ಬ್ರೇಕಿಂಗ್ ನ್ಯೂಸ್
21-04-22 08:38 pm Source: Vijayakarnataka ಡಾಕ್ಟರ್ಸ್ ನೋಟ್
ಮೂಳೆಗಳ ಮುರಿತ, ಮೂಳೆಗಳ ಕ್ಯಾನ್ಸರ್ ಅನುವಂಶಿಕ ಅಂಶಗಳೊಂದಿಗೆ ಸಂಬಂಧವನ್ನು ಹೊಂದಿದ್ದರು ಕೂಡ, ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವ ಅನೇಕ ಪೌಷ್ಟಿಕ ಆಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಮೂಳೆಗಳ ಅಪಾಯವನ್ನು ತಡೆಗಟ್ಟಬಹುದು.
ಇತ್ತೀಚೆಗೆ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುವುದನ್ನು ಜನರು ಮರತೇ ಬಿಟ್ಟಿದ್ದಾರೆ. ಹಿರಿಯರಲ್ಲಿ ಕಾಡುತ್ತಿದ್ದ ಮೂಳೆ ಸವೆತದ ಸಮಸ್ಯೆಗಳು ಯುವ ವಯಸ್ಸಿನಲ್ಲಿಯೇ ದಾಳಿ ಮಾಡುತ್ತಿರುವುದು ಬೇಸರದ ಸಂಗತಿ.
ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ, ದೇಹ ದಂಡನೆಯ ಕೊರೆತೆಯ ಕಾರಣ ಮೂಳೆಗಳ ಸಮಸ್ಯೆ ಎದುರಾಗಬಹುದು. ನಿಮಗಿದು ತಿಳಿದಿರಲಿ, ಎಲುಬಿನಲ್ಲಿ ಅಸಾಮಾನ್ಯ ಕೋಶಗಳು ನಿಯಂತ್ರಣವಿಲ್ಲದೆ ಬೆಳೆದಾಗ ಮೂಳೆ ಕ್ಯಾನ್ಸರ್ ಸಂಭವಿಸುತ್ತದೆ. ಇದು ಮೂಳೆಯ ಅಂಗಾಶಗಳನ್ನು ನಾಶ ಪಡಿಸುವುದು ಮಾತ್ರವಲ್ಲ ಬದಲಾಗಿ ದೇಹದ ಇತರ ಭಾಗಗಳಿಗೂ ಕೂಡ ಹರಡಬಹುದು.ಮೂಳೆ ಕ್ಯಾನ್ಸರ್ ಅಪರೂಪವಾಗಿದ್ದರು ಕೂಡ ದೇಹದ ಇತರ ಭಾಗಗಳಿಗೆ ಹರಡಿ, ಮೂಳೆಗಳ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬಲಿಷ್ಠವಾದ ಮೂಳೆಗೆ ಆಹಾರ
ಬಲಿಷ್ಠವಾದ ಮೂಳೆಗಳನ್ನು ಪಡೆಯಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕಾಗಿರುವುದು ಬಹಳ ಮುಖ್ಯ. ವಿಟಮಿನ್ ಡಿ, ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ. ಈ ಎರಡು ಪೋಷಕಾಂಶಗಳು ಬಲಿಷ್ಠವಾದ ಮೂಳೆಗಳಿಗೆ ಸಹಾಯ ಮಾಡುತ್ತವೆ.
ಯಾವ ಆಹಾರಗಳಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುತ್ತದೆ
ಒಣ ಹಣ್ಣುಗಳಲ್ಲಿ ಮೆಗ್ನೀಸಿಯಮ್, ರಂಜಕಗಳನ್ನು ಶ್ರೀಮಂತವಾಗಿ ಹೊಂದಿರುತ್ತದೆ. ಮುಖ್ಯವಾಗಿ ಮೆಗ್ನೀಸಿಯಮ್ ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಉತ್ತೇಜಿಸುತ್ತದೆ.
ಡೈರಿ ಉತ್ಪನ್ನಗಳನ್ನು ಸೇವನೆ ಮಾಡುವುದರಿಂದ ದೇಹವು ಸ್ಥೂಲಕಾಯದ ಕಡೆ ವಾಲುತ್ತದೆ ಎಂಬ ಭಯ ಸಾಮಾನ್ಯವಾಗಿದ್ದರೂ ಕೂಡ ಡೈರಿ ಉತ್ಪನ್ನಗಳು ಮೂಳೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಾಲು, ಮೊಸರು ಮತ್ತು ಚೀಸ್‌ಗಳನ್ನು ಸೇವನೆ ಮಾಡುವುದನ್ನು ಮರೆಯದಿರಿ.
ಇನ್ನು ಹಸಿರೆಲೆ ತರಕಾರಿಗಳು, ಸೋಯಾ ಬೀನ್ಸ್, ನೀವು ಮಾಂಸಹಾರಿಗಳಾಗಿದ್ದರೆ ಮೀನುಗಳನ್ನು ಕೂಡ ಸೇವನೆ ಮಾಡಬಹುದು. ಇವುಗಳಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಅಡಕವಾಗಿರುತ್ತದೆ.
ಯಾವ ಆಹಾರಗಳು ಮೂಳೆಗಳಿಗೆ ಮಾರಕವಾಗಬಹುದು?
ಮೂಳೆಗಳ ಆರೋಗ್ಯವನ್ನು ಕಾಪಾಡಲು ಕೆಲವು ಆಹಾರಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಅವುಗಳೆಂದರೆ, ಉಪ್ಪು, ಸಕ್ಕರೆಯ ಆಹಾರಗಳು, ಸೋಡಾ ಭರಿತ ಪಾನೀಯಗಳು, ಕಾಫಿ, ಚಾಕೋಲೆಟ್‌ಗಳು, ಮದ್ಯಪಾನ, ಹಸಿ ಪಾಲಕ್ ಸೊಪ್ಪು, ಕೆಂಪು ಮಾಂಸ ಸೇರಿದಂತೆ ಇನ್ನು ಅನೇಕ ಆಹಾರಗಳಿಂದ ಸ್ವಲ್ಪ ಮಿತಗೊಳಿಸುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮೂಳೆಗಳಿಗೆ ದೇಹದಂಡನೆ ಎಷ್ಟು ಮುಖ್ಯ?
ಬಲವಾದ ಮೂಳೆಗಳನ್ನು ಪಡೆಯಲು ಪ್ರತಿನಿತ್ಯ 30 ನಿಮಿಷಗಳ ಕಾಲ ಯೋಗ ಮಾಡುವುದು ಬಹಳ ಮುಖ್ಯ. ನಿಮ್ಮ ಆಸ್ಟಿಯೊಪೊರೋಸಿಸ್ ಚಿಕಿತ್ಸೆಗೆ ಯೋಗ ಬಹಳ ಪ್ರಯೋಜನಕಾರಿಯಾಗಿದೆ. ಯೋಗ ಕೇವಲ ಮೂಳೆಗಳ ಆರೋಗ್ಯವನ್ನು ಕಾಪಾಡುವುದರ ಜೊತೆಜೊತೆಗೆ ಅನೇಕ ಆರೋಗ್ಯ ಅಪಾಯಗಳಿಂದ ಮುಕ್ತಿ ದೊರೆಕಿಸಿ ಕೊಡುತ್ತದೆಯೋಗದ ಹೊರತಾಗಿ ಹೊರಗೆ ಜಾಕಿಂಗ್, ವಾಕಿಂಗ್ ಮಾಡಬಹುದು. ಇದು ನಿಮ್ಮ ಕಾಲುಗಳ ಮೂಳೆಗಳನ್ನು ಬಲವಾಗಿಸುತ್ತದೆ.
What To Eat What Not To Eat For Bone Health.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm