ಬ್ರೇಕಿಂಗ್ ನ್ಯೂಸ್
28-08-23 03:56 pm Mangalore Correspondent ಕರಾವಳಿ
ಬೆಳ್ತಂಗಡಿ, ಆಗಸ್ಟ್ 28: ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ, ಈಗ ಅವರೇ ಮರು ತನಿಖೆ ಮಾಡಬೇಕಾಗಿದೆ. ಬಿಜೆಪಿ ಶಾಸಕ, ಸಂಸದರಿಗೆ ಮೋದಿ ಬಗ್ಗೆ ವಿಶ್ವಾಸ ಕಳಕೊಂಡಿದ್ದಾರೆ. ಮೋದಿಗೆ ಹೇಳುವ ಬದಲು ಸಿದ್ದರಾಮಯ್ಯ ಬಳಿ ನ್ಯಾಯ ಕೇಳುತ್ತಿದ್ದಾರೆ. ಇವರಿಗೆ ಮೋದಿ ಬಳಿ ಹೋಗಲು ಧೈರ್ಯ ಇಲ್ಲದಿದ್ದರೆ ನಾನು ಇವರನ್ನು ಮೋದಿಯತ್ರ ಕರ್ಕೊಂಡು ಹೋಗುತ್ತೇನೆ. ಮೂರು ಬಾರಿ ಎಂಪಿ ಆಗಿದ್ದವರೆಂದು ಪರಿಚಯ ಮಾಡಿಸುತ್ತೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ವ್ಯಂಗ್ಯವಾಡಿದ್ದಾರೆ.
ಬೆಳ್ತಂಗಡಿ ತಹಸೀಲ್ದಾರ್ ಕಚೇರಿ ಎದುರಲ್ಲಿ ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ವಸಂತ ಬಂಗೇರ ಪ್ರಖರ ಭಾಷಣ ಮಾಡಿದ್ದಾರೆ. ಎಂದೂ ಓದದ ಮಾಣಿ ಅಮಾವಾಸ್ಯೆ ದಿನ ಓದಿದ ಎನ್ನುವಂತೆ ಬಿಜೆಪಿಯವರು ಭಾನುವಾರ ಇಲ್ಲಿ ಪ್ರತಿಭಟನೆ ಮಾಡಿದ್ರು. ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿರುವಾಗ ಇವರು ಪ್ರತಿಭಟನೆಯ ನಾಟಕ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಈಗ ನೆನಪು ಬಂದಿದೆ.
14 ವರ್ಷಗಳಿಂದ ಸಂಸದನಾಗಿರುವ ನಳಿನ್ ಕುಮಾರ್ ಈವರೆಗೆ ಸೌಜನ್ಯಾ ಬಗ್ಗೆ ಧ್ವನಿ ಎತ್ತಿಲ್ಲ. ಕೊಲೆಯಾಗಿ 11 ವರ್ಷಗಳಾಗಿದ್ದು ಸೌಜನ್ಯಾ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲು ಆಗಲಿಲ್ಲ ಯಾಕೆ.. ಮುರುಗನ್ ಎಂಬ ಒಳ್ಳೆಯ ಸಿಬಿಐ ಅಧಿಕಾರಿ ತನಿಖೆ ಮಾಡುತ್ತಿದ್ದಾಗ ಅವರನ್ನು ಬದಲಾವಣೆ ಮಾಡಿದ್ರು. ಮೋದಿ ಸರ್ಕಾರ ಇದ್ದಾಗಲೇ ಅಧಿಕಾರಿಯನ್ನು ಬದಲಿಸಿ ತನಿಖೆಯ ದಿಕ್ಕು ತಪ್ಪಿಸಿದ್ದು ಯಾರು? ಹಾಗಾದರೆ ಸೌಜನ್ಯಾ ತನಿಖೆಯನ್ನು ದಿಕ್ಕು ತಪ್ಪಿಸಿದ್ದು ಯಾರು? ಯಾರು ಇದಕ್ಕೆ ಕಾರಣಕರ್ತರು.
ಈಗ ಮೋದಿ ಬಗ್ಗೆ ವಿಶ್ವಾಸ ಕಳಕೊಂಡು ಸಿದ್ದರಾಮಯ್ಯ ಬಳಿ ನ್ಯಾಯ ಕೇಳುತ್ತಿದ್ದೀರಾ.. ಮೊನ್ನೆ ಮೋದಿ ಬೆಂಗಳೂರಿಗೆ ಬಂದಾಗ ರಾಜ್ಯಾಧ್ಯಕ್ಷ ನಳಿನ್ ಬ್ಯಾರಿಕೇಡಲ್ಲಿ ನಿಂತು ನೇತಾಡುತ್ತಿದ್ದರು. ನಿಮಗೆ ಮೋದಿ ಎದುರಲ್ಲಿ ನಿಲ್ಲಲು ಧೈರ್ಯ ಇಲ್ಲವೇ, ಸುಳ್ಳು ಹೇಳಿ ಮೂರು ಬಾರಿ ಎಂಪಿ ಆಗಿದ್ದೀರಲ್ಲಾ.. ನೀವು ಕಾರ್ಯಕರ್ತನಲ್ಲ. ನೀವೊಬ್ಬ ಪಕ್ಷದ ರಾಜ್ಯಾಧ್ಯಕ್ಷ, ಬೀದಿಯಲ್ಲಿ ನಿಲ್ಲಬೇಕಿತ್ತೇ.. ನೀವು ಮೋದಿ ಎದುರಿಗೆ ನಿಲ್ಲಲು ಭಯಪಡುತ್ತೀರಲ್ಲಾ ಎಂದು ವಸಂತ ಬಂಗೇರ ಪ್ರಶ್ನೆ ಮಾಡಿದರು.
ನನ್ನನ್ನು ಮೋದಿಗೆ ಹೇಳಿ ತಾಕತ್ತಿದ್ದರೆ ಬಂಧಿಸಿ
ನನ್ನನ್ನು ಸೌಜನ್ಯಾ ಪ್ರಕರಣದಲ್ಲಿ ಅಪರಾಧಿ ಅಂತೀರಲ್ಲ ಸುನಿಲ್ ಕುಮಾರ್, ತಾಕತ್ತು ಇದ್ದರೆ ಮೋದಿಗೆ ಹೇಳಿ ನನ್ನನ್ನು ಸಿಬಿಐನಿಂದ ಬಂಧಿಸಿ, ಇದೇ ಸುನಿಲ್ ಕುಮಾರ್ ಕಾರ್ಕಳದಲ್ಲಿ ಮೊದಲ ಬಾರಿ ಸ್ಪರ್ಧಿಸಿದಾಗ ಸುಚಿತ್ರಾ ಶೆಟ್ಟಿ ಕೊಲೆಯಾದಾಗ, ನ್ಯಾಯ ತೆಗೆಸಿಕೊಡುತ್ತೇನೆಂದು ಓಟು ಕೇಳಿದವರು ನೀವು. ಯಾಕೆ ನ್ಯಾಯ ತೆಗೆಸಿಕೊಟ್ಟಿಲ್ಲ ನೀವು.. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜನಿಗೆ ಐದು ವರ್ಷ ಸೌಜನ್ಯಾ ನೆನಪಾಗಿಲ್ಲ. ನಲ್ವತ್ತು ಪರ್ಸೆಂಟ್ ಕೊಳ್ಳೆ ಹೊಡೆದ ರಾಜ್ಯದ ಏಕೈಕ ಶಾಸಕ ಹರೀಶ್ ಪೂಂಜ ಈಗ ಸೌಜನ್ಯಾ ಪರ ನ್ಯಾಯ ಕೇಳುತ್ತಿದ್ದಾರೆ.
ಇವರೆಲ್ಲ ಸೇರಿ ನನಗೆ ರಕ್ಷಣೆ ಕೊಡಲು ಬಂದಿದ್ದಾರೆ, ನನಗೆ ದೇವರಿದ್ದಾನೆ. ಇವರ ಭದ್ರತೆ ಬೇಕಿಲ್ಲ. ಇವರಿಗೆ ಯಾವ ಯೋಗ್ಯತೆ ಇದೆ. ಜನರನ್ನು ಮೋಸ ಮಾಡಿ ಗೆದ್ದವರು ಇವರು. ನನಗೀಗ 78 ವರ್ಷ, ಇವರೆಲ್ಲ ರಾಜಕೀಯದ ಪಾಠ ನನ್ನಿಂದ ಕಲಿಯಬೇಕಾಗಿದೆ ಎಂದು ಬಂಗೇರ ಕಿಡಿ ನುಡಿಗಳನ್ನಾಡಿದ್ದಾರೆ.
ಸಭೆಯಲ್ಲಿ ಎಡಪಂಥೀಯ ಬುದ್ಧಿಜೀವಿಗಳೆಲ್ಲ ಪಾಲ್ಗೊಂಡಿದ್ದರು. ಗುಲ್ಬರ್ಗ ಮೂಲದ ಕೆ. ನೀಲಾ, ಡಾ. ಮೀನಾಕ್ಷಿ ಬಾಲಿ, ಮಲ್ಲಿಗೆ ಸಿರಿಮನೆ, ನಾಟಕಕಾರ ಜೆನ್ನಿ, ರವಿಕರಣ ಪುಣಚ, ಬಿ.ಎಂ. ಭಟ್, ವಿಷ್ಣುಮೂರ್ತಿ ಭಟ್, ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ನರೇಂದ್ರ ನಾಯಕ್, ಒಡನಾಡಿ ಸ್ಟಾನ್ಲಿ, ಜಯನ್ ಮಲ್ಪೆ ಮತ್ತಿತರರು ಮಾತನಾಡಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ನಡುವೆ, ಸಭೆಗೆ ಸೌಜನ್ಯಾ ತಾಯಿ ಕುಸುಮಾವತಿ ಕುಟುಂಬಸ್ಥರು ಮತ್ತು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಗಮಿಸಿದ್ದು ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.
ಆಕೆಗೂ ತನ್ನ ಹೆಣ್ಣು ಕುಡಿ ಬಗ್ಗೆ ಚಿಂತಿಸುವ ದಿನ ಬಂದೀತು !
ಸೌಜನ್ಯಾ ತಾಯಿ ಕುಸುಮಾವತಿ ಮಾತನಾಡುತ್ತಲೇ ಕಣ್ಣೀರು ಹಾಕಿದ್ದಾರೆ. ನನಗೆ ಧರ್ಮಸ್ಥಳಕ್ಕೆ ಕಾಲಿಡಲು ಬಿಡಲ್ಲ ಅಂತ ಶಾಂಭವಿ ಎಂಬ ಮಹಿಳೆ ಹೇಳಿದ್ದಾರೆ. ನಾನು ಯಾವತ್ತೂ ಧರ್ಮಸ್ಥಳ ಹೋಗುತ್ತೇನೆ. ದೇವರ ಬಳಿಗೆ ಬರಲು ಬಿಡಲ್ಲ ಎನ್ನಲು ಇವರು ಯಾರು. ಮಂಜುನಾಥ ನಮಗೆ ದೇವರು. ಆದರೆ ಇವರಿಗೂ ಹೆಣ್ಣು ಮಗು ಇರಬಹುದು. ಅತ್ಯಾಚಾರಿಗಳ ಪರ ನಿಂತು ಮಾತಾಡಬೇಕಿದ್ದರೆ, ಇವರು ತಮ್ಮ ಹೆಣ್ಣು ಕುಡಿಯ ಬಗ್ಗೆ ಚಿಂತಿಸುವ ಕಾಲ ಬಂದೀತು. ಆಕೆಗೂ ಒಂದು ದಿನ ಬರಬಹುದು ಎಂದು ಹೇಳಿದ್ದು ಮಾರ್ಮಿಕವಾಗಿತ್ತು.
sowjanya rape case, Fromer MLA Vasanth Bangera says i will take sowjanya mother to PM Modi if MP Nalin has no guts to take her family to PM Modi addressing a protest at Belthangady.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
22-07-25 11:19 am
Mangalore Correspondent
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm