ಬ್ರೇಕಿಂಗ್ ನ್ಯೂಸ್
29-12-22 02:37 pm Udupi Correspondent ಕರಾವಳಿ
ಉಡುಪಿ, ಡಿ 29: ಕೃಷ್ಣಪುರ ಮಠದ ಕಟ್ಟಡದಲ್ಲಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ಬಹುಕೋಟಿ ವಂಚನೆ ಆರೋಪ ಕೇಳಿ ಬಂದಿದ್ದು, ಬ್ಯಾಂಕ್ ನಿರ್ದೇಶಕ ಬಿ.ವಿ ಲಕ್ಷ್ಮೀನಾರಾಯಣ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉಡುಪಿಯಲ್ಲಿ ಬಹುಕೋಟಿ ಹಣ ವಂಚನೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಲಕ್ಷ್ಮೀನಾರಾಯಣ ಉಪಾಧ್ಯಾಯ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜೆಎಂಎಫ್‌ಸಿ ಕೋರ್ಟ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮುಂದೆ ಪೊಲೀಸರು ಹಾಜರುಪಡಿಸಿದ್ದು, ಜನವರಿ 11ರ ವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.
ಸುಮಾರು 600 ಠೇವಣಿದಾರರ 93 ಕೋಟಿ ರೂಪಾಯಿ ವಂಚನೆ ಆರೋಪ ಇವರ ಮೇಲಿದೆ. 48 ಕೋಟಿ ರೂಪಾಯಿ ಠೇವಣಿ ಬಾಕಿಯಿದೆ ಎಂದು ನಿರ್ದೇಶಕ ಲಕ್ಷ್ಮೀನಾರಾಯಣ ಹೇಳಿದ್ದಾರೆಂದು ಹೇಳಲಾಗಿದೆ.
ಬ್ಯಾಂಕ್‌ಗೆ ಮುತ್ತಿಗೆ ಹಾಕಿದ್ದ ಗ್ರಾಹಕರು
ಕಳೆದ ಜೂನ್ ತಿಂಗಳಿಂದ ಗ್ರಾಹಕರಿಗೆ ಯಾವುದೇ ಬಡ್ಡಿ ನೀಡಿಲ್ಲ. ಅಸಲು ಕೇಳಿದರೂ ನೀಡಿಲ್ಲ ಎಂದು ಆರೋಪಿಸಿ ಡಿಸೆಂಬರ್ ೧೯ರಂದು ಗ್ರಾಹಕರು ಬ್ಯಾಂಕ್ ಒಳ ನುಗ್ಗಿ ಪ್ರತಿಭಟಿಸಿದ್ದರು. ಅಲ್ಲದೆ, ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದರು. ಈ ವೇಳೆ ಮಹಿಳಾ ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡಿದ್ದರು. ಗ್ರಾಹಕರ ಒತ್ತಡದಿಂದ ನೊಂದ ಮಹಿಳಾ ಸಿಬ್ಬಂದಿ ಬ್ಯಾಗ್‌ನಲ್ಲಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಗ್ರಾಹಕರೇ ತಪ್ಪಿಸಿದ್ದರು.
ಸ್ಥಳಕ್ಕೆ ಉಡುಪಿ ನಗರ ಠಾಣೆ ಪೊಲೀಸರು ಆಗಮಿಸಿ ದೂರು ದಾಖಲಿಸಿಕೊಂಡಿದ್ದರು. ವಿವಿಧ ಸೊಸೈಟಿ ಮತ್ತು ಗ್ರಾಹಕರಿಂದ 100 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಗ್ರಾಹಕರ ಠೇವಣಿ ಹಣವನ್ನು ಹಲವು ಕಡೆ ಹೂಡಿಕೆ ಮಾಡಿ ಸೊಸೈಟಿ ನಷ್ಟ ಹೊಂದಿದೆ ಎಂದು ಹೇಳಲಾಗಿದೆ.
ಸಹಕಾರ ಬ್ಯಾಂಕ್‌ಗಳ ಅವ್ಯವಹಾರ
ಬೆಂಗಳೂರಿನಲ್ಲಿ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್, ವಶಿಷ್ಠ ಕೋಆಪರೇಟಿವ್ ಬ್ಯಾಂಕ್ ಹಾಗೂ ಸಿರಿ ವೈಭವ ಪತ್ತಿನ ಸಹಕಾರಿ ಬ್ಯಾಂಕ್ ಮತ್ತು ಶುಶೃತಿ ಕೋಆಪರೇಟಿವ್ ಬ್ಯಾಂಕ್, ಯಾದಗಿರಿಯ ಶ್ರೀ ರೇವಣಸಿದ್ದೇಶ್ವರ ವಿವಿಧೋದ್ದೇಶ ಸಹಕಾರ ಸಂಘ ನಿ. ಬ್ಯಾಂಕ್‌ಗಳಲ್ಲಿ ಈಗಾಗಲೇ ವಂಚನೆಯಾಗಿದ್ದು, ಈ ಸಾಲಿಗೆ ಈಗ ಕಮಲಾಕ್ಷಿ ವಿವಿದ್ಧೋದ್ದೇಶ ಸಹಕಾರಿ ಸಂಘವು ಸೇರಿಕೊಂಡಂತಾಗಿದೆ.
ಠೇವಣಿದಾರರು ಲಕ್ಷ್ಮೀನಾರಾಯಣ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಸರ್ಜ್ ವಾರೆಂಟ್ ಪಡೆದ ಪೊಲೀಸರು ವಾರದ ಹಿಂದಷ್ಟೇ ಸೊಸೈಟಿ ಬಾಗಿಲು ತೆರೆದು ತಪಾಸಣೆ ನಡೆಸಿದ್ದರು. ಕೀ ಮೇಕರ್ ಅವರನ್ನು ಕರೆಸಿ ಸೊಸೈಟಿ ಲಾಕರ್ ಬಾಗಿಲು ತೆರೆದು ಬೇಕಾದ ಅಗತ್ಯ ಮಾಹಿತಿ ಸಂಗ್ರಹಿಸಲಾಗಿತ್ತು. ಕಂಪ್ಯೂಟರ್ ಜಾಲಾಡಿದ ಪೊಲೀಸರು ಅಲ್ಲಿಂದ ಕೆಲ ಮಾಹಿತಿ, ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದರು. ಸೊಸೈಟಿಗೆ ಬೀಗ ಜಡಿದು ಸೀಲ್ ಮಾಡಿದ್ದರು.
Udupi Absconding Kamalakshi Cooperative Society chairman Lakshminarayan arrested in fraud case. Udupi CEN police have arrested B V Laxminarayana, chairman of the Kamalakshi Cooperative Society on charges of siphoning of crores of rupees. He is now being taken for further interrogation. The police took him into custody at Matapadi near Brahmavar, police sources said. A case of cheating has been registered.
28-09-25 12:39 pm
Bangalore Correspondent
ದಾವಣಗೆರೆಗೆ ಕಾಲಿಟ್ಟ 'ಐ ಲವ್ ಮೊಹಮ್ಮದ್ʼ ಫ್ಲೆಕ್ಸ್...
27-09-25 02:40 pm
ಪಿಐಎಲ್ ಹಾಕಿದವರಿಗೆ ಸುಪ್ರೀಂ ಕೋರ್ಟ್ ಬೈದು ಕಳುಹಿಸಿ...
27-09-25 02:20 pm
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಪಂಚಭೂತಗಳಲ್ಲ...
26-09-25 07:39 pm
ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಉಳಿದುಕೊಂಡಿದ್ದ...
26-09-25 07:37 pm
28-09-25 10:02 pm
HK News Desk
ಮೋದಿ ಕಾರ್ಯಕ್ರಮದಲ್ಲಿ ಸಣ್ಣ ಎಡವಟ್ಟು ; ಹುದ್ದೆ ಕಳಕ...
28-09-25 08:33 pm
ತಮಿಳುನಾಡಿನಲ್ಲಿ ವಿಜಯ್ ರ್ಯಾಲಿ ವೇಳೆ ಘೋರ ದುರಂತ ;...
27-09-25 11:16 pm
HDFC Banks Dubai branch: ಎಚ್ ಡಿಎಫ್ ಸಿ ದುಬೈ ಶಾ...
27-09-25 05:53 pm
ಧರ್ಮಸ್ಥಳ ಪ್ರಕರಣ ; ಕನ್ನಡ ಸುದ್ದಿವಾಹಿನಿಗಳಿಂದ ಸುಪ...
25-09-25 10:38 pm
28-09-25 08:12 pm
Mangalore Correspondent
ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್...
27-09-25 07:35 pm
Puttur Baby News, DNA: ಸಹಪಾಠಿಗೆ ಮಗು ಕರುಣಿಸಿದ...
27-09-25 01:33 pm
Sandhya Shenoy: ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜ...
27-09-25 01:02 pm
ನಿಗಮ ಮಂಡಳಿಗೆ ನೇಮಕ ; ಮೆಸ್ಕಾಂ ಹರೀಶ್ ಕುಮಾರ್, ಕರಾ...
26-09-25 11:02 pm
28-09-25 11:08 pm
Mangalore Correspondent
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm
Malpe Onwer Murder, AKMS: ಮಲ್ಪೆಯಲ್ಲಿ ಹಾಡಹಗಲೇ...
27-09-25 02:16 pm