ಬ್ರೇಕಿಂಗ್ ನ್ಯೂಸ್
17-12-22 07:43 pm Mangalore Correspondent ಕರಾವಳಿ
ಮಂಗಳೂರು, ಡಿ.17: ಸುದೀರ್ಘ ನಾಲ್ಕು ವರ್ಷಗಳ ವೃದ್ಧ ದಂಪತಿಯ ಭಗೀರಥ ಹೋರಾಟಕ್ಕೆ ನ್ಯಾಯಾಂಗ ಮಣಿದಿದೆ. ವೃದ್ಧ ದಂಪತಿ ವಾಸವಿದ್ದ ಅಪಾರ್ಟ್ಮೆಂಟಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಸತಾಯಿಸಿದ್ದ ನಗರದ ಮೌರಿಷ್ಕಾ ಅಪಾರ್ಟ್ಮೆಂಟ್ ಮಾಲೀಕರ ಸಂಘಕ್ಕೆ ಕಡೆಗೂ ಮಂಗಳೂರಿನ ಕೋರ್ಟ್ ಛೀಮಾರಿ ಹಾಕಿದೆ. ಯಾವುದೇ ವ್ಯಕ್ತಿಯ ಮೂಲಸೌಕರ್ಯ ಕಿತ್ತುಕೊಳ್ಳಲು ಭಾರತೀಯ ಕಾನೂನಿನಲ್ಲಿ ಅವಕಾಶ ಇಲ್ಲವೆಂದು ಹೇಳಿದ್ದಲ್ಲದೆ, ಕೂಡಲೇ ದಂಪತಿ ವಾಸವಿದ್ದ ಮನೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಪುನರ್ ಸ್ಥಾಪಿಸುವಂತೆ ಆದೇಶ ಮಾಡಿದೆ.
ಉದ್ಯಮಿ ರಮೇಶ್ ಕುಮಾರ್ ಒಡೆತನದ ಪಿವಿಎಸ್ ವೃತ್ತದ ಬಳಿಯ ಮೌರಿಷ್ಕಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಶಾಂತರಾಮ ಪ್ರಭು ಮತ್ತು ವೀಣಾ ಪ್ರಭುವಿಗೆ ನಾಲ್ಕು ವರ್ಷಗಳ ಕಾಲ ನಡೆಸಿದ ದಯನೀಯ ಹೋರಾಟಕ್ಕೆ ಅಂತೂ ನ್ಯಾಯ ಸಿಕ್ಕಂತಾಗಿದೆ. ಅಪಾರ್ಟ್ಮೆಂಟ್ ಮಾಲೀಕರ ಸಂಘದ ಉದ್ಧಟತನದ ಬಗ್ಗೆ ವೃದ್ಧ ದಂಪತಿ ಜಿಲ್ಲಾಧಿಕಾರಿಯಿಂದ ಹಿಡಿದು ಪೊಲೀಸರ ವರೆಗೂ ಕೈಕಾಲು ಹಿಡಿದರೂ ನ್ಯಾಯ ಸಿಕ್ಕಿರಲಿಲ್ಲ. ಹಠ ಬಿಡದೆ ಕತ್ತಲಲ್ಲಿ ಕುಳಿತೇ ನ್ಯಾಯಾಂಗ ಹೋರಾಟ ನಡೆಸಿದ ದಂಪತಿ ಕಡೆಗೂ ಗೆದ್ದು ಬಂದಿದ್ದಾರೆ.
ಮುಂಬೈನಲ್ಲಿ ವಾಸವಿದ್ದ ಶಾಂತರಾಮ ಪ್ರಭು ಅಪಾರ್ಟ್ಮೆಂಟಿನಲ್ಲಿ ಮನೆಯನ್ನು ಖರೀದಿಸುವ ಸಂದರ್ಭದಲ್ಲಿ ನಿರ್ವಹಣೆ ಸಲುವಾಗಿ ಒಂದು ಲಕ್ಷ ರೂಪಾಯಿ ಮುಂಗಡ ನೀಡಿದ್ದರು. ಆ ಮೊತ್ತದಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆ ಮಾಡುವುದೆಂದು ಬಿಲ್ಡರ್ ರಮೇಶ್ ಕುಮಾರ್ ಒಪ್ಪಂದ ಮಾಡಿಕೊಂಡಿದ್ದರು. ಪ್ರತಿ ಮನೆಯಿಂದಲೂ ಇದೇ ರೀತಿ ಹಣವನ್ನು ಪಡೆಯಲಾಗಿತ್ತು. ಆದರೆ, ನಾಲ್ಕು ವರ್ಷಗಳ ಬಳಿಕ ಮನೆಯನ್ನು ಸ್ವಾಧೀನಕ್ಕೆ ಪಡೆದು ವಾಸ ಶುರು ಹಚ್ಚಿಕೊಂಡ ಮೇಲೆ ಶಾಂತರಾಮ ಪ್ರಭು ಮತ್ತು ವೀಣಾ ಪ್ರಭು ದಂಪತಿಗೆ ತಿಂಗಳ ಮೇಂಟೆನೆನ್ಸ್ ಮೊತ್ತ ಕೊಡುವಂತೆ ಅಸೋಸಿಯೇಶನ್ ಕಡೆಯಿಂದ ನೋಟೀಸ್ ನೀಡಲಾಗಿತ್ತು. ನಾವು ಮೊದಲೇ ಮುಂಗಡ ಹಣ ಕೊಟ್ಟಿದ್ದೆವು. ಇಲ್ಲಿನ 360 ಮನೆಗಳಿಂದ ಒಟ್ಟು 3.6 ಕೋಟಿ ರೂಪಾಯಿ ಡಿಪಾಸಿಟ್ ಪಡೆದ ಬಳಿಕ ಮೆಂಟೇನೆನ್ಸ್ ಯಾಕೆ ಕೊಡಬೇಕು ಎಂದು ಶಾಂತರಾಮ ಪ್ರಭು ಪ್ರಶ್ನೆ ಮಾಡಿದ್ದರು.
ಆದರೆ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ದಯಾನಂದ ರೈ ತಕರಾರು ತೆಗೆದಿದ್ದರು. ನಾಲ್ಕು ತಿಂಗಳ ನಿರ್ವಹಣೆ ಮೊತ್ತ 26 ಸಾವಿರ ರೂಪಾಯಿ ನೀಡಿಲ್ಲವೆಂದು ದಂಪತಿ ವಾಸವಿದ್ದ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಇದರಿಂದ ವೃದ್ಧ ದಂಪತಿ ತೀವ್ರ ಆಘಾತಕ್ಕೊಳಗಾಗಿದ್ದರು. ಈ ಬಗ್ಗೆ ಮೆಸ್ಕಾಂ, ಮಹಾನಗರ ಪಾಲಿಕೆ ಮತ್ತು ಕದ್ರಿ ಪೊಲೀಸರಿಗೂ ದೂರು ನೀಡಿ, ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ನೀರು ಮತ್ತು ವಿದ್ಯುತ್ ಅನ್ನುವುದು ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳಲು ಬರುವುದಿಲ್ಲ ಎಂದು ಹೇಳಿ ಬೇಡಿಕೊಂಡರೂ, ಪೊಲೀಸರಾಗಲೀ, ಮಹಾನಗರ ಪಾಲಿಕೆಯಾಗಲೀ ನೆರವಿಗೆ ಬಂದಿರಲಿಲ್ಲ. ಹೀಗಾಗಿ ಮೊದಲಿಗೆ ಗ್ರಾಹಕರ ಕೋರ್ಟಿನಲ್ಲಿ ಶಾಂತರಾಮ ಪ್ರಭು ಪ್ರಶ್ನೆ ಮಾಡಿದ್ದರು. ಕೂಡಲೇ ನೀರು, ವಿದ್ಯುತ್ ಕೊಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಆನಂತರ, ವ್ಯಾಜ್ಯ ಮಂಗಳೂರಿನ ಸಿವಿಲ್ ಕೋರ್ಟಿಗೆ ಹೋಗಿತ್ತು.
ಈ ನಡುವೆ, ಸುದ್ದಿ ಮಾಧ್ಯಮದಲ್ಲಿ ವೃದ್ಧ ದಂಪತಿಯ ಸಂಕಷ್ಟದ ವಿಚಾರ ತೀವ್ರ ಚರ್ಚೆಗೂ ಕಾರಣವಾಗಿತ್ತು. ಆನಂತರ, ದಂಪತಿ ಜಿಲ್ಲಾಧಿಕಾರಿಯ ಬಳಿಗೆ ಹೋಗಿಯೂ ಅಂಗಲಾಚಿದ್ದಾರೆ. ಜಿಲ್ಲಾಧಿಕಾರಿ ಬಳಿಕ, ಮಹಾನಗರ ಪಾಲಿಕೆಯ ಕಮಿಷನರ್ ಗೆ ಆ ಬಗ್ಗೆ ಮೆಸ್ಕಾಂ ಜೊತೆ ಚರ್ಚಿಸಿ, ವಿದ್ಯುತ್ ಸಂಪರ್ಕ ನೀಡುವಂತೆ ತಿಳಿಸಿದ್ದರು. ಆದರೆ, ತಕರಾರು ಅರ್ಜಿ ಕೋರ್ಟಿನಲ್ಲಿ ಇರುವುದರಿಂದ ಪಾಲಿಕೆ ಕಮಿಷನರ್ ಕೂಡ ಮೆಸ್ಕಾಂಗೆ ನಿರ್ದೇಶನ ನೀಡಲು ವಿಫಲವಾಗಿದ್ದರು. ಇದೀಗ ಮೂರು ವರ್ಷಗಳ ಕೋರ್ಟ್ ಹೋರಾಟ, ವಾದ- ಪ್ರತಿವಾದ ಆಲಿಸಿದ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ನಿಕಿತಾ ಎಸ್. ಅಕ್ಕಿ ವೃದ್ಧ ದಂಪತಿಯ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಅಲ್ಲದೆ, ಇಲ್ಲಿ ವರೆಗಿನ ಅಪಾರ್ಟ್ಮೆಂಟ್ ನಿರ್ವಹಣಾ ಮೊತ್ತವನ್ನು ಕೋರ್ಟಿನಲ್ಲಿ ಡಿಪಾಸಿಟ್ ಮಾಡುವಂತೆ ದಂಪತಿಗೆ ಸೂಚನೆ ಕೊಟ್ಟಿದೆ.
ಕೋರ್ಟ್ ವ್ಯಾಜ್ಯದಲ್ಲಿ ಬಿಲ್ಡರ್ ರಮೇಶ್ ಕುಮಾರ್, ಅಸೋಸಿಯೇಶನ್ ಅಧ್ಯಕ್ಷ ದಯಾನಂದ ರೈ, ಮೆಸ್ಕಾಂ ಇಂಜಿನಿಯರ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ದ.ಕ. ಜಿಲ್ಲಾಧಿಕಾರಿ, ಮಂಗಳೂರು ಸಬ್ ರಿಜಿಸ್ಟ್ರಾರ್. ಸಹಕಾರ ಇಲಾಖೆಯ ಉಪ ನಿಬಂಧಕರನ್ನೂ ಪಾರ್ಟಿ ಮಾಡಲಾಗಿತ್ತು. 15 ದಿನಗಳ ಒಳಗೆ ವಿದ್ಯುತ್ ಸಂಪರ್ಕ ನೀಡುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಶಾಂತರಾಮ ಪ್ರಭು ದಂಪತಿ ಪರವಾಗಿ ವಕೀಲ ಪ್ರಸಾದ್ ಭಂಡಾರಿ ವಾದಿಸಿದ್ದರು.
Mangalore, No current for 3 years, Court orders apartment association to restore electricity to elderly couple. The third additional civil and JMFC court of the city ordered owners’ association of a multi-storey building in the city to restore electricity to the apartment in which an elderly couple live. The electricity supply was cut off by the owners’ association for non-payment of maintenance charges.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm