ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಆದರೆ ರಾತ್ರಿ ಹೊತ್ತು ತಿನ್ನಬಹುದಾ?

10-03-22 09:25 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಕೆಲವೊಮ್ಮೆ ಆಹಾರಗಳ ಸೇವನೆಯ ವಿಚಾರದಲ್ಲಿ ವಾದ ಪ್ರತಿವಾದಗಳು ಇದ್ದೇ ಇರುತ್ತದೆ. ಅದೇ ರಾತ್ರಿ ವೇಳೆ ಬಾಳೆಹಣ್ಣನ್ನು ಸೇವಿಸುವ ವಿಚಾರದಲ್ಲಿ ಕೂಡ ಗೊಂದಲಗಳು ಕಾಡುತ್ತದೆ.

ನಮಗೆಲ್ಲಾ ಗೊತ್ತೇ ಇರುವ ಹಾಗೆ ಎಲ್ಲಾ ಕಾಲದಲ್ಲೂ ಲಭ್ಯವಿರುವ ಹಣ್ಣು ಎಂದರೆ ಅದು ಬಾಳೆಹಣ್ಣು. ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುವ ಈ ಬಾಳೆ ಹಣ್ಣು, ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟೀನ್, ಪೊಟಾಶಿಯಮ್, ಕಬ್ಬಿಣಂಶ, ಹಾಗೂ ನಾರಿನಾಂಶ ಸೇರಿದಂತೆ, ತನ್ನಲ್ಲಿ ವಿವಿಧ ಬಗೆಯ ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ.

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ತಾತ್ಕಾಲಿಕವಾಗಿ ಹಸಿವೆಯನ್ನು ತಡೆಯ ಬಹುದು. ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಆರೈಕೆ ಮಾಡುವುದು. ಇದರ ಲ್ಲಿರುವ ಪೋಷಕಾಂಶ ಗುಣವು ಮಕ್ಕಳಿಂದ ಹಿಡಿದು ವೃದ್ಧರಿಗೂ ಸಹ ಅತ್ಯುತ್ತಮವಾದದ್ದು.ಇನ್ನು ನಿಯಮಿತವಾಗಿ ಬಾಳೆಹಣ್ಣನ್ನು ಸೇವಿಸುವುದರಿಂದ, ಕೆಲವೊಂದು ಅನಾರೋಗ್ಯಕರ ಸಮಸ್ಯೆಗಳಾದ ಎದೆಯುರಿ, ಮಲಬದ್ಧತೆ, ಅಜೀರ್ಣ ಸಮಸ್ಯೆ, ರಕ್ತದೊತ್ತಡ, ರಕ್ತಹೀನತೆ, ಇಂತಹ ಹಲವಾರು ಅನಾರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಬಾಳೆಹಣ್ಣನ್ನು ರಾತ್ರಿ ಸಮಯದಲ್ಲ ತಿನ್ನಬಹುದೇ? ಇದರಿಂದ ಆರೋಗ್ಯ ಸಮಸ್ಯೆ ಇರುತ್ತದೆಯೇ? ಮುಂದೆ ಓದಿ

ಬಾಳೆಹಣ್ಣು ಸೇವನೆ ರಾತ್ರಿ ವೇಳೆ ಸುರಕ್ಷಿತವೇ?

Brown Spots on Bananas: Science, Heath Benefits & Recipe Ideas

ಬಾಳೆಹಣ್ಣನ್ನು ರಾತ್ರಿ ತಿನ್ನುವುದರಿಂದ ಏನೂ ಸಮಸ್ಯೆ ಇಲ್ಲ, ರಾತ್ರಿಯ ಊಟ ಆದ ನಂತರ, ಅಂದರೆ ಮಲಗುವ ಒಂದು ಗಂಟೆಗೆ ಮೊದಲು ಬಾಳೆಹಣ್ಣನ್ನು ತಿಂದರೆ ತುಂಬಾ ಒಳ್ಳೆಯದು. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುತ್ತದೆ, ಅಲ್ಲದೇ ಮಲಬದ್ಧತೆಯಂತಹ ಸಮಸ್ಯೆಗಳುದೂರವಾಗುತ್ತದೆ
ಆದರೆ ತಡರಾತ್ರಿ ವೇಳೆ ಬಾಳೆಹಣ್ಣನ್ನು ತಿನ್ನಬಾರದು. ಯಾಕೆಂದರೆ ಬಾಳೆಹಣ್ಣು ಹೊಟ್ಟೆಯನ್ನು ತುಂಬಿಸುವ ಆಹಾರವಾಗಿದ್ದು ಇದನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಹೆಚ್ಚಿನ ಹೊತ್ತಿನ ಅಗತ್ಯವಿದೆ. ಅಲ್ಲದೆ ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲಿ ಜೀರ್ಣಕ್ರಿಯೆಗೆ ಹೆಚ್ಚು ಕೆಲಸ ಮತ್ತು ಜೀವರಾಸಾಯನಿಕ ಕ್ರಿಯೆಗೆ ಕಡಿಮೆ ಕೆಲಸವಿರುತ್ತದೆ. ಹಾಗಾಗಿ ರಾತ್ರಿ ಮಧ್ಯ ರಾತ್ರಿಯ ನಂತರ ಬಾಳೆಹಣ್ಣು ತಿನ್ನುವುದರಿಂದ ಹೊಟ್ಟೆಯ ತೊಂದರೆಗಳು ಎದುರಾಗಬಹುದು

ಕೆಮ್ಮು ಮತ್ತು ಶೀತದ ಸಮಸ್ಯೆ ಇರುವಂತಹ ಜನರು

ಕೆಮ್ಮು ಶೀತವಿದ್ದಾಗ ಸಿಟ್ರಸ್ ಹಣ್ಣುಗಳ ಸೇವನೆ ಸುರಕ್ಷಿತವೇ? | Is It Safe To Consume  Citrus Fruit When You Have Cough? - Kannada BoldSky

ಇನ್ನೊಂದು ವಿಚಾರ ಏನೆಂದರೆ ಕೆಮ್ಮು ಮತ್ತು ಶೀತದ ಸಮಸ್ಯೆ ಇರುವಂತಹ ಜನರು ರಾತ್ರಿ ವೇಳೆ ಸಿಟ್ರಸ್ ಜಾತಿಗೆ ಸೇರಿದ ಹಣ್ಣುಗಳು ಹಾಗೂ ಬಾಳೆಹಣ್ಣನ್ನು ಜಾಸ್ತಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ರಾತ್ರಿ ವೇಳೆ ಸೊಂಕು ಸಮಸ್ಯೆ ಹೆಚ್ಚಾಗುವ ಸಂಭವ ಜಾಸ್ತಿ ಇರುತ್ತದೆಯಂತೆ!
ಇನ್ನು ರಾತ್ರಿ ಮಲಗುವ ಮುನ್ನ ಆದಷ್ಟು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ಏಕೆಂದರೆ ನಾವು ರಾತ್ರಿ ಮಲಗಿದ ಬಳಿಕ ಜೀರ್ಣ ಕ್ರಿಯೆಯ ಪ್ರಕ್ರಿಯೆಯು ತುಂಬಾನೇ ನಿಧಾನವಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಸಮಯದಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಸಮಯ ಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ರಾತ್ರಿಯ ಊಟ ಮತ್ತು ಮಲಗುವಿಕೆಯ ನಡುವೆ ಒಂದು ಅಂತರವನ್ನು ಇಟ್ಟುಕೊಂಡರೆ ಒಳ್ಳೆಯದು, ಇದರಿಂದ ದೇಹಕ್ಕೆ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ

ಊಟವಾದ ಬಳಿಕ ಮಧ್ಯಮ ಗಾತ್ರದ ಒಂದು ಬಾಳೆಹಣ್ಣು ತಿನ್ನಬಹುದು

ಬಾಳೆಹಣ್ಣಿನ ಉಪಯೋಗ ಕೇಳಿದ್ರೇ ನೀವು ಮರೆಯದೆ ದಿನಾ ಬಾಳೆಹಣ್ಣು ತಿಂತೀರ | Prajapragathi

ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ, ರೋಗನಿರೋಧಕ ಶಕ್ತಿಯ ವಿರುದ್ಧ ಹೋರಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ಈ ಹಣ್ಣಿನಲ್ಲಿ ಪೋಷಕಾಂಶಗಳು ಹಾಗೂ ವಿಟಮಿನ್ಸ್‌ಗಳು ಹೇರಳವಾಗಿ ಸಿಗುವುದರಿಂದ ದೇಹವು ಕಳಕೊಂಡಿರುವ ಖನಿಜಾಂಶಗಳನ್ನು ಮರಳಿ ನೀಡುವುದರ ಜೊತೆಗೆ ಸಣ್ಣ ಪುಟ್ಟ ಸಮಸ್ಯೆಗಳಾದ ಶೀತ, ನೆಗಡಿಯನ್ನು ನಿವಾರಿಸುತ್ತದೆ. ಆದರೆ ಯಾವುದಕ್ಕೂ ವೈದ್ಯರ ಸಲಹೆಗಳನ್ನು ಪಡೆಯಿರಿ, ಇಲ್ಲಾಂದರೆ ಒಂದಕ್ಕಿಂತ ಹೆಚ್ಚು ಬಾಳೆಹಣ್ಣು ತಿನ್ನಬೇಡಿ...

ಕಫದ ಸಮಸ್ಯೆ ಇದ್ದರೆ ತಿನ್ನಬೇಡಿ

ಕಫದ ಸಮಸ್ಯೆ ಇರೋರು ಈ 9 ಆಯುರ್ವೇದದ ಮನೆಮದ್ದುಗಳನ್ನ ಬಳಸಿ ಎರಡೇ ದಿನದಲ್ಲಿ ಕಫ ವಾಸಿ  ಮಾಡ್ಕೋಬಹುದು .. – ಅರಳಿ ಕಟ್ಟೆ

ಆದರೆ ನೆನಪಿಡಿ ಕೆಮ್ಮು, ಶೀತದ ಸಮಸ್ಯೆ ಜಾಸ್ತಿಯಾಗಿ ಎದೆಯಲ್ಲಿ ಕಫದ ಸಮಸ್ಯೆ ಆಗಿದ್ದರೆ, ಅಂತಹ ಸಮಯದಲ್ಲಿ ತಪ್ಪಿಯೂ ಬಾಳೆಹಣ್ಣು ತಿನ್ನಬಾರದು. ವೈದ್ಯರು ಹೇಳುವ ಪ್ರಕಾರ ಕಫದ ಸಮಸ್ಯೆ ಇರುವವರು ರಾತ್ರಿ ಜಾಸ್ತಿ ಬಾಳೆಹಣ್ಣನ್ನು ತಿಂದರೆ, ಕಫ ಅಲ್ಲಿಗೆ ಗಟ್ಟಿಯಾಗಿ ಮುಂದೆ ಉಸಿರಾಟದ ಸಮಸ್ಯೆ ಉಂಟಾಗುವ ಸಂಭವ ಜಾಸ್ತಿ ಇರುತ್ತದೆ.

ಕೊನೆ ಮಾತು

ಕೆಮ್ಮು, ಕಫ, ನೆಗಡಿ, ಜ್ವರಗಳಿಗೆ ಮನೆ ಮದ್ದುಗಳು....

ರಾತ್ರಿ ಮಲಗುವ ಮುನ್ನ ಒಂದೆರಡು ಬಾಳೆಹಣ್ಣನ್ನು ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ. ಯಾಕೆಂದರೆ ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ

ಅಷ್ಟೇ ಅಲ್ಲದೇ ಇದರಲ್ಲಿರುವ ಇರುವಂತಹ ಮೆಗ್ನಿಶಿಯಂ ಅಂಶವು ಒಳ್ಳೆಯ ನಿದ್ರೆಗೆ ಕಾರಣವಾಗುವುದು. ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್ ಅಂಶದ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ, ಜೊತೆಗೆ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗುತ್ತದೆ ಎನ್ನುವ ಭಯ ಇರುವುದಿಲ್ಲ! ಆದರೆ ನೆನಪಿಡಿ ಶೀತ ಮತ್ತು ಕೆಮ್ಮಿನ ಸಮಸ್ಯೆ ಇರುವಂತಹ ಜನರು ಇದರ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Is Eating Banana At Before Going To Sleep Is Its Safe?