ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ತಿನ್ನಬೇಕಂತೆ…ಯಾಕೆ ಗೊತ್ತಾ?

04-05-22 08:07 pm       Source: Vijayakarnataka   ಡಾಕ್ಟರ್ಸ್ ನೋಟ್

ಮಾವಿನ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇದ್ದು, ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ ನಂತರ ಮಾವಿನ ಹಣ್ಣನ್ನು ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು...

ರಸಭರಿತ ಮಾವಿನ ಹಣ್ಣು ಬಾಯಲ್ಲಿ ನೀರೂರಿಸುತ್ತದೆ. ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಮಾವಿನ ಕಾಯಿ ಕೂಡ ಒಂದು. ಅನೇಕ ಸಿಹಿ ಮ್ತು ಖಾರವಾದ ಖಾದ್ಯಗಳಲ್ಲಿ ಮಾವಿನ ಕಾಯಿಯನ್ನು ಬಳಸಲಾಗುತ್ತದೆ.

ಬಿಸಿ ಬಿಸಿ ಅನ್ನ, ಸಾರಿನ ಪಕ್ಕದಲ್ಲಿ ನಾಲಿಗೆ ಚಪ್ಪರಿಸಲು ಒಂದು ತುಂಡು ಉಪ್ಪಿನಕಾಯಿ ಇದ್ದರೆ ಊಟ ಸಂಪೂರ್ಣವಾಗುತ್ತದೆ. ಮಾವಿನ ಹಣ್ಣಿನ ಶೇಕ್‌, ಜ್ಯೂಸ್, ಐಸ್‌ ಕ್ರೀಮ್‌, ಮಾವಿನಕಾಯಿ ಚಿತ್ರಾನ್ನಕ್ಕೆಲ್ಲಾ ಮಾವನ್ನು ಬಳಸಲಾಗುತ್ತದೆ.

ಮಾವಿನ ಹಣ್ಣಿನಲ್ಲಿ ಅಗಾಧವಾದ ಪೋಷಕಾಂಶಗಳಿಂದ ತುಂಬಿದೆ. ಇದರಲ್ಲಿ ವಿಟಮಿನ್‌ ಸಿ, ವಿಟಮಿನ್‌ ಎ, ಫೋಲೇಟ್, ವಿಟಮಿನ್‌ ಕೆ, ವಿಟಮಿನ್‌ ಇ, ಬಿ ಸೇರಿದಂತೆ ಇನ್ನು ಅನೇಕ ಪೌಷ್ಟಿಕ ಸತ್ವಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಮಾವಿನ ಹಣ್ಣನ್ನು ನಿಯಮಿತವಾಗಿ ಪ್ರತಿನಿತ್ಯ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳ ಜೊತೆ ಜೊತೆಗೆ ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

ಮಾವಿನ ಹಣ್ಣನ್ನು ಮಾರುಕಟ್ಟೆಯಿಂದ ತಂದ ತಕ್ಷಣ ನೀರಿನಲ್ಲಿ ನೆನೆಸಬೇಕು. ಹೀಗೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.

ಫೈಟಿಕ್‌ ಆಮ್ಲ

Best Mango Juice Brands 2021 - Medmunch

ಮಾವಿನ ಹಣ್ಣುಗಳನ್ನು ನೀವು ಮಾರುಕಟ್ಟೆಯಿಂದ ತಂದ ನಂತರ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸುವುದರಿಂದ ಫೈಟಿಕ್ ಆಮ್ಲವನ್ನು ತೊಡೆದುಹಾಕಬಹುದು. ಫೈಟಿಕ್‌ ಆಸಿಡ್‌ ಅಥವಾ ಆಮ್ಲ ನೈಸರ್ಗಿಕ ಅಣುವನ್ನು ಹೊಂದಿರುತ್ತದೆ. ಇನ್ನು ಇದನ್ನು ಪೋಷಕಾಂಶಗಳ ವಿರೋಧಿ ಎಂದು ಪರಿಗಣಿಸಲಾಗುತ್ತದೆ.

ಈ ಫೈಟಿಕ್ ಆಮ್ಲವು ಪೌಷ್ಟಿಕ ಸತ್ವವುಳ್ಳ ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದ ಮಾವಿನ ಹಣ್ಣಿನಿಂದ ದೊರೆಯುವ ಯಾವುದೇ ಪೋಷಕಾಂಶಗಳು ನಮ್ಮ ದೇಹವು ಪಡೆಯುವುದಿಲ್ಲ. ಹಾಗಾಗಿ ಮಾವಿನ ಹಣ್ಣುಗಳನ್ನು ನೀರಿನಲ್ಲಿ ನೆನೆಸುವುದು ಬಹಳ ಮುಖ್ಯ.

ಅನೇಕ ರೋಗಗಳಿಗೆ ರಾಮಬಾಣ

How to Cut a Mango | The Table by Harry & David

ಪ್ರತಿನಿತ್ಯ ಒಂದಲ್ಲ ಒಂದು ರೋಗಗಳು ದೇಹಕ್ಕೆ ಆಕ್ರಮಣ ಮಾಡುತ್ತಿರುತ್ತವೆ. ಅವುಗಳಲ್ಲಿ ಈ ತಲೆನೋವು, ಮಲಬದ್ಧತೆ ಮತ್ತು ಇತರ ಕರುಳಿನ ಸಮಸ್ಯೆಗಳಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಮಾವಿನ ಕಾಯಿಯು ಉತ್ತೇಜಿಸುತ್ತದೆ. ಮಾವು ತ್ವರಿತವಾಗಿ ಹಣ್ಣಾಗಲು ಕೀಟನಾಶಕಗಳನ್ನು ಬಳಸಲಾಗುತ್ತದೆ. ಇದೊಂದು ವಿಷಕಾರಿಯಾಗಿದ್ದು, ಉಸಿರಾಟದಲ್ಲಿ ಕಿರಿಕಿರಿ, ಅಲರ್ಜಿ, ಕಣ್ಣು ಮತ್ತು ಚರ್ಮದ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಅಷ್ಟೇ ಅಲ್ಲ, ಕ್ಯಾನ್ಸರ್‌ ಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು. ಹಾಗಾಗಿ ಮಾವಿನ ಹಣ್ಣನ್ನು ನೀರಿನಲ್ಲಿ ಸ್ವಲ್ಪ ಕಾಲ ನೀರಿನಲ್ಲಿ ನೆನೆಸಿ ಸೇವನೆ ಮಾಡುವುದು ಒಳ್ಳೆಯದು.

​ಶಾಖವನ್ನು ತಣ್ಣಗಾಗಿಸುತ್ತದೆ

Nelesa Gardening Live Alphonso Mango Plant : Amazon.in: Garden & Outdoors

ಮಾವು ದೇಹದ ಶಾಖವನ್ನು ಹೆಚ್ಚು ಮಾಡುವ ಹಣ್ಣಾಗಿದೆ. ಬೇಸಿಗೆಯಲ್ಲಿ ದೇಹದ ಶಾಖವನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ತೊಂದರೆಗಳನ್ನು ಅನುಭವಿಸಬೇಕಾಗಬಹುದು.

ಅತಿ ಹೆಚ್ಚಿನ ಶಾಖವಿರುವ ಆಹಾರವು ಮೊಡವೆ, ಜೀರ್ಣಕಾರಿ ಅಸಮತೋಲನವನ್ನು ಉಂಟು ಮಾಡಬಹುದು. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಥರ್ಮೋಜೆನಿಕ್‌ ಗುಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ

A New Hybrid Variety of Mangoes Has Anti-Cancerous Properties, Can Lower  Blood Sugar Levels, Says Study

ಮಾವಿನ ಹಣ್ಣು ಆರೋಗ್ಯಕರವಾದ ಹಣ್ಣಾಗಿದ್ದು, ತೂಕವನ್ನು ಗಮನಾರ್ಹವಾಗಿ ಕಳೆದುಕೊಳ್ಳಲು ಬಯಸುವವರು ಮಾವಿನ ಹಣ್ಣನ್ನು ಸೇವನೆ ಮಾಡಬಹುದು. ಮಾವಿನ ಹಣ್ಣಿನಲ್ಲಿ ಸಾಕಷ್ಟು ಫೈಟೊಕೆಮಿಕಲ್‌ಗಳಿವೆ.

‘ಮಾವಿನ ಹಣ್ಣಿನಲ್ಲಿರುವ ಫೈಟೊಕೆಮಿಕಲ್‌ಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳು ಕೊಬ್ಬಿನ ಕೋಶಗಳನ್ನು ಮತ್ತು ಕೊಬ್ಬಿಗೆ ಸಂಬಂಧಿಸಿದ ಜೀನ್ಸ್‌ಗಳನ್ನು ನಿಗ್ರಹಿಸಬಹುದು ಎಂದು ಸಂಶೋಧನೆಗಳ ಮೂಲಕ ಸೂಚಿಸುತ್ತದೆ’.

ಮಾವನ್ನು ನೆನೆಸಿ ಸೇವನೆ ಮಾಡುವುದರಿಂದ ತೂಕವನ್ನು ಮಾತ್ರ ಕಡಿತಗೊಳಿಸುವುದಿಲ್ಲ ಬದಲಾಗಿ, ಫೈಟೊಕೆಮಿಕಲ್ಸ್‌ ಉರಿಯೂತ ಮತ್ತು ಆಕ್ಸಿಡೇಟಿವ್‌ ನಂತಹ ಸಮಸ್ಯೆಗಳಿಂದ ಕಾಪಾಡುತ್ತದೆ.

ಮಾವಿನ ಹಣ್ಣನ್ನು ನೀರಿನಲ್ಲಿ ಎಷ್ಟು ಹೊತ್ತು ಬಿಡಬೇಕು?

Mango Wallpapers HD - Wallpaper Cave

ಇಷ್ಟೇಲ್ಲಾ ಆರೋಗ್ಯ ಪ್ರಯೋಜನಗಳನ್ನು ತಿಳಿದ ನಂತರ ಕಟ್ಟ ಕಡೆಯದಾಗಿ ಮೂಡುವ ಪ್ರಶ್ನೆ ಮಾವಿನ ಹಣ್ಣನ್ನು ನೀರಿನಲ್ಲಿ ಎಷ್ಟು ಹೊತ್ತು ನೆನೆಸಬೇಕು ಎಂಬುದು. ಇದಕ್ಕೆ ಉತ್ತರ 15 ನಿಮಿಷದಿಂದ 2 ಗಂಟೆಯ ಕಾಲ ನೆನೆಸಲು ಶಿಫಾರಸ್ಸು ಮಾಡಲಾಗಿದೆ. ಅಲ್ಲದೆ, ಮಾವಿನ ಹಣ್ಣನ್ನು ಹೀಗೆ ನೆನೆಸುವುದರಿಂದ ಹಣ್ಣಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

Health Benefits Of Soaked Mangoes In Kannada.