ಕಿಡ್ನಿಗಳು ಆರೋಗ್ಯವಾಗಿ ಇರಬೇಕೆಂದರೆ, ಹೂಕೋಸು ಸೇವಿಸಿ!

17-03-22 09:55 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಕಿಡ್ನಿಗಳು ಆರೋಗ್ಯವಾಗಿ ಕಾರ್ಯನಿರ್ವಹಿಸಬೇಕೆಂದರೆ, ಆರೋಗ್ಯಕರವಾದ ತರಕಾರಿಗಳನ್ನು ಸೇವಿಸಬೇಕು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ನಿಯಮಿತವಾಗಿ ಹೂಕೋಸನ್ನು ಸೇವಿಸುವುದು...

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಮನುಷ್ಯನ ದೇಹದ ಆಂತರಿಕ ಭಾಗಗಳಲ್ಲಿ ಕಂಡು ಬರುವ ಬಹುಮುಖ್ಯ ಅಂಗಾಂಗಗಳಲ್ಲಿ ಮೂತ್ರಪಿಂಡಗಳು ಹಾಗೂ ಕಿಡ್ನಿಗಳು ಕೂಡ ಒಂದು. ಇದರ ಮುಖ್ಯ ಕಾರ್ಯವೆಂದರೆ, ನಮ್ಮ ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳನ್ನು ಮೂತ್ರ ವಿಸರ್ಜನೆಯ ಮೂಲಕ ಹೊರ ಹಾಕುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ಹೀಗಾಗಿ ಇಂತಹ ಪ್ರಮುಖ ಕಾರ್ಯ ನಿರ್ವಹಿಸುವ ಮೂತ್ರ ಪಿಂಡಗಳು, ದೇಹದೊಳಗೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕೆಂದರೆ, ಕೆಲವೊಂದು ಆರೋಗ್ಯಕಾರಿ ಆಹಾರಗಳ ಜೊತೆಗೆ ಹೂಕೋಸುನ್ನು ಕೂಡ ಸೇರಿಸುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು. ಇದರಿಂದ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಂದ ದೂರ ಇರುವುದರ ಜೊತೆಗೆ, ಕಿಡ್ನಿಯ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು...

ಹೂಕೋಸಿನ ಪ್ರಯೋಜನಗಳು

Probiotics for Healthy Kidney Function

ನೋಡಲು ಸ್ವಲ್ಪ ದಪ್ಪಗೆ ಕಾಣುವ ಈ ಹೂಕೋಸು ಎಲ್ಲರಿಗೂ ಇಷ್ಟವಾಗುವ ತರಕಾರಿ. ತನ್ನಲ್ಲಿ ಹೇರಳವಾಗಿ ಪೌಷ್ಟಿಕಾಂಶಗಳನ್ನು ಹೊಂದಿರುವುದರ ಜೊತೆಗೆ, ವಿಟಮಿನ್ಸ್‌ಗಳಾದ ವಿಟಮಿನ್ ಸಿ ವಿಟಮಿನ್ ಕೆ, ಮ್ಯಾಂಗನೀಸ್, ಪಾಸ್ಪರಸ್, ನಾರಿನಾಂಶ, ಪೋಲಿಕ್ ಆಮ್ಲ ಹಾಗೂ ಪೊಟ್ಯಾಶಿಯಂ ಇತ್ಯಾದಿಗಳು ಬಹಳ ಹೇರಳವಸಿಗುತ್ತವೆ.
ವಿಶೇಷವಾಗಿ ಈ ತರಕಾರಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನ ಅಂಶ ಒಳಗೊಂಡಿರುವುದರಿಂದ ಹೃದಯದ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ, ಮಧುಮೇಹ ಸಮಸ್ಯೆಯನ್ನು ಕೂಡ ನಿಯಂತ್ರಣದಲ್ಲಿಡುವ ಹಲವಾರು ಆರೋಗ್ಯಕರ ಗುಣಲಕ್ಷಣಗಳನ್ನು ಇದು ಒಳಗೊಂಡಿದೆ.
ಅದರಲ್ಲೂ ಕೆಲವೊಮ್ಮೆ ಸಕ್ಕರೆಕಾಯಿಲೆ ಅಥವಾ ಮಧುಮೇಹ ಸಮಸ್ಯೆ, ನಿಯಂತ್ರಣಕ್ಕೆ ಬರದೇ ಹೋದರೆ ಕಿಡ್ನಿಗಳು ಹಾಳಾಗುತ್ತವೆ ಎಂದು ಕೇಳಿದ್ದೇವೆ . ಹೀಗಾಗಿ ನಿಯಮಿತವಾಗಿ ಹೂಕೋಸು ಸೇವನೆ ಮಾಡುತ್ತಾ ಬಂದರೆ ಕಿಡ್ನಿಗಳ ಆರೋಗ್ಯ ತನ್ನಿಂತಾನೇ ವೃದ್ಧಿ ಆಗುತ್ತದೆ .

ಆಂತರಿಕವಾಗಿ ಸ್ವಚ್ಛ ಮಾಡುವ ಕೆಲಸ ಮಾಡುತ್ತದೆ!

13,995 Large Intestine Stock Photos, Pictures & Royalty-Free Images - iStock

ಇನ್ನು ವಿಶೇಷವಾಗಿ ಹೂಕೋಸಿನಲ್ಲಿ ಹೇರಳವಾಗಿ ಕಂಡುಬರುವ ಥಿಯೋಸೈನೇಟ್ಸ್ (Thiocyanates) ಹಾಗೂ ಗ್ಲುಕೋಸಿನೋಲೇಟ್ (glucosinolate)ಎಂಬ ಎರಡು ಸಂಯುಕ್ತ ಅಂಶಗಳು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

ಕಿಡ್ನಿಗಳ ಆರೋಗ್ಯಕ್ಕೆ ಹೂಕೋಸು ಸೇವಿಸಿ

How Do Living Kidney Donations Work? | Ochsner Health

  • ಅಧಿಕ ಪ್ರಮಾಣದ ಸೋಡಿಯಂ ಅಂಶ ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಈ ಬಗ್ಗೆ ವೈದ್ಯರೂ ಕೂಡ, ಇದೇ ಮಾತನ್ನು ಹೇಳುತ್ತಾರೆ. ಇದಕ್ಕೆ ಕಾರಣಗಳು ಏನೆಂದರೆ, ದೇಹದಲ್ಲಿ ಮಿತಿಮೀರಿ ಸೋಡಿಯಂ ಅಂಶಗಳು ಹೆಚ್ಚಾಗುತ್ತಾ ಹೋದಂತೆ, ಕಿಡ್ನಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಶೇಖರಣೆ ಆಗಿಬಿಡುತ್ತದೆ. ಇದರಿಂದ ಕಿಡ್ನಿಗಳಲ್ಲಿ ಸಮಸ್ಯೆ ಕಂಡುಬರುವುದರ ಜೊತೆಗೆ, ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ಕಂಡು ಬರುತ್ತದೆ.
  • ಇನ್ನು ಗರ್ಭಿಣಿ ಮಹಿಳೆಯರು, ಈ ವಿಷ್ಯದಲ್ಲಿ ಆದಷ್ಟು ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು. ಹೀಗಾಗಿ ಇಂತಹ ಸಮಸ್ಯೆಗಳು ಎದುರಾಗಬಾರದು ಎಂದರೆ, ಮಿತಪ್ರಮಾಣದಲ್ಲಿ ಹೂಕೋಸು ಸೇವನೆ ಮಾಡುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು.
  • ಯಾಕೆಂದರೆ ಈ ತರಕಾರಿಗಳಲ್ಲಿರುವ ಕಡಿಮೆ ಪ್ರಮಾಣದ ಸೋಡಿಯಂ ಮತ್ತು ಪೊಟ್ಯಾಷಿಯಂ ಅಂಶದ ಕಾರಣ ದೇಹದಲ್ಲಿ ನೀರಿನಾಂಶದ ಸಮತೋಲನ ಕಾಯ್ದುಕೊಳ್ಳಲು ಅನುಕೂಲ ಆಗುತ್ತದೆ.

ವಿಟಮಿನ್ ಸಿ, ನಾರಿನಾಂಶ ಮತ್ತು ಫೋಲೆಟ್ ಅಂಶ

Growing Cauliflower In Containers - Learn How To Grow Cauliflower In Pots

ಇನ್ನು ಈ ತರಕಾರಿಗಳಲ್ಲಿ ವಿಟಮಿನ್ ಸಿ, ನಾರಿನಾಂಶ ಮತ್ತು ಫೋಲೆಟ್ ಅಂಶ ಹೆಚ್ಚಾಗಿ ಕಂಡು ಬರುವುದರಿಂದ, ನಿಯಮಿತವಾಗಿ ಇದನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ಇದರಿಂದ ಕಿಡ್ನಿಗಳಿಂದ ಅಪಾರ ಪ್ರಮಾಣದ ವಿಷಕಾರಿ ಅಂಶಗಳು ಹೊರ ಹೋಗಲು ಅನುಕೂಲ ಆಗುತ್ತದೆ.
ಇನ್ನೂ ಒಂದು ವಿಶೇಷತೆ ಏನೆಂದರೆ, ಮೊದಲೇ ಹೇಳಿದ ಹಾಗೆ ಇದರಲ್ಲಿ ಫೋಲೆಟ್ ಅಂಶ ಯಥೇಚ್ಛವಾಗಿ ಕಂಡುಬರುವುದರಿಂದ ದೇಹದ ಭಾಗಗಳಲ್ಲಿ ಶೇಖರಣೆಯಾಗುವ ಕೊಬ್ಬಿನ ಅಂಶ ಮತ್ತು ಬೊಜ್ಜಿನ ಅಂಶದನಿವಾರಣೆಯಾಗುತ್ತದೆ.

ಹೂಕೋಸು ಸೇವನೆಯಿಂದ ಸಿಗುವ ಇತರ ಪ್ರಯೋಜನಗಳು

cauliflower benefits: ಹೂಕೋಸು ಗೋಬಿ ಮಂಚೂರಿಯನ್‍ಗೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!  - Vijaya Karnataka

  • ಮೊದಲೇ ಹೇಳಿದಂತೆ ಹೂಕೋಸಿನಲ್ಲಿ ನಾರಿನಾಂಶ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ನಿಮ್ಮ ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯ ಪ್ರಭಾವ ಬೀರುತ್ತದೆ ಎಂದು ಹೇಳಬಹುದು.
  • ಈ ತರಕಾರಿಗಳಲ್ಲಿ ಸಾಕಷ್ಟು ಬಗೆಯ ಆಂಟಿಆಕ್ಸಿಡೆಂಟ್ ಗಳು ಇವೆ. ಮುಖ್ಯವಾಗಿ ಇದರಲ್ಲಿ ಬೀಟಾ-ಕ್ಯಾರೋಟಿನ್, ಅಧಿಕ ಪ್ರಮಾಣದಲ್ಲಿ ಕಂಡುಬರುವುದರಿಂದ, ಉರಿಯೂತ ಸಮಸ್ಯೆಗಳ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಒಳಗೊಂಡಿದೆ.
  • ಇನ್ನು ಇದರಲ್ಲಿ ವಿಟಮಿನ್ ಸಿ ಅಂಶಗಳು ಹೆಚ್ಛಾಗಿ ಕಂಡುಬರುವುದರಿಂದ ಮೂಳೆಗಳ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಲು ನೆರವಾಗುತ್ತದೆ.

Is Cauliflower Good For Kidney Patients,These Things You Must Know.