ಬ್ರೇಕಿಂಗ್ ನ್ಯೂಸ್
18-10-20 10:32 pm Mangalore Reporter ಕರಾವಳಿ
ಮಂಗಳೂರು, ಅಕ್ಟೋಬರ್ .18 : ಮಂಗಳೂರಿನ ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹುದ್ದೆಯಿಂದ ಇಳಿಸಲ್ಪಟ್ಟಿರುವ ಉದಯ ಕುಮಾರ್ ಇರ್ವತ್ತೂರು ತಮ್ಮ ಹುದ್ದೆ ಉಳಿಸಿಕೊಳ್ಳಲು ಈಗ ಹೊಸ ವರಸೆ ಆರಂಭಿಸಿದ್ದಾರೆ.
ಅ.9ರಂದು ನಡೆದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಪ್ರಭಾರಿ ಹುದ್ದೆಯಲ್ಲಿರುವ ಇಬ್ಬರು ಪ್ರಾಂಶುಪಾಲರನ್ನು ಹುದ್ದೆಯಿಂದ ಇಳಿಸಲು ನಿರ್ಧರಿಸಲಾಗಿತ್ತು. ಯುನಿವರ್ಸಿಟಿ ಕಾಲೇಜಿನ ಉದಯ ಕುಮಾರ್ ಮತ್ತು ಮಂಗಳಗಂಗೋತ್ರಿ ವಿವಿ ಕಾಲೇಜಿನ ಅನಿತಾ ರವಿಶಂಕರ್ ಐದು ವರ್ಷ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಆದರೆ, ಕಾರ್ಕಳ ಮೂಲದ ಜೈನರಾಗಿರುವ ಉದಯ ಕುಮಾರ್ ಇರ್ವತ್ತೂರು, ಈಗ ಅಲ್ಪಸಂಖ್ಯಾತ ಕೋಟಾ ಮುಂದಿಟ್ಟು ಲಾಬಿ ನಡೆಸುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಅಲ್ಲದೆ, ತನ್ನ ಹುದ್ದೆ ಉಳಿಸಿಕೊಳ್ಳಲು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೂಲಕ ಜೈನ್ ಕೋಟಾದಡಿ ಬಿಜೆಪಿ ಪ್ರಮುಖರಿಗೆ ಒತ್ತಡ ಹೇರುತ್ತಿದ್ದಾರೆ. ಹೆಗ್ಗಡೆಯವರ ಮೂಲಕ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಹೇಳಿಸುವ ಪ್ರಯತ್ನದಲ್ಲಿದ್ದಾರೆಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.
ಇಷ್ಟಕ್ಕೂ ಉದಯಕುಮಾರ್ ಕಳೆದ 2015, ಸೆಪ್ಟೆಂಬರ್ ತಿಂಗಳಲ್ಲಿ ಪ್ರಭಾರ ನೆಲೆಯಲ್ಲಿ ಪ್ರಿನ್ಸಿಪಾಲರಾಗಿ ನಿಯೋಜಿತರಾದ ವೇಳೆ ಅವರಿಗಿಂತ ಹಿರಿತನದಲ್ಲಿ 13 ಮಂದಿ ಇದ್ದರು. ಆದರೆ 13 ಮಂದಿಯ ಅರ್ಹತೆಯನ್ನು ಕಡೆಗಣಿಸಿ ಉದಯಕುಮಾರ್, ಮಾಜಿ ಸಚಿವ ಕಾರ್ಕಳ ಮೂಲದ ವೀರಪ್ಪ ಮೊಯ್ಲಿ ಮೂಲಕ ಲಾಬಿ ನಡೆಸಿ ಪ್ರಾಂಶುಪಾಲ ಹುದ್ದೆಗೆ ನಿಯೋಜನೆಗೊಂಡಿದ್ದರು. ಅದರಲ್ಲಿ ಈ ಹಿಂದಿನ ಮಂಗಳೂರು ವಿವಿ ಕುಲಪತಿ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪ್ರೊ.ಭೈರಪ್ಪ ಕೈವಾಡವೂ ಇತ್ತು. ಯುನಿವರ್ಸಿಟಿಯ ಹಿರಿತನ ಆಧಾರ ಬದಿಗಿಟ್ಟು ವೀರಪ್ಪ ಮೊಯ್ಲಿಯ ಮಾತನ್ನು ಭೈರಪ್ಪ ಪಾಲನೆ ಮಾಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಈ ನಡುವೆ, 'ಮೊಯ್ಲಿ ಪ್ರಣೀತ' ಉದಯ ಕುಮಾರ್ ತಮ್ಮ ನಿಷ್ಠೆ ತೋರಿಕೆ ನೆಪದಲ್ಲಿ ಎಡ ಸಿದ್ಧಾಂತ ಪ್ರತಿಪಾದಕರನ್ನು ಕರೆಸಿ ಯುನಿವರ್ಸಿಟಿ ಕಾಲೇಜಿನಲ್ಲಿ ಕಾರ್ಯಕ್ರಮ ಮಾಡಿದ್ದೂ ಆಗಿತ್ತು. ಬಿಜೆಪಿ, ಎಬಿವಿಪಿ ಪ್ರಮುಖರ ವಿರೋಧ ಮಧ್ಯೆಯೂ ಅವರನ್ನು ಕರೆಸಿ, ಸರಕಾರಿ ಕಾಲೇಜಿನಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಲು ವೇದಿಕೆ ಕಲ್ಪಿಸಿದ್ದು ಟೀಕೆಗೆ ಗುರಿಯಾಗಿತ್ತು. ಇದಕ್ಕೂ ಮುನ್ನ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ಹಮ್ಮಿಕೊಂಡ ವಿವೇಕಾನಂದ ಜಯಂತಿ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಮತ್ತು ಶಾಸಕ ಗಣೇಶ್ ಕಾರ್ಣಿಕರನ್ನು ಕರೆಸಿದ್ದಕ್ಕೆ ಸಿಟ್ಟುಗೊಂಡಿದ್ದ ಉದಯ ಕುಮಾರ್ ಮತ್ತು ಸೋಮಯಾಜಿ ಅಂಡ್ ಟೀಮ್, ಆಗಿನ ಪ್ರಾಂಶುಪಾಲರ ಮೂಲಕ ರವೀಂದ್ರ ಕಲಾಕ್ಷೇತ್ರಕ್ಕೆ ಬೀಗ ಹಾಕಿಸಿ, ಅತಿಥಿಗಳನ್ನು ಹೊರಗೆ ಕೂರಿಸಿ ತಮ್ಮ 'ಎಡಚ' ಧೋರಣೆಯನ್ನು ತೋರಿಸಿದ್ದೂ ಆಗಿತ್ತು. ಆ ವಿಷಯದಲ್ಲಿ ಬಳಿಕ ಪ್ರಿನ್ಸಿಪಾಲ್ ವಿರುದ್ಧ ಕ್ರಮವೂ ಆಗಿತ್ತು.
ಆದರೆ, ವಿದ್ಯಾರ್ಥಿಗಳು ಇದ್ಯಾವುದಕ್ಕೂ ಪ್ರತಿಭಟನೆ ತೋರಿರಲಿಲ್ಲ. ಆರೋಪ, ಅಸಮಾಧಾನ ಇದ್ದರೂ ಪ್ರಾಂಶುಪಾಲರ ಹುದ್ದೆಯ ಮೇಲೆ ಗೌರವ ಇರಿಸಿದ್ದರು. ಈಗ ಪ್ರಭಾರ ನೆಲೆಯ ಪ್ರಾಂಶುಪಾಲ ಹುದ್ದೆಯ ಅವಧಿ (ಐದು ವರ್ಷ) 2020ರ ಸೆಪ್ಟೆಂಬರ್ ತಿಂಗಳಿಗೆ ಮುಗಿದಿದೆ. ಸಹಜ ಎಂಬಂತೆ, ಈಗಿನ ಸಿಂಡಿಕೇಟ್ ಸದಸ್ಯರು ವಿವಿಯ ಆಡಳಿತದ ಸಭೆಯಲ್ಲಿ ಕಾಲೇಜಿಗೆ ಹೊಸ ಪ್ರಾಂಶುಪಾಲರನ್ನು ನೇಮಕ ಮಾಡುವಂತೆ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಈಗ ಲಾಬಿ ಆರಂಭಿಸಿರುವ ಉದಯ ಕುಮಾರ್, ಪ್ರಭಾರ ಹುದ್ದೆಯ ಅವಧಿ ಮುಗಿದರೂ ತನ್ನ ನಿವೃತ್ತಿಯ ವರೆಗಾದ್ರೂ ಪ್ರಾಂಶುಪಾಲ ಹುದ್ದೆಯಲ್ಲಿ ಉಳಿಸಿಕೊಳ್ಳಲು ಒತ್ತಡ ಹೇರಿದ್ದಾರೆ. ನಿವೃತ್ತಿಗೆ ಎರಡು ವರ್ಷ ಇರುವುದರಿಂದ ಅಲ್ಲಿ ವರೆಗೆ ಅವಕಾಶ ಕೊಡುವಂತೆ ಡಿಸಿಎಂ ಮೂಲಕ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಆದರೆ, ಸೀನಿಯಾರಿಟಿ ನೆಲೆಯಲ್ಲಿ ನೋಡಿದರೆ ಈಗಲೂ ಉದಯ ಕುಮಾರ್ ಗಿಂತ ಹಿರಿಯರು ಆರೇಳು ಮಂದಿ ಕಾಲೇಜಿನಲ್ಲಿದ್ದಾರೆ. ಉದಯಕುಮಾರ್ 1994ರಲ್ಲಿ ಯುನಿವರ್ಸಿಟಿ ಕಾಲೇಜು ಸೇರಿದ್ದರೆ, ಅದಕ್ಕೂ ಮೊದಲು ಸೇರಿದವರು ಹಿರಿತನದ ನೆಲೆಯಲ್ಲಿ ಅರ್ಹತೆ ಪಡೆಯುತ್ತಾರೆ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಲಿಸುವ ಸುನಂದಾ, ಫಿಸಿಕ್ಸ್ ವಿಭಾಗದ ಹರೀಶ್, ಉದಯಕುಮಾರ್ ಪತ್ನಿ ಇಂಗ್ಲಿಷ್ ವಿಭಾಗದ ರಾಜಲಕ್ಷ್ಮಿ ಕೂಡ ಹಿರಿತನದ 'ಅರ್ಹತೆ' ಹೊಂದಿದ್ದಾರೆ. ಹೊಸ ಪ್ರಾಂಶುಪಾಲರನ್ನು ನೇಮಕ ಮಾಡುವುದಿದ್ದರೆ ವಿವಿಯ ಕುಲಪತಿ ಕ್ರಮ ಕೈಗೊಳ್ಳಬೇಕು. ಆದರೆ, ಉದಯಕುಮಾರ್ ಮತ್ತು ಈಗಿನ ಕುಲಪತಿ ಪಿ.ಎಸ್ ಯಡಪಡಿತ್ತಾಯ ಹಿಂದೆ ಕ್ಲಾಸ್ ಮೇಟ್ ಆಗಿದ್ದವರು. ಆ ಬಳಿಕ ಗುರು ಶಿಷ್ಯರ ರೀತಿ ಇದ್ದವರು ಎನ್ನುವ ಮಾಹಿತಿಯನ್ನು ನಿಕಟವರ್ತಿಗಳು ಹೇಳುತ್ತಾರೆ.
ಹೀಗಿರಬೇಕಾದ್ರೆ ವಿವಿಯ ಆಡಳಿತ ಉದಯಕುಮಾರ್ ಪದಚ್ಯುತಿಗೆ ನಿರ್ಧಾರ ತೆಗೆದುಕೊಂಡರೂ, ಅದನ್ನು ಜಾರಿ ಮಾಡುವಲ್ಲಿ ಕುಲಪತಿ ಅಡಕತ್ತರಿಗೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಸಿಂಡಿಕೇಟ್ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾಡಿದ ನಿರ್ಣಯವನ್ನು ಜಾರಿ ಮಾಡದಂತೆಯೂ ಇಲ್ಲ. ಆಪ್ತನನ್ನು ಉಳಿಸಿಕೊಳ್ಳುವಂತೆಯೂ ಇಲ್ಲ. ಹೈಲೆವೆಲ್ ಒತ್ತಡ ಹೇರಿದರಷ್ಟೆ ಹುದ್ದೆ ಉಳಿಸಿಕೊಳ್ಳಬಹುದು ಎನ್ನೋ ನೆಲೆಯಲ್ಲಿ ಈಗ ಬೆಳವಣಿಗೆ ನಡೀತಿದೆ.
Mangalore University, Hampankatta principal Uday Kumar is now striving very hard with high-end influence to save his seat to continue as the principal of the college as decisions are made to change the principal by the committee.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm