ಬಿಪಿ ಕಂಟ್ರೋಲ್ ಮಾಡುವ ಪವರ್ ಈ ಮೂರು ಹಣ್ಣಿನ ಜ್ಯೂಸ್‌ಗಳಲ್ಲಿದೆ!

12-03-22 10:22 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ರಕ್ತದ ಒತ್ತಡ ನಿಯಂತ್ರಣದಲ್ಲಿ ಇಲ್ಲದವರು, ವೈದ್ಯರು ನೀಡಿರುವ ಔಷಧಿಗಳ ಜೊತೆಗೆ, ಕೆಲವೊಂದು ನೈಸರ್ಗಿಕ ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಬೇಕು.

ವೈದ್ಯರೇ ಹೇಳುವ ಪ್ರಕಾರ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ, ಇವೆರಡೂ ಕಾಯಿಲೆಗಳು ದೀರ್ಘಾಕಾಲದವರೆಗೆ ಮನುಷ್ಯನ ಆರೋಗ್ಯಕ್ಕೆ ತೊಂದರೆ ಕೊಂಡುವಂತಹ ಕಾಯಿಲೆಗಳು! ಒಂದು ವೇಳೆ, ಇವುಗಳನ್ನು ಸರಿಯಾಗಿ ನಿಯಂತ್ರಣ ಮಾಡದೇ ಹೋದರೆ, ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ತೊಂದರೆ ಕಟ್ಟಿಟ್ಟಬುತ್ತಿ!

ಇದಕ್ಕೆ ಕಾರಣಗಳನ್ನು ನೋಡುವುದಾದರೆ ಕೆಲವರಿಗೆ ಬದಲಾದ ಜೀವನ ಶೈಲಿಯಿಂದ ಈ ಸಮಸ್ಯೆಗಳು ಕಂಡು ಬಂದರೆ, ಇನ್ನು ಕೆಲವರಿಗೆ ತಮ್ಮ ಆರೋಗ್ಯ ಶೈಲಿಯಲ್ಲಿ ಬದಲಾವಣೆ ತಂದುಕೊಂಡ ನಂತರ ಕಂಡು ಬರುತ್ತಿರುವುದು ವಿಪರ್ಯಾಸ ಎನಿಸಿದೆ! ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವವರಿಗೆ ಹೆಚ್ಚಾಗಿ ರಕ್ತದೊತ್ತಡ ಸಮಸ್ಯೆಯು ಕಾಣಿಸುವುದು.

ಇದೆರಡು ಬಂದರೆ ಮತ್ತೆ ಕೇಳುವುದೇ ಬೇಡ, ಅದು ನರಕವಿದ್ದಂತೆ ಎಂದು ಅನುಭವಿಸಿದವರು ಹೇಳುವರು! ಅದರಲ್ಲೂ ಈ ಅಧಿಕ ರಕ್ತದೊತ್ತಡದ ಸಮಯದಲ್ಲಿ, ದೇಹದ ರಕ್ತದಲ್ಲಿ ಏರು ಪೇರಾಗುವುದರಿಂದ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಅಪಾಯ ಉಂಟಾಗುವ ಸಂಭವ ಜಾಸ್ತಿ ಇರುತ್ತದೆ! ಹಾಗಾಗಿ ತಪ್ಪಿಯೂ ಹೈ ಬಿಪಿ ಅಥವಾ ರಕ್ತದೊತ್ತಡದ ಸಮಸ್ಯೆಯನ್ನು ಲೈಟ್ ಆಗಿ ತೆಗೆದುಕೊಳ್ಳಬಾರದು!

ರಕ್ತದೊತ್ತಡದ ಸಮಸ್ಯೆಯನ್ನು ಆದಷ್ಟು ಕಂಟ್ರೋಲ್‌ನಲ್ಲಿ ಇಡಬೇಕು

High blood pressure and how to reduce it - Online First Aid

  • ಮುಖ್ಯವಾಗಿ ಆರೋಗ್ಯದಲ್ಲಿ ರಕ್ತದ ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿ ಕೊಳ್ಳುವುದು ಬಹು ಮುಖ್ಯ. ಒಂದು ವೇಳೆ ರಕ್ತ ಸಂಚಾರದಲ್ಲಿ ಹೆಚ್ಚು ಕಡಿಮೆ ಆದರೆ, ಮುಂದೆ ಹೃದಯದ ಸಮಸ್ಯೆಗಳು ಕಾಡುವ ಸಂಭವ ಜಾಸ್ತಿ ಇರುತ್ತದೆ.
  • ಈ ಸಮಯದಲ್ಲಿ ವೈದ್ಯರು ನೀಡುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ ಕೆಲವೊಂದು ನೈಸರ್ಗಿಕ ಮನೆಮದ್ದುಗಳ ಮೂಲಕ ಕೂಡ ಇದನ್ನು ನಿಯಂತ್ರಣ ಮಾಡಲು ನೋಡಬೇಕು. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವ ಕೆಲವೊಂದು ಹಣ್ಣುಗಳನ್ನು ಬಳಸಿಕೊಂಡು, ಜ್ಯೂಸ್ ಮಾಡಿ ಕುಡಿಯುವುದರಿಂದ ಈ ಸಮಸ್ಯೆ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು.

ಕಿತ್ತಳೆ ಹಣ್ಣಿನ ಜ್ಯೂಸ್ 

Orange Juice -

  • ಕಿತ್ತಳೆ ಹಣ್ಣು ಸಿಟ್ರಸ್ ಜಾತಿಗೆ ಸೇರಿದ ಹಣ್ಣಾಗಿರುವ ಕಾರಣ, ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶವನ್ನು ಒಳಗೊಂಡಿದೆ. ಇದರಿಂದಾಗಿ ನಮ್ಮ ದೇಹದ ರೋಗನಿರೋಧಕ ಹೆಚ್ಚು ಮಾಡುವ ಕೆಲಸ ಮಾಡುತ್ತದೆ. ಆದರೆ ಕಿತ್ತಳೆ ಹಣ್ಣಿನ ಪ್ರಯೋಜನಗಳು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ!
  • ನಿಯಮಿತವಾಗಿ ಇದರ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ರಕ್ತದೊತ್ತಡದ ಸಮಸ್ಯೆಯನ್ನುನೈಸರ್ಗಿಕವಾಗಿ ನಿಯಂತ್ರಿಸಬಹುದು! ಅಲ್ಲದೆ ಹೃದಯಕ್ಕೆ ಸಂಬಂಧಪಟ್ಟ ಹಲವಾರು ಆರೋಗ್ಯ ಸಮಸ್ಯೆಗಳಿಂದ ಕೂಡ ದೂರ ಉಳಿಯಬಹುದು.
  • ಇನ್ನು ಈ ಹಣ್ಣಿನ ಜ್ಯೂಸ್‌ನ ವಿಶೇಷತೆ ಏನೆಂದರೆ ತನ್ನಲ್ಲಿ ವಿಟಮಿನ್ ಸಿ ಮತ್ತು ಪೊಟಾಶಿಯಂ ಅಂಶದ ಜೊತೆಗೆ ಫೋಲೆಟ್ ಅಂಶ ಕೂಡ ಅತ್ಯಧಿಕವಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ನೈಸರ್ಗಿಕವಾಗಿ ಸಿಗುವ ಬಯೋ ಫ್ಲೇವನಾಯ್ಡ್ ಎಂಬ ಅಂಶಗಳ ಪ್ರಮಾಣ ಕೂಡ ಅಧಿಕ ಪ್ರಮಾಣದಲ್ಲಿದೆ. ಇದು ನಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಾಧಾರಣ ಮಟ್ಟಕ್ಕೆ ತಲುಪುವಂತೆ ಮಾಡುತ್ತದೆ. ಅಲ್ಲದೇ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. 

ಕ್ರ್ಯಾನ್ ಬರ್ರಿ ಜ್ಯೂಸ್ 

What Are the Benefits of Drinking Cranberry Juice?

  • ಆರೋಗ್ಯ ತಜ್ಞರು ಹೇಳುವ ಪ್ರಕಾರ ಕ್ರ್ಯಾನ್ ಬೆರಿ ಹಣ್ಣುಗಳು ಯಥೇಚ್ಛವಾಗಿ ಪೌಷ್ಟಿಕಾಂಶಗಳು ಹಾಗೂ ವಿಟಮಿನ್ಸ್‌ಗಳನ್ನು ಒಳಗೊಂಡಿದೆ ಜೊತೆಗೆ ಹೈಬಿಪಿ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಣಕ್ಕೆ ತರುವ ವಿಟಮಿನ್ ಸಿ ಅಂಶ ಕೂಡ ಇದರಲ್ಲಿರುವುದರಿಂದ, ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಒಂದೊಂದು ಗ್ಲಾಸ್ ಇದರ ಜ್ಯೂಸ್ ಮಾಡಿಕೊಂಡು ಕುಡಿದರೆ, ಉತ್ತಮ ಫಲಿತಾಂಶ ಕಾಣಬಹುದು.
  • ಅಷ್ಟೇ ಅಲ್ಲದೇ ತನ್ನಲ್ಲಿ ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿರುವ ಈ ಹಣ್ಣುಗಳು ನಮ್ಮ ದೇಹದ ರಕ್ತನಾಳಗಳನ್ನು ಹಿಗ್ಗಿಸಿ ರಕ್ತ ಸಂಚಾರವನ್ನು ಸುಗಮವಾಗಿ ನಡೆಯುವಂತೆ ಅನುವು ಮಾಡಿಕೊಡುತ್ತವೆ.

ದಾಳಿಂಬೆ ಹಣ್ಣಿನ ಜ್ಯೂಸ್ 

Pomegranate Juice Recipe, How to make Pomegranate Juice Recipe - Vaya.in

 

  • ಅಧಿಕ ರಕ್ತದೊತ್ತಡ ಸಮಸ್ಯೆ ಅಥವಾ ಹೈಬಿಪಿ ಸಮಸ್ಯೆ ಎಂದರೆ ಮನುಷ್ಯನಿಗೆ ಸಾಮಾನ್ಯಕ್ಕಿಂತಲೂ ರಕ್ತದ ಒತ್ತಡವು ಹೆಚ್ಚಾಗಿ ಕಂಡುಬರುವುದು. ಕೆಲವೊಮ್ಮೆ ಈ ಸಮಸ್ಯೆ ಕೈಮೀರಿ ಹೃದಯಾಘಾತ ವಾಗಿ ವಿಶ್ವದೆಲ್ಲೆಡೆಯಲ್ಲಿ ಅತೀ ಹೆಚ್ಚಿನ ಸಾವು ಸಂಭವಿಸುತ್ತಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ ಹಾಗಾಗಿ ಇದನ್ನು ತಪ್ಪಿಯೂ ನಿರ್ಲಕ್ಷಿಸಬಾರದು.
  • ಹೀಗಾಗಿ ಈ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು, ದಿನಾ ಒಂದು ಲೋಟ ದಾಳಿಂಬೆ ಜ್ಯೂಸ್‌ನ್ನು ಕುಡಿಯುವುದರಿಂದ, ಈ ಸಮಸ್ಯೆಯಿಂದ ದೂರ ಇರಬಹುದು. ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ, ದಾಳಿಂಬೆ ಹಣ್ಣಿನ ಬೀಜಗಳಲ್ಲಿ, ರಕ್ತ ಸಂಚಾರವನ್ನು ಸುಗಮವಾಗಿ ನಡೆಸುವಂತಹ ಅಗತ್ಯವಾದ ವಿಟಮಿನ್ ಗಳು, ಖನಿಜಾಂಗಳು, ನಾರಿನಾಂಶ ಹಾಗೂ ಪೊಟ್ಯಾಷಿಯಂ ಅಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಉತ್ತಮ ಫಲಿತಾಂಶವನ್ನು ಈ ಹಣ್ಣಿನ ಜ್ಯೂಸ್‌ನಿಂದ ನಿರೀಕ್ಷಿಬಹುದು.

Hypertension, These Fruit Juices That Manage Your High Blood Pressure Naturally.