ಸಣ್ಣ ತುಂಡು ಮಾವಿನ ಹಣ್ಣು ತಿಂದರೆ, ಎಷ್ಟೆಲ್ಲಾ ಲಾಭಗಳಿವೆ ನೋಡಿ..

22-04-22 09:04 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಹಣ್ಣುಗಳ ರಾಜ ಮಾವಿನ ಹಣ್ಣು, ತನ್ನಲ್ಲಿ ಹಲವಾರು ರೀತಿಯ ಪೌಷ್ಟಿಕ ಸತ್ವಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು..

ಮಾವಿನಕಾಯಿ ಹಾಗೂ ಮಾವಿನ ಹಣ್ಣಿನ ಸೀಸನ್ ಶುರುವಾಗಿ ಬಿಟ್ಟದೆ. ಮಾರ್ಕೆಟ್‌ಗಳಲ್ಲಿ, ತಳ್ಳುವ ಗಾಡಿಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಕೂಡ ಮಾವಿನ ಹಣ್ಣಿನದ್ದೇ ಕಾರುಬಾರು! ಸಾಮಾನ್ಯವಾಗಿ ಯುಗಾದಿ ಹಬ್ಬ ಕಳೆದ ಬಳಿಕ ಮಾವಿನ ಹಣ್ಣುಗಳು ಭರಾಟೆ ಎಲ್ಲಾ ಕಡೆ ಪ್ರಾರಂಭವಾಗುತ್ತದೆ.

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಪ್ರಕೃತಿ ಕಾಲಕಾಲಕ್ಕೆ ತಕ್ಕ ಹಾಗೆ ನಿಸರ್ಗದತ್ತವಾದ ಹಣ್ಣು ಮತ್ತು ತರಕಾರಿಗಳನ್ನು ನೀಡುತ್ತಾ ಬರುತ್ತಿದೆ. ಹೀಗಾಗಿ ಖುತುವಿಗೆ ಅನುಗುಣವಾಗಿ ಸಿಗುವ ಈ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುತ್ತಾ ಬರುವುದರಿಂದ ನಮ್ಮ ಆರೋಗ್ಯವನ್ನು ಸದೃಢತೆಯನ್ನು ಕಾಯ್ದುಕೊಳ್ಳಲು ನೆರವಾಗುವುದು. ಬನ್ನಿ ಇಂದಿನ ಲೇಖನದಲ್ಲಿ ಮಾವಿನಕಾಯಿ ಮತ್ತು ಮಾವಿನ ಹಣ್ಣುಗಳಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನ ನಿರೀಕ್ಷಿಸಬಹುದು ಎಂಬುದನ್ನು ನೊಡೋಣ...

ಮಧುಮೇಹ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ

foods that control diabetes: ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಇಲ್ಲಿದೆ ಆಯುರ್ವೇದ  ಟಿಪ್ಸ್ - ayurvedic tips to manage diabetes naturally | Vijaya Karnataka

  • ಸಕ್ಕರೆಕಾಯಿಲೆ ಅಥವಾ ಮಧುಮೇಹ ಸಮಸ್ಯೆ ಒಮ್ಮೆ ಬಂದರೆ ಹೋಗುವ ಕಾಯಿಲೆ ಅಲ್ಲ ಹೀಗಾಗಿ, ಇದು ನಮ್ಮನ್ನು ಆವರಿಸುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು ಅಲ್ಲವೇ? ಇದಕ್ಕಾಗಿ ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಇದಕ್ಕೆ ಪರಿಹಾರ ಎಂದು ಹೇಳಬಹುದು.
  • ಇನ್ನು ಮಾವಿನ ಹಣ್ಣು ತಿನ್ನುವ ಆಸೆ, ಸಕ್ಕರೆ ಕಾಯಿಲೆ ಇರುವವರಿಗೆ ಇರುವುದಿಲ್ಲವೇ? ಆದ್ರೆ ಸಿಹಿ ಇರುವ ಈ ಹಣ್ಣನ್ನು ಮಧುಮೇಹಿಗಳು ತಿನ್ನಬಹುದೇ? ಇನ್ನು ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತದೆ. ಆದರೆ ಆರೋಗ್ಯ ತಜ್ಞರು ಹೇಳು ವ ಪ್ರಕಾರ ಮಿತಿಯಲ್ಲಿ ಸೇವನೆ ಮಾಡಿದರೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಇರುವ ಹಣ್ಣು ಗಳಲ್ಲ ಮಾವಿನ ಹಣ್ಣು ಕೂಡ ಒಂದು!
  • ಹೀಗಾಗಿ ವಾರದಲ್ಲಿ ಒಂದೆರೆಡು ಪೀಸ್ ತಿಂದರೆ ಸಾಕು, ಅದಕ್ಕಿಂತ ಜಾಸ್ತಿ ತಿನ್ನುವ ಅಭ್ಯಾಸ ಇಟ್ಟು ಕೊಳ್ಳಬೇಡಿ! ನೆನಪಿಡಿ ಈ ಹಣ್ಣನ್ನು ತಿನ್ನುವ ಮುನ್ನ ಒಮ್ಮೆ ವೈದ್ಯರ ಸಲಹೆಗಳನ್ನು ಪಡೆದು ಕೊಂಡರೆ, ಯಾಕೆಂದ್ರೆ ಮಧುಮೇಹಿಗಳು ಒಂದು ತಿಂದರೆ ಕಮ್ಮಿ ಆಗುತ್ತದೆ, ಎರಡು ತಿಂದರೆ ಹೆಚ್ಚಾಗುತ್ತದೆ!

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಕುರಿತು ಕೆಲ ಆಸಕ್ತಿಕರ ಸಂಗತಿಗಳು | Interesting Facts About  Cholesterol in Kannada - Kannada BoldSky

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಹಾರ್ಟ್‌ಗೆ ತೊಂದರೆ ಎನ್ನುವ ಸಂಗತಿ ನಮ ಗೆಲ್ಲಾ ಗೊತ್ತೇ ಇದೆ ಅಲ್ವಾ? ಹಾಗಾಗಿ ಆರೋಗ್ಯಕಾರಿ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಈ ಸಮಸ್ಯೆಯಿಂದ ಪಾರಾಗ ಬಹುದು. ಹೀಗಾಗಿ ಹಲವಾರು ಪೌಷ್ಟಿಕ ಸತ್ವಗಳನ್ನು ಹೊಂದಿರುವ ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದ ರಿಂದ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ!

ದೇಹದ ತೂಕ ಇಳಿಸಲು

weight loss foods: ಖಾಲಿ ಹೊಟ್ಟೆಗೆ ಇಂತಹ ಆಹಾರಗಳನ್ನು ತಿಂದರೆ, ದೇಹದ ತೂಕ  ಇಳಿಯುವುದು! - Vijaya Karnataka

  • ಇತ್ತೀಚಿನ ದಿನಗಳಲ್ಲಿ ದೇಹದ ತೂಕ, ಹೆಚ್ಚಿನವರಿಗೆ ಶಾಪವಾಗಿ ಕಾಡುತ್ತಿದೆ! ಇದಕ್ಕಾಗಿ ಆರೋಗ್ಯಕಾರಿ ಜೀವನ ಶೈಲಿ ಹಾಗೂ ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸುವುದರಿಂದ, ದೇಹದ ತೂಕ ಹೆಚ್ಚಾಗದಂತೆ ನೋಡಿ ಕೊಳ್ಳಬಹುದು.
  • ಇನ್ನು ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು, ಮಿತವಾಗಿ ದಿನಾ ಒಂದು ಪೀಸ್ ಮಾವಿನ ಹಣ್ಣು ತಿನ್ನುವುದರಿಂದ, ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿ ರುವ ಹಣ್ಣಾಗಿರುವ ಈ ಹಣ್ಣು, ತನ್ನಲ್ಲಿ ಹೇರಳ ಪ್ರಮಾಣದಲ್ಲಿ ನಾರಿನಾಂಶವನ್ನು ಹೊಂದಿದೆ. ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನೆರವೇರುತ್ತದೆ. ವಿಶೇಷವಾಗಿ ದೇಹದಿಂದ ಅನಗತ್ಯ ಕ್ಯಾಲೋರಿಗಳನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ದೇಹದ ಹೆಚ್ಚುವರಿ ತೂಕವನ್ನುಕಳೆದುಕೊಳ್ಳಲು ಸಹಾಯವಾಗುತ್ತದೆ.

ಕಣ್ಣುಗಳ ಅರೋಗ್ಯಕ್ಕೆ ಒಳ್ಳೆಯದು

benefits of eating mango: ಸಣ್ಣ ತುಂಡು ಮಾವಿನ ಹಣ್ಣು ತಿಂದರೆ, ಎಷ್ಟೆಲ್ಲಾ ಲಾಭಗಳಿವೆ  ನೋಡಿ.. - Vijaya Karnataka

ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗ. ಹೀಗಾಗಿ ಇವುಗಳ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು ಎಂದರೆ ಸರಿಯಾದ ಆಹಾರಕ್ರಮ ಹಾಗೂ ಮಿತವಾಗಿ ಮಾವಿನಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಮುಖ್ಯ ವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುವ ವಿಟಮಿನ್ ಎ ಹೇರಳವಾಗಿ ಕಂಡುಬರುವುದರಿಂದ ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ನೆರವಾಗುವ ಪರಿಪೂರ್ಣ ಹಣ್ಣು ಎಂದರೆ ತಪ್ಪಾಗಲಾರದು! ಅಷ್ಟೇ ಅಲ್ಲದೇ ಕೆಲವರಲ್ಲಿ ಕಂಡು ಬರುವ ರಾತ್ರಿ ಕುರುಡುತನ ಮತ್ತು ಕಣ್ಣುಗಳನ್ನು ಒಣಗಿಸುವಿಕೆ ಸಮಸ್ಯೆಯನ್ನು ಕೂಡ ತಡೆಯುತ್ತದೆ.

ಮೊಡವೆಗಳ ಸಮಸ್ಯೆ ಇದ್ದರೆ

ಮೊಡವೆ ಸಮಸ್ಯೆಗೆ 5 ಅಸಾಮಾನ್ಯ ಕಾರಣಗಳು | 5 Unusual Causes For Acne | Tips For  Beauty | ಮೊಡವೆ ಸಮಸ್ಯೆಗೆ 5 ಅಸಾಮಾನ್ಯ ಕಾರಣಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು -  Kannada BoldSky

ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮೊಡವೆಗಳ ಸಮಸ್ಯೆ ಎಲ್ಲರಲ್ಲಿಯೂ ಕಂಡು ಬರುತ್ತದೆ. ಆದರೆ ಇದಕ್ಕೆಲ್ಲಾ ದುಬಾರಿ ಹಣ್ಣ ಕೊಟ್ಟು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಕ್ರೀಮ್, ಬಳಸುವ ಬದಲು ಹಸಿ ಮಾವಿನಕಾಯಿ ಗಳನ್ನು ಬಳಸಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು!

ಹೀಗೆ ಮಾಡಿ...
ಒಂದು ವೇಳೆ ಮುಖ ಮೇಲೆ ಅತಿಯಾದ ಮೊಡವೆ ಸಮಸ್ಯೆಗಳು ಮತ್ತು ಇದರಿಂದ ಮೂಡುವ ಕಲೆಗಳು ಉಂಟಾ ದರೆ, ಸಣ್ಣ ಹಸಿ ಮಾವಿನಕಾಯಿಯನ್ನು ಸಣ್ಣದಾಗಿ ಕಟ್ ಮಾಡಿ, ನೀರಿನಲ್ಲಿ ಚೆನ್ನಾಗಿ ಕುದಿಸಿ ಅದನ್ನು ಮುಖದ ಮೇಲೆ ದಿನಾ ರಾತ್ರಿ ಮಲಗುವ ಮುನ್ನ ಹಚ್ಚಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಹೀಗೆ ಅನುಸರಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.

Know The Health Benefits Of Eating One Piece Of Mango Before Sleep.