ಬ್ರೇಕಿಂಗ್ ನ್ಯೂಸ್
02-05-22 07:51 pm Source: Vijayakarnataka ಡಾಕ್ಟರ್ಸ್ ನೋಟ್
ಅಸ್ತಮಾ ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೆ ಅಟ್ಯಾಕ್ ಮಾಡುತ್ತದೆ. ಇದು ಉಸಿರಾಟದ ತೊಂದರೆ, ಎದೆಯಲ್ಲಿ ಬಿಗಿತ ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಇದು ಮಕ್ಕಳಲ್ಲಿ ಕೂಡ ಸಾಮಾನ್ಯವಾದ ಲಕ್ಷಣವಾಗಿಬಿಟ್ಟಿದೆ.
ಅಸ್ತಮಾ ಉಸಿರಾಟಕ್ಕೆ ಮಾತ್ರ ತೊಂದರೆಯನ್ನು ಉಂಟು ಮಾಡುವುದಿಲ್ಲ ಬದಲಾಗಿ ನಿಮ್ಮ ನಿದ್ರೆಯನ್ನು ಭಂಗಗೊಳಿಸುತ್ತದೆ. ಅಸ್ತಮಾವು ವಾಯುಮಾರ್ಗಗಳು ಕಿರಿದಾಗುವ ಮತ್ತು ಊದಿಕೊಳ್ಳುವ ಸ್ಥಿತಿಯಾಗಿದ್ದು, ಹೆಚ್ಚುವರಿ ಲೋಳೆಯ ಉತ್ಪತ್ತಿಯಾಗಬಹುದು. ಇದು ನಿಮ್ಮ ಉಸಿರಾಟಕ್ಕೆ ಅಡೆತಡೆಯನ್ನು ಉಂಟು ಮಾಡಿ, ಕೆಮ್ಮುವಿಕೆಯನ್ನು ಪ್ರಚೋದಿಸುತ್ತದೆ.
ಇಷ್ಟೇಲ್ಲಾ ತೊಂದರೆಗೆ ಈಡು ಮಾಡುವ ಅಸ್ತಮಾವನ್ನು ಭವಿಷ್ಯದಲ್ಲಿ ಬಾರದಂತೆ ತಡೆಯುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಯಾವ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು, ಯಾವ ಆಹಾರಗಳನ್ನು ಮಿತಿಗೊಳಿಸಬೇಕು ಎಂಬುದನ್ನು ಲೇಖನದಲ್ಲಿ ಸವಿವರವಾಗಿ ನೀಡಲಾಗಿದೆ ಓದಿ.
ವಿಟಮಿನ್ ಡಿ ಫುಡ್ಸ್
ನೈಸರ್ಗಿಕವಾಗಿ ನಾವು ಬಿಸಿಲಿನ ಮೂಲಕ ವಿಟಮಿನ್ ಡಿ ಯನ್ನು ಪಡೆಯಬಹುದು. ಆದರೆ ಬಹುತೇಕರು ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದನ್ನು ನಿರಾಕರಿಸುತ್ತಾರೆ. ಇದರಿಂದ ಅವರು ವಿಟಮಿನ್ ಡಿ ಸಮಸ್ಯೆಯನ್ನುಅನುಭವಿಸಬೇಕಾಗಬಹುದು.
ಕೆಲವೊಮ್ಮೆ ಒತ್ತಡದ ಜೀವನದಿಂದಾಗಿ ಕೂಡ ಬಿಸಿಲಿಗೆ ಹೊರ ಹೋಗುವುದು ಸಾಧ್ಯವಾಗುವುದಿಲ್ಲ. ಅದರ ಬದಲಿಗೆ ನೀವು ವಿಟಮಿನ್ ಡಿ ಯಥೇಚ್ಚವಾಗಿರುವ ಆಹಾರಗಳನ್ನು ಸೇವಿಸುವುದರ ಮೂಲಕ ಪಡೆಯಬಹುದು.
ಉದಾಹರಣೆಗೆ, ಹಾಲು, ಮೊಟ್ಟೆಗಳು, ಕಿತ್ತಳೆ ರಸ, ಮೀನುಗಳು ಸೇರಿದಂತೆ ಇನ್ನು ಅನೇಕ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ.
ವಿಶೇಷವಾಗಿ ವಿಟಮಿನ್ ಡಿ ಪೋಷಕಾಂಶವು ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಬಲಪಡಿಸುತ್ತದೆ. ಇನ್ನು, ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಿ, ಶ್ವಾಸನಾಳದಲ್ಲಿ ಉಂಟಾಗುವ ಊತವನ್ನು ಕಡಿಮೆ ಮಾಡುತ್ತದೆ.ನಿಮಗಿದು ತಿಳಿದಿರಲಿ, ವಿಟಮಿನ್ ಡಿ ಕೊರತೆಯು ಅಸ್ತಮಾಕ್ಕೆ ಕಾರಣವಾಗಬಹುದು.
ವಿಟಮಿನ್ ಇ
ಅಸ್ತಮಾದಿಂದ ಪರಿಣಾಮಕಾರಿಯಾಗಿ ದೂರವಿರಲು ಹಣ್ಣು, ತರಕಾರಿ, ಬೀಜಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ವಿಟಮಿನ್ ಇ ವುಳ್ಳ ಆಹಾರಗಳು ಅಸ್ತಮಾಕ್ಕೆ ಅತ್ಯುತ್ತಮವಾಗಿದೆ. ವಿಟಮಿನ್ ಇ ಭರಿತ ಹಣ್ಣು, ತರಕಾರಿಗಳನ್ನು ಪ್ರತಿನಿತ್ಯ ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ತೊಡಕುಗಳಿಂದ ಪಾರಾಗಬಹುದು.
ಉದಾಹರಣೆಗೆ, ಬಾದಾಮಿ, ಕಚ್ಚಾ ಬೀಜಗಳು, ಬ್ರೊಕೊಲಿ, ಕ್ರೂಸಿಫೆರಸ್ ತರಕಾರಿಗಳು. ಇವು ನಿಮ್ಮ ಅಸ್ತಮಾದಿಂದ ಉಂಟಾಗುವ ಕೆಮ್ಮು ಮತ್ತು ಉಬ್ಬಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡ್ರೈ ಫ್ರುಟ್ಸ್, ಹಣ್ಣು ಮತ್ತು ತರಕಾರಿಗಳು
ಒಣಹಣ್ಣುಗಳು ಅಥವಾ ಡ್ರೈ ಫ್ರುಟ್ಸ್ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ವಿಶೇಷವಾಗಿ ಕಿತ್ತಳೆ ಮತ್ತು ಸೇಬು ಕೂಡ ಅಸ್ತಮಾವನ್ನು ನಿಯಂತ್ರಿಸಲು ಉತ್ತೇಜಿಸುತ್ತದೆ. ಆದಾಗ್ಯೂ, ಅಸ್ತಮಾ ಹೊಂದಿರುವವರಿಗೆ ಡ್ರೈ ಫ್ರುಟ್ಸ್ ಉತ್ತಮವಲ್ಲ ಎಂದು ಹೇಳಲಾಗುತ್ತದೆ.
ನಿರ್ದಿಷ್ಟವಾಗಿ ಅಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸಲು ಅಥವಾ ಉಸಿರಾಟದ ತೊಂದರೆಗಳನ್ನು ತೊಡೆದು ಹಾಕಲು ಯಾವುದೇ ಆಹಾರವಿಲ್ಲ. ಆದರೆ ಹಣ್ಣು ಮತ್ತು ತರಕಾರಿಗಳಲ್ಲಿ ಬೀಟಾ ಕ್ಯಾರೋಟಿನ್, ವಿಟಮಿನ್ ಇ ಮತ್ತು ಸಿ ಯಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಇಂತಹ ಆಹಾರಗಳು ಅಸ್ತಮಾವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿದೆ.
ಮೀನು ಮತ್ತು ಟೊಮೊಟೊ
ಮಾಂಸಾಹಾರಿಗಳು ಮೀನನ್ನು ಮತ್ತು ಸಸ್ಯಾಹಾರಿಗಳು ಟೊಮೊಟೊವನ್ನು ಅಸ್ತಮಾದಿಂದ ಪಾರಾಗಲು ಸೇವನೆ ಮಾಡಬಹುದು. ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಯಥೇಚ್ಚವಾಗಿ ಹೊಂದಿದೆ. ವಿಶೇಷವಾಗಿ ಸಾಲ್ಮನ್, ಹೆರಿಂಗ್, ಟ್ಯೂನ ಮತ್ತು ಸಾರ್ಡೀನ್ ಗಳಂತಹ ಕೊಬ್ಬಿನ ಮೀನುಗಳನ್ನು ಸೇವನೆ ಮಾಡಿ. ಕೆಲವರಿಗೆ ಕೊಬ್ಬಿನ ಮೀನುಗಳು ಅಲರ್ಜಿಯನ್ನು ಉಂಟು ಮಾಡಬಹುದು.
ಸಸ್ಯಾಹಾರಿಗಳು ಟೊಮೆಟೊದಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಉಸಿರಾಟದ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.
ಈ ಆಹಾರಗಳನ್ನು ಮಿತಿಗೊಳಿಸಿ
ಕಾಫಿ, ಚಹಾ, ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯಗಳನ್ನು ಅಸ್ತಮಾ ಹೊಂದಿರುವವರು ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು. ಹೆಚ್ಚಿನ ಜನರು ಈ ಮೇಲಿನ ಪಾನೀಯಗಳನ್ನು ಅತಿಯಾಗಿ ಸೇವನೆ ಮಾಡಿದಾಗ ಉಸಿರಾಡಲು ಕಷ್ಟವಾಗಬಹುದು. ನೀವು ಈಗಾಗಲೇ ಅಸ್ತಮಾ ಹೊಂದಿದ್ದರೆ, ಇಂತಹ ಪಾನೀಯಗಳಿಂದ ದೂರವಿರಿ.
ಒಂದು ವೇಳೆ ನೀವು ಅಸ್ತಮಾ ಹೊಂದಿದ್ದರೆ, ಅಲರ್ಜಿಯನ್ನು ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಹಾರದ ಪ್ರತಿಕ್ರಿಯೆಯು ಉಬ್ಬಸ ಮತ್ತು ಇತರ ಅಸ್ತಮಾ ಲಕ್ಷಣಗಳನ್ನು ಉಂಟು ಮಾಡಬಹುದು.ಪೂರಕಗಳು ಕೂಡ ಅಸ್ತಮಾದ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದರಿಂದ ಪೂರಕವನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಒಮ್ಮೆ ಸಂಪರ್ಕಿಸಿ.
World Asthma Day 2022 What To Eat And What Not To Eat For Asthma.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am