ದೇಹದಲ್ಲಿ ವಿಟಮಿನ್ ಡಿ ಅಂಶದ ಸಮಸ್ಯೆ ಆಗಿದ್ದರೆ, ಮಶ್ರೂಮ್ ಸೇವಿಸಿ!

02-03-22 10:01 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ದೇಹದಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗಬೇಕೆಂದರೆ, ಮಿತವಾಗಿ ಮಶ್ರೂಮ್ ಸೇವಿಸಬೇಕಂತೆ!

ಹೆಚ್ಚಾಗಿ ಮಳೆಗಾಲದ ಸಂದರ್ಭಗಳಲ್ಲಿ ಕಾಡುಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುವಂತಹ ಈ ಅಣಬೆ ಅಥವಾ ಮಶ್ರೂಮ್‌ಗಳು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಅಲ್ಲದೇ ಮಳೆಗಾಲದ ಸಮಯದಲ್ಲಿ ಸ್ವಲ್ಪ ಹಗ್ಗದ ಬೆಲೆಯಲ್ಲೂ ಕೂಡ ಎಲ್ಲಾ ಕಡೆ ಸಿಗುತ್ತದೆ.

ಇನ್ನು ಬೇರೆ ಸಮಯದಲ್ಲೂ ಅಣಬೆ ಅಥವಾ ಮಶ್ರೂಮ್ ತಿನ್ನಬೇಕು ಎಂದರೆ, ಸೂಪರ್‌ ಮಾರ್ಕೆಟ್‌‌ಗಳಲ್ಲಿ ಇಲ್ಲಾಂದರೆ ದೊಡ್ಡ ದೊಡ್ಡ ಫುಡ್ ಮಾಲ್ ಗಳಲ್ಲಿ, ಆನ್‌‌ಲೈನ್‌ಗಳಲ್ಲಿ ಲಭ್ಯವಿರುತ್ತದೆ. ಆದರೆ ಬೆಲೆ ಮಾತ್ರ ದುಪ್ಪಟ್ಟು ಆಗಿರುತ್ತದೆ. ಮುಖ್ಯವಾಗಿ ಇದರಲ್ಲಿ ಯಥೇಚ್ಛವಾಗಿ ಪೋಷಕಾಂಶಗಳು ಇರುವ ಕಾರಣ, ಪ್ರತಿಯೊಬ್ಬರ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು.

ಆದರೆ ಹೆಚ್ಚಿನ ಜನರು ಇದರಲ್ಲಿರುವ ಆರೋಗ್ಯ ಲಾಭಗಳು ತಿಳಿಯದೆ ಇರುವ ಕಾರಣದಿಂದಾಗಿ ಇದರಿಂದ ದೂರ ಉಳಿಯುವವರೇ ಜಾಸ್ತಿ! ವಿಶೇಷವಾಗಿ ಇದರಲ್ಲಿ ಪ್ರೋಟೀನ್, ವಿಟಮಿನ್‌ಗಳು ಹಾಗೂ ನಾರಿನಾಂಶ ಹಾಗೂ ಖನಿಜಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಕೂಡ ಸಮೃದ್ಧವಾಗಿರುವುದರಿಂದ ಆರೋಗ್ಯವೃದ್ಧಿಗೆ ಬಹಳ ಒಳ್ಳೆಯದು.

ವಿಟಮಿನ್ ಡಿ ಕೊರತೆ ಸಮಸ್ಯೆ ನಿವಾರಿಸುತ್ತದೆ

Top 5 health benefits of mushrooms | BBC Good Food

  • ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದರೆ, ಸಡನ್ ಆಗಿ ರೋಗನಿರೋಧಕ ಶಕ್ತಿಕೂಡ ಕಡಿಮೆ ಆಗುತ್ತಾ ಹೋಗುತ್ತದೆ. ಪರಿಣಾಮವಾಗಿ ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡಲು ಶುರುವಾಗುತ್ತದೆ. ಅಷ್ಟೇ ಅಲ್ಲದೇ ತಲೆಸುತ್ತು, ಆಯಸ, ತಲೆನೋವು ಇವೆಲ್ಲಾ ಲಕ್ಷಣಗಳು ಕೂಡ ಕಾಡಲು ಶುರು ವಾಗುತ್ತದೆ. ಇನ್ನು ಜಾಸ್ತಿ ಹೊತ್ತು ಕುಳಿತು ಕೆಲಸ ಮಾಡುವವರಲ್ಲಿ ಬೆನ್ನು ನೋವಿನ ಸಮಸ್ಯೆಗೂ ಕೂಡ ಕಾರಣವಾಗುತ್ತದೆ. ಇವೆಲ್ಲಾ ವಿಟಮಿನ್ ಡಿ ಅಂಶ ಕೊರತೆಯ ಲಕ್ಷಣವಾಗಿದೆ.
  • ವಿಟಮಿನ್ ಡಿ ಅಂಶ ಹೆಚ್ಚಿಸಿಕೊಳ್ಳಲು ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಸೂರ್ಯನ ಎಳೆಬಿಸಿಲಿನಲ್ಲಿ ವಾಕಿಂಗ್ ಮಾಡುವುದು ಬಹಳ ಒಳ್ಳೆಯದು. ಆದರೆ ಈ ಒತ್ತಡದ ಜೀವನಶೈಲಿಯ ಕಾರಣದಿಂದಾಗಿ ಹೆಚ್ಚಿನವರಿಗೆ ಇದನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ.

ವಿಟಮಿನ್ ಡಿ ಕೊರೆತೆಯನ್ನು ಮಶ್ರೂಮ್ ನೀಗಿಸುತ್ತದೆ!!

606,466 Mushroom Stock Photos, Pictures & Royalty-Free Images - iStock

ಹೌದು! ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ ಡಿ ಅಂಶ ಹೊಂದಿರುವ ಈ ಮಶ್ರೂಮ್‌ನ್ನು ವಾರಕ್ಕೆ ಒಮ್ಮೆಯಾದರೂ ಮಿತವಾಗಿ ಸೇವನೆ ಮಾಡುವುದರಿಂದ, ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ದೇಹದಲ್ಲಿ ವಿಟಮಿನ್ ಡಿ ಅಂಶದ ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಆದರೆ ಆಹಾರ ಕ್ರಮದಲ್ಲಿ ಮಶ್ರೂಮ್ ಬಳಸುವ ಮುನ್ನ ಸರಿಯಾಗಿ ನೀರಿನಲ್ಲಿ, ಸ್ವಚ್ಛ ಮಾಡಿ ಬೇಯಿಸಿ ತಿನ್ನಬೇಕು ಅಷ್ಟೇ!

ಅಧ್ಯಯನ ಏನು ಹೇಳುತ್ತದೆ?

Mushroom-picking app could be the death of you, French are warned | World |  The Times

  • ಸಂಶೋಧನೆ ಕೈಗೊಂಡ ತಜ್ಞರು, ಸುಮಾರು ಮೂರರಿಂದ ನಾಲ್ಕು ಬಗೆಯ ಅಣಬೆ ಅಥವಾ ಮಶ್ರೂಮ್‌ ಗಳನ್ನು ವಿವಿಧ ಪರಿಸರಗಳಲ್ಲಿ ಪರೀಕ್ಷೆಗೆ ಒಳಪಡಿಸಿದರು ಅಲ್ಲದೇ ಈ ಸಮಯದಲ್ಲಿ ಕೆಲವೊಂದು ಮಶ್ರೂಮ್‌ಗಳಿಗೆ ಸೂರ್ಯನ ಅತಿನೇರಳೆ ಕಿರಣಗಳನ್ನು ಪ್ರಾಯೋಗಿಕ ಶೈಲಿಯಲ್ಲಿ ನಿರಂತರವಾಗಿ ಹರಿಬಿಡಲಾಯಿತು.
  • ಕೊನೆಗೆ ಈ ಪರೀಕ್ಷೆ ಮಾಡಿದ ಬಳಿಕ, ಇನ್ನೊಮ್ಮೆ ಸರಿಯಾಗಿ ಅಧ್ಯಾಯನ ನಡೆಸಿದ ತಜ್ಞರು, ಕೊನೆಗೆ ಸೂಕ್ತ ನಿರ್ಧಾರಕ್ಕೆ ಬರುತ್ತಾರೆ, ಅದೇನೆಂದರೆ ಎಲ್ಲಾ ವಯಸ್ಸಿನವರೂ ಕೂಡ ಮಿತವಾಗಿ ಅಣಬೆ ಯನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಹಿತಕರ ಎಂಬುದನ್ನು ತಮ್ಮ ವರದಿಯಲ್ಲಿ ತಿಳಿಸುತ್ತಾರೆ.

 ಕೊನೆ ಮಾತು

Magic Mushroom Compound Reduces Excessive Drinking in Rat Study |  Technology Networks

  • ಸಂಶೋಧಕರು ಹೇಳುವಂತೆ ವಾರಕ್ಕೆ ಒಮ್ಮೆ ಆದರೂ ಮಶ್ರೂಮ್‌ ಅನ್ನು ಮಿತವಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸುವುದರಿಂದ, ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
  • ಮಶ್ರೂಮ್ ನೈಸರ್ಗಿಕವಾಗಿ ಸಿಗುವ ಆಹಾರ ಆಗಿರುವುದರಿಂದ, ಇದರಿಂದಾಗಿ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಎಲ್ಲಾ ಬಗೆಯ ಮಶ್ರೂಮ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳು, ವಯಸ್ಕರು, ವಯಸ್ಸಾದವರು, ಹೀಗೆ ಎಲ್ಲಾ ವಯಸ್ಸಿನವರು ಕೂಡ ಮಿತವಾಗಿ ಸೇವನೆ ಮಾಡಬಹುದು.

Add Mushrooms In Your Diet At Least Once A Week To Increase Vitamin D Levels Naturally