ಬ್ರೇಕಿಂಗ್ ನ್ಯೂಸ್
20-11-22 10:40 pm Mangalore Correspondent ಕರಾವಳಿ
ಮಂಗಳೂರು, ನ.20: ಆಟೋ ಸ್ಫೋಟ ಪ್ರಕರಣದಲ್ಲಿ ಸುಟ್ಟ ಗಾಯಗಳಿಂದ ಬದುಕುಳಿದಿರುವ ಶಂಕಿತ ವ್ಯಕ್ತಿಯನ್ನು ಮೊಹಮ್ಮದ್ ಶಾಕೀರ್ ಎಂದು ಮೇಲ್ನೋಟಕ್ಕೆ ಗುರುತು ಪತ್ತೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಕದ್ರಿಯಲ್ಲಿ ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆದು ಸಿಕ್ಕಿಬಿದ್ದು ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಶಾಕೀರ್ ಈಗ ಭಯೋತ್ಪಾದಕ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ನಾಲ್ವರ ತಂಡ ಮಂಗಳೂರಿಗೆ ಆಗಮಿಸಿದೆ. ಇದೇ ವೇಳೆ, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮತ್ತು ಎನ್ಐಎ ದೆಹಲಿ ವಿಭಾಗದ ಡಿಜಿಪಿ ಅಧಿಕಾರಿಯೊಬ್ಬರು ಮಂಗಳೂರಿಗೆ ಆಗಮಿಸಿದ್ದಾರೆ. ಬ್ಲಾಸ್ಟ್ ನಡೆದಿರುವ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್ ಗಾಯಾಳು ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಗೋಡೆ ಬರಹ ಪ್ರಕರಣದ ಆರೋಪಿಗಳ ಬಗ್ಗೆ ಶಂಕೆಯಿದೆ. ಗಾಯಾಳು ವ್ಯಕ್ತಿಯ ಸಂಬಂಧಿಕರನ್ನು ಮಂಗಳೂರಿಗೆ ಕರೆಸಿದ್ದು, ಅವರು ಗುರುತು ಹಿಡಿದ ಬಳಿಕವೇ ನಾವು ದೃಢವಾಗಿ ಹೇಳುತ್ತೇವೆ ಎಂದಿದ್ದಾರೆ.

ಊಹಾಪೋಹದಲ್ಲಿ ಹೇಳಲ್ಲ, ಕ್ಲಾರಿಟಿ ಸಿಗತ್ತೆ
ಗಾಯಾಳು 50 ಶೇಕಡಾ ಭಾಗ ಸುಟ್ಟು ಹೋಗಿದ್ದಾನೆ. ಯಾವುದೇ ಪ್ರಶ್ನೆಗೆ ಕೈ ಸನ್ನೆಯಿಂದ ಮಾತ್ರ ಉತ್ತರ ನೀಡುತ್ತಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯುತ್ತೇವೆ. ಬಹಳಷ್ಟು ಸಾಕ್ಷ್ಯ ನಮ್ಮಲ್ಲಿ ಸಿಕ್ಕಿದೆ, ನಾಳೆಯ ಹೊತ್ತಿಗೆ ನಮಗೆ ಒಂದು ಕ್ಲಾರಿಟಿ ಸಿಗುತ್ತದೆ. ಪರಮೇಶ್ವರ ಹೆಗಡೆ ಪ್ರಕರಣದ ತನಿಖಾಧಿಕಾರಿಯಾಗಿ ಇರಲಿದ್ದಾರೆ. ಕೆಲವರನ್ನು ವಿಚಾರಣೆ ಉದ್ದೇಶದಿಂದ ವಶಕ್ಕೆ ಪಡೆಯುತ್ತೇವೆ. ಊಹಾಪೋಹಗಳ ಮೇಲೆ ಮಾತನಾಡುವುದು ಸರಿಯಲ್ಲ. ನಾಳೆ ನಿಮಗೆ ಕ್ಲಾರಿಟಿ ಕೊಡುತ್ತೇನೆ ಎಂದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.


ಶಿವಮೊಗ್ಗ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಪ್ರಕರಣದಲ್ಲಿ ಮಾಝ್ ಮುನೀರ್ ಮತ್ತು ಸಯ್ಯದ್ ಯಾಸಿನ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಘಟನೆ ಸಂಬಂಧಿಸಿ ಮೊಹಮ್ಮದ್ ಶಾರೀಕ್ ಪತ್ತೆಗೆ ಬಲೆ ಬೀಸಿದ್ದರು. ಇವರು ಶಿವಮೊಗ್ಗ ಮತ್ತು ಬಂಟ್ವಾಳದಲ್ಲಿ ಬಾಂಬ್ ಸ್ಫೋಟಕ್ಕೆ ತರಬೇತಿ ನಡೆಸಿದ್ದರು, ಪ್ರಬಲ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದರು ಅನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಆನಂತರ, ತೀರ್ಥಹಳ್ಳಿ ಪೊಲೀಸರು ಮಾಝ್ ಮತ್ತು ಯಾಸಿನನ್ನು ತುಂಗಾ ನದಿ ತೀರ ಮತ್ತು ಬಂಟ್ವಾಳದ ಕೆಲವು ಕಡೆಗಳಿಗೆ ಒಯ್ದು ತನಿಖೆಯನ್ನೂ ನಡೆಸಿದ್ದರು. ಆದರೆ ಶಾರೀಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.


ಮೈಸೂರಿನಲ್ಲಿ ನಕಲಿ ಹೆಸರಲ್ಲಿ ಅಡಗಿದ್ದ
ಇದೀಗ ಮೈಸೂರಿನಲ್ಲಿ ಪ್ರೇಮರಾಜ್ ಹುಟಗಿ ಎನ್ನುವ ಹೆಸರಿನಲ್ಲಿ ಶಾರೀಕ್ ಅವಿತುಕೊಂಡಿದ್ದ ಅನ್ನುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಲ್ಲಿದ್ದುಕೊಂಡೇ ಭಯೋತ್ಪಾದಕ ಕೃತ್ಯಕ್ಕೆ ಸಂಚು ಹೂಡಿರುವ ಶಂಕೆಯಿದೆ. ಅದಕ್ಕೆ ಪೂರಕವಾಗಿ ಮೈಸೂರಿನಲ್ಲಿ ಆತ ಇದ್ದ ಬಾಡಿಗೆ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಅಲ್ಲಿ ಬಾಂಬ್ ತಯಾರಿಗೆ ಬೇಕಾಗುವ ಸಾಮಗ್ರಿಗಳು ಸಿಕ್ಕಿವೆ. ಜಿಲೆಟಿನ್ ಕಡ್ಡಿಗಳು, ಸರ್ಕಿಟ್ ಬೋರ್ಡ್ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಇದಲ್ಲದೆ, ಆತ ಮೈಸೂರಿನಲ್ಲಿದ್ದುಕೊಂಡೇ ಮೊಬೈಲ್ ರಿಪೇರಿ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಅನ್ನುವುದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರೇಮರಾಜ್ ಹುಟಗಿ ಎನ್ನುವ ಅಸಲಿ ವ್ಯಕ್ತಿ ತುಮಕೂರಿನಲ್ಲಿ ರೈಲ್ವೇ ಉದ್ಯೋಗಿಯಾಗಿದ್ದು, ಆತನ ಆಧಾರ್ ಕಾರ್ಡ್ ಕಳೆದು ಹೋಗಿತ್ತು. ಅದೇ ಆಧಾರ್ ಕಾರ್ಡ್ ಮೊಹಮ್ಮದ್ ಶಾರೀಕ್ ಬಳಿ ನಿನ್ನೆ ಸ್ಫೋಟ ಆಗಿದ್ದ ಸ್ಥಳದಲ್ಲಿ ಪತ್ತೆಯಾಗಿತ್ತು. ಅದೇ ಆಧಾರ್ ಕಾರ್ಡ್ ಬಳಸಿಕೊಂಡು ಶಾರೀಕ್ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ.



ಲಷ್ಕರ್ ಪರ ಗೋಡೆ ಬರಹ ಬರೆದಿದ್ದ ಶಾರೀಕ್
ಎರಡು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಠಾಣೆ ವ್ಯಾಪ್ತಿಯ ಬಿಜೈನಲ್ಲಿ ಅಪಾರ್ಟ್ಮೆಂಟ್ ಒಂದರ ಆವರಣದ ಗೋಡೆಯಲ್ಲಿ ಇಂಗ್ಲಿಷಿನಲ್ಲಿ ಲಷ್ಕರ್ ಉಗ್ರರ ಪರವಾಗಿ ಬರಹ ಬರೆಯಲಾಗಿತ್ತು. ಪ್ರಕರಣದಲ್ಲಿ ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ನನ್ನು ಬಂಧಿಸಲಾಗಿತ್ತು. ಇವರಿಬ್ಬರು ಕೂಡ ತೀರ್ಥಹಳ್ಳಿ ಮೂಲದವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದರು. ಮಾಝ್ ಇಂಜಿನಿಯರಿಂಗ್ ಓದುತ್ತಿದ್ದರೆ, ಶಾರೀಕ್ ತನ್ನ ಚಿಕ್ಕಪ್ಪನ ಅಂಗಡಿಯಲ್ಲಿ ಸೇಲ್ಸ್ ಮೆನ್ ಆಗಿದ್ದ. ಸಂಘಿ ಮತ್ತು ಮನುವಾದಿಗಳೇ, ನಿಮ್ಮ ಜೊತೆ ಡೀಲ್ ಮಾಡಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಕರೆಸುವಂತೆ ಮಾಡಬೇಡಿ ಎಂದು ಪರೋಕ್ಷವಾಗಿ ಎಚ್ಚರಿಸುವ ರೀತಿ ಇಂಗ್ಲಿಷಿನಲ್ಲಿ ಬರಹ ಬರೆಯಲಾಗಿತ್ತು. ಲಷ್ಕರ್ ಮತ್ತು ಐಸಿಸ್ ಉಗ್ರರ ಪ್ರೇರಣೆಯಿಂದ ಈ ರೀತಿ ಬರೆದುಕೊಂಡಿದ್ದರು ಅನ್ನುವುದು ತನಿಖೆಯಲ್ಲಿ ತಿಳಿದುಬಂದಿತ್ತು. ಎಂಟು ತಿಂಗಳ ಕಾಲ ಮಂಗಳೂರಿನ ಜೈಲಿನಲ್ಲಿದ್ದ ಇವರಿಬ್ಬರು ಕೂಡ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.
ಆಟೋದಲ್ಲಿ ನಿಗೂಢ ಸ್ಫೋಟ ; ಸ್ಥಳದಲ್ಲಿ ಹಳೆಯ ಕುಕ್ಕರ್ ಪತ್ತೆ, ಸ್ಫೋಟಕದ ಬಗ್ಗೆ ಶಂಕೆ
ಕುಕ್ಕರ್ ಬ್ಲಾಸ್ಟ್ ಬಗ್ಗೆ ಪೊಲೀಸ್ ಹೈಎಲರ್ಟ್ ; ಸ್ಫೋಟದ ಹಿಂದೆ ಪ್ರಬಲ ಸಂಚು ಸಾಧ್ಯತೆ, ಸ್ಫೋಟಕದ ಬಗ್ಗೆ ಪರಿಶೀಲನೆ
ಆಟೋ ಸ್ಫೋಟ ಆಕಸ್ಮಿಕ ಘಟನೆಯಲ್ಲ, ಭಯೋತ್ಪಾದಕ ಕೃತ್ಯ ; ಡಿಜಿಪಿ ಪ್ರವೀಣ್ ಸೂದ್ ಟ್ವೀಟ್
ಪ್ರೆಶರ್ ಕುಕ್ಕರ್ ಸ್ಫೋಟ ; ಶಂಕಿತ ವ್ಯಕ್ತಿ ಮೈಸೂರಿನಲ್ಲಿದ್ದೇ ಸಂಚು, ಮನೆಯಲ್ಲಿ ಸ್ಫೋಟಕ ತಯಾರಿ ಸಾಮಗ್ರಿ ಪತ್ತೆ !
Autorickshaw bomb blast in Mangalore, ADGP Alok kumar visits spot, Bomber identified as Mohammed Shariq. Shariq was the main accused in the pro-terrorism graffiti on walls in Mangaluru. He was released on bail in the case. He had been booked under the Unlawful Activities (Prevention) Act (UAPA) but was out on bail in the case.
16-11-25 09:15 pm
HK News Desk
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
17-11-25 06:13 pm
HK News Desk
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
17-11-25 06:16 pm
Mangalore Correspondent
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
Speaker U.T. Khader: ಅಶಕ್ತರಿಗೆ ಶಕ್ತಿ ನೀಡುವುದೇ...
16-11-25 08:43 pm
ಅಡಿಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕ...
16-11-25 04:40 pm
ಧರ್ಮಸ್ಥಳ ಪ್ರಕರಣ ; ಬಟ್ಟೆ ಬಿಚ್ಚಿಸಿ ಬೂಟು ಕಾಲಿನಿಂ...
15-11-25 10:47 pm
17-11-25 12:54 pm
Mangalore Correspondent
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm