ನೇರಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೀಗೆ ತಿಂದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ

20-05-22 07:40 pm       Source: Vijayakarnataka   ಡಾಕ್ಟರ್ಸ್ ನೋಟ್

ನೇರಳೆ ಹಣ್ಣು ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತೇವೆ. ಆದರೆ ಮಿತಿ ಮೀರಿ ತಿಂದರೆ ಆರೋಗ್ಯ ಹದಗೆಡುವ ಸಾಧ್ಯತೆಗಳಿವೆ. ಅದಕ್ಕಾಗಿ ಈ ಹಣ್ಣನ್ನು ಯಾವ ರೀತಿ ತಿನ್ನಬೇಕು...

ನೇರಳೆ ಹಣ್ಣು ಒಂದು ಸೀಸನಲ್‌ ಹಣ್ಣಾಗಿರುವುದರಿಂದ, ಬೇಸಿಗೆಯಲ್ಲಿ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಇದನ್ನು ಜಾಮೂನ್ ಎಂದೂ ಕರೆಯುತ್ತಾರೆ. ಈ ಹಣ್ಣು ಅದರ ಗಾಢ ಬಣ್ಣ ಮತ್ತು ಹುಳಿ ಸಿಹಿ ರುಚಿಯಿಂದಾಗಿ ತುಂಬಾ ಜನರು ಇದನ್ನು ಇಷ್ಟಪಡುತ್ತಾರೆ. ಅನೇಕ ಆಯುರ್ವೇದ ಗುಣಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ವಿಟಮಿನ್ ಗಳು ಹೇರಳವಾಗಿವೆ.

ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು

13 Well Being And Magnificence Advantages Of Jamun That Will Astonish! -  The Just Group UK

ಆಯುರ್ವೇದ ವೈದ್ಯರು ಜಾಮೂನ್‌ನ ಆಯುರ್ವೇದ ಗುಣಲಕ್ಷಣಗಳನ್ನು ಮತ್ತು ಅದನ್ನು ತಿನ್ನುವ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ಐಬಿಎಸ್, ಅತಿಸಾರ, ಅತಿಯಾದ ರಕ್ತಸ್ರಾವ , ಲ್ಯುಕೋರಿಯಾ , ವಾಕರಿಕೆ ಮತ್ತು ವಾಂತಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೇರಳೆ ಹಣ್ಣು ಅಮೃತವಾಗಿದೆ.

ಇದರ ಗುಣಲಕ್ಷಣಗಳು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಮಧುಮೇಹಿಗಳಿಗೂ ಈ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ನೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದ ನಂತರ ಅನೇಕ ಜನರು ಅದನ್ನು ಅತಿಯಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿಯಾಗಬಹುದು.

​ನೇರಳೆ ಹಣ್ಣಿನ ಬೀಜ

Jamun is the miracle fruit for people with type-2 diabetes. Here's why

ನೇರಳೆ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ವಿವಿಧ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಫ್ಲೇವನಾಯ್ಡ್‌ಗಳ ಜೊತೆಗೆ ಜಾಮೂನ್ ಉತ್ಕರ್ಷಣ ನಿರೋಧಕಗಳ ಶ್ರೀಮಂತ ಮೂಲವಾಗಿದೆ.

​ಯಾವ ರೋಗಕ್ಕೆಲ್ಲಾ ಒಳ್ಳೆಯದು

15 Surprising Jamun Benefits for Your Health and Wellness

ಮಧುಮೇಹ

ರಕ್ತಹೀನತೆ

ಹೈಪರ್ಗ್ಲೈಸೀಮಿಯಾ

ಕೆಮ್ಮು

ಉಬ್ಬಸ

ಬ್ರಾಂಕೈಟಿಸ್

ದೌರ್ಬಲ್ಯ

ಲೈಂಗಿಕ ದೌರ್ಬಲ್ಯ

ಲ್ಯುಕೋರೋಹಿಯಾ

ಮಾನಸಿಕ ಅಸ್ವಸ್ಥತೆಗಳು

​ಖಾಲಿಹೊಟ್ಟೆಯಲ್ಲಿ ತಿನ್ನದಿರಿ

Jamun: Benefits, cleaning and storing tips, uses and recipes you need to  try | The Times of India

ಆಯುರ್ವೇದದಲ್ಲಿ, ನೇರಳೆ ಹಣ್ಣಿನ ಸೇವನೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಲು ಸಲಹೆ ನೀಡಲಾಗಿದೆ. ಆಯುರ್ವೇದದ ಪ್ರಕಾರ ಜಾಮೂನ್ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದಲ್ಲದೆ, ಈ ಹಣ್ಣನ್ನು ತಿಂದ ನಂತರ ಮತ್ತು ಮೊದಲು ಕನಿಷ್ಠ ಒಂದು ಗಂಟೆಯವರೆಗೆ ಹಾಲನ್ನು ಕುಡಿಯಬಾರದು. ಒಂದು ವೇಳೆ ಹಾಗೆ ಮಾಡಿದರೆ ಪ್ರಯೋಜನಗಳ ಬದಲಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಚರ್ಮಕ್ಕೆ ಒಳ್ಳೆಯದು

ಜಾಮೂನ್ ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ, ಇದು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಹೊಳೆಯುವ ಚರ್ಮಕ್ಕಾಗಿ ಮತ್ತು ಮೊಡವೆಗಳನ್ನು ಮೂಲದಿಂದ ತೆಗೆದುಹಾಕಲು ಸಹ ನೇರಳೆ ಹಣ್ಣನ್ನುಸೇವಿಸಲಾಗುತ್ತದೆ. ನೀವು ಹೆಚ್ಚು ಹಣ್ಣುಗಳನ್ನು ಸೇವಿಸಿದರೆ ಅದು ನಿಮ್ಮ ತ್ವಚೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

​ಮಲಬದ್ಧತೆ ಸಮಸ್ಯೆ

ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-ಈ ಮನೆಮದ್ದನ್ನು ಪ್ರಯತ್ನಿಸಿ | Effective  Home Remedies To Treat Constipation - Kannada BoldSky

ಜಾಮೂನಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಹಾಗಂತ ನೀವು ಸಿಕ್ಕಾಪಟ್ಟೆ ತಿಂದರೆ ಮಲಬದ್ಧತೆ ಸಮಸ್ಯೆ ಕಾಡಬಹುದು. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಯ.

ರಕ್ತದೊತ್ತಡ ಸಮಸ್ಯೆ

ರಕ್ತದೊತ್ತಡ ಕಡಿಮೆಯಾಗುವುದೇಕೆ? | Prajavani

ಆಯುರ್ವೇದದ ಪ್ರಕಾರ, ಅಧಿಕ ರಕ್ತದೊತ್ತಡ ರೋಗಿಗಳಿಗೆ ಜಾಮೂನ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಜಾಮೂನ್ ಹಣ್ಣು ಆಹಾರದಲ್ಲಿ ಸೇರಿಸುವುದರಿಂದ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಅನೇಕ ಜನರು ಅದನ್ನು ನಿಯಂತ್ರಿಸಲು ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆ ಬರಬಹುದು.

Benefits And Side Effects Of Eating Jamun.