ಬ್ರೇಕಿಂಗ್ ನ್ಯೂಸ್
30-04-22 09:30 pm Source: Vijayakarnataka ಡಾಕ್ಟರ್ಸ್ ನೋಟ್
ಪ್ರಕೃತಿಯೊಂದಿಗೆ ಹೆಚ್ಚು ಸ್ನೇಹ ಇರಿಸಿಕೊಂಡರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಕ ಚಿಕಿತ್ಸೆಗಳಿಂದ ಸಂಪೂರ್ಣ ಪರಿಹಾರ ಕಂಡುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಚಿಕಿತ್ಸಾ ವಿಧಾನಗಳೂ ಕೂಡ ಹೆಚ್ಚುತ್ತಿವೆ. ಗಾಳಿ, ನೀರು, ಮಣ್ಣು, ಸೂರ್ಯನ ಬಿಸಿಲು ಇವುಗಳು ಸಾಕಷ್ಟು ಆರೋಗ್ಯ ವೃದ್ಧಿಸುವ ಗುಣಗಳನ್ನು ಹೊಂದಿದೆ.
ವಿದೇಶ ಮಾತ್ರವಲ್ಲದೆ ಭಾರತದಲ್ಲಿಯೂ ಕೂಡ ಈ ನೈಸರ್ಗಿಕ ಚಿಕಿತ್ಸೆಗಳು ಹೆಚ್ಚು ಜನಪ್ರಿಯವಾಗಿವೆ. ನಿಸರ್ಗದತ್ತ ಚಿಕಿತ್ಸೆಯಿಂದ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ, ಅವುಗಳಲ್ಲಿ ಇರುವ ಸುಲಭ ಮಾರ್ಗ ಎಂದರೆ ಬರಿಗಾಲಿನಲ್ಲಿ ನಡೆಯುವುದು. ಹೌದು. ಬರಿಗಾಲಿನಲ್ಲಿ ನಡೆಯುವುದರಿಂದ ಇಡೀ ದೇಹಕ್ಕೆ ಭೂಮಿಯ ಸ್ಪರ್ಶದಿಂದ ಹೊಸ ಚೈತನ್ಯ ಸಿಗುತ್ತದೆ. ನಡೆಯುವಾಗ, ನಿಮ್ಮ ಪಾದಗಳ ಮೇಲಿನ ಒತ್ತಡದ ಬಿಂದುಗಳು ಸಕ್ರಿಯಗೊಳ್ಳುತ್ತವೆ ಮತ್ತು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆರೋಗ್ಯದಲ್ಲಿ ಯಾವೆಲ್ಲ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬರಿಗಾಲಿನಲ್ಲಿ ನಡೆಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹಾರ್ಮೋನ್ ಸ್ರವಿಸುವಿಕೆಯವರೆಗೆ ಎಲ್ಲದರ ಮೇಲೂ ಇದು ಪರಿಣಾಮ ಬೀರುತ್ತದೆ. ಜೊತೆಗೆ, ದೇಹದ ಇತರ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ನಿಮ್ಮ ಹೃದಯದ ಆರೋಗ್ಯವು ಸಹ ನಿಯಂತ್ರಣದಲ್ಲಿರಲು ಇದು ಸಹಾಯ ಮಾಡುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ರಕ್ತದೊತ್ತಡವೂ ಸಮತೋಲನದಲ್ಲಿರುತ್ತದೆ. ಇದರಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಆದ್ದರಿಂದ ಬರಿಗಾಲಿನಲ್ಲಿ ನಡೆಯುವುದು ಎನ್ನಲಾಗುತ್ತದೆ.
ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬರಿಗಾಲಿನಲ್ಲಿ ನಡೆಯುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಪಾದಗಳ ಮೇಲಿನ ಒತ್ತಡದ ಬಿಂದುಗಳನ್ನು ಉತ್ತೇಜಿಸುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗುತ್ತದೆ. ದಿನವಿಡೀ ನಿಮ್ಮನ್ನು ಕ್ರಿಯಾಶೀಲವಾಗಿರಿಸುತ್ತದೆ. ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದಲೂ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಬರಿಗಾಲಿನಲ್ಲಿ ನಡೆಯುವುದು ಅಭ್ಯಾಸವಾಗಿದೆ.ಬರಿಗಾಲಿನಲ್ಲಿ ನಡೆಯುವುದರಿಂದ ಕಾಲಿನ ಸ್ನಾಯುಗಳೂ ಕೂಡ ಬಲಗೊಳ್ಳುತ್ತವೆ. ಇದರಿಂದಾಗಿ ಕಾಲುನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ನೀವು ಗಮನಿಸಿದ್ದೀರಾ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸಾಮಾನ್ಯವಾಗಿ ಅಧಿಕವಾಗಿರುತ್ತದೆ. ಇದಕ್ಕೆ ಕಾರಣ ಅವರು ಭೂಮಿಯ ಮೇಲೆ ಹೆಚ್ಚು ಹೊತ್ತು ಇರುವುದು. ಮಕ್ಕಳು ಸಾಮಾನ್ಯವಾಗಿ ಮಣ್ಣು, ಕಲ್ಲುಗಳಲ್ಲೇ ಆಟವಾಡುತ್ತಾರೆ. ನಿಜವಾಗಿಯೂ ಅದು ಅವರ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.
ಹೀಗಾಗಿ ನೀವೂ ಕೂಡ ದಿನದಲ್ಲಿ ಸ್ವಲ್ಪ ಹೊತ್ತಾದರೂ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಪ್ರತಿರೋಧಕ ಶಕ್ತಿ ಕೂಡ ಉತ್ತಮವಾಗುತ್ತದೆ.
ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ
ನಾವು ನಡೆಯುವಾಗ, ನಮ್ಮ ಕಾಲಿನ ಎರಡನೇ ಮತ್ತು ಮೂರನೇ ಬೆರಳಿನ ಮೇಲೆ ಗರಿಷ್ಠ ಒತ್ತಡವನ್ನು ಹಾಕುತ್ತೇವೆ. ಈ ಎರಡು ಬೆರಳಗುಳು ಗರಿಷ್ಟ ನರ ತುದಿಗಳನ್ನು ಹೊಂದಿವೆ, ಇದು ನಿಮ್ಮ ಕಣ್ಣುಗಳ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ನಿಮ್ಮ ದೃಷ್ಟಿಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣಕ್ಕೆ ಬರಿಗಾಲಿನಲ್ಲಿ ನಡೆದರೆ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಹೇಳುತ್ತಾರೆ. ಕೆಲವು ಅಧ್ಯಯನವೂ ಇದನ್ನು ಸಾಬೀತುಪಡಿಸಿದೆ.
ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ
ಕೆಲವರಿಗೆ ರಾತ್ರಿ ಎಷ್ಟು ಹೊತ್ತು ಮಲಗಿದರೂ ನಿದ್ದೆ ಬರುವುದಿಲ್ಲ. ನಿದ್ರಾಹೀನತೆ ಸಮಸ್ಯೆಗೆ ಸಾಕಷ್ಟು ಪರಿಹಾರಗಳಿವೆ. ಆದರೆ ಬರಿಗಾಲಿನಲ್ಲಿ ನಡೆಯುವುದರಿಂದ ಯಾವುದೇ ಖರ್ಚಿಲ್ಲದೆ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.ಪ್ರತಿದಿನ ಅರ್ಧಗಂಟೆಗಳ ಕಾಲ ಬರಿಗಾಲಿನಲ್ಲಿ ಕಲ್ಲು ಅಥವಾ ಮಣ್ಣಿನ ನೆಲದ ಮೇಲೆ ನಡೆಯುವುದರಿಂದ ನಿದ್ರಾಹೀನತೆ ಸಮಸ್ಯೆ ಪರಿಹಾರವಾಗುತ್ತದೆ.
Know The Health Benefits Of Walking Barefoot.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am