ವಾರಕ್ಕೊಮ್ಮೆ ಮೊಳಕೆ ಹುರುಳಿಕಾಳು ಸಾರು ಊಟ ಮಾಡಿ.. ಆರೋಗ್ಯ ಪ್ರಯೋಜನ ಸ್ವತಃ ನೋಡಿ…

16-04-22 09:22 pm       Source: Vijayakarnataka   ಡಾಕ್ಟರ್ಸ್ ನೋಟ್

ಮೊಳಕೆ ಹುರುಳಿಕಾಳು ಸಾರು ಊಟ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ಗೊತ್ತಾ?

ಕಾಳುಗಳ ಸೇವನೆ ಇತ್ತೀಚಿನ ದಿನಗಳಲ್ಲಿ ಮರೀಚಿಕೆಯಾಗುತ್ತಿದೆ. ಆಧುನಿಕ ಜೀವನಶೈಲಿಗೆ ಬಹುತೇಕ ಒಗ್ಗಿಕೊಂಡಿರುವವರು ಟೇಸ್ಟಿ ಟೇಸ್ಟಿ ಫುಡ್‌ ಅಂದರೆ ಅದು ಪಿಜ್ಜಾ, ಬರ್ಗರ್‌ ಅಂತಾ ಅಂದುಕೊಂಡಿದ್ದಾರೆ. ಕೇವಲ ನಾಲಿಗೆ ರುಚಿಯ ಮೇಲೆ ಮಾತ್ರ ಕೇಂದ್ರೀಕರಿಸಿದರೆ ಹೇಗೆ? ದೇಹದ ಆರೋಗ್ಯದ ಕಾಳಜಿ ವಹಿಸುವುದು ಕೂಡ ನಿಮ್ಮ ಹೊಣೆಯಲ್ಲವೇ?

ಹಾಗಾದರೆ ನಾವು ಆರೋಗ್ಯಕರವಾದ ಜೀವನ ಸಾಗಿಸಲು ಎಂತಹ ಆಹಾರಗಳನ್ನು ಸೇವನೆ ಮಾಡಬೇಕು? ಇದಕ್ಕೆ ಉತ್ತರ, ನಮ್ಮ ಹಿರಿಯರು ಗಟ್ಟಿಮುಟ್ಟಿಯಾದ ಶರೀರ ಮತ್ತು ಆರೋಗ್ಯವನ್ನು ಕಾಪಾಡಲು ಹಣ್ಣು, ತರಕಾರಿಗಳ ಜೊತೆ ಜೊತೆಗೆ ಧಾನ್ಯಗಳು, ಕಾಳುಗಳನ್ನು ಕೂಡ ಹೆಚ್ಚಾಗಿ ಸೇವನೆ ಮಾಡುತ್ತಿದ್ದರು.

ಬಿಸಿ ಬಿಸಿ ಮುದ್ದೆಯ ಜೊತೆ ಮೊಳಕೆ ಹುರುಳಿಕಾಳಿನ ಸಾರು ಊಟದ ಸ್ವಾದವನ್ನು ಹೆಚ್ಚಿಸುವುದು ಮಾತ್ರವಲ್ಲ ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬುತ್ತದೆ. ಮೊಳಕೆ ಹುರುಳಿಕಾಳಿನ ಬಗ್ಗೆ ಮತ್ತಷ್ಟು ಮಾಹಿತಿ ನಿಮಗಾಗಿ…

ಹುರುಳಿಕಾಳು ಸೂಪರ್ ಫುಡ್‌ ಆಗಿದೆ

10 Iron Rich Foods To Add To Your Diet - PharmEasy

  • ಹುರುಳಿಕಾಳನ್ನು ಸೂಪರ್ ಫುಡ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
  • ಇದು ಮುಖ್ಯವಾಗಿ ಭಾರತದ ದಕ್ಷಿಣ ಭಾಗದಲ್ಲಿ ವಾಸಿಸುತ್ತಿರುವವರು ತಮ್ಮ ಪ್ರಧಾನವಾದ ಆಹಾರವಾಗಿ ಸೇವನೆ ಮಾಡುತ್ತಾರೆ.
  • ಹುರುಳಿಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿಂದ ತುಂಬಿದ್ದು, ಸಾಕಷ್ಟು ಖನಿಜಗಳು, ರಂಜಕ, ಕ್ಯಾಲ್ಸಿಯಂ, ಪ್ರೋಟೀನ್‌ ಮತ್ತು ಕಬ್ಬಿಣ ಹೇರಳವಾಗಿದೆ.
  • ಇಷ್ಟು ಪೋಷಕಾಂಶಗಳನ್ನು ಹೊಂದಿರುವ ಹುರುಳಿಕಾಳಿನ ಸಾರು ಮಾನವನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಅತಿಸಾರಕ್ಕೆ ಚಿಕಿತ್ಸೆ

weight loss food: ವಾರಕ್ಕೊಮ್ಮೆ ಮೊಳಕೆ ಹುರುಳಿಕಾಳು ಸಾರು ಊಟ ಮಾಡಿ.. ಆರೋಗ್ಯ  ಪ್ರಯೋಜನ ಸ್ವತಃ ನೋಡಿ… - Vijaya Karnataka

  • ಈ ಮೊಳಕೆ ಕಟ್ಟಿದ ಹುರುಳಿಕಾಳಿನ ಸಾರು ಊಟ ಮಾಡುವುದರಿಂದ ಅತಿಸಾರಕ್ಕೆ ಚಿಕಿತ್ಸೆ ಪಡೆಯಬಹುದು.
  • ಇದು ಉತ್ತಮ ಪ್ರಮಾಣದ ಫೈಬರ್‌ ಅನ್ನು ಹೊಂದಿದೆ.
  • ಫೈಬರ್‌ ಭರಿತ ಆಹಾರವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.
  • ಅಲ್ಲದೆ, ಕರುಳು ಮತ್ತು ಹೊಟ್ಟೆಯಲ್ಲಿನ ಹೆಚ್ಚುವರಿ ದ್ರವಗಳನ್ನು ಹೀರಿಕೊಳ್ಳುವ ಮೂಲಕ ಅತಿಸಾರ ಮತ್ತು ಸಡಿಲ ಚಲನೆಯ ಸಂಭವವನ್ನು ಕಡಿಮೆ ಮಾಡುತ್ತದೆ.
  • ನಿಮ್ಮ ಹೊಟ್ಟೆಯನ್ನು ತಂಪಾಗಿಡಲು ಮೊಳಕೆ ಕಟ್ಟಿದ ಹುರುಳಿಕಾಳು ಸಹಾಯ ಮಾಡುತ್ತದೆ.

ತೂಕ ಇಳಿಕೆ ಮತ್ತು ಉತ್ತಮ ಕೊಲೆಸ್ಟ್ರಾಲ್‌

ಬೆಲ್ಲಿ ಫ್ಯಾಟ್ ಅನ್ನು ಕರಗಿಸುವ 6 ಆಹಾರ ಪದಾರ್ಥಗಳು | ಸಲಹೆ,ತೂಕ ಇಳಿಕೆ,Kannada |  Blog Post by ಸೌಮ್ಯ ಕೆ. ಬಿ. | ಮೊಮ್ಸ್ಪ್ರೆಸೊ

ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಹೊಂದಿರುವುದರಿಂದ ನಿಮ್ಮ ತೂಕವನ್ನು ನಿಸ್ಸಂದೇಹವಾಗಿ ಕಡಿಮೆ ಮಾಡುತ್ತದೆ. ವಾರಕ್ಕೆ 2 ರಿಂದ 3 ಬಾರಿ ನೀವು ಮೊಳಕೆ ಕಾಳಿನ ಸಾರು ಊಟ ಮಾಡಬಹುದು. ಕುರುಕುಲು ತಿಂಡಿಯಂತೆ ಸಲಾಡ್‌ ರೂಪದಲ್ಲಿ ಕೂಡ ತಿನ್ನಬಹುದು.

ಏಕೆಂದರೆ ಹುರುಳಿ ಕಾಳುಗಳು ರಕ್ತ ಪ್ರವಾಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ. ಹುರುಳಿ ಕಾಳುಗಳನ್ನು ಸೇವನೆ ಮಾಡಿದಾಗ ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್‌ಗೆ ಚಿಕಿತ್ಸೆ ನೀಡಲು ಖಾಲಿ ಹೊಟ್ಟೆಯಲ್ಲಿ ನೆನೆಸಿದ ಹುರುಳಿಕಾಳುಗಳನ್ನು ಸೇವನೆ ಮಾಡಬಹುದು. ಇದರ ಪರಿಣಾಮ ಸುಲಭವಾಗಿ ನೀವು ತೂಕವನ್ನು ಕಳೆದುಕೊಳ್ಳುತ್ತೀರಿ.

ಮಲಬದ್ಧತೆ

ಮಲಬದ್ಧತೆ ಅಪಾಯಕಾರಿ ಏಕೆ? - Varthabharati

ನೀವು ಮಲಬದ್ಧತೆಯ ತೊಂದರೆಯನ್ನು ಹೊಂದಿದ್ದರೆ, ಹುರುಳಿಕಾಳನ್ನು ಸೇವನೆ ಮಾಡುವುದು ಉತ್ತಮ. ಏಕೆಂದರೆ ಈಗಾಗಲೇ ಹೇಳಿದಂತೆ ಇದು ಫೈಬರ್‌ನಿಂದ ತುಂಬಿರುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ.

ಮುಖ್ಯವಾಗಿ ಆಹಾರದಲ್ಲಿ ನಾರಿನಂಶದ ಕೊರತೆ, ನೀರು ಕುಡಿಯದೇ ಇರುವುದು, ಖನಿಜಾಂಶಗಳ ಕೊರತೆ, ಒತ್ತಡ ಮತ್ತು ಅನಾರೋಗ್ಯಕರವಾದ ಜೀವನಶೈಲಿ ಪರಿಣಾಮವಾಗಿ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ನೀವು ಹುರುಳಿ ಕಾಳಿನ ಸಲಾಡ್‌ ಅಥವಾ ಸಾರಿನ ರೂಪದಲ್ಲಿ ಸೇವನೆ ಮಾಡಿ.

ಪೈಲ್ಸ್‌ಗೆ ಚಿಕಿತ್ಸೆ

ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-ಈ ಮನೆಮದ್ದನ್ನು ಪ್ರಯತ್ನಿಸಿ | Effective  Home Remedies To Treat Constipation - Kannada BoldSky

ಈಗಾಗಲೇ ಪೈಲ್ಸ್ ನಿಂದ ಬಳಲುತ್ತಿರುವವರು ಅಥವಾ ಭವಿಷ್ಯದಲ್ಲಿ ಪೈಲ್ಸ್‌ ಬಾರದೇ ಇರುವುದನ್ನು ತಡೆಯಲು ಮೊಳಕೆಕಾಳಿನ ಖಾದ್ಯಗಳು ನಿಮಗೆ ಸಹಾಯ ಮಾಡುತ್ತದೆ. ಗುದನಾಳದಲ್ಲಿನ ರಕ್ತನಾಳಗಳು ನೋವಿನಿಂದ ಮತ್ತು ಉಬ್ಬಿದಾಗ ಪೈಲ್ಸ್‌ ಸಂಭವಿಸುತ್ತದೆ.

ಔಷಧಿಗಳ ಜೊತೆ ಜೊತೆಗೆ ಆರೋಗ್ಯಕರವಾದ ಆಹಾರದ ಸೇವನೆ ಕೂಡ ಅಷ್ಟೇ ಮುಖ್ಯವಾಗಿರುವುದರಿಂದ ನೆನೆಸಿದ ಹುರುಳಿಕಾಳುಗಳನ್ನು ಸೇವನೆ ಮಾಡಿ. ಮಲಬದ್ಧತೆಯು ಪೈಲ್ಸ್‌ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುವುದರಿಂದ ಹುರುಳಿಕಾಳುಗಳನ್ನು ಸೇವನೆ ಮಾಡುವುದು ಉತ್ತಮ. ಇದು ನಿಮ್ಮ ಪೈಲ್ಸ್‌ ಸಮಸ್ಯೆಗೆ ನಿಸ್ಸಂದೇಹವಾಗಿ ಸೂಕ್ತವಾದ ಆಹಾರವಾಗಿದೆ.

ಮಧಮೇಹ

Type 1 diabetes: ಮಕ್ಕಳಲ್ಲಿ ಟೈಪ್ 1 ಮಧುಮೇಹದ ಸಾಮಾನ್ಯ ಲಕ್ಷಣಗಳು ಯಾವುದು? - Vijaya  Karnataka

ಮಧುಮೇಹ ಹೊಂದಿರುವವರು ಯಾವ ಆಹಾರವನ್ನು ಸೇವನೆ ಮಾಡಬೇಕು? ಯಾವ ಆಹಾರದಿಂದ ದೂರ ಉಳಿಯಬೇಕು ಎಂಬ ಗೊಂದಲವನ್ನು ಹೊಂದಿರುತ್ತಾರೆ. ಅಂತವರಿಗೆ ಮೊಳಕೆ ಕಟ್ಟಿದ ಉರುಳಿಕಾಳುಗಳು ಬಹಳ ಉತ್ತಮವಾದ ಆಹಾರವಾಗಿದೆ.

ಏಕೆಂದರೆ ಇದರಲ್ಲಿ ಹೈಪರ್ಗ್ಲೈಸೆಮಿಕ್‌ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಇನ್ಸುಲಿನ್‌ ಪ್ರತಿರೋಧವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ ಎಂದು ತಿಳಿಸುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ಕಡಿಮೆ ಮಾಡುವ ಪ್ರಬಲವಾದ ಗುಣವನ್ನು ಹೊಂದಿದೆ.

Molake Huruli Kaalu Saaru Benefits In Kannada.