ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ಗಳನ್ನು ಕುಡಿದರೆ ಇಡೀ ದಿನ ಪ್ರೆಶ್‌ ಮೂಡ್‌ನಲ್ಲಿರಬಹುದು

09-04-22 10:02 pm       Source: Vijayakarnataka   ಡಾಕ್ಟರ್ಸ್ ನೋಟ್

ಬೆಳಗ್ಗೆ ಆರೋಗ್ಯಕರ ಪಾನೀಯವನ್ನು ಸೇವಿಸಿದರೆ ಇಡೀ ದಿನ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು.

ಬೆಳಗ್ಗಿನ ಸಮಯ ಅತ್ಯಮೂಲ್ಯವಾದದ್ದು.ದಿನದ ಆರಂಭ ಉಲ್ಲಾಸಭರಿತವಾಗಿದ್ದರೆ ಇಡೀ ದಿನ ಖುಷಿಯಾಗಿರಬಹುದು. ದಿನದ ಆರಂಭದಲ್ಲಿಯೇ ಆರೋಗ್ಯಕರ ಆಹಾರ ಸೇವಿಸಿದರೆ ದಿನ ಪೂರ್ತಿ ಚೈತನ್ಯಪೂರ್ಣವಾಗಿ, ಖುಷಿಯಾಗಿರಬಹುದು. ಪ್ರತಿದಿನ ಬಹುತೇಕರಿಗೆ ದಿನ ಆರಂಭವಾಗುವುದೇ ಚಹಾದಿಂದ. ಬೆಳಗ್ಗೆ ಎದ್ದು ಒಂದು ಸ್ಟ್ರಾಂಗ್‌ ಟೀ ಕುಡಿದು ಪೇಪರ್‌ ಓದಿದ ಮೇಲೆಯೇ ಅಂದಿನ ಕೆಲಸ ಆರಂಭ.

ಒಂದು ಚಹಾದಿಂದ ಮನಸ್ಸು ಆಹ್ಲಾದತೆಯನ್ನು ಪಡೆಯುತ್ತದೆ ಎಂದರೆ ಆರೋಗ್ಯಕ್ಕೆ ಹಿತವಾದ, ನ್ಯುಟ್ರಿಷಿಯನ್‌ಭರಿತ ಪಾನೀಯಗಳನ್ನು ಸೇವಿಸಿದರೆ ದಿನದ ಪ್ರತೀ ಕ್ಷಣವನ್ನೂ ಚಟುವಟಿಕೆಯಿಂದ ಕಳೆಯಬಹುದು. ಜೊತೆಗೆ ಆರೋಗ್ಯವನ್ನೂ ಉತ್ತಮವಾಗಿಟ್ಟುಕೊಳ್ಳಬಹುದು. ಕೆಲವು ಪಾನೀಯಗಳನ್ನು ಬೆಳಗ್ಗೆ ಸೇವಸಿದರೆ ದೇಹದಲ್ಲಿ ಶಕ್ತಿ ಅಧಿಕವಾಗುತ್ತದೆ. ಅಂತಹ ಪಾನೀಯಗಳು ಯಾವುವು ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಆರೋಗ್ಯಕ್ಕೆ ಹಿತವಾದ ಪಾನೀಯಗಳ ಪಟ್ಟಿ. ಇದನ್ನು ನೀವೂ ಟ್ರೈ ಮಾಡಿ.

ಲಿಂಬು ಮತ್ತು ಚಿಯಾ ಬೀಜಗಳು

Chia Lemon Water | Dr. Jill Carnahan, MD

ದೇಹದ ತೂಕ ಇಳಿಸಿಕೊಳ್ಳಲು ಲಿಂಬು ಪಾನಕ ಉತ್ತಮ ಪಾನೀಯ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಸ್ವಲ್ಪ ಚಿಯಾ ಬೀಜಗಳನ್ನು ಸೇರಿಸಿದರೆ ಆರೋಗ್ಯ ಗುಣ ದುಪ್ಪಟ್ಟಾಗುತ್ತದೆ. ಹೌದು. ಪ್ರತಿನಿತ್ಯ ಲಿಂಬು ಪಾನಕಕ್ಕೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಿ ಕುಡಿಯಿರಿ. ಇದು ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಹೀಗಾಗಿ ನಿಮ್ಮ ದಿನದ ಆರಂಭ ಲಿಂಬು ಮತ್ತು ಚಿಯಾ ಬೀಜದ ಜ್ಯೂಸ್‌ನಿಂದಾಗಿರಲಿ.

ಗ್ರೀನ್‌ ಟೀ

Can you drink green tea after meals? - Times of India

ದೇಹಕ್ಕೆ ಸರ್ವರೀತಿಯಲ್ಲಿಯೂ ಸಹಾಯ ಮಾಡುವ ಗ್ರೀನ್‌ ಟೀಯನ್ನು ಬೆಳಗ್ಗಿನ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಗ್ರೀನ್‌ ಟೀ ನಿಮ್ಮ ದಿನದ ಆರಂಭಕ್ಕೆ ಉತ್ತಮ ಸಂಗಾತಿಯಾಗಲಿದೆ. ದೇಹದ ಅತಿಯಾದ ತೂಕ ಇಳಿಕೆಗೆ, ಮೂಡ್‌ ರಿಫ್ರೆಶ್‌ ಮಾಡಲು ಅಷ್ಟೇ ಯಾಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಲು ಕೂಡ ಗ್ರೀನ್‌ ಟೀ ಸಹಕಾರಿಯಾಗಿದೆ. . ಗ್ರೀನ್‌ ಟೀ ಯಲ್ಲಿರುವ ವಿಟಮಿನ್‌ ಸಿ ಮತ್ತು ಆಂಟಿ ಆಕ್ಸಿಡೆಂಟ್‌ ಅಂಶಗಳು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಗ್ರೀನ್‌ ಟೀ ಸೇವಿಸಿ. ದಿನವನ್ನು ಆರಂಭಿಸಿ.

ಎಳನೀರು

Coconut water: 10 Health benefits of good old traditional beverage  preferred for hydration and nutrition | Health Tips and News

ತೆಂಗಿನ ನೀರಿನ ಸಿಹಿ ರುಚಿಯೊಂದಿಗೆ ನಿಮ್ಮ ದಿನವನ್ನು ಉಲ್ಲಾಸಕರವಾಗಿ ಪ್ರಾರಂಭಿಸಿ. ಈ ನೀರು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿಟ್ಟುಕೊಂಡಿದೆ. ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಳನೀರನ್ನು ಕುಡಿದ ಮೇಲೆ ಸಿಗುವ ತಿರುಳು ಹೊಟ್ಟೆಯನ್ನು ತುಂಬಿಸುತ್ತದೆ. ಆರೋಗ್ಯಕ್ಕೂ ಹಿತವಾಗಿರುವ ಎಳನೀರು ದೇಹವನ್ನು ತಂಪಾಗಿಡುತ್ತದೆ. ಬೇಸಿಗೆಯಲ್ಲಿ ಇದು ಹೆಚ್ಚು ಉತ್ತಮವಾಗಿದೆ. ಅದ್ದರಿಂದ ಆದಷ್ಟು ಎಳನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ.

ತರಕಾರಿಗಳ ಜ್ಯೂಸ್‌

How a bitter lauki juice could land you in serious trouble. Know from  doctors | Health - Hindustan Times

ಬೇಸಿಗೆಯ ಬೆಸ್ಟ್‌ ಫ್ರೆಂಡ್‌ ಎಂದರೆ ತರಕಾರಿ, ಸೊಪ್ಪುಗಳ ಜ್ಯೂಸ್‌. ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿಗಳ ಜ್ಯೂಸ್‌ ಸೇವನೆ ಮಾಡಿದರೆ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ. ಬಿಸಿಲಿಗೆ ದೇಹ ನಿರ್ಜಲೀಕರಣವೂ ಆಗುವುದಿಲ್ಲ. ಇಡೀ ದಿನ ಕ್ರಿಯಾಶೀಲರಾಗಿರಲು ಹಸಿರು ಜ್ಯೂಸ್‌ಗಳು ನೆರವಾಗುತ್ತವೆ. ಬೀಟ್ರೂಟ್‌, ಸೌತೆಕಾಯಿ, ಪಾಲಕ್‌, ನುಗ್ಗೆಸೊಪ್ಪಿನ ಜ್ಯೂಸ್‌ ಹೀಗೆ ಹೆಚ್ಚು ಪ್ರೋಟೀನ್‌, ಕಬ್ಬಿಣಾಂಶವಿರುವ ಪಾನೀಯಗಳಿಂದ ದಿನ ಆರಂಭವಾಗಲಿ. ದೇಹವೂ ಸದೃಢವಾಗಿ ಸಣ್ಣ ಪುಟ್ಟ ಕಾಯಿಲೆಗಳೂ ದೇಹವನ್ನು ಆವರಿಸುವುದಿಲ್ಲ.

ಅಲೋವೆರಾ ಜ್ಯೂಸ್‌

if you have these problems consume aloe vera juice | ಆಲೋವಿರಾ ಜ್ಯೂಸ್ ಕುಡಿದರೆ  ಈ ಎಲ್ಲಾ ರೋಗಗಳಿಂದ ದೂರವಿರಬಹುದು Health News in Kannada

ಜ್ಯೂಸ್‌ಗಳ ಪೈಕಿ ಅದ್ಭುತ ಶಕ್ತಿ ಹೊಂದಿರುವ ಅಲೋವೆರಾ ಜ್ಯೂಸ್‌ ಇಡೀ ದೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೇರಳವಾದ ಪೌಷ್ಠಿಕಾಂಶ ಪಾನೀಯವಾಗಿರುವುದರಿಂದ, ಅಲೋವೆರಾ ಜ್ಯೂಸ್ ಚರ್ಮದ ಆರೋಗ್ಯವನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಇದು ನಿಮ್ಮ ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಪಾನೀಯವಾಗಿದೆ. ಅಲೋವೆರಾ ದೇಹವನ್ನು ತಂಪಾಗಿರಿ ಬೇಸಿಗೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

These Drinks Improve Your Health.