Closure of all liquor shops, Mangalore over Mosaru Kudike: ಮೊಸರು ಕುಡಿಕೆ ; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರ್ಮಿಕ ಆಚರಣೆ ಇರುವ ಕಡೆಗಳಲ್ಲಿ ಮದ್ಯ ನಿಷೇಧ

06-09-23 07:19 pm       Mangalore Correspondent   ಕರಾವಳಿ

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆ, ಮೆರವಣಿಗೆ ಇನ್ನಿತರ ಉತ್ಸವಗಳಲ್ಲಿ ಸಾವಿರಾರು ಜನರು ಸೇರುವುದರಿಂದ ಆಯಾ ಭಾಗದಲ್ಲಿ ಆಸುಪಾಸಿನ ಮದ್ಯದಂಗಡಿಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಮಾಡಿದ್ದಾರೆ.

ಮಂಗಳೂರು, ಸೆ.6: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆ, ಮೆರವಣಿಗೆ ಇನ್ನಿತರ ಉತ್ಸವಗಳಲ್ಲಿ ಸಾವಿರಾರು ಜನರು ಸೇರುವುದರಿಂದ ಆಯಾ ಭಾಗದಲ್ಲಿ ಆಸುಪಾಸಿನ ಮದ್ಯದಂಗಡಿಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಮಾಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ವ್ಯಾಪ್ತಿಗಳಲ್ಲಿ ಆಯಾ ಭಾಗದ ಪೊಲೀಸ್ ವರಿಷ್ಠರ ಕೋರಿಕೆಯಂತೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಸೆ.6ರಂದು ಕಂಕನಾಡಿ ವೆಲೆನ್ಸಿಯಾ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಆಸುಪಾಸಿನಲ್ಲಿ, ಉಳ್ಳಾಲ ಠಾಣೆ ವ್ಯಾಪ್ತಿಯ ಕುಂಪಲ, ತಲಪಾಡಿ ಆಸುಪಾಸಿನಲ್ಲಿ ಮದ್ಯದಂಗಡಿ ನಿಷೇಧ ಇರುತ್ತದೆ.

ಸೆ.7ರಂದು ಅತ್ತಾವರ ಕಟ್ಟೆ ಆಸುಪಾಸಿನಲ್ಲಿ, ಉರ್ವಾ ಸ್ಟೋರ್ ಜಂಕ್ಷನ್, ಅಶೋಕನಗರ ಜಂಕ್ಷನ್, ಉರ್ವಾ ಮೈದಾನ, ಬೊಕ್ಕಪಟ್ನ ಜಂಕ್ಷನ್, ಕದ್ರಿ ಕಂಬ್ಲ ಆಸುಪಾಸಿನ ಮಲ್ಲಿಕಟ್ಟೆಯ ಮದ್ಯದಂಗಡಿಗಳು, ವಾಮಂಜೂರು, ತಿರುವೈಲ್ ನಲ್ಲಿ ಮದ್ಯ ನಿಷೇಧ ಇರುತ್ತದೆ. ಅಲ್ಲದೆ, ಮರೋಳಿ, ಕುಲಶೇಖರ ಚೌಕಿ, ಸುದರ್ಶನ್ ನಗರ ಪಜೀರು, ಅಸೈಗೋಳಿ, ನೆತ್ತಿಲಪದವು, ತೊಕ್ಕೊಟ್ಟು, ಕೆಳಗಿನ ತಲಪಾಡಿ, ಪಂಜಿಮೊಗರು ಜಂಕ್ಷನ್, ಕಾವೂರು, ಮೂಡುಶೆಡ್ಡೆ ಜಂಕ್ಷನ್, ಕುಂಜತ್ತ್ ಬೈಲು, ಕುಳೂರು, ಪಕ್ಷಿಕೆರೆ- ಅತ್ತೂರು, ಮೂಡುಬಿದ್ರೆ ಪೇಟೆಯಲ್ಲಿರುವ ಮದ್ಯದಂಗಡಿಗಳು ಬಂದ್ ಆಗಲಿವೆ. ಸುರತ್ಕಲ್ ಇಡ್ಯಾ, ಕುಳಾಯಿ, ಜೋಕಟ್ಟೆ, ಕಳವಾರು, ಕೃಷ್ಣಾಪುರ- ಕಾಟಿಪಳ್ಳ, ಚಿತ್ರಾಪುರ, ಮುಕ್ಕ ವಠಾರದಲ್ಲಿ ಮದ್ಯ ನಿಷೇಧ ಇರಲಿದೆ.

ಇದೇ ರೀತಿ ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ ಠಾಣೆ, ಪುತ್ತೂರು ಗ್ರಾಮಾಂತರ ಠಾಣೆ, ಉಪ್ಪಿನಂಗಡಿ ಠಾಣೆ, ಸುಳ್ಯ ಠಾಣೆ, ಬೆಳ್ಳಾರೆ ಠಾಣೆ ವ್ಯಾಪ್ತಿಯಲ್ಲಿ ಸೆ.7ರಿಂದ 9ರ ವರೆಗೆ ವಿವಿಧ ಕಡೆಗಳಲ್ಲಿ ನಡೆಯುವ ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ನಿಮಿತ್ತ ಆಯಾ ಭಾಗದಲ್ಲಿ ಮದ್ಯದಂಗಡಿ ನಿಷೇಧ ಇರಲಿದೆ.

Closure of all liquor shops to be closed in Dakshina Kannada and Mangalore over Mosaru Kudike.