ಬ್ರೇಕಿಂಗ್ ನ್ಯೂಸ್
26-08-23 01:17 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 26: ಮಂಗಳೂರು ಹೊರವಲಯದ ಗಂಜಿಮಠದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ಆಕರ್ಷಿಸಲು ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಬೇಕೆಂಬ ಯೋಜನೆ 2015ರಲ್ಲಿ ಕೈಗೊಳ್ಳಲಾಗಿತ್ತು. ಗುಜರಾತ್, ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಹತ್ತು ಕಡೆಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಆಗಿನ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಮೊದಲ ಬಾರಿಗೆ ಪ್ರಸ್ತಾಪ ಮಾಡಿದ್ದರು. ಮಂಗಳೂರಿನಲ್ಲಿ ರಾಜ್ಯದ ಏಕೈಕ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಎನ್ನುವ ಘೋಷಣೆಯೊಂದಿಗೆ ಸಂಸದ ನಳಿನ್ ಕುಮಾರ್ ಜಪ ಆರಂಭಿಸಿದ್ದರು.
ಎಂಟು ವರ್ಷಗಳ ಹಿಂದೆ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಜಾರಿಯಾಗಿದ್ದರೂ, ಇದನ್ನು ಮಂಜೂರಾತಿಗೊಳಿಸಿದ್ದು 2021ರಲ್ಲಿ. ಅದಕ್ಕೂ ಹಿಂದೆ ಅನಂತ ಕುಮಾರ್ ಪ್ರತಿ ಬಾರಿ ಮಂಗಳೂರಿಗೆ ಬಂದಾಗಲೂ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಬಗ್ಗೆ ಹೇಳುತ್ತ ಬಂದಿದ್ದರು. ಆದರೆ, ಇಲ್ಲಿನ ಸಂಸದ ನಳಿನ್ ಕುಮಾರ್ ಪಾರ್ಕ್ ಬಗ್ಗೆ ಜಪ ಮಾಡಿದ್ದು ಬಿಟ್ಟರೆ ಯೋಜನೆ ಮಂಜೂರಾತಿ, ಹಣ ಬಿಡುಗಡೆ, ಭೂಸ್ವಾಧೀನ ಮಾಡಿಸುವತ್ತ ಪ್ರಯತ್ನ ಮಾಡಿರಲಿಲ್ಲ. 2018ರ ವೇಳೆಗೆ ಸಚಿವ ಅನಂತ ಕುಮಾರ್ ದಿಢೀರ್ ಮರಣಿಸಿದ್ದರಿಂದ ಪ್ಲಾಸ್ಟಿಕ್ ಪಾರ್ಕ್ ಪ್ರಸ್ತಾಪವೂ ನೆನೆಗುದಿಗೆ ಬಿದ್ದಿತ್ತು. ಆನಂತರ, ಮೋದಿ ಸರಕಾರದಲ್ಲಿ ಡಿ.ವಿ. ಸದಾನಂದ ಗೌಡ ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿದ್ದರು. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಭೂಸ್ವಾಧೀನವಾಗಲೀ, ಹಣ ಮಂಜೂರಾತಿಯಾಗಲೀ ಆಗದೇ ಇದ್ದುದರಿಂದ ಇಡೀ ಯೋಜನೆ ಬಿದ್ದು ಹೋಗುವ ಹಂತಕ್ಕೆ ಬಂದಿತ್ತು.
ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ ಮಾಡಬೇಕಿದ್ದರಿಂದ ಕೇಂದ್ರ ಸರಕಾರದಿಂದ 40 ಕೋಟಿ ರೂಪಾಯಿ ಬಿಡುಗಡೆ ಆಗಿರುವುದಾಗಿ 2021ರಲ್ಲಿ ಸಚಿವ ಡಿವಿ ಸದಾನಂದ ಗೌಡ ಹೇಳಿಕೆ ನೀಡಿದ್ದರು. ಆನಂತರ, ಡೀವಿಯವರ ಸಚಿವ ಸ್ಥಾನವೂ ಹೋಗಿತ್ತು. ಅದೇ ಜಾಗಕ್ಕೆ ಕಲಬುರ್ಗಿ ಮೂಲದ ಭಗವಂತ ಖೂಬಾ ಅವರನ್ನು ನೇಮಕ ಮಾಡಲಾಗಿತ್ತು. 2021ರಲ್ಲಿ ಯೋಜನೆ ಆರಂಭಕ್ಕೆ ಮಂಜೂರಾತಿ, ಹಣ ಬಿಡುಗಡೆಯಾಗಿದ್ದರೂ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಯೋಜನೆ ಕಾರ್ಯಗತ ಮಾಡಲು ಮುಂದಾಗಿರಲಿಲ್ಲ. ಮಂಗಳೂರಿನಲ್ಲಿ ಯೋಜನೆ ಉಸ್ತುವಾರಿ ವಹಿಸಿಕೊಂಡ ಕೆಐಎಡಿಬಿ ಅಧಿಕಾರಿಗಳು ಭೂಮಿ ಗುರುತಿಸಿದ್ದರೂ ಸ್ವಾಧೀನ ಮಾಡಿರಲಿಲ್ಲ. ಇವೆಲ್ಲ ಮಂಗಳೂರಿನ ಸಂಸದನ ಹೊಣೆಯಾಗಿದ್ದರೂ ನಳಿನ್ ಕುಮಾರ್ ಮೌನ ವಹಿಸಿದ್ದೇ ಯೋಜನೆ ವಿಳಂಬಕ್ಕೆ ಕಾರಣವಾಗಿತ್ತು. 2023ರ ಆರಂಭದಲ್ಲಿಯೇ ದಕ್ಷಿಣ ಕನ್ನಡ ಸಂಸದರ ವೈಫಲ್ಯ, ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಕೇಳಿಬಂದಾಗ, ಎರಡು ತಿಂಗಳ ಹಿಂದೆ ತರಾತುರಿಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಕನಸಿಗೆ ರೆಕ್ಕೆ ಪುಕ್ಕ ಬಂದಿತ್ತು. ದಿಢೀರ್ ಗಂಜಿಮಠಕ್ಕೆ ತೆರಳಿದ್ದ ಸಂಸದ ನಳಿನ್, ಯೋಜನೆಗೆ ವೇಗ ನೀಡಲು ಮುಂದಾಗಿದ್ದರು.
ಪ್ರಸ್ತಾಪಿತ ಯೋಜನೆಯಲ್ಲಿ 104 ಎಕ್ರೆಯ ವ್ಯಾಪ್ತಿ ಹೊಂದಿದ್ದರೂ, ಈಗ ಎರಡು ಎಕ್ರೆ ವ್ಯಾಪ್ತಿಯಲ್ಲಿ ಜಾಗ ಸಮತಟ್ಟು ಮಾಡಿದ್ದು ಕಾಂಕ್ರೀಟ್ ಕಟ್ಟಡಕ್ಕೆ ಪಿಲ್ಲರ್ ಹಾಕಿದ್ದಾರೆ. ಈಗಷ್ಟೇ ಜಲ್ಲಿ ರಾಶಿ ಹಾಕಿದ್ದು, ಕೆಲಸಕ್ಕೆ ವೇಗ ನೀಡಿರುವುದು ಕಂಡುಬಂದಿದೆ. ಎಲ್ಲ ರೀತಿಯ ಮೂಲಸೌಕರ್ಯ ಕೈಗೊಂಡ ಬಳಿಕವಷ್ಟೇ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಕಂಪನಿಗಳು ಬರಬೇಕಷ್ಟೇ. ಅಂದಾಜು ಆರು ತಿಂಗಳು ಮೂಲಸೌಕರ್ಯ ನಿರ್ಮಾಣಕ್ಕೆ ಸಮಯ ಬೇಕಿದೆ. ಈಗ ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಕರೆಸಿ ಪ್ರಗತಿ ಪರಿಶೀಲನೆಯನ್ನು ಸಂಸದ ನಳಿನ್ ಮಾಡಿಸಿದ್ದಾರೆ. ಆಗಸ್ಟ್ 25ರ ಸಂಜೆ ಹೊತ್ತಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿದ ಸಚಿವ ಖೂಬಾ, 20 ಶೇಕಡಾದಷ್ಟೂ ಕಾಮಗಾರಿ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಇಂಜಿನಿಯರ್ ಗಳನ್ನು ತರಾಟೆಗೆತ್ತಿಕೊಂಡ ಪ್ರಸಂಗವೂ ನಡೆಯಿತು. ಡಿಸೆಂಬರ್ ಒಳಗೆ ಎಲ್ಲ ರೀತಿಯ ಕಾಮಗಾರಿ ಮುಗಿಯಬೇಕು, ಜನವರಿ ವೇಳೆಗೆ ಉದ್ಘಾಟನೆ ಮಾಡಲು ಬರುತ್ತೇನೆ. ಮುಂದಿನ ಚುನಾವಣೆ ಒಳಗೆ ಯೋಜನೆ ಕಾರ್ಯಗತ ಆಗಬೇಕಾಗಿದೆ ಎಂದು ದೂರದೃಷ್ಟಿಯ ಮಾತುಗಳನ್ನು ಹೇಳಿದ್ದಾರೆ.
ವಿಶೇಷ ಅಂದ್ರೆ, 2015ರಲ್ಲಿ ಗಂಜಿಮಠ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯ ಪ್ರಸ್ತಾಪ ಬಂದಾಗಲೇ ಮಂಗಳೂರಿನ ಐದಾರು ಉದ್ಯಮಿಗಳು ಸ್ವತಃ ಮುತುವರ್ಜಿ ವಹಿಸ್ಕೊಂಡು ಅದೇ ಪರಿಸರದಲ್ಲಿ ಜಾಗ ಸ್ವಾಧೀನ ಪಡಿಸಿ ಪ್ಲಾಸ್ಟಿಕ್ ಕೇಂದ್ರಿತ ಉತ್ಪನ್ನಗಳ ಕಂಪನಿಯನ್ನು ಆರಂಭಿಸಿದ್ದು, ಪ್ಲಾಸ್ಟಿಕ್ ಬ್ಯಾಗ್ ಇನ್ನಿತರ ವಸ್ತುಗಳ ತಯಾರಿಗೆ ತೊಡಗಿದ್ದಾರೆ. ಎಡಪದವು, ಕುಪ್ಪೆಪದವು ಆಸುಪಾಸಿನ ನೂರಾರು ಮಂದಿಗೆ ಕೆಲಸವನ್ನೂ ಕೊಡಿಸಿದ್ದಾರೆ. ಪ್ಲಾಸ್ಟಿಕ್ ಪಾರ್ಕ್ ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದರೂ, ಮೋದಿ ಆಡಳಿತದ ಎರಡು ಅವಧಿ ಮುಗಿಯುತ್ತ ಬಂದರೂ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯೇ ಆಗಿಲ್ಲ. ಇನ್ನೂ ಮೂಲ ಸೌಕರ್ಯ ನಿರ್ಮಾಣದ್ದೇ ಕೆಲಸ ಆಗಿಲ್ಲ. ಈಗ ಚುನಾವಣೆ ಹತ್ತಿರ ಬರುವಾಗ ತರಾತುರಿಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಜಪಕ್ಕೆ ಸಂಸದ ನಳಿನ್ ಮುಂದಾಗಿದ್ದಾರೆ.
ಇದೇ ವೇಳೆ, ಕೇಂದ್ರ ಸಚಿವ ಭಗವಂತ ಖೂಬಾ ಎದುರಲ್ಲಿಯೇ ಕೆಐಎಡಿಬಿ ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಂಡ ಪ್ರಸಂಗವೂ ನಡೆಯಿತು. ಗಂಜಿಮಠ ಆಸುಪಾಸಿನಲ್ಲಿ ಸೆಂಟ್ಸ್ ಭೂಮಿಗೆ 60 ಸಾವಿರ ಮಾರುಕಟ್ಟೆ ಬೆಲೆ ಇದೆ. ಇಂಥದ್ದರಲ್ಲಿ ಭೂಸ್ವಾಧೀನ ಮಾಡುವುದು ಕಷ್ಟವಾಗಿದೆ. ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೆ ಮಾತ್ರ ಸಾಧ್ಯ. ಆದಷ್ಟು ಬೇಗ ಭೂಸ್ವಾಧೀನ ಆದಲ್ಲಿ ಕೆಲಸ ಮುಂದುವರಿಸಬಹುದು ಎಂದು ಹೇಳಿದ್ದು ಅಧಿಕಾರಿಗಳೇ ಅಸಹಾಯಕರಾಗಿದ್ದನ್ನು ತೋರಿಸಿತ್ತು. ಕಳೆದ ಬಾರಿ ಗಂಜಿಮಠಕ್ಕೆ ಹೋಗಿದ್ದ ಸಂಸದ ನಳಿನ್ ಕುಮಾರ್, ಸುಮಾರು 39 ಕಂಪನಿಗಳು ಪ್ಲಾಸ್ಟಿಕ್ ಪಾರ್ಕ್ ಬರಲು ಒಪ್ಪಿಕೊಂಡಿವೆ ಎಂದಿದ್ದರು. ಆದರೆ ಮೂಲಸೌಕರ್ಯವನ್ನೇ ಮಾಡಿಕೊಡದಿದ್ದರೆ ಯಾವುದೇ ಕಂಪನಿ ಬರುವುದಕ್ಕೆ ಸಾಧ್ಯವಾಗದು ಅನ್ನುವುದು ಸಚಿವ ಖೂಬಾ ಬಂದಿದ್ದಾಗ ಅಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಮನದಟ್ಟು ಆಗಿರಬಹುದು.
104-acre Plastic Park located at Ganjimath still under construction even after two terms of modi government, Bhaghwanth Khuba disappointed against Nalin Kateel. Minister Khuba stated, "Several plastic production units are earmarked for establishment, alongside the Sipet College. By December, the essential infrastructure, including roads, drainage, electricity, and college buildings, will be finalized. While it was expected that approximately 70% of the work should have been completed, the actual progress stands at a mere 15%.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
22-07-25 11:19 am
Mangalore Correspondent
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm