ನಿಂಬೆಯಿಂದ ರಸ ಹಿಂಡಿದ ಬಳಿಕ, ಇದರ ಸಿಪ್ಪೆಯನ್ನು ಬಿಸಾಡಿದರೆ ನಿಮಗೆಯೇ ಲಾಸ್!!

18-04-22 07:56 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ನಿಂಬೆ ಹಣ್ಣು ಎಷ್ಟು ಆರೋಗ್ಯಕಾರಿಯೋ, ಅಷ್ಟೇ ಆರೋಗ್ಯಕಾರಿ ಗುಣಗಳು ಇದರ ಸಿಪ್ಪೆಯಲ್ಲಿ ಕೂಡ ಅಡಗಿದೆ!

ಸಿಟ್ರಸ್ ಜಾತಿಗೆ ಸೇರಿರುವ ಈ ನಿಂಬೆ ಹಣ್ಣನ್ನು ಎಷ್ಟು ಹೊಗಳಿದರೂ ಕಮ್ಮಿಯೇ! ಇದಕ್ಕೆ ಮುಖ್ಯ ಕಾರಣಗಳು ಇದರಲ್ಲಿ ಅಡುಗಿರುವ ಆರೋಗ್ಯಕಾರಿ ಪ್ರಯೋಜನಗಳು... ದೇಹದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಜೊತೆಗೆ, ದೇಹದ ತೂಕವನ್ನು ಕಡಿಮೆ ಮಾಡುವ ವರೆಗೂ, ಹಲವು ರೀತಿಯಿಂದ ಪ್ರಯೋಜನಕ್ಕೆ ಬರುತ್ತವೆ...

ಇನ್ನು ಬೇಸಿಗೆಯಲ್ಲಿ ನಿಂಬೆ ಹಣ್ಣಿಗೆ ಡಿಮ್ಯಾಂಡು ಜಾಸ್ತಿ! ಯಾಕೆಂದರೆ ಇದರಲ್ಲಿ ಅಡಗಿರುವ ತಂಪುಕಾರಕ ಗುಣಲಕ್ಷಣಗಳು, ನಮ್ಮ ದೇಹವನ್ನು ತಂಪಾಗಿಸುವ ಜೊತೆಗೆ ಬಿಸಿಲಿನಿಂದ ಉಂಟಾಗುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ಕೂಡ ಪರಿಹರಿಸುತ್ತದೆ..

ಆದರೆ ನಿಂಬೆ ಹಣ್ಣಿನ ತಿರುಳು ಎಷ್ಟು ಪ್ರಯೋಜನಕಾರಿಯೋ, ಅದರಷ್ಟೇ ಪ್ರಯೋಜನಕಾರಿ ಈ ನಿಂಬೆ ಹಣ್ಣಿನ ಸಿಪ್ಪೆ! ಹೌದು ಸಾಮಾನ್ಯವಾಗಿ ನಾವೆಲ್ಲರೂ ಕೂಡ ನಿಂಬೆ ಹಣ್ಣನ್ನು ಬಳಕೆ ಮಾಡಿಕೊಂಡ ಬಳಿಕ, ಅದರ ಸಿಪ್ಪೆಯಿಂದ ಇನ್ನೇನು ಕೆಲಸ ಎಂದು ಡಸ್ಟ್‌ಬಿನ್‌ಗೆ ಹಾಕಿ ಬಿಡುತ್ತೇವೆ... ಆದರೆ ನೆನಪಿಡಿ ನಿಂಬೆಹಣ್ಣಿನಂತೆಯೇ ಇದರ ಸಿಪ್ಪೆಯಿಂದ ಕೂಡ ನಮ್ಮ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯಕಾರಿ ಲಾಭಗಳು ಇವೆ...

ನಿಂಬೆ ಸಿಪ್ಪೆಯ ಪವರ್...

Raw Food How To: Store Lemons and Limes (and Other Citrus) | Planted365

  • ತಜ್ಞರು ಹೇಳುವ ಪ್ರಕಾರ, ನಿಂಬೆ ಹಣ್ಣಿಗೆ ಹೋಲಿಸಿದರೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ದುಪ್ಪಟ್ಟು ಪೌಷ್ಟಿಕಾಂಶಗಳು ಹಾಗೂ ವಿಟಮಿನ್ಸ್ ಗಳು ಕಂಡು ಬರುತ್ತದೆಯಂತೆ! ಇವು ನಮ್ಮ ಆರೋಗ್ಯ ವನ್ನು ವೃದ್ಧಿಸಲು ನೆರವಾಗುವುದು ಮಾತ್ರವಲ್ಲದೆ, ಕೆಲವೊಂದು ಸೋಂಕುಗಳ ವಿರುದ್ಧ ಕೂಡ ಹೋರಾಡಿ ನಮ್ಮನ್ನು ರಕ್ಷಣೆ ನೀಡುತ್ತದೆ.
  • ಅಧ್ಯಾಯನದ ವರದಿಗಳ ಪ್ರಕಾರ ನಿಂಬೆ ಸಿಪ್ಪೆಯಲ್ಲಿಡಿ ಲಿಮೊನೈನ್ ಎಂಬ ಫ್ಲ್ಯಾವನೋಯ್ಡ್ ಅಂಶ ಮತ್ತು ಯಥೇಚ್ಛವಾಗಿ ವಿಟಮಿನ್ ಸಿ ಅಂಶ ಕಂಡು ಬರುವುದರಿಂದ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಕೂಡ ಇದರಲ್ಲಿ ಹೇರಳವಾಗಿ ಕಂಡು ಬರುವುದರಿಂದ, ದೇಹದ ಉರಿ ಯೂತದ ಸಮಸ್ಯೆಗಳನ್ನು ಕೂಡ ನಿವಾರಿಸಲು ಸಹಾಯ ಮಾಡುತ್ತವೆ..

ಹೃದಯದ ಸಮಸ್ಯೆಗಳು

causes of heart disease: ಇದು ಹೃದಯಕ್ಕೆ ಕಾಡುವ ಒಂದು ರೀತಿಯ ವಿಚಿತ್ರ ಕಾಯಿಲೆ! -  what is an enlarged heart, know the symptoms and causes | Vijaya Karnataka

  • ಇತ್ತೀಚಿನ ದಿನಗಳಲ್ಲಿ, ಸಣ್ಣ ವಯಸ್ಸಿನವರೆಗೆಯೇ ಹೆಚ್ಚಾಗಿ ಹೃದಯದ ಸಮಸ್ಯೆಗಳು ಕಂಡು ಬರುತ್ತಿರುವುದು, ನಿಜಕ್ಕೂ ಆಘಾತಕಾರಿ ಸಂಗತಿ.. ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಕೆಟ್ಟ ಜೀವನ ಶೈಲಿ, ಎಣ್ಣೆ ಯುಕ್ತ ಆಹಾರ ಪದಾರ್ಥಗಳ ಸೇವನೆ, ಮಿತಿಮೀರಿ ಜಂಕ್ ಫುಡ್ ತಿನ್ನುವುದು ಇತ್ಯಾದಿ ಕಾರಣಗಳಿಂದಾಗಿ ರಕ್ತದಲ್ಲಿ ಏರುಪೇರಾಗಿ ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಜನರಲ್ಲಿ ಹೃದಯದ ಕಾಯಿಲೆಗಳನ್ನು ಉಂಟು ಮಾಡಿಬಿಡುತ್ತದೆ.
  • ಹೀಗಾಗಿ ಈ ಸಮಸ್ಯೆಯಿಂದ ಪಾರಾಗಲು, ಆರೋಗ್ಯಕಾರಿ ಜೀವನಶೈಲಿ ಹಾಗೂ ಆಹಾರಪದ್ಧತಿ ಅನುಸರಿಸುವ ಜೊತೆಗೆ, ತುರಿದ ನಿಂಬೆ ಸಿಪ್ಪೆಯನ್ನು, ನಿಮ್ಮ ದೈನಂದಿನ ಸಲಾಡ್‌ಗಳಲ್ಲಿ ಅಥವಾ ಪಲ್ಯಗಳಲ್ಲಿ ಇಲ್ಲಾಂದ್ರೆ ಪದಾರ್ಥಗಳ ಮೇಲೆ ಚುಮುಕಿಸಿ ಸೇವನೆ ಮಾಡಬಹುದು.

ಸರಿಯಾಗಿ ಜೀರ್ಣಕ್ರಿಯೆ ಆಗದೇ ಇರುವ ಸಮಸ್ಯೆಗಳಿದ್ದರೆ...

ಜೀರ್ಣಕ್ರಿಯೆ ಸಮಸ್ಯೆ ಕಾಡಬಾರದಂತಿದ್ದರೆ ಅನುಸರಿಸಿ ಈ ಟಿಪ್ಸ್ - Kannada Dunia |  DailyHunt Lite

ಕೆಲವೊಮ್ಮೆ ಅನಾರೋಗ್ಯಕರ ಆಹಾರಪದಾರ್ಥಗಳ ಸೇವನೆಯಿಂದಾಗಿ ಜೀರ್ಣ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡು ಬರುತ್ತದೆ.. ಹೀಗಾಗಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ ಅಜೀರ್ಣ ಸಮಸ್ಯೆಗಳು ಉಂಟಾಗಿ ಬಿಡುತ್ತದೆ, ಅಲ್ಲದೇ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ಕಾಡುತ್ತದೆ ಒಂದು ವೇಳೆ ನಿಮಗೂ ಕೂಡ ಈ ಸಮಸ್ಯೆಗಳು ಕಂಡು ಬಂದರೆ, ನಿಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಇಲ್ಲಾಂದ್ರೆ ತುರಿದುಕೊಂಡ ನಿಂಬೆ ಹಣ್ಣಿನ ಸಿಪ್ಪೆ ಯನ್ನು ಒಣಗಿಸಿ ಪುಡಿ ರೀತಿ ಮಾಡಿಕೊಂಡು ಸೇವನೆ ಮಾಡಿದರೆ, ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.

ಕಿಡ್ನಿಗಳಲ್ಲಿ ಸ್ಟೋನ್ ಆಗಿ ಬಿಟ್ಟರೆ

remedies for kidney stones: ನಿಮಗೆ ಗೊತ್ತಾ? ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾರ್ಲಿ  ನೀರು ಹೇಳಿ ಮಾಡಿಸಿದ ಮನೆಮದ್ದು! - Vijaya Karnataka

  • ಮೂತ್ರಪಿಂಡಗಳಲ್ಲಿ ಕಲ್ಲು ಅಥವಾ ಕಿಡ್ನಿಗಳಲ್ಲಿ ಸ್ಟೋನ್ ಆಗಿ ಬಿಟ್ಟರೆ, ಮುಗಿಯಿತು! ಆಮೇಲೆ ಇದರಿಂದ ಬರುವ ನೋವು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಅನುಭವಿಸಿದವರಿಗೆಯೇ ಗೊತ್ತು! ಈ ಸಮಸ್ಯೆ ಇರುವವರು, ವೈದ್ಯರು ನೀಡಿರುವ ಸಲಹೆಗಳನ್ನು ಹಾಗೂ ಔಷಧಿಗಳನ್ನು ಸರಿಯಾಗಿ ಅನುಸರಿಸುವುದರ ಜೊತೆಗೆ ಕೆಲವೊಂದು ಮನೆಮದ್ದು ಗಳನ್ನು ಕೂಡ ಅನುಸರಿಸ ಬೇಕು.
  • ಒಂದು ವೇಳೆ ನಿಮಗೂ ಕೂಡ ಈ ಸಮಸ್ಯೆಗಳಿದ್ದರೆ, ತುರಿದ ನಿಂಬೆ ಹಣ್ಣಿನ ಸಿಪ್ಪೆಯ ಕಷಾಯ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಎರಡು ವಾರಕ್ಕೆ ಒಮ್ಮೆ, ಟಿಪ್ಸ್ ಅನ್ನು ಅನುಸರಿಸುತ್ತಾ ಬರುವುದರಿಂದ ಕಿಡ್ನಿಯಲ್ಲಿ ಕಂಡು ಬರುವ ಕಲ್ಲುಗಳು ಕರಗಿ ಹೋಗುತ್ತವೆ ಹಾಗೂ ನೋವು ಕೂಡ ಕಡಿಮೆ ಆಗಿ ಬಿಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದರಲ್ಲಿದೆ

Cancer Symptoms: ಖತರ್ನಾಕ್ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ನ ಕೆಲವು ಲಕ್ಷಣಗಳು -  Vijaya Karnataka

  • ಕ್ಯಾನ್ಸರ್ ಎನ್ನುವ ಪದ ಕೇಳಿದರೆ ಸಾಕು ಕೈಕಾಲುಗಳಲ್ಲಿ ನಡುಕ ಉಂಟಾಗಿ ಬಿಡುತ್ತದೆ. ಕೈಯಲ್ಲಿ ಹಣ ಇದ್ದವರು, ಹಾಗೂ ಆಯುಷ್ಯ ಗಟ್ಟಿ ಇದ್ದವರು ಹೇಗೋ, ಈ ಕಾಯಿಲೆಯ ವಿರುದ್ಧ ಹೋರಾಡಿ ಗೆಲ್ಲುತ್ತಾರೆ.. ಆದ್ರೆ ಮಧ್ಯಮ ವರ್ಗದ ಜನ ಸಾಮಾನ್ಯರು ಮಾತ್ರ, ಈ ಕಾಯಿಲೆಯ ಬಲೆಗೆ ಸಿಕ್ಕಾಕಿ ಕೊಂಡರೆ, ಇದರಿಂದ ಹೊರಬರುವುದು ಅಷ್ಟು ಸುಲಭದ ಮಾತಲ್ಲ!
  • ಹಾಗಂತ ಈ ಕಾಯಿಲೆಯ ವಿರುದ್ಧ ಗೆಲ್ಲಲ್ಲು ಸಾಧ್ಯವೇ ಇಲ್ಲ, ಎನ್ನುವ ಹಾಗಿಲ್ಲ, ಕೆಲವೊಂದು ಮನೆಮದ್ದು ಗಳು ದುಬಾರಿ ಚಿಕಿತ್ಸೆಗಳಿಗಿಂತಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ನಿಂಬೆ ಹಣ್ಣಿನ ಸಿಪ್ಪೆ!
  • ಹೌದು ನಿಂಬೆ ಹಣ್ಣಿನ ಸಿಪ್ಪೆಯಲ್ಲಿರುವ ಲಿಮೋನೈನ್ ಎನ್ನುವ ಅಂಶ, ಕ್ಯಾನ್ಸರ್ ವಿರುದ್ಧ ಹೋರಾಡುವ ಎಲ್ಲಾ ಗುಣಲಕ್ಷಣಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ದೇಹದಲ್ಲಿ ಯಾವುದೇ ಕಾರಣಕ್ಕೂ ಕ್ಯಾನ್ಸರ್ ಜೀವಕೋಶಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳುತ್ತದೆ!

ಇನ್ನು ನಿಂಬೆ ಸಿಪ್ಪೆಯನ್ನು ಬಳಸುವ ವಿಧಾನ ಹೇಗೆ?

lemon peel for glowing skin: ಮುಖ ಬೆಳ್ಳಗೆ ಕಾಣಬೇಕಾ? ನಿಂಬೆ ಸಿಪ್ಪೆಯ ಫೇಸ್ ಪ್ಯಾಕ್  ಟ್ರೈ ಮಾಡಿ! - Vijaya Karnataka

  • ಮೊದಲಿಗೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು, ರಾತ್ರಿ ಮಲಗುವ ಮುನ್ನ ಫ್ರಿಡ್ಜ್‌ನಲ್ಲಿ ಹಾಗೆಯೇ ಇಟ್ಟುಬಿಡಿ. ನಂತರ ಮರುದಿನ ನಿಂಬೆ ಹಣ್ಣನ್ನು ಫ್ರಿಡ್ಜ್‌‌ನಿಂದ ನಿಂಬೆ ಹಣ್ಣನ್ನು ತೆಗೆದು ಚೆನ್ನಾಗಿ ತುರಿದು, ಒಂದು ಏರ್ ಕಂಟೈನರ್ ಡಬ್ಬದಲ್ಲಿ ಇಟ್ಟುಕೊಂಡಿರಿ..
  • ಇನ್ನು ನೀವು ದಿನನಿತ್ಯ ತಯಾರುಮಾಡಿ ಸೇವನೆ ಮಾಡುವಯಾವುದೇ ಅಡುಗೆ ಪದಾರ್ಥಗಳ ಮೇಲೆ ಇದನ್ನು ಹಾಕಿ ಸೇವಿಸಬಹುದು. ಉದಾಹರಣೆಗೆ ಸಲಾಡ್ ಗಳಲ್ಲಿ ಅಥವಾ ಸಾಂಬರ್, ಪಲ್ಯಗಳಿಗೂ ಕೂಡ ಇದನ್ನು ಬೆರೆಸಿ ಸೇವಿಸಬಹುದು.
  • ನೀವು ಕುಡಿಯುವ ನೀರಿಗೂ ಕೂಡ, ಸ್ವಲ್ಪ ಇದನ್ನು ಬೆರೆಸಿಕೊಂಡು ಕುಡಿಯಬಹುದು. ಹಾಗಾಗಿ ಮುಂದಿನ ಸಲ ನಿಂಬೆಹಣ್ಣಿನ ಬಳಕೆ ಮಾಡಿದರೆ, ತಪ್ಪಿಯೂ ಕೂಡ ಇದರ ಸಿಪ್ಪೆಯನ್ನು ಮಾತ್ರ ಬಿಸಾಡಬೇಡಿ!

Know The Surprising Health Benefits Of Lemon Peels Or Zest.