ್ಭುತ ರುಚಿಕರವಾದ ನೈಸರ್ಗಿಕ ದ್ರವಾಹಾರ ಪದಾರ್ಥ.
  • ಹಾಗಾಗಿ ಇದನ್ನು ಈ ಎಳನೀರನ್ನು ಕೂಡ ಅಮೃತಕ್ಕೆ ಹೋಲಿಸಲಾಗಿದೆ. ಮುಖ್ಯವಾಗಿ ಶೀತ ಜ್ವರದಿಂದ ಬಳಲುತ್ತಿರುವವರನ್ನು ಬಿಟ್ಟು, ಮಕ್ಕಳಿಂದ ಹಿಡಿದು, ವಯಸ್ಸಾದ ವರವರೆಗೂ ಈ ಎಳನೀರಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

Tender Coconut - Tender Coconut Manufacturers, Suppliers & Dealers

ಗ್ಯಾಸ್ಟ್ರಿಕ್ ಸಮಸ್ಯೆಗೆ ಎಳನೀರು ಒಳ್ಳೆಯದು!

  • ಸಾಮಾನ್ಯವಾಗಿ, ನಾವು ಹೊಟ್ಟೆ ತುಂಬಾ ಊಟ ಮಾಡಿದಾಗ ಇಲ್ಲಾಂದರೆ, ಗ್ಯಾಸ್ಟ್ರಿಕ್ ಉಂಟು ಮಾಡುವಂತಹ ತರಕಾರಿಗಳನ್ನು ಸೇವಿಸಿದಾಗ ಅಥವಾ ಕೆಲವೊಮ್ಮೆ ಶೀತ, ನೆಗಡಿ ಉಂಟಾದಾಗ ಮಾತ್ರೆಗಳನ್ನು ನುಂಗಿದಾಗ, ಇವುಗಳ ಅಡ್ಡ ಪರಿಣಾಮಗಳಿಂದಾಗಿ, ಕೆಲವೊಮ್ಮೆ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು ಸಾಮಾನ್ಯ.
  • ಹಾಗಾಗಿ ಇದಕ್ಕೆಲ್ಲಾ ಮಾತ್ರೆಗಳನ್ನು ನುಂಗುವ ಬದಲು, ನೈಸರ್ಗಿಕವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ರೋಗ ಲಕ್ಷಣಗಳನ್ನು ನಿವಾರಣೆ ಮಾಡಿಕೊಳ್ಳಲು ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಪ್ರತಿದಿನ ಊಟ ಆದ ಬಳಿಕ, ಅಂದರೆ ಸುಮಾರು ಅರ್ಧ ಗಂಟೆಯ ನಂತರ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.

Here's why you should consume coconut water in summer | Health News | Zee  News

ಅಧ್ಯಾಯನದ ವರದಿಯ ಪ್ರಕಾರ

  • ಅಧ್ಯಾಯನದ ವರದಿಯ ಪ್ರಕಾರ ಪ್ರತಿ ಎರಡರಿಂದ ಮೂರು ತಿಂಗಳು ನಿರಂತರವಾಗಿ, ಈ ಮೇಲಿನ ಅಭ್ಯಾಸವನ್ನು ಅನುಸರಿಸುವ ರೂಢಿ ಮಾಡಿಕೊಂಡರೆ ದೇಹದಲ್ಲಿ ಪೌಷ್ಟಿಕಾಂಶಗಳ ಗುಣಮಟ್ಟ ಹೆಚ್ಚುತ್ತದೆ.
  • ಇದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇನ್ನು ಯಾವುದೇ ವಯಸ್ಸಿನವರು ಕೂಡ ನಿಯಮಿತವಾಗಿ ಎಳನೀರು ಕುಡಿಯಬಹುದು. ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು ಇನ್ನು ಮುಂದೆ ಪ್ರತಿದಿನ ಎಳನೀರು ಕುಡಿಯಿರಿ.

Drink Tender Coconut To Get Rid Of Gastric Problem Naturally.