ಪ್ರತಿನಿತ್ಯ ಒಂದು ಚಮಚ ತುಪ್ಪ ಸೇವಿಸಲೇಬೇಕು ಎನ್ನುವ ಆಯುರ್ವೇದದ ಹಿಂದಿನ ಆರೋಗ್ಯ ರಹಸ್ಯ…

15-03-22 08:33 pm       Source: Vijayakarnataka   ಡಾಕ್ಟರ್ಸ್ ನೋಟ್

ತುಪ್ಪ ಆರೋಗ್ಯವನ್ನು ಹೆಚ್ಚಿಸಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆಯುರ್ವೇದವು ಪ್ರತಿನಿತ್ಯ ಒಂದು ಚಮಚ ತುಪ್ಪ ಸೇವನೆ ಮಾಡಲು ಶಿಫಾರಸ್ಸು ಮಾಡುತ್ತದೆ. ಇದಕ್ಕೆ ಕಾರಣ ಲೇಖನದ ಮೂಲಕ ತಿಳಿಯಿರಿ.

ತುಪ್ಪವು ಆಯುರ್ವೇದದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಘಮ ಘಮ ತುಪ್ಪವು ಖಾದ್ಯವನ್ನು ಮಾತ್ರ ರುಚಿಯಾಗಿಸುವುದಿಲ್ಲ, ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.

ತುಪ್ಪವನ್ನು ನಮ್ಮ ಭಾರತೀಯ ಅಡುಗೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಲ್ಲಿರುವ ಉತ್ತಮ ಕೊಬ್ಬಿನಾಮ್ಲಗಳು ಆರೋಗ್ಯಕರವಾದ ಹೃದಯ ಮತ್ತು ಹೃದಯರಕ್ತನಾಳದ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಪ್ರತಿನಿತ್ಯ ಸಮತೋಲಿತ ಆಹಾರದ ಭಾಗವಾಗಿ ತುಪ್ಪವನ್ನು ಬಳಸುವುದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಯುರ್ವೇದ ತಜ್ಞರು ಪ್ರತಿದಿನ ಬೆಳಿಗ್ಗೆ ಸ್ವಲ್ಪ ಪ್ರಮಾಣದ ತುಪ್ಪವನ್ನು ಸೇವನೆ ಮಾಡಬೇಕು ಎಂದು ಶಿಫಾರಸ್ಸು ಮಾಡುತ್ತಾರೆ. ಅಷ್ಟಕ್ಕೂ ಪ್ರತಿನಿತ್ಯ ತುಪ್ಪ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಿರಿ.

​ಪ್ರತಿನಿತ್ಯ ತುಪ್ಪ ಸೇವನೆ ಏಕೆ ಮಾಡಬೇಕು?

See the source image

  • ಶುದ್ಧ ಹಸುವಿನ ಹಾಲಿನಿಂದ ತಯಾರಿಸಲಾಗುವ ತುಪ್ಪವು ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ತುಪ್ಪವು ಪ್ರೋಟೀನ್‌, ಉತ್ಕರ್ಷಣ ನಿರೋಧಕಗಳು, ಆರೋಗ್ಯಕರವಾದ ಕೊಬ್ಬುಗಳು ಮತ್ತು ಖನಿಜಗಳಿಂದ ಹೇರಳವಾಗಿದೆ.
  • ತುಪ್ಪವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯಿಂದ ಪಾರಾಗಬಹುದು. ಇದರ ಪರಿಣಾಮ ಚಯಾಪಚಯವನ್ನು ಸುಧಾರಿಸಿಕೊಳ್ಳುವ ಮೂಲಕ ನೇರವಾಗಿ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಬಲ್ಲದು.

​ಆಯುರ್ವೇದದ ಪ್ರಕಾರ ತುಪ್ಪ

See the source image

  • ಆಯುರ್ವೇದ ತಜ್ಞರ ಪ್ರಕಾರ, ಬೆಳಗಿನ ದಿನಚರಿಯಲ್ಲಿ ತುಪ್ಪವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ತುಪ್ಪವು ದೇಹದ ಜೀವಕೋಶಗಳಿಗೆ ಪೋಷಣೆಯ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ.
  • ತುಪ್ಪದಲ್ಲಿರುವ ಬ್ಯುಟರಿಕ್‌ ಆಮ್ಲ ಮತ್ತು ಟ್ರೈಗ್ಲಿಸರೈಡ್‌ಗಳು ಕೆಟ್ಟ ಕೊಬ್ಬನ್ನು ಹೊರಹಾಕಲು ಉತ್ತೇಜಿಸುತ್ತದೆ. ಅಲ್ಲದೆ. ಉತ್ತಮ ಕೊಲೆಸ್ಟ್ರಾಲ್‌ ಅನ್ನು ಸೃಷ್ಟಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಪ್ರತಿನಿತ್ಯ ಕೇವಲ 1 ಚಮಚ ತುಪ್ಪವನ್ನು ಮಾತ್ರ ಸೇವನೆ ಮಾಡಬೇಕು. ಹೆಚ್ಚಾಗಿ ಸೇವನೆ ಮಾಡುವುದರಿಂದ ಸ್ಯಾಚುರೇಟೆಡ್‌ ಕೊಬ್ಬುಗಳ ಉಪಸ್ಥಿತಿಯಿಂದಾಗಿ ದೇಹದ ತೂಕ ಹೆಚ್ಚಾಗಬಹುದು. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಅತ್ಯಗತ್ಯ.

ತುಪ್ಪವನ್ನು ಹೇಗೆ ಸೇವನೆ ಮಾಡಬೇಕು?

See the source image

ಸಾಮಾನ್ಯವಾಗಿ ತುಪ್ಪವನ್ನು ಅನೇಕ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ. ಇದು ಖಾದ್ಯಕ್ಕೆ ವಿಶೇಷವಾದ ರುಚಿ ಮತ್ತು ಸುವಾಸನೆಯನ್ನು ನೀಡುತ್ತದೆ. ತಜ್ಞರ ಪ್ರಕಾರ, ಒಂದು ಚಮಚ ತುಪ್ಪವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದು ದೇಹಕ್ಕೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ಇದು ಕರುಳಿನ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ.

ತುಪ್ಪದಿಂದ ಆರೋಗ್ಯ ಲಾಭ ಹೇಗೆ?

See the source image

  • ತುಪ್ಪವು ಕ್ಯಾಲ್ಸಿಯಂ ಮತ್ತು ಅಮೈನೋ ಆಮ್ಲಗಳ ಅತ್ಯುತ್ತಮವಾದ ಮೂಲವನ್ನು ಹೊಂದಿದ್ದು ಶ್ರೀಮಂತವಾಗಿದೆ. ನಿಯಮಿತವಾಗಿ ತುಪ್ಪವನ್ನು ಸೇವನೆ ಮಾಡುವುದರಿಂದ ಮೂಳೆ ಮತ್ತು ಹಲ್ಲಿನ ಆರೋಗ್ಯವನ್ನು ಬಲಿಷ್ಠಗೊಳಿಸಬಹುದು.
  • ಉರಿಯೂತವನ್ನು ಕಡಿಮೆ ಮಾಡಲು ತುಪ್ಪದಿಂದ ಅರಿಶಿಣದ ಜೊತೆ ಸೇವನೆ ಮಾಡಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಗಂಟಲು ನೋವು, ಶೀತ, ಕೆಮ್ಮು, ಜ್ವರಕ್ಕೆ ಚಿಕಿತ್ಸೆ ನೀಡುತ್ತದೆ.
  • ಸೂಚನೆ: ಪ್ರತಿನಿತ್ಯ 1 ಕ್ಕಿಂತ ಹೆಚ್ಚು ಚಮಚ ತುಪ್ಪವನ್ನು ಸೇವಿಸದೇ ಇರುವುದು ಉತ್ತಮ. ಹೆಚ್ಚಾಗಿ ಸೇವನೆ ಮಾಡಿದಾಗ ತೂಕವು ಗಮನಾರ್ಹವಾಗಿ ಹೆಚ್ಚಾಗಬಹುದು.

Empty Stomach Ghee Benefits According To Ayurveda.