ನೆಲಕ್ಕೆ ಕುಳಿತು ಊಟ ಮಾಡುವುದರಿಂದ ಈ ಆರೋಗ್ಯ ಪ್ರಯೋಜನ ಪಡೆಯಬಹುದು

29-04-22 09:19 pm       Source: Vijaya Karnataka   ಡಾಕ್ಟರ್ಸ್ ನೋಟ್

ನೆಲಕ್ಕೆ ಕುಳಿತು ಊಟ ಮಾಡುವುದರಿಂದ ಆರೋಗ್ಯದಲ್ಲಿ ಅನೇಕ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

ಆರೋಗ್ಯವಾಗಿರಲು, ಸದೃಢರಾಗಿರಲು ಆಹಾರ ಸೇವನೆ ಮುಖ್ಯ. ಇಂದಿನ ದಿನಗಳಲ್ಲಿ ಆರಾಮವಾಗಿ ಕುಳಿತು ಊಟ ಮಾಡುವಷ್ಟು ತಾಳ್ಮೆ ಯಾರಿಗೂ ಇಲ್ಲ. ನಿಜಕ್ಕೂ ಇದರಿಂದ ಒಂದಷ್ಟು ಆರೋಗ್ಯ ವೃದ್ಧಿಸುವ ಗುಣಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹೌದು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಆಹಾರ ಸೇವನೆಯ್ನೂ ಕೂಡ ಶಿಸ್ತುಬದ್ದಾಗಿ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಮೂಲ ಕಾರಣವೇ ಆರೋಗ್ಯ ಉತ್ತಮವಾಗಿಸಿಕೊಳ್ಳುವುದು.

ಈಗೆಲ್ಲ ಗಡಿಬಿಡಿಯಲ್ಲಿ ಡೇಬಲ್‌ ಮೇಲೆ ಕುಳಿತು ಮೊಬೈಲ್‌ ನೋಡುತ್ತಾ ಒಂದಷ್ಟು ತಿಂದು ಎದ್ದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಕುಳಿತು ಊಟ ಮಾಡಿದರೆ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿದರೆ ಖಂಡಿತಾ ನೀವು ಕೂಡ ಮುಂದಿನ ದಿನಗಳಲ್ಲಿ ಕುಳಿತು ಊಟ ಮಾಡುವುದನ್ನು ಅಭ್ಯಸಿಸಿಕೊಳ್ಳುತ್ತೀರಿ. ಇಲ್ಲಿದೆ ನೋಡಿ ಕುಳಿತು ಊಟ ಮಾಡಿದರೆ ಆಗುವ ಆರೋಗ್ಯ ಪ್ರಯೋಜನಗಳು.

What causes your digestive system weak and unhealthy? - The Statesman

​ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ನೆಲದ ಮೇಲೆ ಊಟಕ್ಕೆ ಕುಳಿತುಕೊಳ್ಳುವಾಗ ಕಾಲನ್ನು ಮಡಚಿ ಕುಳಿತುಕೊಳ್ಳುತ್ತೇವೆ. ಇದನ್ನು ಸುಖಾಸನ ಎಂದು ಕರೆಯುತ್ತಾರೆ. ಈ ಸುಖಾಸನ ತಿಂದ ಆಹಾರವನ್ನು ಸರಿಯಾಗಿಜೀರ್ಣವಾಗುವಂತೆ ಮಾಡುತ್ತದೆ. ನೆಲಕ್ಕೆ ಕುಳಿತು ಊಟ ಮಾಡುವುದರಿಂದ ಗ್ಯಾಸ್ಟ್ರಿಕ್‌, ಆಸಿಡಿಟಿಯಂತಹ ಸಮಸ್ಯೆ ಕಾಡುವುದಿಲ್ಲ. ಆದ್ದರಿಂದ ನೆಲಕ್ಕೆ ಕುಳಿತು ಊಟ ಮಾಡುವುದು ಹೊಟ್ಟೆ ತುಂಬಿಸುವುದರ ಜೊತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ.

Healthy Heart Tips : हृदय को स्वस्थ रखने के लिए लाइफस्टाइल में करें ये  बदलाव, फॉलो करें ये टिप्स | TV9 Bharatvarsh

​ಹೃದಯದ ಆರೋಗ್ಯಕ್ಕೂ ಒಳ್ಳೆಯದು

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ಹೃದಯ ಸರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಹೃದಯಕ್ಕೆ ಹೆಚ್ಚಿನ ಹಾನಿಯನ್ನು ತಂದೊಡ್ಡುತ್ತವೆ. ಆದರೆ ಕುಳಿತು ಊಟ ಮಾಡಿದಾಗ ಈ ಯಾವ ಸಮಸ್ಯೆಗಳೂ ಬಾರದ ಕಾರಣ ಹೃದಯವೂ ಹೆಚ್ಚು ದಿನಗಳ ಕಾಲ ಆರೋಗ್ಯವಾಗಿರುತ್ತದೆ.

ಕುಳಿತು ಊಟ ಮಾಡುವಾಗ ಉಸಿರಾಟವೂ ಸರಾಗವಾಗಿ ಸಾಗುತ್ತದೆ. ಹೀಗಾಗಿ ಹೃದಯಕ್ಕೆ ಸಮಪ್ರಮಾಣದಲ್ಲಿ ರಕ್ತಹರಿವು ಇರುತ್ತದೆ.

Knee Pain and Problems | Johns Hopkins Medicine

ಕೀಲುಗಳ ನೋವನ್ನು ತಡೆಯುತ್ತದೆ

ಕುಳಿತು ಊಟ ಮಾಡುವಾಗ ಕಾಲುಗಳನ್ನು ಮಡಚಿರುತ್ತೇವೆ. ಅಲ್ಲದೆ ಈ ಸುಖಾಸನ ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗುವಂತಹ ಸ್ಥಿತಿ ಕೂಡ ಹೌದು. ಹೀಗಾಗಿ ತಿಂದ ಆಹಾರ ಜೀರ್ಣವಾಗಿ ದೇಹಕ್ಕೆ ಶಕ್ತಿ ದೊರೆಯುತ್ತದೆ. ಜೊತೆಗೆ ಕೀಲು ನೋವಿನ ಸಮಸ್ಯೆ ಇದ್ದರೆ ಅದೂ ಕೂಡ ನಿವಾರಣೆಯಾಗುತ್ತದೆ. ಆದ್ದರಿಂದ ಕುಳಿತು ಊಟ ಮಾಡುವುದು ಉತ್ತಮ ಮಾರ್ಗವಾಗಿದೆ. ಅಲ್ಲದೆ ಯೋಗದಲ್ಲಿ ಕೀಲುನೋವಿನ ಪರಿಹಾರಕ್ಕೆ ಹೆಚ್ಚಾಗಿ ಸುಖಾಸನ ಮತ್ತು ಪದ್ಮಾಸನಗಳನ್ನೇ ಅನುಸರಿಸುತ್ತಾರೆ. ಆದ್ದರಿಂದ ಹೊಟ್ಟೆ ತುಂಬ ಊಟದ ಜೊತೆಗೆ ಆರೋಗ್ಯವನ್ನೂ ಉತ್ತಮಗೊಳಿಸಲು ಕುಳಿತು ಮಾಡುವ ವಿಧಾನ ಸಹಾಯಕವಾಗಿದೆ.

Weight loss Experience : Watch your weight fluctuations as this dad shares  a horrifying experience

ತೂಕ ಇಳಿಕೆಗೂ ಸಹಕಾರಿಯಾಗಿದೆ

ಪ್ರತೀ ಬಾರಿ ಊಟ ಮಾಡುವಾಗ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಬದಲು, ಚಾಪೆಯನ್ನು ಇರಿಸಿ, ನಿಮ್ಮ ಕಾಲುಗಳನ್ನು ಅಡ್ಡಲಾಗಿ ಇರಿಸಿ ಮತ್ತು ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ನೀವು ಕೊಬ್ಬನ್ನು ಕಳೆದುಕೊಳ್ಳಲು ಬಯಸಿದರೆ ನಿಯಮಿತವಾಗಿ ಈ ಮಾದರಿಯನ್ನು ಅನುಸರಿಸಿ. ಈ ಸ್ಥಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹ ಪರಿಣಾಮಕಾರಿಯಾಗಿದೆ. ಈ ರೀತಿ ಕುಳಿತುಕೊಂಡು ಊಟ ಮಾಡುವುದರಿಂದ ಅತಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ. ಹೊಟ್ಟೆಗೆ ಅಗತ್ಯವಿರುವಷ್ಟೇ ತಿನ್ನುವುದರಿಂದ ಸುಲಭವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಅಲ್ಲದೆ ಈ ರೀತಿ ಕುಳಿತು ಊಟ ಮಾಡವುದರಿಂದ ಆಯಾಸ ಮತ್ತು ದೇಹದ ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Increase Blood Circulation to Improve Skin Complexion: Ways to Help

ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ

ಕುಳಿತು ಊಟ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ ಸುಲಲಿತವಾಗಿ ಆಗುತ್ತದೆ. ಕುಳಿತು ಊಟ ಮಾಡುವಾಗ ಬಾಯಿಗೆ ತುತ್ತು ಹಾಕಲು ಬಗ್ಗುತ್ತೇವೆ ಇದರಿಂದ ದೇಹಕ್ಕೆ ಸಣ್ಣ ಪ್ರಮಾಣದ ವ್ಯಾಯಾಮ ದೊರಕಿ ರಕ್ತದ ಹರಿವು ಸುಧಾರಿಸುತ್ತದೆ. ಹೃದ್ರೋಗಿಗಳಿಗೆ ಇದು ಹೆಚ್ಚು ಉಪಕಾರಿಯಾಗಿದೆ. ಕುಳಿತು ಊಟ ಮಾಡುವಾಗ ಕಾಲುಗಳನ್ನು ಮಡಚಿ ಸುಖಾಸನದಲ್ಲಿ ಕುಳಿತುಕೊಳ್ಳುತ್ತೇವೆ. ಇದು ರಕ್ತಪರಿಚಲನೆ ಉತ್ತಮಗೊಳ್ಳಲು ಸಹಾಯಕವಾಗಿದೆ.

Know The Health Benefits Of Eating While Sitting On The Floor