ಬ್ರೇಕಿಂಗ್ ನ್ಯೂಸ್
28-04-22 09:13 pm Source: Vijayakarnataka ಡಾಕ್ಟರ್ಸ್ ನೋಟ್
ಒಂದು ಬಾಳೆ ಗಿಡ ಮನೆಯಲ್ಲಿದ್ದರೆ ಆರೋಗ್ಯ ಉತ್ತಮಗೊಳಿಸುವ ಹತ್ತಾರು ಉಪಯೋಗಗಳನ್ನು ಪಡೆದುಕೊಳ್ಳಬಹುದು. ಬಾಳೆಹಣ್ಣು, ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಮಾತ್ರವಲ್ಲ ಬಾಳೆ ದಂಟು ಅಥವಾ ಬಾಳೆ ದಿಂಡಿನಿಂದಲೂ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದರಿಂದ ಬಾಳೆಯ ಉತ್ಪನ್ನಗಳು ಹೆಚ್ಚು ಉಪಯುಕ್ತವಾಗಿದೆ. ಕೆಲವೊಮ್ಮೆ ಮಳೆ, ಗಾಳಿಗೆ ಬಾಳೆ ಮರ ಮುರಿದು ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ವ್ಯರ್ಥ ಮಾಡಬೇಡಿ. ಏಕೆಂದರೆ ಬಾಳೆಯ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ.
ಬಾಳೆದಿಂಡು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಪಲ್ಯ, ಕೋಸಂಬರಿ, ಚಟ್ನಿಯ ರೂಪದಲ್ಲಿ ಸೇವಿಸಬಹುದಾಗಿದೆ. ವರ್ಷದಲ್ಲಿ ಎರಡು ಬಾರಿಯಾದರೂ ಬಾಳೆದಿಂಡಿನ ಉಪಯೋಗ ಇರಲೇಬೆಕು ಎನ್ನುತ್ತಾರೆ ಹಿರಿಯರು. ಹಾಗಾದರೆ ಬಾಳೆದಿಂಡಿನಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಮನೆಯಲ್ಲಿರುವ ಬಾಳೆಮರ ಎಷ್ಟು ಉಪಯುಕ್ತ ಎನ್ನುವುದು ತಿಳಿಯುತ್ತದೆ.
ಹೇರಳವಾದ ನಾರಿನಾಂಶ ಜೀರ್ಣಕ್ರಿಯೆಗೆ ಉತ್ತಮ
ದೇಹದಲ್ಲಿ ಜೀರ್ಣಕ್ರಿಯೆ ಉತ್ತಮವಾಗಬೇಕೆಂದರೆ ನಾರಿನ ಅಂಶವಿರುವ ಆಹಾರಗಳು ಹೆಚ್ಚು ಸಹಾಯ ಮಾಡುತ್ತವೆ. ಅವುಗಳಲ್ಲಿ ಬಾಳೆದಿಂಡು ಕೂಡ ಒಂದು. ಬಾಳೆ ದಿಂಡಿನ ಉಪಯೋಗದಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ನಾರಿನಾಂಶ ಸಿಗುತ್ತದೆ. ಇದು ಹೊಟ್ಟೆಯುಬ್ಬರದಂತಹ ಸಮಸ್ಯೆ ನಿವಾರಿಸುತ್ತದೆ.
ಬಾಳೆದಿಂಡಿನಲ್ಲಿರುವ ನಾರಿನಾಂಶ ಹೊಟ್ಟೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು, ಕಲ್ಮಷಗಳನ್ನು ಹೊರಹಾಕಲು ನೆರವಾಗುತ್ತದೆ. ಕೆಲವೊಮ್ಮೆ ಜಂಕ್ ಫುಡ್‌ಗಳನ್ನು ಸೇವಿಸಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಬಾಳೆದಿಂಡಿನ ಉಪಯೋಗ ಮಾಡಿ. ಜೀರ್ಣವಾಗದ ಪದಾರ್ಥಗಳನ್ನು ದೇಹದಿಂದ ಇದು ಹೊರಹೋಗುವಂತೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಸಾಂಕ್ರಾಮಿಕ ರೋಗಗಳ ಭೀತಿ, ಮಳೆಗಾಲ ಹತ್ತಿರದಲ್ಲಿರುವ ಕಾರಣ ಶೀತ, ಜ್ವರದ ಭಯ ಇದ್ದೇ ಇರುತ್ತದೆ. ಇದರಿಂದ ಪಾರಾಗಲು ದೇಹವನ್ನು ಸದೃಢಗೊಳಿಸಿಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ರೋಗಗಳ ಭಯದಿಂದ ಮುಕ್ತವಾಗಿರಬಹುದು.
ಇದಕ್ಕೆ ಬಾಳೆದಿಂಡು ಸಹಾಯ ಮಾಡುತ್ತದೆ. ಮಕ್ಕಳಿಗೂ ಕೂಡ ಇದು ಉತ್ತಮವಾಗಿದೆ. ಬಾಳೆದಿಂಡಿನ ರಸವನ್ನು ಕುಡಿಯಬಹುದು. ಹಾಗೆ ಕುಡಿದರೆ ರುಚಿಸುವುದಿಲ್ಲ ಹೀಗಾಗಿ ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯಬಹುದು. ದಿನದಲ್ಲಿ ಒಂದು ಬಾರಿ 10 ದಿನಗಳ ಕಾಲ ಕುಡಿದರೆ ಇದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.
ಕಿಡ್ನಿ ಸ್ಟೋನ್‌ಗೆ ಉತ್ತಮ ಮನೆಮದ್ದು
ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಲವಣದ ಅಂಶ ಹೆಚ್ಚಾಗುತ್ತದೆ. ಇದರಿಂದ ಕಿಡ್ನಿಯಲ್ಲಿ ಈ ಲವಣಗಳು ಶೇಖರಣೆಗೊಂಡು ಕಲ್ಲಿನ ರೂಪ ತಾಳುತ್ತವೆ. ಇದನ್ನೇ ಕಿಡ್ನಿ ಸ್ಟೋನ್ ಎನ್ನುತ್ತೇವೆ. ಸಹಿಸಲಾರದಷ್ಟು ನೋವನ್ನು ನೀಡುವ ಈ ಕಿಡ್ನಿ ಸ್ಟೋನ್‌ಗಳು ಕರಗಲು ಹೆಚ್ಚಿನ ನೀರಿನ ಅಂಶ ಅಗತ್ಯವಾಗಿರುತ್ತದೆ. ಬಾಳೆದಿಂಡು ಯಥೇಚ್ಛವಾದ ನೀರಿನ ಅಂಶ ಮತ್ತು ಫೈಬರ್ ಅಂಶಗಳನ್ನು ಹೊಂದಿರುವ ಕಾರಣ ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ ಉತ್ತಮ ಮದ್ದಾಗಿದೆ.
ಬಾಳೆದಿಂಡುಗಳನ್ನು ತಂದು ಅದರ ರಸ ತೆಗೆದು ಸ್ವಲ್ಪ ಸಕ್ಕರೆ ಅಥವಾ ಉಪ್ಪನ್ನು ಹಾಕಿಕೊಂಡು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿದರೆ ಮೂತ್ರಪಿಂಡದ ಕಲ್ಲಿನ ನೋವು ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ಇದೇ ಕ್ರಮವನ್ನು ಮುಂದುವರೆಸಿ ಎರಡು ದಿನಕ್ಕೆ ಒಂದು ಬಾರಿಯಂತೆ ಸೇವಿಸಿದರೆ ಕ್ರಮೇಣ ಕಲ್ಲು ಕೂಡ ಕರಗಿಹೋಗುವಂತೆ ಈ ಬಾಳೆದಿಂಡು ಮಾಡುತ್ತದೆ.
ಹೊಟ್ಟೆಯ ಸೋಂಕಿಗೆ ಪರಿಹಾರ
ಕೆಲವರಿಗೆ ಆಗಾಗ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಹೊಟ್ಟೆಗೆ ಕೊಳಕು ಪದಾರ್ಥಗಳು ಹೋಗಿ ಸೇರಿಕೊಳ್ಳುತ್ತದೆ. ಇದು ಹೊಟ್ಟೆಯ ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ ಕೆಲವೊಮ್ಮೆ ಊಟದ ಸಮಯದಲ್ಲಿ ಕೂದಲು ಹೊಟ್ಟೆ ಸೇರಿದ್ದರೆ ವಾಂತಿ, ನಂಜು ಅಥವಾ ಸೋಂಕಿನ ಅಪಾಯ ಎದುರಾಗುತ್ತದೆ. ಇದನ್ನು ಹೋಗಲಾಡಿಸಲು ಬಾಳೆದಿಂಡು ಸಹಾಯ ಮಾಡುತ್ತದೆ.
ಬಾಳೆದಿಂಡಿನ ರಸವನ್ನು ತೆಗೆದು ಕುಡಿಯಬಹುದು. ಅಥವಾ ಬಾಳೆದಿಂಡನ್ನು ತಂದು ಸಣ್ಣಗೆ ಕತ್ತರಿಸಿ ಹುರಿದು ಅದಕ್ಕೆ ಒಂದು ಒಗ್ಗರಣೆ ಹಾಕಿ ನಂತರ ಮೊಸರು ಸೇರಿಸಿ ಊಟದ ಜೊತೆ ಸೇವಿಸಬಹುದು. ಇದರಿಂದ ಹೊಟ್ಟೆಯ ಸೋಂಕು, ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ.
ದೇಹದ ತೂಕ ಇಳಿಕೆಗೂ ಸಹಕಾರಿ
ಬಾಳೆದಿಂಡಿನಲ್ಲಿ ವಿಟಮಿನ್‌ಗಳು ಅಡಕವಾಗಿದೆ. ಅದೇ ರೀತಿ ಕಡಿಮೆ ಕ್ಯಾಲೋರಿಯನ್ನು ಇದು ಹೊಂದಿರುತ್ತದೆ. ಹೀಗಾಗಿ ಬಾಳೆದಿಂಡಿನ ಸೇವನೆಯಿಂದ ದೇಹದ ತೂಕ ಇಳಿಸಿಕೊಳ್ಳಬಹುದು.
ಪ್ರತಿದಿನ ಡಯೆಟ್‌ನಲ್ಲಿ ಬಾಳೆದಿಂಡಿನ ಸಲಾಡ್ ಮಾಡಿಕೊಂಡು ಸೇವಿಸಿ. ಅಥವಾ ಪದಾರ್ಥ ಮಾಡಿಕೊಂಡು ಊಟದ ಜೊತೆಗೆ ಸೇವಿಸಿ. ಕೆಲವೇ ದಿನಗಳಲ್ಲಿ ಹೊಟ್ಟೆಯ ಭಾಗದಲ್ಲಿನ ಅನಗತ್ಯ ಬೊಜ್ಜನ್ನು ಕರಗಿಸಲು ಇದು ನೆರವಾಗುತ್ತದೆ. ಆದ್ದರಿಂದ ಒಂದು ಬಾಳೆ ಗಿಡದ ದಿಂಡು ಇದ್ದರೆ ಹಲವಾರು ಲಾಭಗಳನ್ನು ಪಡೆಯಬಹುದಾಗಿದೆ.
Health Benefits Of Banana Stem.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm