ದ್ರಾಕ್ಷಿಗಳನ್ನು ಕಡೆಗಣಿಸುವವರು ಓದಿ ಈ ಮಾಹಿತಿ.

20-04-22 07:12 pm       Source: Vijayakarnataka   ಡಾಕ್ಟರ್ಸ್ ನೋಟ್

ಪುಟ್ಟ ಪುಟ್ಟ ದ್ರಾಕ್ಷಿಗಳು ಆರೋಗ್ಯ ಮತ್ತು ಸೌಂದರ್ಯಕ್ಕೆ ಚಮತ್ಕಾರ ಮಾಡುತ್ತವೆ.

ಸಣ್ಣ ಸಣ್ಣ ದ್ರಾಕ್ಷಿಗಳು ದೊಡ್ಡ ದೊಡ್ಡ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಸಂಜೆಯ ಸಮಯದಲ್ಲಿ ಆರೋಗ್ಯಕರವಾದ ಕುರುಕಲು ತಿಂಡಿಯಾಗಿದೆ. ನೈಸರ್ಗಿಕವಾಗಿ ದ್ರಾಕ್ಷಿಗಳು ಹಸಿರು, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುತ್ತವೆ.

ಬಹುತೇಕರು ಹಸಿರು ಬಣ್ಣದ ದ್ರಾಕ್ಷಿಯನ್ನು ಹೆಚ್ಚಾಗಿ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಆದರೆ ತಿಳಿದಿರಲಿ, ಹಸಿರು ಬಣ್ಣದ ದ್ರಾಕ್ಷಿಗಿಂತ ಕಪ್ಪು ಬಣ್ಣದ ದ್ರಾಕ್ಷಿ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ವಿಶೇಷವಾಗಿ ದ್ರಾಕ್ಷಿ ಹಣ್ಣುಗಳು ರೆಸ್ವೆರಾಟ್ರೋಲ್‌ ಅನ್ನು ಹೊಂದಿರುತ್ತದೆ. ಆದರೆ ಇದು ಆರೋಗ್ಯಕರವಾದ ರೆಸ್ವೆರಾಟ್ರೋಲ್‌ಗಳು ಕಪ್ಪು ಬಣ್ಣದ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

ಆಂಟಿ ಆಕ್ಸಿಡೆಂಟ್‌ನ ಶ್ರೀಮಂತ ಮೂಲ

Grapes: the Peruvian superfood that keeps on conquering the world | Peru  Info

  • ಸಣ್ಣ ಸಣ್ಣ ದ್ರಾಕ್ಷಿಗಳು ಆಂಟಿ ಆಕ್ಸಿಡೆಂಟ್‌ ಅನ್ನು ಹೇರಳವಾಗಿ ಹೊಂದಿದೆ.
  • ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೊರಾಡಿ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
  • ಅಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.
  • ಹಸಿರು ದ್ರಾಕ್ಷಿಯಲ್ಲಿ ವಿಟಮಿನ್‌ ಸಿ ಯಥೇಚ್ಛವಾಗಿದೆ.
  • ಹಾಗೆಯೇ ಆಂಟಿಆಕ್ಸಿಡೆಂಟ್‌ನ ವಿಷಯಕ್ಕೆ ಬಂದರೆ ಎರಡು ಬಣ್ಣದ ದ್ರಾಕ್ಷಿಗಳು ಉತ್ತಮವಾದ ಮೂಲವನ್ನು ಹೊಂದಿದೆ.
  • ಇವು ಚರ್ಮದ ಕಾಂತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತದೆ.

ಹೃದಯಕ್ಕೆ ಒಳ್ಳೆಯದು

Nashik Grapes at Rs 85/kg | pimpalgaon Baswant | Nashik| ID: 23065643130

  • ದ್ರಾಕ್ಷಿಗಳು ಅಪಾಯಕಾರಿ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
  • ಒಂದೊಂದು ಹಣ್ಣುಗಳು ತಮ್ಮದೇ ಆದ ಗುಣಗಳಿಂದ ಮತ್ತು ಪೋಷಕಾಂಶಗಳಿಂದ ಮಾನವನ ಆರೋಗ್ಯವನ್ನು ಕಾಪಾಡುತ್ತಾ ಬಂದಿದೆ.
  • ಅದೇ ರೀತಿ ದ್ರಾಕ್ಷಿ ಹಣ್ಣುಗಳು ಕೂಡ ಹೃದಯ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಪ್ರತಿನಿತ್ಯ ನಿಯಮಿತವಾಗಿ ದ್ರಾಕ್ಷಿಗಳನ್ನು ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್‌ ಮಟ್ಟವನ್ನು ತಗ್ಗಿಸಿಕೊಳ್ಳಬಹುದಾಗಿದೆ.
  • ಇದರ ಪರಿಣಾಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅಧಿಕ ರಕ್ತದೊತ್ತಡ ಮತ್ತು ಬೇಸಿಗೆಯ ಪಾನೀಯ

38,251 Grapes In Water Stock Photos, Pictures & Royalty-Free Images - iStock

  • ದ್ರಾಕ್ಷಿಗಳು ಪೊಟ್ಯಾಶಿಯಂನಿಂದ ಸಮೃದ್ಧವಾಗಿರುವುದರಿಂದ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡುತ್ತದೆ.
  • ಇದರಿಂದ ಮಾರಣಾಂತಿಕ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
  • ದ್ರಾಕ್ಷಿ ಹಣ್ಣಿನ ಜ್ಯೂಸ್ ಬೇಸಿಗೆಯ ಅತ್ಯುತ್ತಮವಾದ ಪಾನೀಯವಾಗಿದೆ. ನಿಮ್ಮ ದಾಹವನ್ನು ತೀರಿಸಿ, ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.
  • ಅಲ್ಲದೆ, ನಿಮ್ಮ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಲು ದ್ರಾಕ್ಷಿ ಹಣ್ಣಿನ ಜ್ಯೂಸ್ ಸಹಾಯ ಮಾಡುತ್ತದೆ.
  • ದ್ರಾಕ್ಷಿ ಹಣ್ಣು ಸಾಕಷ್ಟು ನೀರು ಹೊಂದಿದ್ದು, ರಸಭರಿತವಾಗಿರುತ್ತವೆ.

ಚರ್ಮಕ್ಕೆ ಬಹಳ ಒಳ್ಳೆಯದು

Fresh Covid-19 lockdown in Europe cast shadow on India's grapes exports |  India News,The Indian Express

  • ದ್ರಾಕ್ಷಿಗಳು ಕೇವಲ ಅರೋಗ್ಯವನ್ನು ಪೋಷಿಸುವುದಿಲ್ಲ ಬದಲಾಗಿ ಯೌವನವಾಗಿರಲು ಉತ್ತೇಜಿಸುತ್ತದೆ.
  • ಇದರಲ್ಲಿ ಆಂಟಿಆಕ್ಸಿಟೆಂಟ್‌ಗಳು ತುಂಬಿದ್ದು, ಸುಕ್ಕುಗಳನ್ನು ಮತ್ತು ಸೂಕ್ಷ್ಮ ರೇಖೆಗಳಿಗೆ ಚಿಕಿತ್ಸೆ ನೀಡುತ್ತದೆ.
  • ಅಲ್ಲದೆ, ದ್ರಾಕ್ಷಿಗಳಲ್ಲಿ ವಿಟಮಿನ್‌ ಸಿ ಹೊಂದಿದೆ.
  • ಈ ವಿಟಮಿನ್‌ ಚರ್ಮದ ಕಾಂತಿಯನ್ನು ಒಳಗಿನಿಂದ ಮತ್ತು ಹೊರಗಿನಿಂದ ಪೋಷಿಸುತ್ತದೆ.
  • ಇನ್ನು ಕಾಲಜನ್‌ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.
  • ನಿಮ್ಮ ಫೇಸ್‌ ಪ್ಯಾಕ್‌ಗಳಲ್ಲಿ ದ್ರಾಕ್ಷಿಯ ರಸವನ್ನು ಮಿಶ್ರಣ ಮಾಡಿ, ಅನ್ವಯಿಸಿ.

ಮಲಬದ್ಧತೆ

Science of wine: European grapes have their genetic routes in western Asia  | New Scientist

  • ದ್ರಾಕ್ಷಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಾಗಿರುವ ಕಾರಣ ಪ್ರತಿನಿತ್ಯ ಸೇವನೆ ಮಾಡಬಹುದು.
  • ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುವುದರ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ.
  • ಹೊಟ್ಟೆಯ ಯಾವುದೇ ಸಮಸ್ಯೆಗೆ ದ್ರಾಕ್ಷಿ ಹಣ್ಣುಗಳು ಒಳ್ಳೆಯದು.
  • ಇದರಲ್ಲಿರುವ ಫೈಬರ್‌ ಗುಣವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ.
  • ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆಯಿಂದ ನಿಮ್ಮನ್ನು ಕಾಪಾಡುತ್ತದೆ.

ದ್ರಾಕ್ಷಿಯ ಮತ್ತಷ್ಟು ಪ್ರಯೋಜನಗಳು

health and beauty benefits of grapes: ದ್ರಾಕ್ಷಿಗಳನ್ನು ಕಡೆಗಣಿಸುವವರು ಓದಿ ಈ  ಮಾಹಿತಿ... - Vijaya Karnataka

  • ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  • ಮಧುಮೇಹ ಇರುವವರು ನಿಸ್ಸಂದೇಹವಾಗಿ ದ್ರಾಕ್ಷಿ ಹಣ್ಣುಗಳನ್ನು ಸೇವನೆ ಮಾಡಿ.
  • ಹೊಟ್ಟೆಯ ಉಬ್ಬರಕ್ಕೆ ದ್ರಾಕ್ಷಿ ಚಿಕಿತ್ಸೆ ನೀಡುತ್ತದೆ.
  • ಕ್ಯಾನ್ಸರ್‌ ಅನ್ನು ತಡೆಯುತ್ತದೆ.
  • ರೋಗ ನಿರೋಧಕ ಶಕ್ತಿ ಮತ್ತು ಪ್ರತಿರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತದೆ.

 

Health And Beauty Benefits Of Grapes.