ಸಿಟಿ ಬಸ್ಸಲ್ಲಿ ಕಳೆದುಹೋಗಿದ್ದ ಚಿನ್ನದ ಬಳೆಯನ್ನ ಮಹಿಳೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಸಿಬ್ಬಂದಿ 

02-01-23 12:21 pm       Mangalore Correspondent   ಕರಾವಳಿ

ಮದುವೆಗೆ ಹೋಗುವ ಗಡಿಬಿಡಿಯಲ್ಲಿ ಮಹಿಳೆಯೋರ್ವರು ಉಳ್ಳಾಲದ ಸಿಟಿ ಬಸ್ಸಲ್ಲಿ ತಾನು ಧರಿಸಿದ್ದ ಚಿನ್ನದ ಬಳೆಯನ್ನ ಕಳೆದುಕೊಂಡಿದ್ದು ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಅದನ್ನ ವಾರಿಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಉಳ್ಳಾಲ, ಜ.2 : ಮದುವೆಗೆ ಹೋಗುವ ಗಡಿಬಿಡಿಯಲ್ಲಿ ಮಹಿಳೆಯೋರ್ವರು ಉಳ್ಳಾಲದ ಸಿಟಿ ಬಸ್ಸಲ್ಲಿ ತಾನು ಧರಿಸಿದ್ದ ಚಿನ್ನದ ಬಳೆಯನ್ನ ಕಳೆದುಕೊಂಡಿದ್ದು ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಅದನ್ನ ವಾರಿಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನಿನ್ನೆ ಮಂಗಳೂರಿನಿಂದ ಉಳ್ಳಾಲ ಕಡೆ ತೆರಳುತ್ತಿದ್ದ 44(c) ರೂಟ್ ಸಂಖ್ಯೆಯ ಶಾಲಿಮಾರ್ ಬಸ್ಸಲ್ಲಿ ಬಿ.ಸಿ.ರೋಡ್ ಮೂಲದ ತಸ್ಲಿಮಾ ಫಾರೂಕ್ ಉಳ್ಳಾಲದ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭ ಬಸ್ ನಲ್ಲಿ 18 ಗ್ರಾಂ ತೂಗುವ  ಬಂಗಾರದ ಬಳೆಯನ್ನು ಕಳೆದುಕೊಂಡಿದ್ದರು. ಬಸ್ಸು ಚಾಲಕ ನಿಸಾರ್ ಅಹಮ್ಮದ್ ಹಾಗೂ ನಿರ್ವಾಹಕ ಇಬ್ರಾಹಿಂ ಮಂಜನಾಡಿಯವರು ಪ್ರಾಮಾಣಿಕತೆ ಮೆರೆದು ಬಸ್ಸಲ್ಲಿ ಬಳೆ ಸಿಕ್ಕ ವಿಚಾರವನ್ನ ಕೂಡಲೇ  ಬಸ್ಸು ಮಾಲಿಕಾರಾದ ಅಬ್ದುಲ್ ರಜಾಕ್ ಗೆ ತಿಳಿಸಿದ್ದಾರೆ. ಇವತ್ತು ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಮೂಲಕ ಬಳೆಯನ್ನು ಕಳೆದುಕೊಂಡ ಮಹಿಳೆಗೆ ಹಸ್ತಾಂತರಿಸಲಾಯಿತು.

Mangalore City bus Conductor returns lost gold bangle to passenger at Ullal.