ಬ್ರೇಕಿಂಗ್ ನ್ಯೂಸ್
21-11-22 02:10 pm Mangalore Correspondent ಕರಾವಳಿ
ಮಂಗಳೂರು, ನ.21 : ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ಶಾರೀಕ್ ಸಹವರ್ತಿಗಳಾಗಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನಲ್ಲಿ ಇಬ್ಬರು, ವೂಟಿಯಲ್ಲಿ ಒಬ್ಬ ಮತ್ತು ಮಂಗಳೂರಿನಲ್ಲಿ ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧಿಸಿ ಸುದ್ದಿಗೋಷ್ಟಿ ನಡೆಸಿದ ಅವರು, ಶಾರೀಕ್ ಜಾಗತಿಕ ಭಯೋತ್ಪಾದಕ ಸಂಘಟನೆಗಳಿಂದ ಪ್ರೇರಣೆ ಪಡೆದಿದ್ದಾನೆ. ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ತಾಹ ಮತ್ತು ಅರಾಫತ್ ಆಲಿ ಪ್ರಮುಖ ಹ್ಯಾಂಡ್ಲರ್ ಗಳಾಗಿದ್ದು ಅವರ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಮೊದಲು ಪ್ರಕರಣದಲ್ಲಿ ಸುಟ್ಟ ಗಾಯ ಆಗಿದ್ದ ವ್ಯಕ್ತಿಯ ಜೊತೆಗಿದ್ದ ಆಧಾರ್ ಕಾರ್ಡ್ ನಲ್ಲಿ ಹುಬ್ಬಳ್ಳಿ ಮೂಲದ ಪ್ರೇಮ್ ರಾಜ್ ವಿಳಾಸ ಇತ್ತು. ಅಲ್ಲಿ ಚೆಕ್ ಮಾಡಿದಾಗ ಪ್ರೇಮ್ ರಾಜ್ ಅಲ್ಲಿ ಮನೆ ಬಿಟ್ಟಿರುವುದು ಗೊತ್ತಾಗಿತ್ತು. ಬಳಿಕ ಚೆಕ್ ಮಾಡಿದಾಗ ತುಮಕೂರಿನಲ್ಲಿ ರೈಲ್ವೇ ಉದ್ಯೋಗಿ ಆಗಿರುವುದು ತಿಳಿದು ಸ್ವತಃ ನಾನು ಫೋನ್ ಮಾಡಿದ್ದೆ. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಿದ್ದೆ. ಪ್ರೇಮರಾಜ್ ತನ್ನ ಆಧಾರ್ ಕಾರ್ಡ್ ಕಳೆದು ಹೋಗಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಆಧಾರ್ ಕಾರ್ಡ್ ನಲ್ಲಿ ಬೇರೆ ಫೋಟೊ ಮತ್ತು ಈ ವ್ಯಕ್ತಿ ಬೇರೆ ಇದ್ದಿರುವುದು ನೋಡಿ ಸಂಶಯ ಬಂದಿತ್ತು.
ನಮಗೆ ಶಾರೀಕ್ ಅಂತ ಅನುಮಾನ ಬಂದಿತ್ತು. ಆದರೂ ಅವರ ಮನೆಯವರನ್ನ ಕರೆಸಿ ಗುರುತು ಪತ್ತೆ ಮಾಡಿದ್ದೇವೆ. ಅವರ ಮಲತಾಯಿ ಶಬನಾ, ಸಹೋದರಿ ಆಫಿಯಾ, ತಾಯಿ ತಂಗಿ ಯಾಸ್ಮೀನ್ ಅವನ ಗುರುತು ಪತ್ತೆ ಮಾಡಿದ್ದಾರೆ.
ಆಗಸ್ಟ್ 15ರ ವೇಳೆಗೆ ಶಿವಮೊಗ್ಗ ಗಲಾಟೆ ಬಳಿಕ ಅಲರ್ಟ್ ಆಗಿದ್ದ ಶಾರೀಕ್ ಅಲ್ಲಿಂದ ಪರಾರಿಯಾಗಿ ಕೊಯಮತ್ತೂರು, ತಮಿಳುನಾಡು, ಕೇರಳ ಸುತ್ತಾಡಿ ಮೈಸೂರು ಬಂದಿದ್ದ. ಮೈಸೂರಿನಲ್ಲಿ ಪ್ರೇಮರಾಜ್ ಹೆಸರಲ್ಲಿ ರೂಂ ಮಾಡಿ, ಮೊಬೈಲ್ ರಿಪೇರಿ ಕೆಲಸ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಸೆ.19 ರಂದು ಟ್ರಯಲ್ ಬ್ಲಾಸ್ಟ್ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಶಾರೀಕ್ ಆರೋಪಿಯಾಗಿದ್ದ. ಮೈಸೂರಿನಲ್ಲಿ ಆತ ವಾಸ ಇದ್ದ ಮೇಟಗಳ್ಳಿಯ ಮನೆಯಲ್ಲಿ ಚೆಕ್ ಮಾಡಿದಾಗ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ಫಾಸ್ಪರಸ್, ಬ್ಯಾಟರಿ, ಸರ್ಕಿಟ್ ಸಿಕ್ಕಿದ್ದು ಬ್ಲಾಸ್ಟ್ ಮಾಡಲು ತಯಾರಿ ನಡೆಸಿದ್ದ ಅನ್ನೋದು ಪತ್ತೆಯಾಗಿದೆ. ಮನೆ ಮಾಲೀಕನಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಈ ನಡುವೆ, ಕೊಯಮತ್ತೂರಿನಲ್ಲಿ ಅರುಣ್ ಕುಮಾರ್ ಗಾವ್ಲಿ ಸಂಡೂರು ಹೆಸರಲ್ಲಿ ವಾಸವಿದ್ದ. ಆ ಹೆಸರಿನ ಆಧಾರ್ ಕಾರ್ಡ್ ಶಾರೀಕ್ ಜೊತೆಗಿತ್ತು. ಸಂಡೂರಿನಲ್ಲಿ ಅರುಣ್ ಕುಮಾರ್ ವಿಚಾರಣೆ ನಡೆಸಿದ್ದು ಆಧಾರ್ ಕಾರ್ಡ್ ಕಳೆದುಹೋಗಿದ್ದಾಗಿ ತಿಳಿಸಿದ್ದಾರೆ.
ಮೊನ್ನೆ ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ ಬಸ್ ನಲ್ಲಿ ಮಂಗಳೂರು ಬಂದಿದ್ದಾನೆ. ಅಲ್ಲಿ ನಾಗುರಿ ಇಳಿದು ಅವನ ಟಾರ್ಗೆಟ್ ಜಾಗಕ್ಕೆ ಹೋಗ್ತಾ ಇದ್ದ, ಆದರೆ ಅವನು ಎಲ್ಲಿಗೆ ಹೋಗ್ತಾ ಇದ್ದ ಅನ್ನೋದು ಗೊತ್ತಾಗಿಲ್ಲ. ಅವನು ಗುಣಮುಖವಾದ ಬಳಿಕ ವಿಚಾರಣೆಯಲ್ಲಿ ಗೊತ್ತಾಗುತ್ತೆ. ವಾರದ ಹಿಂದೆ ಒಮ್ಮೆ ಮಂಗಳೂರಿಗೆ ಬಂದು ಸುತ್ತಾಡಿ ಹೋಗಿದ್ದ. ಮೈಸೂರಿನಿಂದ ಇಬ್ಬರು ಹಾಗೂ ಮಂಗಳೂರಿನ ಒಬ್ಬರನ್ನ ಪ್ರಕರಣ ಸಂಬಂಧ ವಶಕ್ಕೆ ಪಡೆದಿದ್ದೇವೆ. ಇವನು ಜಾಗತಿಕ ಭಯೋತ್ಪಾದಕ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದ. ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಮತ್ತು ಅರಾಫತ್ ಆಲಿ ಈತನ ಮೈನ್ ಹ್ಯಾಂಡ್ಲರ್ ಆಗಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆಟೋ ಚಾಲಕನಿಗೆ ಪರಿಹಾರ
ಮೈಸೂರು ಬಿಟ್ಟು ಬೇರೆ ಇನ್ನೆಲ್ಲ ಇದ್ದ. ಆತನಿಗೆ ಯಾರೆಲ್ಲ ಸಹಕಾರ ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ದೊಡ್ಡ ಅನಾಹುತ ತಪ್ಪಿದೆ, ಸ್ವಲ್ಪ ಡ್ಯಾಮೇಜ್ ಅಷ್ಟೇ ಆಗಿದೆ. ದೊಡ್ಡ ದುರಂತ ಆಗುತ್ತಿದ್ದರೆ ಕರಾವಳಿಯಲ್ಲಿ ಕಮ್ಯನಲ್ ಸಮಸ್ಯೆ ಆಗುತ್ತಿತ್ತು. ಈ ಭಾಗದಲ್ಲಿ ಕಮ್ಯುನಲ್ ಟೆನ್ಶನ್ ಹೆಚ್ಚು ಇದೆ. ಆತನಲ್ಲಿ ಮತ್ತಷ್ಟು ಮಾಹಿತಿ ಪಡೆಯಲು ಚಿಕಿತ್ಸೆ ಅಗತ್ಯವಿದೆ. ಬದುಕಿಸಬೇಕಾಗಿದೆ, ಆನಂತರ ಬಹಳಷ್ಟು ವಿಚಾರಣೆ ಆಗಬೇಕಿದೆ. ಘಟನೆಯಲ್ಲಿ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮ್ ಇದರಲ್ಲಿ ಸಂತ್ರಸ್ತ, ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ಸಿಗಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮೈಸೂರು ನಗರ ಕಮಿಷನರ್ ರಮೇಶ್ ಬಿ., ಮಂಗಳೂರು ನಗರ ಕಮಿಷನರ್ ಶಶಿಕುಮಾರ್, ಡಿಸಿಪಿಗಳಾದ ಅನ್ಶುಕುಮಾರ್, ದಿನೇಶ್ ಉಪಸ್ಥಿತರಿದ್ದರು.
Autorickshaw bomb blast in Mangalore, totally 4 arrested from Mysuru and Mangalore including Mohammed shariq, said Karnataka ADGP Alok Kumar after holding a press meet at the commissioners office in Mangaluru. An explosion occurred inside a moving auto rickshaw in Mangaluru on Saturday, injuring two people. While the police initially shied away from using ‘blast’ for the incident and instead used ‘fire’, a day after the explosion, the investigators are probing terror links in the case.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm